Latest Updates
-
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ?
Chettinad Chicken: ಚೆಟ್ಟಿನಾಡ್ ಚಿಕನ್ ಮನೆಯಲ್ಲೇ ಮಾಡಿ.. ಬಾಯಲ್ಲಿ ನೀರೂರಿಸುತ್ತೆ ಇದರ ರುಚಿ
ಮಳೆಗಾಲದ ಸಂಜೆಗೆ ಚುಟುಕು ಖಾರದ ರುಚಿ ಬೇಕಾ? ಚೆಟ್ಟಿನಾಡ್ ಸ್ಟೈಲ್ ಚಿಕನ್ ಓನ್ಲಿ ಫಾರ್ ಯೂ! ಚೆಟ್ಟಿನಾಡ್ ಚಿಕನ್ ರುಚಿಯನ್ನು ಮಾಡಿಯೇ ಸವಿಯಬೇಕು. ಮಳೆಗಾಲದಲ್ಲಿ ಬಿಸಿಬಿಸಿಯಾದ ಹಾಗೂ ಖಾರವಾದ ಆಹಾರದ ಬಯಕೆ ಹೆಚ್ಚಾಗುತ್ತದೆ. ಚೆಟ್ಟಿನಾಡ್ ಚಿಕನ್ (Chettinad Chicken Recipe) ಅನ್ನು ನೀವು ಮನೆಯಲ್ಲಿಯೇ ಮಾಡಬಹುದು. ಬೇಕಾಗುವ ಮಸಾಲೆ ಪದಾರ್ಥಗಳನ್ನು ರುಬ್ಬಿ, ಚಿಕನ್ ಅನ್ನು ಮ್ಯಾರಿನೇಟ್ ಮಾಡಿ, ಹುರಿದು ಬೇಯಿಸಬೇಕು. ಇದನ್ನು ಅನ್ನ, ರೊಟ್ಟಿ, ನಾನ್ ಗಳೊಂದಿಗೆ ಸವಿಯಬಹುದು. ಹಾಗಾದರೆ, ಸುಲಭವಾಗಿ ಮತ್ತು ಬಲು ರುಚಿಯಾಗಿ ಚೆಟ್ಟಿನಾಡು ಚಿಕನ್ ಮಾಡುವುದು ಹೇಗೆ ಎಂಬುದನ್ನು ಇಲ್ಲಿ ತಿಳಿಯೋಣ.
ಮಳೆಗಾಲವು ಪ್ರಾರಂಭವಾದಂತೆ ಬೆಂಗಳೂರು ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಇಂತಹ ಚಳಿಯ ವಾತಾವರಣದಲ್ಲಿ ಬಿಸಿಬಿಸಿಯಾದ ಖಾರವಾದ ಊಟವನ್ನು ಸವಿಯಲು ಮನಸ್ಸು ಮತ್ತು ನಾಲಿಗೆ ಬಯಸುತ್ತದೆ. ಅದರಂತೆ, ಬಿಸಿಯಾದ ರುಚಿಕರವಾದ ಚೆಟ್ಟಿನಾಡ್ ಚಿಕನ್ ಸವಿಯಲು ಹೇಳಿ ಮಾಡಿಸಿದ ತಿನಿಸು. ಈ ರೆಸಿಪಿ ದಕ್ಷಿಣ ಭಾರತದಲ್ಲಿ ಬಹಳ ಪ್ರಸಿದ್ಧವಾಗಿದೆ. ಇದನ್ನು ತಯಾರಿಸಿದರೆ ಅನ್ನದ ಜೊತೆಗೆ ರೊಟ್ಟಿ, ನಾನ್ ಗಳೊಂದಿಗೆ ಸವಿಯಲು ತುಂಬಾ ರುಚಿಕರವಾಗಿರುತ್ತದೆ. ಇದನ್ನು ಮಾಡುವುದು ಕೂಡ ತುಂಬಾ ಸುಲಭ.

ಚೆಟ್ಟಿನಾಡ್ ಚಿಕನ್ ಮಾಡಲು ಬೇಕಾಗುವ ಸಾಮಗ್ರಿಗಳು
• ಧನಿಯಾ - 1 ಚಮಚ
• ಮೆಂತ್ಯ - 2 ಚಮಚ
• ಕಾಳುಮೆಣಸು - 1 ಚಮಚ
• ಚಕ್ಕೆ - 1 ಇಂಚು
• ಒಣ ಮೆಣಸಿನಕಾಯಿ - 3
• ಕಾಶ್ಮೀರಿ ಕೆಂಪು ಮೆಣಸಿನಕಾಯಿ - 2
• ಸ್ಟಾರ್ (ನಕ್ಷತ್ರ) - 1
• ಜೀರಿಗೆ - 1 ಚಮಚ
• ಏಲಕ್ಕಿ - 2
• ಲವಂಗ - 6
• ತೆಂಗಿನಕಾಯಿ - 2 ಚಮಚ
• ಶುಂಠಿ - ½ ಇಂಚು
• ಬೆಳ್ಳುಳ್ಳಿ - 3
• ಉಪ್ಪು - ರುಚಿಗೆ ತಕ್ಕಷ್ಟು

