Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
2 ವಸ್ತು ಇದ್ದರೆ ದೊಡ್ನ ದೋಸೆ ಮಾಡಬಹುದು..! ಇಲ್ಲಿದೆ ಸ್ಪೆಷಲ್ ರೆಸಿಪಿ!
ನೀವು ಮನೆಯಲ್ಲಿ ಎಷ್ಟು ರೀತಿಯ ದೋಸೆ ಸವಿದಿರಬಹುದು. ಅಬ್ಬಬ್ಬಾ ಅಂದ್ರೆ 5ರಿಂದ 6 ಬಗೆಯ ದೋಸೆಯನ್ನ ಮನೆಯಲ್ಲಿ ಮಾಡಿ ಸವಿದಿರಬಹುದು. ಹಾಗೆ ಹೋಟೆಲ್‌ನಲ್ಲಿ ಒಂದಿಷ್ಟು ವಿಭಿನ್ನ ರುಚಿಯ ದೋಸೆ ಮಾಡಿಯೂ ಸವಿದಿರುತ್ತೀರಿ. ಅದರಲ್ಲೂ ಮಸಾಲೆ ದೋಸೆ, ಈರುಳ್ಳಿ, ದೋಸೆ, ಖಾಲಿ ದೋಸೆ, ರವೆ ದೋಸೆ, ಬೆಣ್ಣೆ ದೋಸೆ ಹೀಗೆ ಅದೆಷ್ಟೋ ಬಗೆಯ ದೋಸೆ ಸವಿದಿರುತ್ತೀರಿ.
ಆದ್ರೆ ಇದೇ ದೋಸೆಯಲ್ಲಿ ನೀವು ಕೇಳಿರದ ಹಾಗೂ ನೋಡಿರದ ಅದೆಷ್ಟೋ ವಿಧಗಳಿವೆ. ಅದರಲ್ಲೊಂದು ದೊಡ್ನ ದೋಸೆ. ಹೌದು ದೊಡ್ನ ದೋಸೆ ಕೆಲವೊಂದು ಹೋಟೆಲ್‌ನಲ್ಲಿ ವಿಶೇಷ ಭಕ್ಷ್ಯವಾಗಿದೆ. ದೊಡ್ನ ದೋಸೆ ವಿಶೇಷವಾಗಿ ಮಾಡುವ ದೋಸೆಯ ಒಂದು ವಿಧವಾಗಿದೆ. ಮೃದುವಾದ ಅತ್ಯಂತ ರುಚಿಕರ ಹಾಗೂ ಮಾಡೋಕೆ ತುಂಬಾನೆ ಸುಲಭವಾದ ದೋಸೆ ಇದು.

ಬಹುತೇಕ ಉತ್ತರ ಭಾರತ ಹಾಗೂ ದಕ್ಷಿಣ ಭಾರತದ ಹೋಟೆಲ್‌ನಲ್ಲಿ ಈ ದೊಡ್ನ ದೋಸೆ ಸವಿಯಬಹುದು. ವಿಶೇಷವಾಗಿ ಇದು ಸಾಮಾನ್ಯ ದೋಸೆಗಿಂತಲೂ ಸ್ವಲ್ಪ ದಪ್ಪವಾಗಿರುತ್ತದೆ. ಹಾಗಾದ್ರೆ ನಾವು ಈ ದೋಸೆ ಮಾಡುವುದು ಹೇಗೆ ಎಂಬುದನ್ನು ನಾವಿಂದು ನೋಡೋಣ.
ಈ ದೊಡ್ನ ದೋಸೆ ಮಾಡುವುದು ಹೇಗೆ? ದೊಡ್ನ ದೋಸೆ ಮಾಡಲು ಬೇಕಾಗುವ ಪದಾರ್ಥಗಳೇನು? ಮಾಡುವ ವಿಧಾನವೇನು? ದೊಡ್ನ ದೋಸೆಗೆ ಹಿಟ್ಟು ಹೇಗೆ ರೆಡಿ ಮಾಡಿಕೊಳ್ಳಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ದೊಡ್ನ ದೋಸೆ ಮಾಡಲು ಬೇಕಾಗುವ ಪದಾರ್ಥಗಳು
- ಅಕ್ಕಿ - 1 ಕಪ್
- ಅನ್ನ- ಅರ್ಧ ಕಪ್
- ಉಪ್ಪು
- ಸಕ್ಕರೆ
- ತೆಗಿನ ತುರಿ -ಅರ್ಧ ಕಪ್
ದೊಡ್ನ ದೋಸೆ ಮಾಡುವುದು ಹೇಗೆ?
