Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮನೆಯಲ್ಲೇ ಧಾರವಾಡ ಪೇಡ ಮಾಡಿ ನೋಡಿ..! ಎಷ್ಟೊಂದು ಸುಲಭ ಗೊತ್ತಾ?
ರಾಜ್ಯದ ಒಂದೊಂದು ಮೂಲೆಗೆ ಹೋದರು ಅಲ್ಲಿನ ತಿಂಡಿಗಳು, ಅಲ್ಲಿನ ಖಾದ್ಯಗಳು ನಿಮ್ಮನ್ನು ಸವಿಯುವಂತೆ ಮಾಡುತ್ತದೆ. ಒಂದೊಂದು ನಗರವು ಈಗ ಒಂದೊಂದು ರೀತಿಯ ಖಾದ್ಯಗಳಿಗೆ ಫೇಮಸ್ ಆಗಿರುವುದು ನಾವು ನೋಡಬಹುದು. ಅದರಲ್ಲೂ ಸಿಹಿ ತಿಂಡಿಯ ವಿಚಾರದಲ್ಲೂ ಕೂಡ ಕೆಲವು ಊರಿನ ಹೆಸರಲ್ಲೇ ಫೇಮಸ್ ಆಗಿರುತ್ತವೆ.
ನಾವು ಮೈಸೂರು ಪಾಕ್, ದಾವಣಗೆರೆ ಬೆಣ್ಣೆ ದೋಸೆ, ಮೈಸೂರು ಬೋಂಡಾ ಹೀಗೆ ಒಂದೊಂದು ನಗರದ ವಿಶೇಷ ತಿಂಡಿಗಳನ್ನು ನಾವು ನೋಡಬಹುದು. ಅಂದಹಾಗೆ ಈ ಸಿಹಿಗಳಲ್ಲಿ ಬಹಳ ಫೇಮಸ್ ಆಗಿರುವ ಧಾರವಾಡ ಪೇಡ ಕುರಿತು ನೀವೆಲ್ಲಾ ತಿಳಿದಿರುತ್ತೀರಿ. ಧಾರವಾಡ ಪೇಡ ಬಹಳ ರುಚಿಕರ ಹಾಗೆ ಬಹಳ ಸಿಹಿಯಾಗಿರುತ್ತೆ. ಒಮ್ಮೆ ಸವಿದವರು ಮತ್ತೆ ಮತ್ತೆ ಸವಿಯಲು ಮುಂದಾಗುವುದು ನೋಡಬಹುದು.

ಧಾರವಾಡ ಪೇಡ ಮೃದುವಾಗಿ ಬೆಣ್ಣೆಯಂತೆ ಇರುವ ಕಾರಣ ಮಕ್ಕಳಿಂದ ಹಿಡಿದು ಹಿರಿಯರ ವರೆಗೂ ಸವಿಯಲು ಇಷ್ಟಪಡುತ್ತಾರೆ. ಹಾಗಾದ್ರೆ ಈ ಧಾರವಾಡ ಪೇಡವನ್ನು ನಾವಿಂದು ಮನೆಯಲ್ಲೇ ಮಾಡಿ ಸವಿಯುವ ಕುರಿತು ತಿಳಿದುಕೊಳ್ಳೋಣ. ಈ ಧಾರವಾಡ ಪೇಡವನ್ನು ಮನೆಯಲ್ಲಿ ಮಾಡುವುದು ಹೇಗೆ?, ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಧಾರವಾಡ ಪೇಡ ಮಾಡಲು ಬೇಕಾಗುವ ಪದಾರ್ಥಗಳು ಯಾವುದು?
- ಹಾಲಿನ ಪೌಡರ್
- ನೀರು
- ಸಕ್ಕರೆ ಪುಡಿ
- ತುಪ್ಪ
- ಏಲಕ್ಕಿ ಪುಡಿ
ಧಾರವಾಡ ಪೇಡ ಮಾಡುವ ವಿಧಾನವೇನು?
