Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸಬ್ಬಸಿಗೆ ಸೊಪ್ಪಿನ ರಸಂ ಒಮ್ಮೆ ಸವಿದರೆ ನೆನಪಿನಲ್ಲಿ ಉಳಿಯೋದು ಖಚಿತ..!
ಊಟದ ಮಜಾ ಹೆಚ್ಚಾಗಬೇಕು ಅಂದ್ರೆ ಪಲ್ಯ, ಚಟ್ನಿ, ಸಾಂಬಾರ್ ಹೀಗೆ ಯಾವುದಾದರು ಖಾದ್ಯ ಮಾಡುವುದು ಸಾಮಾನ್ಯ, ಹಾಗೆ ಊಟದೊಂದಿಗೆ ಎಷ್ಟೇ ಖಾದ್ಯ ಇದ್ದರೂ ಅದರ ಜೊತೆಗೊಂದು ತಿಳಿಸಾರು ಅಥವಾ ರಸಂ ಇದ್ದರೆ ಊಟದ ರುಚಿ ಮತ್ತಷ್ಟು ಹೆಚ್ಚಾಗೋದು ಪಕ್ಕ. ಹಾಗೆ ರಸಂ ಮಾಡೋದು ಅಂದ್ರೆ ಬಹಳ ಸುಲಭ, ಹಲವರಿಗೆ ಇಷ್ಟವೂ ಹೌದು. ಬಗೆ ಬಗೆಯ ರಸಂ ಮಾಡಿ ಸವಿಯುವುದು ಸಹ ನೋಡಬಹುದು.
ಅದರಲ್ಲೂ ಬಗೆ ಬಗೆಯ ರಸಂ ಘಮಲಿಗೆ ಬಾಯಲ್ಲಿ ನೀರು ಬರುತ್ತೆ. ಅದ್ರಲ್ಲೂ ಬಗೆ ಬಗೆಯ ಮಸಾಲೆ ಭರಿತ ರಸಂ ಅಂದ್ರೆ ಎಲ್ಲರಿಗೂ ಇಷ್ಟ ಆಗುತ್ತೆ. ಹಾಗೆ ಊಟದ ಜೊತೆಗೆ ಸವಿದರೆ ಊಟ ಪೂರ್ಣ ಆಗುತ್ತೆ. ಅಲ್ಲದೆ ಗ್ಲಾಸ್‌ನಲ್ಲಿ ಬಿಸಿ ಬಿಸಿಯಾಗಿ ಕುಡಿಯಲು ಕೂಡ ರಸಂ ಬಳಸಬಹುದು. ಅದರ ರುಚಿಗೆ ಎಲ್ಲರ ಬಾಯಲ್ಲು ನೀರು ಬರುತ್ತೆ.

ಆದ್ರೆ ಇಂತಹ ಹಲವು ಬಗೆಯ ರಸಂ ಮಾಡಬಹುದಾಗಿದ್ದು ನಾವಿಂದು ಸುಲಭವಾದ
ರೀತಿಯಲ್ಲಿ ಅದ್ಭುತ ರುಚಿ ನೀಡುವ ಸಬ್ಬಸುಗೆ ಸೊಪ್ಪಿನಿಂದ ಮಾಡುವಂತಹ ರುಚಿ ರುಚಿ
ರಸಂ ಕುರಿತಾಗಿ ತಿಳಿಯೋಣ. ಸಬ್ಬಸಿಗೆ ಸೊಪ್ಪು ಆರೋಗ್ಯಕ್ಕೆ ಎಷ್ಟು ಉತ್ತಮ
ಎಂಬುದನ್ನು ತಿಳಿದುಕೊಳ್ಳಿ. ಸಬ್ಬಸಿಗೆ ಸೊಪ್ಪಿನಲ್ಲಿ
ವಿಟಮಿನ್ ಸಿ, ವಿಟಮಿನ್ ಎ, ಕಬ್ಬಿಣ, ಕ್ಯಾಲ್ಸಿಯಂ ಮತ್ತು ಮ್ಯಾಂಗನೀಸ್ ಅಂಶ
ಹೇರಳ ಮೂಲವಾಗಿದೆ.
ವಿಟಮಿನ್ ಸಿ ಇರುವುದರಿಂದ ರೋಗ ನಿರೋಧಕ ಶಕ್ತಿ ಹಾಗೆ ಜೀರ್ಣಕ್ರಿಯೆಗೆ ಇದು ಬಹಳ ಉಪಕಾರಿ. ಇಷ್ಟು ಆರೋಗ್ಯಕರ ಲಾಭ ಹೊಂದಿರುವ ಈ ಸಬ್ಬಸಿಗೆ ಸೊಪ್ಪಿನ ರಸಂ ಮಾಡುವ ಕುರಿತು ತಿಳಿದುಕೊಳ್ಳೋಣ.