ಒಂದು ಕಪ್ ಅಕ್ಕಿಯನ್ನು ತೊಳೆದು ಒಂದು ಬೌಲ್‌ಗೆ ಹಾಕಿ ಮೂರು ಗಂಟೆ ನೆನೆಸಿಡಬೇಕು. ಬಳಿಕ ಇದನ್ನು ಮಿಕ್ಸಿ ಜಾರ್‌ಗೆ ಹಾಕಿ ಅರ್ಧ ಕಪ್ ತೆಂಗಿನ ತುರಿ ಹಾಖಿ ನುಣ್ಣಗೆ ರುಬ್ಬಿಕೊಳ್ಳಬೇಕು. ಸ್ವಲ್ಪ ಸ್ವಲ್ಪವೇ ನೀರು ಹಾಕಿಕೊಳ್ಳುತ್ತಾ ರುಬ್ಬಿಕೊಳ್ಳಬೇಕು. ಈಗ ಇದಕ್ಕೆ ಅರ್ಧ ಕಪ್ ಅನ್ನ ಹಾಕಿಕೊಳ್ಳಿ. ಈಗ ಮಾಡಿರುವ ಅನ್ನ ಅಥವಾ ಹಳೆಯ ಅನ್ನವನ್ನ ಹಾಕಿ ಮತ್ತೆ ರುಬ್ಬಿಕೊಳ್ಳಬೇಕು.
ರುಬ್ಬಿದ ಹಿಟ್ಟನ್ನು ಒಂದು ಪಾತ್ರೆಗೆ ಹಾಕಿ ಸ್ವಲ್ಪ ನೀರು ಹಾಕಿಕೊಂಡು ಚೆನ್ನಾಗಿ ಕಲಸಿಕೊಳ್ಳಿ. ಈ ಹಿಟ್ಟು ಹೆಚ್ಚು ನೀರಾಗಬಾರದು. ಹಾಗೆ ಗಟ್ಟಿಯು ಇರಬಾರದು ಮಧ್ಯಮವಾಗಿರುವಂತೆ ನೋಡಿಕೊಳ್ಳಿ. ಬಳಿಕ ಈ ಹಿಟ್ಟನ್ನು 7 ರಿಂದ 8 ಗಂಟೆ ಹುಳಿ ಬರಲು ಇಡಬೇಕು. ರಾತ್ರಿ ಮುಚ್ಚಿ ಬೆಳಗ್ಗೆ ಎದ್ದಾಗ ಇದು ಹುಳಿ ಬರುತ್ತದೆ.
ಮಾರನೆ ದಿನ ಇದಕ್ಕೆ ಉಪ್ಪು ಹಾಗೂ ಅರ್ಧ ಚಮಚ ಸಕ್ಕರೆಯನ್ನು ಹಿಟ್ಟಿಗೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಈ ಹಿಟ್ಟಿಗೆ ಬೇಕಾದರೆ ಸೋಡಾ ಹಾಕಿಕೊಳ್ಳಿ. ಇಲ್ಲದಿದ್ದರೂ ಸಮಸ್ಯೆಯಿಲ್ಲ. ಹೀಗೆ ಹಿಟ್ಟನ್ನು ಚೆನ್ನಾಗಿ ಕಲಸಿಕೊಳ್ಳಿ. ಈಗ ಒಲೆ ಮೇಲೆ ಒಂದು ಕಾವಲಿ ಇಟ್ಟು ಅದಕ್ಕೆ ಎಣ್ಣೆ ಹಚ್ಚಿಕೊಳ್ಳಿ. ಬಳಿಕ ಅದಕ್ಕೆ ಈ ಹಿಟ್ಟನ್ನು ಹಾಕಿ ಚೆನ್ನಾಗಿ ಹರಡಿಕೊಳ್ಳಿ.
ಈ ದೋಸೆ ಹೆಚ್ಚು ದಪ್ಪವಾಗಿರದೆ ಹಾಗೂ ತೆಳುವಾಗಿಯೂ ಇರದಂತೆ ಹಿಟ್ಟು ಹಾಕಿಕೊಳ್ಳಿ. ದೋಸೆ ಕಣ್ಣು ಕಣ್ಣಾಗಿ ಬರುತ್ತದೆ. ಹಾಗೆ ಅತ್ಯಂತ ಮೃದುವಾಗಿರುತ್ತದೆ. ಈ ದೋಸೆಯನ್ನ ಒಂದು ಕಡೆಗಳಲ್ಲಿ ಚೆನ್ನಾಗಿ ರೋಸ್ಟ್ ಮಾಡಬಹುದು, ಎರಡೂ ಕಡೆಯೂ ಬೇಯಿಸಿಕೊಳ್ಳಬಹುದು. ಇಷ್ಟಾದರೆ ನಿಮ್ಮ ಮುಂದೆ ರುಚಿಕರ ದೊಡ್ನ ದೋಸೆ ರೆಡಿಯಾಗಿರುತ್ತದೆ. ಇದನ್ನು ತೆಂಗಿನ ಕಾಯಿ ಚಟ್ನಿ ಜೊತೆ ಸವಿಯಲು ನೀಡಿದರೆ ರುಚಿ ದುಪ್ಪಟ್ಟಾಗುತ್ತದೆ. ನೀವು ಸಹ ಈ ದೋಸೆಯನ್ನು ಮನೆಯಲ್ಲಿ ಒಮ್ಮೆ ಟ್ರೈ ಮಾಡಿ ನೋಡಿ.



Click it and Unblock the Notifications