ಇತರೆ ಪದಾರ್ಥಗಳು
• ಚಿಕನ್ - 500 ಗ್ರಾಂ
• ಮೊಸರು - 1 ½ ಚಮಚ
• ನಿಂಬೆ ರಸ - 1 ಚಮಚ
• ತುಪ್ಪ - 1 ಚಮಚ
• ಈರುಳ್ಳಿ - 1
• ಅರಿಶಿನ ಪುಡಿ - ½ ಚಮಚ
• ಉಪ್ಪು - 1 ಚಮಚ
• ಕರಿಬೇವು - 10
• ಕೊತ್ತಂಬರಿ ಸೊಪ್ಪು - ಸ್ವಲ್ಪ
ಚೆಟ್ಟಿನಾಡ್ ಚಿಕನ್ ತಯಾರಿಸುವ ವಿಧಾನ
ಮೊದಲಿಗೆ ಚಿಕನ್ ಅನ್ನು ಚೆನ್ನಾಗಿ ತೊಳೆಯಿರಿ. ನಂತರ ಅರಿಶಿನ ಮತ್ತು ಉಪ್ಪು ಹಾಕಿ ಮತ್ತೊಮ್ಮೆ ತೊಳೆಯಿರಿ. ಈಗ ಚೆಟ್ಟಿನಾಡ್ ಚಿಕನ್ ಮಾಡಲು ಮುಖ್ಯವಾದ ಮಸಾಲೆಯನ್ನು ತಯಾರಿಸಬೇಕು. ಅದಕ್ಕಾಗಿ ಶುಂಠಿ, ಬೆಳ್ಳುಳ್ಳಿಯನ್ನು ಹೊರತುಪಡಿಸಿ ಮೆಂತ್ಯ, ಧನಿಯಾ, ಸ್ಟಾರ್, ಒಣ ಮೆಣಸಿನಕಾಯಿ, ಕಾಶ್ಮೀರಿ ಮೆಣಸಿನಕಾಯಿ, ಏಲಕ್ಕಿ, ತೆಂಗಿನಕಾಯಿ ಚೂರು ಸೇರಿದಂತೆ ಉಳಿದೆಲ್ಲಾ ಪದಾರ್ಥಗಳನ್ನು ಹುರಿದು ಚೆನ್ನಾಗಿ ಆರಲು ಬಿಟ್ಟು ರುಬ್ಬಿಕೊಳ್ಳಿ.

ಈಗ ಹುರಿದ ಮಸಾಲೆ ಪದಾರ್ಥಗಳೊಂದಿಗೆ ಶುಂಠಿ, ಬೆಳ್ಳುಳ್ಳಿ ಮತ್ತು ಮತ್ತೆ ಸ್ವಲ್ಪ ತೆಂಗಿನಕಾಯಿ ಹಾಕಿ. ಅದಕ್ಕೆ ಸ್ವಲ್ಪ ನೀರು ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ಈ ಪೇಸ್ಟ್ ಅನ್ನು ಚಿಕನ್ ಜೊತೆಗೆ ಸೇರಿಸಿ. ನಿಂಬೆ ರಸ ಮತ್ತು ಮೊಸರು ಸೇರಿಸಿ ಚೆನ್ನಾಗಿ ಕಲಸಿ 60 ನಿಮಿಷಗಳ ಕಾಲ ನೆನೆಸಿಡಿ. ಬಳಿಕ ಗ್ಯಾಸ್ ಸ್ಟವ್ ಆನ್ ಮಾಡಿ. ಒಂದು ಬಾಣಲೆಯನ್ನು ಇಟ್ಟು, ಬಿಸಿಯಾದ ನಂತರ ಒಂದು ಚಮಚ ತುಪ್ಪ ಹಾಕಿ. ಇದಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ, ಅರಿಶಿನ ಪುಡಿ ಸೇರಿಸಿ ಈರುಳ್ಳಿ ಚೆನ್ನಾಗಿ ಹುರಿಯಿರಿ.
ಈರುಳ್ಳಿ ಚೆನ್ನಾಗಿ ಹುರಿದ ನಂತರ ಈಗ ಮ್ಯಾರಿನೇಟ್ ಮಾಡಿದ ಚಿಕನ್ ಹಾಕಿ, ಚೆನ್ನಾಗಿ ತಿರುಗಿಸಿ. ಅಗತ್ಯವಿರುವಷ್ಟು ನೀರು ಹಾಕಿ. ಬಳಿಕ ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ, ಚೆಟ್ಟಿನಾಡ್ ಮಸಾಲೆ ಪೂರ್ತಿಯಾಗಿ ಬೇಯುವವರೆಗೆ ಬೇಯಿಸಿ. ಇಷ್ಟು ಮಾಡಿದರೆ, ಈಗ ರುಚಿಕರವಾದ ಚೆಟ್ಟಿನಾಡ್ ಚಿಕನ್ ಸಿದ್ಧ. ಕೊನೆಯಲ್ಲಿ ಕರಿಬೇವು ಮತ್ತು ಕೊತ್ತಂಬರಿ ಸೊಪ್ಪನ್ನು ಉದುರಿಸಿ ಅಲಂಕರಿಸಿ. ಮಧ್ಯಾಹ್ನದ ಊಟಕ್ಕೆ ಬಿಸಿ ಅನ್ನದೊಂದಿಗೆ, ಇಲ್ಲದಿದ್ದರೆ ರಾತ್ರಿಯ ಊಟಕ್ಕೆ ಪರೋಟ, ಚಪಾತಿ, ಇಡ್ಲಿ ಅಥವಾ ರೊಟ್ಟಿಯೊಂದಿಗೆ ತಿನ್ನಲು ತುಂಬಾ ರುಚಿಯಾಗಿರುತ್ತದೆ.



Click it and Unblock the Notifications