Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಚಿತ್ರಾನ್ನ ಪಲಾವ್‌ಗಿಂತ ರುಚಿ ನೀಡುವ ದಾಲ್ ರೈಸ್..! ಮಾಡೋದು ಹೇಗೆ?
ಬೆಳಗ್ಗೆ ತಿಂಡಿಗೆ ಹಾಗೂ ಮಧ್ಯಾಹ್ನ ಬಾಕ್ಸ್ ತೆಗೆದುಕೊಂಡು ಹೋಗುವವರು ಹೆಚ್ಚಾಗಿ ರೈಸ್ ಐಟಂ ಅನ್ನೇ ತಿಂಡಿಯಾಗಿ ಮಾಡುತ್ತಾರೆ. ಏಕೆಂದರೆ ಈ ರೀತಿ ಅನ್ನದಿಂದ ಯಾವುದಾದರು ಖಾದ್ಯ ಮಾಡಿ ಸವಿಯುವುದು ಸುಲಭ ಹಾಗೂ ಕಡಿಮೆ ಖರ್ಚು, ಕಡಿಮೆ ವಸ್ತುಗಳ ಬಳಸಿ ಕಡಿಮೆ ಸಮಯದಲ್ಲಿ ಮಾಡಬಹುದು. ಹೀಗಾಗಿ ಅನ್ನದಿಂದ ಮಾಡುವ ಖಾದ್ಯ ಎಲ್ಲರಿಗೂ ಪ್ರಿಯ.
ಅದರಲ್ಲೂ ಚಿತ್ರಾನ್ನ, ಪುಳಿಯೋಗರೆ, ಪಲಾವ್ ನಂತಹ ಖಾದ್ಯ ಎಲ್ಲರ ಮನೆಯ ಫೇವರಿಟ್ ತಿಂಡಿ. ಆದ್ರೆ ಎಲ್ಲರಿಗೂ ನಿತ್ಯ ಇದನ್ನೇ ಮಾಡಿ ಸವಿಯುವುದು ಅಂದ್ರೆ ಬೇಸರ. ಏನಾದರು ವಿಶೇಷ ತಿಂಡಿ ಮಾಡಿ ಬಾಕ್ಸ್‌ಗೆ ತೆಗೆದುಕೊಂಡು ಹೋಗಬೇಕು ಎಂದ ಆಸೆ ಇದ್ದೇ ಇರುತ್ತೆ. ಆದ್ರೆ ಯಾವ ತಿಂಡಿ ಮಾಡಿ ಸವಿಯಬೇಕು ಎಂಬುದು ತಿಳಿದಿರುವುದಿಲ್ಲ.

ಇಂತಹ ಮಂದಿಗಾಗಿ ನಾವಿಂದು ಹೊಸ ರೀತಿಯ ದಾಲ್ ರೈಸ್ ಮಾಡುವುದನ್ನು ತಿಳಿದುಕೊಳ್ಳೋಣ. ಈ ರೈಸ್ ಚಿತ್ರಾನ್ನ, ಪುಳಿಯೋಗರೆ ಸೇರಿ ಎಲ್ಲಾ ತಿಂಡಿಗಳಿಗಿಂತಲೂ ರುಚಿಕರವಾಗಿರುತ್ತೆ. ದಾಲ್ ರೈಸ್ ಬೆಳಗ್ಗೆ ಹಾಗೂ ಮಧ್ಯಾಹ್ನ ಬಾಕ್ಸ್‌ಗೆ ಹಾಕಿಕೊಂಡು ಸವಿಯಲು ಹೇಳಿ ಮಾಡಿಸಿದ ಖಾದ್ಯ. ಹಾಗಾದ್ರೆ ಇದನ್ನು ಮಾಡುವುದು ಹೇಗೆ?
ದಾಲ್ ರೈಸ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯುತ್ತೆ, ಯಾವೆಲ್ಲಾ ಕ್ರಮ ಅನುಸರಿಸಬೇಕು ಎಂಬೆಲ್ಲಾ ಮಾಹಿತಿಯನ್ನು ನಾವಿಂದು ತಿಳಿದುಕೊಳ್ಳೋಣ.
ದಾಲ್ ರೈಸ್ ಮಾಡಲು ಬೇಕಾಗುವ ವಸ್ತುಗಳು
- ಅಕ್ಕಿ - 2 ಕಪ್
- ತೊಗರಿ ಬೇಳೆ- ಕಾಲು ಕಪ್
- ಸಾಸಿವೆ
- ಜೀರಿಗೆ
- ಬೆಳ್ಳುಳ್ಳಿ
- ತುಪ್ಪ
- ಈರುಳ್ಳಿ
- ಟೊಮೆಟೋ
- ಈಂಗು
- ಕರಿಬೇವು
- ಉಪ್ಪು
- ಎಣ್ಣೆ
- ಹಸಿ ಮೆಣಸು
- ಒಣಮೆಣಸು
ದಾಲ್ ರೈಸ್ ಮಾಡುವುದು ಹೇಗೆ?
