Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅದ್ಭುತ ರುಚಿಯ ಈ ನುಗ್ಗೆ ಬಿರಿಯಾನಿ ಮಾಡಿ..! ಚಿಕನ್‌ಗಿಂತ ಟೇಸ್ಟಿ..!
ನೀವು ವೆಜ್ ಬಿರಿಯಾನಿಯನ್ನು ಎಷ್ಟು ವಿಧವಾಗಿ ಮಾಡಿ ಸವಿದಿರಬಹುದು. ವೆಜ್ ಬಿರಿಯಾನಿ ಅಂದರೆ ಅಲ್ಲಿ ಯಾವುದಾದರು ತರಕಾರಿ ಹಾಗೆ ಹಲವು ಮಸಾಲೆಗಳ ಬಳಸಿ ಮಾಡಲಾಗುತ್ತೆ ಅನ್ನೋದು ಕೂಡ ನಿಮಗೆ ತಿಳಿದಿದೆ. ಅದರಲ್ಲೂ ವಿಶೇಷವಾಗಿ ನೀವು ಹಲವು ರೀತಿಯಲ್ಲಿ ಬಿರಿಯಾನಿ ಸವಿದಿರಬಹುದು. ಆದ್ರೆ ನಾವಿಂದು ಅತ್ಯಂತ ವಿಶೇಷವಾಗಿ ಮಾಡುವಂತಹ ನುಗ್ಗೆಕಾಯಿ ಬಿರಿಯಾನಿ ಕುರಿತು ತಿಳಿದುಕೊಳ್ಳೋಣ.
ನುಗ್ಗೆಕಾಯಿ ಆರೋಗ್ಯಕ್ಕೆ ಎಷ್ಟು ಉತ್ತಮ ಅನ್ನೋದನ್ನು ನೀವು ತಿಳಿದಿರಬಹುದು. ಅದರಲ್ಲೂ ನುಗ್ಗೆಕಾಯಿ ನಿಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾಗಿರುವ ತರಕಾರಿಯಾಗಿದೆ. ಹಾಗೆ ನುಗ್ಗೆಕಾಯಿಯಲ್ಲಿನ ಹಲವು ಆರೋಗ್ಯಕರ ಅಂಶಗಳಿಂದ ಅದನ್ನು ವಿಶೇಷ ತರಕಾರಿ ಎನ್ನಬಹುದು. ಹಾಗಾದ್ರೆ ನಾವಿಂದು ಈ ನುಗ್ಗೆಕಾಯಿ ಬಳಸಿ ಮಾಡುವಂತಹ ಬಿರಿಯಾನಿ ಕುರಿತಾಗಿ ಇಂದು ತಿಳಿದುಕೊಳ್ಳೋಣ.

ಅದರಲ್ಲೂ ಈ ನುಗ್ಗೆಕಾಯಿ ಬಿರಿಯಾನಿ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ನುಗ್ಗೆಕಾಯಿ ಬಿರಿಯಾನಿ ಮಾಡಲು ಯಾವೆಲ್ಲಾ ಪದಾರ್ಥ ಬೇಕು?
- ಅಕ್ಕಿ
- ನುಗ್ಗೆಕಾಯಿ
- ದಾಲ್ಚಿನ್ನಿ
- ಏಲಕ್ಕಿ
- ಲವಂಗ
- ಚಕ್ರಮೊಗ್ಗು
- ಈರುಳ್ಳಿ
- ಟೊಮೆಟೋ
- ಪುದೀನ ಎಲೆ
- ಕೊತ್ತಂಬರಿ ಸೊಪ್ಪು
- ಹಸಿರು ಮೆಣಸಿನಕಾಯಿ
- ಹಸಿರು ಬಟಾಣಿ
- ಮೊಸರು
- ಶುಂಠಿ ಬೆಳ್ಳುಳ್ಳಿ ಪೇಸ್ಟ್
- ಬಿರಿಯಾನಿ ಪುಡಿ
- ಕಸೂರಿ ಮೇಥಿ
- ಕೆಂಪು ಮೆಣಸಿನ ಪುಡಿ
- ಅಡುಗೆ ಎಣ್ಣೆ
- ರುಚಿಗೆ ತಕ್ಕಷ್ಟು ಉಪ್ಪು
ನುಗ್ಗೆಕಾಯಿ ಬಿರಿಯಾನಿ ಮಾಡುವುದು ಹೇಗೆ ನೋಡಿ
ಮೊದಲಿಗೆ ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಏಲಕ್ಕಿ, ಚಕ್ಕೆ, ಲವಂಗ, ಪಲಾವ್ ಎಲೆ, ಮೊಗ್ಗು ಹಾಕಿ. ಹಾಗೆ ಈರುಳ್ಳಿ ಹಾಕಿ ಚೆನ್ನಾಗಿ ಫ್ರೈ ಮಾಡಿ. 3 ನಿಮಿಷದ ಬಳಿಕ ಈಗ ಪುದಿನ, ಕೊತ್ತಂಬರಿ ಸೊಪ್ಪು, ಕಸೂರಿ ಮೇಥಿ ಸಹ ಹಾಕಿ, ನಂತರ ಖಾರದ ಪುಡಿ, ಹಸಿ ಮೆಣಸು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಫ್ರೈ ಮಾಡಿಕೊಳ್ಳಿ.
