Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ತಲೆ ಕೂದಲು ಉದುರಿದರೆ ಈ ಕರಿಬೇವಿನ ಚಟ್ನಿ ಪುಡಿ ಸೇವಿಸಿ..! ಮಾಡೋದು ಬಹಳ ಸುಲಭ
ನೀವು ಊಟ ತಿಂಡಿಗೆ ಆರೋಗ್ಯಕರ ಚಟ್ನಿ ಸವಿಯಲು ಇಷ್ಟಪಟ್ಟರೆ ಹಲವು ರೀತಿ ಚಟ್ನಿ ಮಾಡಿ ಸವಿಯಲು ಮುಂದಾಗಬಹುದು. ಶುಂಠಿ, ಬೆಳ್ಳುಳ್ಳಿ, ಈರುಳ್ಳಿ ಚಟ್ನಿ ಸೇರಿ ಹಲವು ಬಗೆಯ ಚಟ್ನಿಗಳು ಆರೋಗ್ಯಕ್ಕೆ ಉತ್ತಮವಾಗುವ ಜೊತೆಗೆ ರುಚಿಯೂ ಅದ್ಭುತವಾಗಿರುತ್ತೆ. ಹಾಗೆ ನಾವಿಂದು ಇಂತಹ ರುಚಿಯ ಚಟ್ನಿಗಳ ಜೊತೆಗೆ ನಾವಿಂದು ಕರಿಬೇವಿನ ಅದ್ಭುತ ಚಟ್ನಿ ಪುಡಿ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ.
ಕರಿಬೇವು ಆರೋಗ್ಯಕ್ಕೆ ಎಷ್ಟು ಉತ್ತಮ ಅನ್ನೋದನ್ನು ತಿಳಿದಿರಬಹುದು. ಇದು ಗುಣದಲ್ಲಿ ಕಹಿಯಾದರು ಹಲವು ರೀತಿಯಲ್ಲಿ ಆರೋಗ್ಯಕರ ಅಂಶಗಳ ತನ್ನಲ್ಲಿಟ್ಟುಕೊಂಡಿದೆ. ಕರಿಬೇವಿನ ಎಲೆಗಳನ್ನು ನೀರಿನಲ್ಲಿ ನೆನೆಸಿಟ್ಟು ಅದರ ನೀರು ಕುಡಿಯುವುದು ದೇಹದಲ್ಲಿನ ಕಲ್ಮಶಗಳ ನಿವಾರಣೆಗೆ ಇದು ಸಹಕಾರಿಯಾಗಲಿದೆ.

ಕರಿಬೇವಿನ ಎಲೆಗಳು ದೇಹದಲ್ಲಿ ಆಕ್ಸಿಡೆಟಿವ್ ಒತ್ತಡವನ್ನು ಕಡಿಮೆ ಮಾಡುತ್ತವೆ. ವಿಷಕಾರಿ ಅಂಶಗಳನ್ನು ದೂರ ಮಾಡುವುದರ ಜೊತೆಗೆ ಅವುಗಳ ಆಂಟಿ ಆಕ್ಸಿಡೆಂಟ್ ಅಂಶಗಳು ಲಿವರ್ ಆರೋಗ್ಯ ಸುಧಾರಿಸಲಿದೆ. ದೇಹದ ರಕ್ತನಾಳಗಳು ಕೊಲೆಸ್ಟ್ರಾಲ್ ಸಮಸ್ಯೆಗೆ ತುತ್ತಾಗಿದ್ದರೆ ಕರಿಬೇವಿನ ನೀರು ಅಥವಾ ಅದರಿಂದ ಮಾಡಿರುವ ಹಲವು ಖಾದ್ಯಗಳ ಸೇವಿಸುವುದು ಉತ್ತಮ. ಹಾಗೆ ಕೂದಲು ಉದುರುವ ಸಮಸ್ಯೆ ಇದ್ದವರು ಈ ಚಟ್ನಿ ಪುಡಿ ಸೇವಿಸಿದರೆ ಬಹಳ ಉತ್ತಮ.
ಇಷ್ಟೊಂದು ಆರೋಗ್ಯಕರ ಅಂಶಗಳ ಹೊಂದಿರುವ ಈ ಕರಿಬೇವಿನ ಚಟ್ನಿ ಪುಡಿಯನ್ನು ಮಾಡುವ ಕುರತಾಗಿ ನಾವಿಂದು ತಿಳಿದುಕೊಳ್ಳೋಣ. ಈ ಕರಿಬೇವಿನ ಚಟ್ನಿ ಪುಡಿ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಕರಿಬೇವಿನ ಚಟ್ನಿ ಪುಡಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಕರಿಬೇವು
- ಒಣ ಮೆಣಸು
- ಉದ್ದಿನ ಬೇಳೆ
- ಕಡಲೆ ಬೇಳೆ
- ಕೊತ್ತಂಬರಿ ಬೀಜ
- ಎಣ್ಣೆ
- ಜೀರಿಗೆ
- ಹುಣಸೆ ಹುಳಿ
- ಅರಿಶಿನ ಪುಡಿ
- ಉಪ್ಪು
ಕರಿಬೇವಿನ ಚಟ್ನಿ ಪುಡಿ ಮಾಡುವುದು ಹೇಗೆ?
