Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ರುಚಿ ರುಚಿಯ ನುಗ್ಗೆಕಾಯಿ ಮಸಾಲ ಪಲ್ಯ ಮಾಡಿ ನೋಡಿ..!!
ನೀವು ನುಗ್ಗೆಕಾಯಿಯ ಆರೋಗ್ಯಕರ ಅಂಶಗಳ ಕುರಿತು ತಿಳಿದಿರುತ್ತೀರಿ. ನುಗ್ಗೆಕಾಯಿಯಲ್ಲಿ ವಿಟಮಿನ್‌ಗಳು, ಮಿನರಲ್ಸ್ ಹಾಗೂ ಆ್ಯಂಟಿಆಕ್ಸಿಡೆಂಟ್‌ಗಳು ಹೇರಳವಾಗಿವೆ. ಇದರ ಸೊಪ್ಪಿನಲ್ಲಿ ಕಬ್ಬಿಣಾಂಶ ಅಧಿಕವಾಗಿದೆ. ಹೀಗಾಗಿ ನುಗ್ಗೆ ಸೊಪ್ಪಿನ ಹಲವು ಖಾದ್ಯಗಳ ಸವಿಯುವುದು ನೋಡಬಹುದು. ಹಾಗೆ ನುಗ್ಗೆಕಾಯಿಯನ್ನು ಸಾಂಬಾರ್ ಮಾಡಿ, ಕರಿ, ಫ್ರೈ ಹೀಗೆ ಹಲವು ಖಾದ್ಯಗಳ ಮೂಲಕ ಸವಿಯಬಹುದು.
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗೆ ಇದು ನಮ್ಮ ಜೀರ್ಣಕ್ರಿಯೆಗೆ ಬಹಳ ಉಪಯುಕ್ತ ತರಕಾರಿಯಾಗಿದೆ. ನುಗ್ಗೆಕಾಯಿಯಲ್ಲಿರುವ ನಾರಿನ ಅಂಶ ನಮ್ಮ ಕರುಳಿನ ಆರೋಗ್ಯಕ್ಕೂ ಉತ್ತಮ. ಇಷ್ಟೆಲ್ಲಾ ಉಪಯೋಗಗಳ ಹೊಂದಿರುವ ಈ ನುಗ್ಗೆ ಕಾಯಿಯ ಹೊಸ ರೀತಿಯ ಖಾದ್ಯ ಒಂದನ್ನು ನಾವಿಂದು ಸವಿಯಲು ಮುಂದಾಗೋಣ.

ನಾವಿಂದು ನುಗ್ಗೆಕಾಯಿಯಿಂದ ಮಸಾಲ ಪಲ್ಯ ಮಾಡುವ ಕುರಿತು ತಿಳಿಯೋಣ. ಇದು ನಿಮ್ಮ ಊಟಕ್ಕೂ ಹಾಗೆ ತಿಂಡಿಯ ಜೊತೆಗೂ ಕೂಡ ಸವಿಯಬಹುದು. ಈ ರುಚಿಯಲ್ಲಿ ನುಗ್ಗೆ ಪಲ್ಯ ಮಾಡಿದ್ರೆ ನೀವು ಮತ್ತೆ ಮತ್ತೆ ಸವಿಯಲು ಮುಂದಾಗುವುದು ಖಚಿತ. ಹಾಗಾದ್ರೆ ನಾವಿಂದು ಸುಲಭವಾಗಿ ಈ ನುಗ್ಗೆ ಕಾಯಿ ಮಸಾಲ ಪಲ್ಯ ಮಾಡುವುದು ಹೇಗೆ ಎನ್ನುವುದನ್ನು ನೋಡೋಣ.
ಈ ನುಗ್ಗೆಕಾಯಿಯ ಮಸಾಲ ಪಲ್ಯ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಈ ಪಲ್ಯ ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಲ್ಲಿ ತಿಳಿಯೋಣ.