ಮೊದಲು ಕುಕ್ಕರ್ ಅನ್ನು ಒಲೆ ಮೇಲೆ ಇಟ್ಟು ಇದಕ್ಕೆ ಎಣ್ಣೆ ಹಾಕಿಕೊಳ್ಳಿ, ಈ ಎಣ್ಣೆ ಬಿಸಿಯಾದ ಬಳಿಕ ಇದಕ್ಕೆ ಸಾಸಿವೆ, ಜಿಟಿಕೆ ಇಂಗು, ಜೀರಿಗೆ, ಜಜ್ಜಿಕೊಂಡಿರುವ ಬೆಳ್ಳುಳ್ಳಿ, ಕರಿವೇವು, ಹಸಿ ಮೆಣಸು, ಎರಡು ಒಣ ಮೆಣಸು ಹಾಕಿಕೊಂಡು ಫ್ರೈ ಮಾಡಿ. ಬಳಿಕ ಇದಕ್ಕೆ ಒಂದು ಈರುಳ್ಳಿ ಕತ್ತರಿಸಿ ಹಾಕಿಕೊಂಡು 2 ನಿಮಿಷಗಳ ಕಾಲ ಫ್ರೈ ಮಾಡಿ. ಫ್ರೈ ಮಾಡುವಾಗ ಉರಿ ಸಣ್ಣದಾಗಿ ಇರಲಿ.
ಈಗ 2 ನಿಮಿಷದ ಬಳಿಕ 2 ಟೊಮೆಟೋವನ್ನು ಚಿಕ್ಕದಾಗಿ ಹೆಚ್ಚಿಕೊಂಡಿರುವುದನ್ನು ಹಾಕಿ. ಬಳಿಕ ಇದಕ್ಕೆ ಅರಶಿನ, ಉಪ್ಪು ಹಾಕಿಕೊಂಡು ಫ್ರೈ ಮಾಡಿ. ಟೊಮೆಟೋ ಬೆಂದು ಹಸಿ ವಾಸನೆ ಹೋಗುವವರೆಗೆ ಫ್ರೈ ಮಾಡಿ. ನಂತರ ಇದಕ್ಕೆ 2 ಕಪ್ ಅಳತೆಯಲ್ಲಿ ನೀರು ಹಾಕಿಕೊಳ್ಳಿ. ಇದಕ್ಕೆ ಕಾಲು ಕಪ್ ತೊಗರಿ ಬೇಳೆ ತೊಳೆದು ನೀರಿನಲ್ಲಿ 15 ನೆನೆಸಿಟ್ಟು ಈ ಕುಕ್ಕರ್‌ಗೆ ಹಾಕಿಕೊಳ್ಳಿ.
ಈಗ ನೀರು ಹಾಕಿದ ಕಪ್‌ನಲ್ಲಿಯೇ ಒಂದು ಕಪ್ ಅಕ್ಕಿ ತೆಗೆದುಕೊಂಡು ಚೆನ್ನಾಗಿ ನೀರಿನಲ್ಲಿ ತೊಳೆದು ಬಳಿಕ ಕುಕ್ಕರ್‌ಗೆ ಹಾಕಿಕೊಂಡು ಚೆನ್ನಾಗಿ ತಿರುಗಿಸಿ. ಈಗ ಒಂದು ಸ್ಪೂನ್ ತುಪ್ಪ ಹಾಕಿಕೊಳ್ಳಿ, ತುಪ್ಪ ಇಲ್ಲದಿದ್ದರೂ ನಡೆಯುತ್ತೆ. ಈಗ ಕುಕ್ಕರ್ ಮುಚ್ಚಳ ಮುಚ್ಚಿ 2 ಸೀಟಿ ಹೊಡೆಯಲು ಬಿಡಬೇಕು. ಎರಡು ಸೀಟಿಯ ಬಳಿಕ ಕುಕ್ಕರ್ ತಣ್ಣಗಾಗಲು ಹಾಗೆಯೇ ಬಿಡಿ.
ಕುಕ್ಕರ್ ತಣ್ಣಗಾದ ಬಳಿಕ ಅದರ ಮುಚ್ಚಳ ತೆಗೆದು ಒಮ್ಮೆ ಚೆನ್ನಾಗಿ ಮಿಕ್ಸ್ ಮಾಡಿ. ಇಷ್ಟಾದರೆ ನಿಮ್ಮ ಮುಂದೆ ದಾಲ್ ರೈಸ್ ರೆಡಿಯಾಗುತ್ತದೆ. ನೀವು ಸಹ ಮನೆಯಲ್ಲಿ ಒಮ್ಮೆ ಟ್ರೈ ಮಾಡಿ ನೋಡಿ. ಮಾಡುವುದು ಕೂಡ ಬಹಳ ಸುಲಭ.



Click it and Unblock the Notifications