ಮೊದಲು ಒಂದು ಬಾಣಲೆಗೆ 3 ಸ್ಪೂನ್ ತುಪ್ಪ ಹಾಕಿ ತುಪ್ಪ ಕರಗಿದ ಬಳಿಕ ಇದಕ್ಕೆ ಹಾಲಿನ ಪೌಡರ್ ಹಾಕಿ ಚೆನ್ನಾಗಿ ಹುರಿಯಬೇಕು ಸಣ್ಣ ಉರಿಯಲ್ಲಿ ಕೈ ಬಿಡದಂತೆ ತಿರುಗಿಸಿಕೊಳ್ಳಬೇಕು. ಒಟ್ಟಾರೆ ಮಧ್ಯ ಮಧ್ಯದಲ್ಲಿ ಸ್ಪೂನ್ ತುಪ್ಪ ಹಾಕಿಕೊಳ್ಳುತ್ತಾ ಇರಿ. ಸುಮಾರು 2 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಇದನ್ನು ಪ್ರೈ ಮಾಡಿ. ಇದು ಬ್ರೌನ್ ಕಲರ್‌ಗೆ ತಿರುಗುವವರೆಗೂ ಫ್ರೈ ಮಾಡಿ.
ಈಗ ಒಂದು ಗ್ಲಾಸ್ ಹಾಲು ತೆಗೆದುಕೊಂಡು ಸ್ವಲ್ಪ ಸ್ವಲ್ಪವೇ ಹಾಕಿಕೊಂಡು ಮಿಕ್ಸ್ ಮಾಡುತ್ತಾ ಇರಿ. ಈ ಹಿಟ್ಟು ಉಂಡೆ ಕಟ್ಟಲು ಬರುವಷ್ಟು ಹದಕ್ಕೆ ಬರುವಂತೆ ಹದ ಮಾಡಿಕೊಳ್ಳಿ. ನಂತರ ಇದನ್ನು ಒಂದು ತಟ್ಟೆಗೆ ಹಾಕಿಕೊಳ್ಳಿ. ತಟ್ಟೆಗೆ ಹಾಕಿದ ಬಳಿಕ ಚೆನ್ನಾಗಿ ಉಜ್ಜಿಕೊಳ್ಳಬೇಕು. ಹಿಟ್ಟನ್ನು ನಾದುಕೊಳ್ಳಬೇಕು. ಹೀಗೆ ಮಾಡುವುದರಿಂದ ಅದು ಉಂಡೆ ಕಟ್ಟಲು ಬರುವಂತೆ ಹದವಾಗುತ್ತದೆ.
ಹಾಗೆ ಇದಕ್ಕೆ ಏಲಕ್ಕಿ ಪುಡಿ, ರುಚಿಗೆ ಸಕ್ಕರೆ ಪುಡಿಯನ್ನು ಇದಕ್ಕೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಚೆನ್ನಾಗಿ ಒತ್ತಿಕೊಂಡರೆ ಉಂಡೆ ಕಟ್ಟಲು ಬರುತ್ತದೆ. ಹೀಗೆ ನಿಮಗೆ ಯಾವ ಗಾತ್ರಕ್ಕೆ ಬೇಕೋ ಆ ಗಾತ್ರಕ್ಕೆ ಉಂಡೆ ಕಟ್ಟಿಕೊಳ್ಳಿ. ಈಗ ಒಂದು ಪ್ಲೇಟ್‌ನಲ್ಲಿ ಸಕ್ಕರೆ ಪುಡಿ ಹಾಕಿಕೊಂಡು ದರ ಮೇಲೆ ಈ ಪೇಡಗಳನ್ನು ಉರುಳಿಸಿಕೊಳ್ಳಿ. ನಂತರ ಒಂದು ಪ್ಲೇಟ್ ಮೇಲೆ ಇಟ್ಟುಕೊಳ್ಳಿ.
ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಧಾರವಾಡ ರೆಡಿಯಾಗುತ್ತದೆ. ನೀವು ಕೂಡ ಮನೆಯಲ್ಲಿ ಈ ರೀತಿಯ ಧಾರವಾಡ ಪೇಡ ಮಾಡಿ ನೋಡಿ.



Click it and Unblock the Notifications