ನಂತರ ಹೆಚ್ಚಿದ ಟೊಮೆಟೋ ಹಾಕಿಕೊಂಡು ಬಳಿಕ ಬಟಾಣಿ, ಹಾಗೆ ಕತ್ತರಿಸಿಕೊಂಡಿರುವ ನುಗ್ಗೆಕಾಯಿ ಸ್ವಲ್ಪ ಮೊಸರು, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡುತ್ತಾ ಮಿಕ್ಸ್ ಮಾಡಿಕೊಳ್ಳಿ. ನಂತರ ಉಪ್ಪು ಕೂಡ ಹಾಕಿ 5 ನಿಮಿಷ ಫ್ರೈ ಮಾಡಿಕೊಳ್ಳಿ. ಹಾಗೆ ಬಿರಿಯಾನಿ ಪೌಡರ್ ಹಾಕಿ ಫ್ರೈ ಮಾಡಿ.
ಈಗ ಅಳತೆ ಲೋಟದಲ್ಲಿ ಅಕ್ಕಿಯನ್ನು ತೆಗೆದುಕೊಂಡು ಅದನ್ನು ನೆನೆಸಿಡಿ. ಈಗ ನೀರನ್ನು ಎರಡರಷ್ಟು ತೆಗೆದುಕೊಂಡು ಇದಕ್ಕೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಉಪ್ಪು ಸಹ ಹಾಕಿ 5 ನಿಮಿಷ ಕುದಿಯಲು ಬಿಡಿ. ಈಗ ನೆನೆಸಿಟ್ಟಿರುವ ಅಕ್ಕಿಯನ್ನು ಇದಕ್ಕೆ ಹಾಕಿಕೊಂಡು ಒಮ್ಮೆ ಮಿಕ್ಸ್ ಮಾಡಿ. ನಂತರ ಚೆನ್ನಾಗಿ ಕುದಿಬರಲು ಬಿಡಿ. ನೀರು ಕಡಿಮೆಯಾದಾಗ ಉರಿ ಸಣ್ಣದಾಗಿ ಇಡಿ. ಹಾಗೆ ಸಣ್ಣ ಉರಿಯಲ್ಲಿ ಮುಚ್ಚಳ ಮುಚ್ಚಿ 15 ನಿಮಿಮಿಷ ಬಿಡಿ.
ಬಳಿಕ ಒಲೆ ಆಫ್ ಮಾಡಕೊಂಡು ಮುಚ್ಚಳ ತೆಗೆದು ಮಿಕ್ಸ್ ಮಾಡಿಕೊಂಡರೆ ನಿಮ್ಮ ಮುಂದೆ ಈ ನುಗ್ಗೆಕಾಯಿ ಬಿರಿಯಾನಿ ರೆಡಿಯಾಗುತ್ತದೆ, ನೀವು ಸಹ ಒಮ್ಮೆ ಟ್ರೈ ಮಾಡಿ ನೋಡಿ. ಇದನ್ನು ಊಟದ ಸಮಯಕ್ಕೆ ಸವಿಯಲು ಬಹಳ ರುಚಿ ನೀಡಲಿದೆ. ನೀವು ಮೊಸರು ಬಜ್ಜಿ ಅಥವಾ ಕುರ್ಮಾ ಮಾಡಿಕೊಂಡು ಇದರ ಜೊತೆಗೆ ಸವಿಯಬಹುದು. ಅದರ ರುಚಿಗೆ ನೀವು ಪದೆ ಪದೇ ಮಾಡಿ ಸವಿಯಲು ಮುಂದಾಗುವುದು ಪಕ್ಕ.



Click it and Unblock the Notifications