Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮನೆಯಲ್ಲೇ ಗೋಬಿ ಮಂಚೂರಿಯನ್ ಮಾಡಿ..! ಇಲ್ಲಿದೆ ಗೋಬಿ ರೆಸಿಪಿ
ಗೋಬಿ ಮಂಚೂರಿ ಅಂದರೆ ಸಾಕು ಮನೆಯಲ್ಲಿ ಮಕ್ಕಳು, ಹಿರಿಯರು ಕಿರಿಯರು ಎನ್ನದೆ ಎಲ್ಲರೂ ಇಷ್ಟ ಪಟ್ಟು ತಿನ್ನುತ್ತಾರೆ. ಸಂಜೆ ವೇಳೆ ಗೋಬಿ ಅಂಗಡಿಗಳ ಮುಂದೆ ಸಾಲಿನಲ್ಲಿ ನಿಂತು ಗೋಬಿ ತಿನ್ನುತ್ತಾರೆ. ಅದರಲ್ಲೂ ನಗರಗಳಲ್ಲಿ ಈ ಗೋಬಿಗೆ ಇನ್ನಿಲ್ಲದ ಬೇಡಿಕೆಯಿದೆ. ಈಗ ಆನ್‌ಲೈನ್‌ನಲ್ಲೂ ದುಬಾರಿ ಬೆಲೆ ನೀಡಿ ನೀವು ಗೋಬಿ ಖರೀದಿಸಬಹುದು.
ಆದರೆ ಹೊರಗಡೆ ನೀವು ಸೇವಿಸುವ ಗೋಬಿ ಅಷ್ಟೊಂದು ಆರೋಗ್ಯಕರವಲ್ಲ. ಅಂಗಡಿಯಾತ ಬಳಸುವ ಎಣ್ಣೆಯಿಂದಾಗಿ ನೀವು ಅನಾರೋಗ್ಯಕ್ಕೂ ತುತ್ತಾಗಬಹುದು. ಏಕೆಂದರೆ ಆತ ಕರಿದ ಎಣ್ಣೆ ಬಳಸಿಯೋ ಇಲ್ಲ ಅಸುರಕ್ಷಿತ ರೀತಿಯಲ್ಲಿಯೋ ಗೋಬಿ ಮಾಡಿರಬಹುದು. ಬಹಳಷ್ಟು ಜನರ ಭೀತಿಗೆ ಇದು ಒಂದು ಕಾರಣವಾಗಿರುತ್ತದೆ. ಎಷ್ಟೋ ಮಂದಿ ಗೋಬಿ ತಿನ್ನುವ ಆಸೆ ಇದ್ದರೂ ಇಂತಹ ಹಲವು ವಿಚಾರಗಳಿಂದ ಅವರು ದೂರವೇ ಉಳಿದಿರುತ್ತಾರೆ.
ಹಾಗಾದರೆ ನಾವೇ ಮನೆಯಲ್ಲಿ ಗೋಬಿಯನ್ನು ತಯಾರಿಸಿ ರುಚಿ ರುಚಿಯ ಗೋಬಿ ತಿನ್ನುವುದು ಹೇಗೆ? ಮನೆಯಲ್ಲೇ ಕುಳಿತು ಗೋಬಿ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ನಾವಿಂದು ನೋಡೋಣ, ಜೊತೆಗೆ ಗೋಬಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕಾಗುತ್ತವೆ? ಗೋಬಿಯ ಪಾಕವಿಧಾನವೇನು ಎಂಬುದನ್ನು ತಿಳಿದುಕೊಳ್ಳೋಣ.

ಗೋಬಿ ಮಂಚೂರಿಯನ್, ನಿರ್ದಿಷ್ಟವಾಗಿ ಭಾರತೀಯ ಆಹಾರವಾಗಿರದಿದ್ದರೂ ಭಾರತೀಯರೆಲ್ಲರು ಹೆಚ್ಚಾಗಿ ಇಷ್ಟಪಡುತ್ತಾರೆ. ಹಾಗಾದರೆ ಗೋಬಿ ಮೂಂಚೂರಿಯನ್ ತಯಾರಿಸಲು ಏನೆಲ್ಲಾ ಪದಾರ್ಥ ಬೇಕು ನೋಡಿ.