ಮೊದಲು ಒಂದು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಬಳಿಕ ಕಡಲೆ ಬೇಳೆ, ಧನಿಯಾ ಕಾಳು, ಉದ್ದಿನ ಬೇಳೆ, ಜೀರಿಗೆ, ಒಣ ಮೆಣಸು ಹಾಕಿಕೊಂಡು 2 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ. 2 ನಿಮಿಷದ ಬಳಿಕ ಈ ಎಲ್ಲಾ ಪದಾರ್ಥಗಳ ಜೊತೆಗೆ ಕರಿಬೇವಿನ ಎಲೆಗಳನ್ನು ಹಾಕಿಕೊಂಡು ಮತ್ತೆ ಮೂರು ನಿಮಿಷಗಳ ಕಾಲ ಹುರಿದುಕೊಳ್ಳಿ.
ಈಗ ಒಲೆ ಆಫ್ ಮಾಡಿಕೊಂಡು ಪದಾರ್ಥಗಳು ತಣ್ಣಗಾಗಲು ಬಿಡಿ. ತಣ್ಣಗಾದ ಬಳಿಕ ಒಂದು ಮಿಕ್ಸಿ ಜಾರ್‌ಗೆ ಹಾಕಿಕೊಂಡು ಅದಕ್ಕೆ ಹುಣಸೆ ಹಣ್ಣು, ಅರಶಿಣ ಪುಡಿ, ಉಪ್ಪು, ಹಾಕಿಕೊಂಡು ತರಿತರಿಯಾಗಿ ರುಬ್ಬಿಕೊಳ್ಳಬೇಕು. ಆಗಾಗ ಮಿಕ್ಸ್ ಮಾಡಿಕೊಳ್ಳುತ್ತಾ ಮತ್ತೆ ಮತ್ತೆ ರುಬ್ಬಿಕೊಳ್ಳಬೇಕು. ತರಿ ತರಿಯಾಗಿದ್ದರೆ ಬಹಳ ರುಚಿಯಾಗಿರುತ್ತದೆ.
ಇಷ್ಟಾದರೆ ನಿಮ್ಮ ಮುಂದೆ ಕರಿಬೇವಿನ ಚಟ್ನಿ ಪುಡಿ ಸಿದ್ದವಾಗುತ್ತೆ. ಇದನ್ನು ಮೊಸರಿನ ಜೊತೆಗೆ ಕಲಸಿಕೊಂಡು ಇಲ್ಲವೆ ತುಪ್ಪದ ಜೊತೆಗೆ ಕಲಸಿ ಸವಿಯಲು ನೀಡಬಹುದು. ಯಾವುದೇ ತಿಂಡಿ ಅಥವಾ ಊಟದ ಜೊತೆಗೆ ಇದು ಅದ್ಭುತ ರುಚಿ ನೀಡಲಿದೆ. ನೀವು ಕೂಡ ಮನೆಯಲ್ಲಿ ಇದನ್ನೊಮ್ಮೆ ಟ್ರೈ ಮಾಡಿ ನೋಡಿ. ಕರಿಬೇವಿನ ಎಲೆಗಳ ಹಲವು ಪ್ರಯೋಜಗಳನ್ನು ಈ ಚಟ್ನಿ ಮೂಲಕ ನೀವು ಪಡೆಯಬಹುದು.
ಹಾಗೆ ಈ ಕರಿಬೇವಿನ ಚಟ್ನಿಯನ್ನು ನೀವು ಬಹಳ ದಿನಗಳ ಕಾಲ ಇಟ್ಟು ಸವಿಯಬಹುದು. ಇದು ಬಹುಬೇಗ ಹಾಳಾಗುವುದಿಲ್ಲ. ಹಾಗೆ ರುಚಿಯು ಕೂಡ ಅದ್ಭುತವಾಗಿರುತ್ತದೆ. ನೀವು ಸಹ ಒಮ್ಮೆ ಮನೆಯಲ್ಲಿ ಇದನ್ನು ಟ್ರೈ ಮಾಡಿ ನೋಡಿ. ಮಾಡುವುದು ಕೂಡ ಬಹಳ ಸುಲಭ ಹಾಗೆ ಕಡಿಮೆ ಸಮಯದಲ್ಲಿ ಮಾಡಿ ಮುಗಿಸಬಹುದು.



Click it and Unblock the Notifications