ನುಗ್ಗೆಕಾಯಿಯ ಮಸಾಲ ಪಲ್ಯ ಮಾಡಲು ಈ ವಸ್ತುಗಳು ಬೇಕು
- ನುಗ್ಗೆಕಾಯಿ- 4
- ಟೊಮೆಟೋ-2
- ಕರಿಬೇವು
- ಶುಂಠಿ ಬೆಳ್ಳುಳ್ಳಿ ಪೇಸ್ಟ್
- ಜೀರಿಗೆ ಪುಡಿ
- ಅರಶಿಣ ಪುಡಿ
- ಧನಿಯಾ ಪುಡಿ
- ಖಾರದ ಪುಡಿ
- ಉಪ್ಪು
- ಎಣ್ಣೆ
- ಈರುಳ್ಳಿ-2
- ಜೀರಿಗೆ ಪುಡಿ
- ಗರಂ ಮಸಾಲೆ
- ಕೊತ್ತಂಬರಿ
- ಚಕ್ಕೆ
- ಲವಂಗ
- ಸೋಂಕಾಳು
ನುಗ್ಗೆಕಾಯಿಯ ಮಸಾಲ ಪಲ್ಯ ಮಾಡುವ ವಿಧಾನ ಇದು
ಮೊದಲು ನುಗ್ಗೆಕಾಯಿಯನ್ನು ಚೆನ್ನಾಗಿ ತೊಳೆದು ಅನಂತರ ಬಟ್ಟೆಯಲ್ಲಿ ಒರೆಸಿಕೊಂಡು ಸಿಪ್ಪೆಯನ್ನು ತೆಗೆದು ಕತ್ತರಿಸಿಕೊಳ್ಳಿ. ಸಾಂಬಾರ್ ಹೆಚ್ಚುವಂತೆ ಕತ್ತರಿಸಿಕೊಂಡರೆ ಸಾಕು. ಈಗ ಪಾತ್ರೆಗೆ ನುಗ್ಗೆಕಾಯಿ ನೀರು ಹಾಕಿಕೊಂಡು ಬೇಯಿಸಿಕೊಳ್ಳಬೇಕು. ಇದಕ್ಕೆ ಅರಶಿಣ, ಉಪ್ಪು ಹಾಕಿ ಬೇಯಿಸಿಕೊಳ್ಳಿ, 10 ನಿಮಿಷ ಬೆಂದರೆ ಸಾಕು.
ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಬಳಿಕ ಚಕ್ಕೆ, ಲವಂಗ, ಸೋಂಕಾಳು, ಈರುಳ್ಳಿ, ಕರಿಬೇವು ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸಹ ಹಾಕಿಕೊಂಡು 2ರಿಂದ 3 ನಿಮಿಷ ಫ್ರೈ ಮಾಡಿಕೊಳ್ಳಿ. ಅನಂತರ ಇದಕ್ಕೆ ಟೊಮೆಟೋ, ಉಪ್ಪು ಕೂಡ ಹಾಕಿಕೊಂಡು ಮತ್ತೆ 2 ನಿಮಿಷ ಫ್ರೈ ಮಾಡಿಕೊಳ್ಳಿ.
ನಂತರ ಇದಕ್ಕೆ ಜೀರಿಗೆ ಪುಡಿ, ಧನಿಯಾ ಪುಡಿ, ಖಾರದ ಪುಡಿ ಹಾಗೂ ಸ್ವಲ್ಪ ನೀರು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ ಫ್ರೈ ಆಗಲು ಬಿಡಿ. ಈಗ ಬೇಯಿಸಿಕೊಂಡಿರುವ ನುಗ್ಗೆಕಾಯಿಯನ್ನು ಹಾಕಿಕೊಂಡು ತಿರುಗಿಸಿಕೊಂಡು ಗಟ್ಟಿ ಇದ್ದರೆ ಸ್ವಲ್ಪ ನೀರು ಹಾಕಿ ಮುಚ್ಚಳ ಮುಚ್ಚಿ 3 ನಿಮಿಷ ಬಿಡಿ. ಆಗಾಗ ಮಿಕ್ಸ್ ಮಾಡುತ್ತಾ ಇರಿ. ಕೊನೆಯದಾಗಿ ಇದಕ್ಕೆ ಕೊತ್ತಂಬರಿ ಸೊಪ್ಪನ್ನು ಹಾಕಿಕೊಳ್ಳಿ.
ಬಳಿಕ 1 ನಿಮಿಷ ಬಿಟ್ಟು ಒಲೆ ಆಫ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ನುಗ್ಗೆಕಾಯಿ ಮಸಾಲೆ ಫ್ರೈ ರೆಡಿಯಾಗುತ್ತದೆ. ಇದನ್ನು ಊಟಕ್ಕೆ ತಿಂಡಿಗೆ ಎಲ್ಲದಕ್ಕೂ ಸವಿಯಬಹುದು. ನೀವು ಕೂಡ ಮಾಡಿ ಸವಿದು ನೋಡಿ.



Click it and Unblock the Notifications