- ಹೂಕೋಸು-ಅರ್ಥ
- ಈರುಳ್ಳಿ-2
- ಕ್ಯಾಪ್ಸಿಕಂ-1
- ಹಸಿರು ಮೆಣಸಿನಕಾಯಿ- 4
- ಸೋಯಾ
- ಕೆಚಪ್
- ಚಿಲ್ಲಿ
- ಕಡಲೆ ಹಿಟ್ಟು 1
- ಧಾನ್ಯಗಳ ಹಿಟ್ಟು 1/2 ಕಪ್
- ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ 1 ಚಮಚ
- ಕೊತ್ತಂಬರಿ ಸೊಪ್ಪು
- ಬೆಳ್ಳುಳ್ಳಿ ಎಸಳು 6
- ಕರಿಮೆಣಸು 2 ಚಮಚ
- ಸೋಯಾ ಸಾಸ್ 2 ಚಮಚ
- ಅಜಿನೊಮೊಟೊ 1 ಚಿಟುಕು
- ಉಪ್ಪು
- ಎಣ್ಣೆ
ತಯಾರಿ ಹೇಗೆ:
ಹೂಕೋಸು ಹೂಗಳನ್ನು ಉಪ್ಪುಸಹಿತ ನೀರಿನಲ್ಲಿ ಸುಮಾರು 5 ನಿಮಿಷಗಳ ಕಾಲ ಕುದಿಸಬೇಕು. ಬಳಿಕ ಅವುಗಳು ಚೆನ್ನಾಗಿ ಒಣಗಲು ಇಡಬೇಕು, ಇಲ್ಲದಿದ್ದರೆ ಗೋಬಿ ಸೇವಿಸುವಾಗ ಹಲ್ಲಿಗೆ ಹಿಡಿಯುವುದು, ಅಂಟಾಗುವ ಸಂಭವವಿರುತ್ತದೆ. ಮೈದಾ, ಕಾರ್ನ್ ಫ್ಲೋರ್, ನೀರು, ಉಪ್ಪು ಮತ್ತು ಮೆಣಸು ಮಿಶ್ರಣ ಮಾಡುವ ಮೂಲಕ
ಒಂದು ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ಕಟಲೆಹಿಟ್ಟು, ಜೋಳದ ಹಿಟ್ಟು, ಕತ್ತರಿಸಿದ ಮೆಣಸಿನಲ್ಲಿ ಅರ್ಧ, ಕರಿಮೆಣಸು, ಶುಂಠಿ ಮತ್ತು ಬೆಳ್ಳುಳ್ಳಿಯ ಪೇಸ್ಟ್ , ನೀರು ಹಾಕಿ ಗಟ್ಟಿಯಾಗಿ ಕಲಿಸಬೇಕು.
ಬಾಣಲೆಯಲ್ಲಿ, ಎಣ್ಣೆಯನ್ನು ಬಿಸಿ ಮಾಡಿ ಮತ್ತು ಕತ್ತರಿಸಿದ ಬೆಳ್ಳುಳ್ಳಿ, ಶುಂಠಿ ಮತ್ತು ಮೆಣಸಿನಕಾಯಿಯನ್ನು ಹಾಕಿ. ನಂತರ, ಕತ್ತರಿಸಿದ ತರಕಾರಿಗಳನ್ನು ಸೇರಿಸಿ ಮತ್ತು ಚೆನ್ನಾಗಿ ಹುರಿಯಿರಿ. ಮಂಚೂರಿಯನ್ ಬೇಸ್ ಮಾಡಲು ಸಾಸ್‌ಗಳನ್ನು ಸೇರಿಸಿ ಮತ್ತು ರುಚಿಯನ್ನು ಸಮತೋಲನಗೊಳಿಸಲು ಸಕ್ಕರೆ ಸೇರಿಸಿ.