ಸಬ್ಬಸಿಗೆ ಸೊಪ್ಪಿನ ರಸಂ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಸಬ್ಸಿಗೆ ಸೊಪ್ಪು
- ಬೇಳೆ- ಕಾಲು ಕಪ್
- ತೆಂಗಿನಕಾಯಿ ತುರಿ
- ಖಾರದ ಮೆಣಸಿನಕಾಯಿ
- ಕೊತ್ತಂಬರಿ ಸೊಪ್ಪು
- ಕರಿಬೇವಿನ ಸೊಪ್ಪು
- ಶುಂಠಿ
- ಜೀರಿಗೆ
- ದನಿಯ ಕಾಳು
- ಹುಣಸೆ ಹುಳಿ
- ಬೆಲ್ಲ
- ಅಡುಗೆ ಎಣ್ಣೆ
- ತುಪ್ಪ
- ಮೆಂತ್ಯಕಾಳು ಸ್ವಲ್ಪ
- ಕಾಳು ಮೆಣಸು
- ಇಂಗು
- ಅರಿಶಿಣ ಪುಡಿ
- ಸಾಸಿವೆ
- ಉಪ್ಪು
ಸಬ್ಬಸಿಗೆ ಸೊಪ್ಪಿನ ರಸಂ ಮಾಡುವ ವಿಧಾನವೇನು?
ಮೊದಲು ಬೇಳೆಯನ್ನು ಕುಕ್ಕರ್‌ಗೆ ಹಾಕಿ ಬೇಯಿಸಿಕೊಂಡು ಒಂದು ಬೌಲ್‌ಗೆ ಹಾಕಿಟ್ಟುಕೊಳ್ಳಿ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಬಿಸಿಯಾದ ಬಳಿಕ ಅದಕ್ಕೆ ಜೀರಿಗೆ, ಮೆಂತ್ಯಕಾಳು. ದನಿಯಾ ಕಾಳು, ಕಾಳು ಮೆಣಸು, ಶುಂಠಿ ಹಾಕಿ ಮಧ್ಯಮ ಉರಿಯಲ್ಲಿ 2 ನಿಮಿಷ ಫ್ರೈ ಮಾಡಿಕೊಳ್ಳಿ. 2 ನಿಮಿಷದ ಬಳಿಕ ಚೆನ್ನಾಗಿ ಶುಚಿಗೊಳಿಸಿದ ಸಬ್ಬಸಿಗೆ ಸೊಪ್ಪನ್ನು ಇದಕ್ಕೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
3ರಿಂದ 4 ನಿಮಿಷದಲ್ಲಿ ಸೊಪ್ಪು ಬೆಂದು ಪ್ರಮಾಣ ಸಣ್ಣದಾಗುತ್ತದೆ. ಈಗ ಒಲೆ ಆಫ್ ಮಾಡಿಕೊಂಡು ತಣ್ಣಗಾಗಲು ಬಿಡಿ. ತಣ್ಣಗಾದ ಈ ಪದಾರ್ಥಗಳನ್ನು ಒಂದು ಮಿಕ್ಸಿ ಜಾರ್‌ಗೆ ಹಾಕಿ ಇದಕ್ಕೆ ತೆಂಗಿನಕಾಯಿ ತುರಿ ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು, ರುಬ್ಬಿದ ಪದಾರ್ಥಗಳನ್ನು ಒಂದು ಬೌಲ್‌ಗೆ ಹಾಕಿಡಿ.
ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಸಾಸಿವೆ ಹಾಕಿ ನಂತರ ಕರಿಬೇವು, ಒಣ ಮೆಣಸು, ಇಂಗು ಹಾಕಿ ಅರ್ಧ ನಿಮಿಷ ಬಿಸಿ ಮಾಡಿಕೊಳ್ಳಿ. ನಂತರ ಮಿಕ್ಸಿಯಲ್ಲಿ ರುಬ್ಬಿದ್ದ ಪೇಸ್ಟ್ ಅನ್ನು ಇದೇ ಬಾಣಲೆಗೆ ಹಾಕಿಕೊಳ್ಳಿ. ಹಾಗೆ ಮೊದಲು ಕುಕ್ಕರ್‌ನಲ್ಲಿ ಬೇಯಿಸಿದ್ದ ಬೇಳೆಯನ್ನು ಸಹ ಇದಕ್ಕೆ ಹಾಕಿಕೊಳ್ಳಿ. ಅನಂತರ ಹುಣಸೆ ಹುಳಿ ನೀರು, ಬೆಲ್ಲ, ಅರಶಿಣ ಪುಡಿ, ಉಪ್ಪು ಕೂಡ ಹಾಕಿಕೊಂಡು ನೀರು ಬೇಕಿದ್ದರೆ ಹಾಕಿಕೊಂಡು ಕುದಿಬರಲು ಬಿಡಿ. ಒಂದು ಕುದಿಬಂದ ಬಳಿಕ ಕೊತ್ತಂಬರಿ ಸೊಪ್ಪು ಹಾಕಿ ಒಲೆ ಆಫ್ ಮಾಡಿಕೊಂಡರೆ ನಿಮ್ಮ ಮುಂದೆ ಸಬ್ಬಸಿಗೆ ಸೊಪ್ಪಿನ ರಸಂ ರೆಡಿಯಾಗುತ್ತೆ.



Click it and Unblock the Notifications