Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಡಾಬಾ ಶೈಲಿಯ ಮೊಟ್ಟೆ ಕರಿ: ಎಗ್ ಮಸಾಲೆ ಪುಡಿ ಬೇಕಾಗಿಲ್ಲ ಈ ಸ್ವಾದಿಷ್ಟಕರ ಎಗ್ ಕರಿಗೆ
ಈ ಡಾಬಾಗಳಲ್ಲಿ ಮೊಟ್ಟೆ ಸಾರು ತುಂಬಾನೇ ರುಚಿಯಾಗಿರುತ್ತದೆ ಅಲ್ವಾ? ಏನಾದರೂ ಸ್ಪೆಷಲ್ ಮಸಾಲೆ ಹಾಕುತ್ತಾರಾ? ಅದಕ್ಕೆ ಇಷ್ಟೊಂದು ರುಚಿನಾ ಅನಿಸುವುದು, ಆದರೆ ನೀವು ಡಾಬಾ ಶೈಲಿಯ ಮೊಟ್ಟೆ ಕರಿಯನ್ನು ಮನೆಯಲ್ಲಿರುವ ಮಸಾಲೆ ಬಳಸಿ, ಹೊರಗಿನ ಯಾವುದೇ ಮಸಾಲೆ ಪುಡಿ ಸೇರಿಸದೆ ರುಚಿಯಾಗಿ ಮಾಡಬಹುದು, ಬನ್ನಿ ಈ ಸರಳ ರೆಸಿಪಿಯತ್ತ ಕಣ್ಣಾಡಿಸೋಣ:

ಬೇಕಾಗುವ ಸಾಮಗ್ರಿ
ಮೊಟ್ಟೆ 5-6
ಪಲಾವ್ ಎಲೆ
ಸ್ವಲ್ಪ ಚಕ್ಕೆ
2 ಏಲಕ್ಕಿ
3-4 ಲವಂಗ
1/2 ಚಮಚ ಸೋಂಪು
ಎಣ್ಣೆ 2 ಚಮಚ
ಖಾರದ ಪುಡಿ (ನಿಮ್ಮ ಖಾರಕ್ಕೆ ತಕ್ಕಷ್ಟು)
1/2 ಚಮಚ ಅರಿಶಿಣ ಪುಡಿ
1/2 ಚಮಚ ಗರಂ ಮಸಾಲ ಪುಡಿ
ರುಚಿಗೆ ತಕ್ಕ ಉಪ್ಪು
ಟೊಮೆಟೊ 5-6
ಈರುಳ್ಳಿ 1
ಶುಂಠಿ-ಬೆಳ್ಳುಳ್ಳಿ ಪೇಸ್ಟ್ 1 ಚಮಚ
ಸ್ವಲ್ಪ ಕೊತ್ತಂಬರಿ ಸೊಪ್ಪು
ಫ್ರೆಶ್ ಕ್ರೀಮ್ (Optional)
ಮಾಡುವ ವಿಧಾನ
- ನೀವು ಮೊಟ್ಟೆ ಬೇಯಿಸಿ ಸಿಪ್ಪೆ ಸುಲಿದು ಇಡಿ
- ಟೊಮೆಟೊವನ್ನು ಚಿಕ್ಕದಾಗಿ ಕತ್ತರಿಸಿ ಪೇಸ್ಟ್ ಮಾಡಿ(ಪೇಸ್ಟ್ ಮಾಡದೆಯೂ ಬಳಸಬಹುದು)
- ನೀವು ಪಾತ್ರೆ ಬಿಸಿ ಮಾಡಿ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಚಕ್ಕೆ, ಲವಂಗ ಹಾಕಿ
- ಈಗ ಅರ್ಧ ಚಮಚ ಸೋಂಪು ಸೇರಿಸಿ,ಪಲಾವ್ ಎಲೆ ಕೈಯಿಂದಲೇ ಪುಡಿ ಮಾಡಿ ಸೇರಿಸಿ
- ನಂತರ ಈರುಳ್ಳಿ ಹಾಕಿ, ಈರುಳ್ಳಿ ಸ್ವಲ್ಪ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ
- ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ
- ನಂತರ ಟೊಮೆಟೊ ಹಾಕಿ, ಟೊಮೆಟೊಪೇಸ್ಟ್ ಹಾಕಬಹುದು, ಇಲ್ಲಾ ಟೊಮೆಟೊ ಹಾಕಿ ಅದು ಮೆತ್ತಗಾಗುವವರೆಗೆ ಸೌಟ್ನಿಂದ ಪ್ರೆಸ್ ಮಾಡಿ, ರುಚಿಗೆ ತಕ್ಕ ಉಪ್ಪು ಸೇರಿಸಿ
- ಬಳಿಕ ಖಾರದ ಪುಡಿ, ಅರಿಶಿಣ ಪುಡಿ, ಗರಂ ಮಸಾಲ ಪುಡಿ ಸೇರಿಸಿ
- ಎಣ್ಣೆ ಮೇಲ್ಭಾಗದಲ್ಲಿ ತೇಲಿ ಬರುವಂತೆ ಫ್ರೈ ಮಾಡಿ, ನಂತರ ಎಷ್ಟು ಗ್ರೇವಿ ಬೇಕೋ ಅಷ್ಟು ನೀರು ಸೇರಿಸಿ ಕುದಿಸಿ
- ಮೊಟ್ಟೆಯ ಮೇಲೆ ಚಾಕುವಿನಿಂದ ಗೆರೆ ಎಳೆದು ಗ್ರೇವಿಗೆ ಸೇರಿಸಿ ಕಡಿಮೆ ಉರಿಯಲ್ಲಿ ಮತ್ತೆ 5 ನಿಮಿಷ ಕುದಿಸಿ
- ನಂತರ ಸ್ವಲ್ಪ ನಿಂಬೆ ರಸ ಹಿಂಡಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಡಾಬಾ ಶೈಲಿಯ ಮೊಟ್ಟೆಯ ಗ್ರೇವಿ ರೆಡಿ.
ಇತರ ಸಲಹೆ
ಇದಕ್ಕೆ ಟೊಮೆಟೊ ಪೇಸ್ಟ್ ಎಣ್ಣೆಯಲ್ಲಿ ಬೇಯುವಾಗ ಒಂದು ಮೊಟ್ಟೆ ಹಾಕಿ ಮಿಕ್ಸ್
ಮಾಡಿ ನಂತರ ಗ್ರೇವಿಗೆ ಬೇಯಿಸಿದ ಮೊಟ್ಟೆ ಸೇರಿಸಿದರೆ ಅದರ ಟೇಸ್ಟ್ ಇನ್ನೂ
ಭಿನ್ನವಾಗಿರುತ್ತದೆ.
ನೀವು ಈ ಗ್ರೇವಿಗೆ ಫ್ರೆಶ್ ಕ್ರೀಮ್ ಸೇರಿಸಿದರೆ ಇನ್ನೂ
ರುಚಿಯಾಗಿರುತ್ತದೆ.
ನೀವು ಮೊಟ್ಟೆಯನ್ನು ಸ್ವಲ್ಪ ಫ್ರೈ ಮಾಡಿ ಸೇರಿಸಬಹುದು. ಬಾಣಲೆಗೆ ಸ್ವಲ್ಪ ಎಣ್ಣೆ
ಹಾಕಿ ಅದಕ್ಕೆ ಸ್ವಲ್ಪ ಅರಿಶಿಣ ಪುಡಿ, ಉಪ್ಪಿನ ಪುಡಿ, ಖಾರದ ಪುಡಿ ಸೇರಿಸಿ,
ಅದರಲ್ಲಿ ಮೊಟ್ಟೆ ಹಾಕಿ ಸ್ವಲ್ಪ ಫ್ರೈ ಮಾಡಿ ಸೇರಿಸಿದರೆ ರುಚಿ
ಚೆನ್ನಾಗಿರುತ್ತದೆ.



Click it and Unblock the Notifications