ಹುರಿದ ಹೂಕೋಸನ್ನು ತೆಗೆದು ಪೇಪರಿನಲ್ಲಿ ಇಡಬೇಕು ಇದರಿಂದಾಗಿ ಅಧಿಕ ಎಣ್ಣೆಯನ್ನು ಪೇಪರ್ ಹೀರಿಕೊಳ್ಳುವುದು.ನಂತರ ಮತ್ತೊಂದು ಬಾಣಲೆಯನ್ನು ತೆಗೆದು ಅದಕ್ಕೆ ಸ್ಲ್ಪ ಎಣ್ಣೆ ಹಾಕಿ ಅದು ಬಿಸಿಯಾದಾಗ ಕತ್ತರಿಸಿದ ಈರುಳ್ಳಿಯನ್ನು ಹಾಕಬೇಕು. ಅದು ಕಂದು ಬಣ್ಣಕ್ಕೆ ತಿರುವಾಗ ಬೆಳ್ಳುಳ್ಳಿ ಮತ್ತು ಕರಿಮೆಣಸು ಹಾಕಿ ಬಿಸಿ ಮಾಡಬೇಕು.
ಬಳಿಕ ಅದಕ್ಕೆ ಟೊಮೆಟೊ ಹಾಕಿ, ಕತ್ತರಿಸಿದ ಉಳಿದ ಮೆಣಸು ಮತ್ತು ದುಂಡು ಮೆಣಸಿನಕಾಯಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು, 3-4 ನಿಮಿಷ ಬೇಯಿಸಿದ ನಂತರ ಅಜಿನೊಮಿಟೊ ಮತ್ತು ಸೋಯಾ ಸಾಸ್ ಹಾಕಿ ಮಿಕ್ಸ್ ಮಾಡಿ, ಅದಕ್ಕೆ ನೀರು ಹಾಕಿ ಕುದಿಸಬೇಕು. ಗ್ರೇವಿ ಬಿಸಿಯಾಗಿ ಗುಳ್ಳೆಗಳು ಬರಲಾರಭಿಸಿದಾಗ ಹುರಿದ ಮಂಚೂರಿ ಹಾಕಿ 5 ನಿಮಿಷ ಕಾಯಿಸಬೇಕು. ಈಗ ಅದಕ್ಕೆ ಕೊತ್ತಂಬರಿ ಸೊಪ್ಪುವಿನಿಂದ ಅಲಂಕಾರ ಮಾಡಿದರೆ ರುಚಿರುಚಿಯಾದ ಗೋಬಿ ರೆಡಿ.
ಗೋಬಿ ಮಂಚೂರಿಯನ್ ಕ್ರಿಸ್ಪಿ ಮಾಡುವುದು ಹೇಗೆ?
ಗೋಬಿ ಮಂಚೂರಿಯನ್ ಕ್ರಿಸ್ಪಿಯಾಗಿ ಮಾಡಬೇಕಾದರೆ ಎಣ್ಣೆಯನ್ನು ಸರಿಯಾದ ಪ್ರಮಾಣದಲ್ಲಿ ಬಿಸಿ ಮಾಡಬೇಕು. ಜೊತೆಗೆ ಸರಿಯಾದ ರೀತಿಯಲ್ಲಿ ಗೋಬಿಯನ್ನು ಅದರೊಳಗೆ ಹಾಕಿ ನಿರ್ದಿಷ್ಟ ಪ್ರಮಾಣದಲ್ಲಿ ಹುರಿಯಬೇಕು. ಅದನ್ನು ಗೋಲ್ಡನ್ ಬ್ರೌನ್ ಕಲರ್ ಬರುವವರೆ ಕರಿದರೆ ಕ್ರಿಸ್ಪಿಯಾದ ಗೋಬಿ ಲಭ್ಯವಾಗುತ್ತದೆ. ಹೆಚ್ಚಾದರೆ ಕಹಿಯಾಗಬಹುದು, ಕಡಿಮೆಯಾದರೆ ನಯವಾಗಬಹುದು.



Click it and Unblock the Notifications