Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸುಲಭದ ಸೌತೆಕಾಯಿ ಚಟ್ನಿ ರೆಸಿಪಿ: ಮಾಡುವ ವಿಧಾನವಿದು!
ನೀವು ಮನೆಯಲ್ಲಿ ಊಟದೊಂದಿಗೆ ಅಥವಾ ತಿಂಡಿಯೊಂದಿಗೆ ಸವಿಯಲು ಹಲವು ರೀತಿಯ ಚಟ್ನಿಗಳ ಮಾಡಿ ಸವಿಯೋದು ಸಹಜ. ಅದ್ರಲ್ಲೂ ವಿಶೇಷ ರುಚಿ ನೀಡುವಂತಹ ಹಾಗೆ ವಿಭಿನ್ನ ತರಕಾರಿ ಮೂಲಕ ಚಟ್ನಿ ಮಾಡುವುದು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಅದ್ರಲ್ಲೂ ನಾವಿಂದು ಸೌತೆಕಾಯಿ ಬಳಸಿ ಮಾಡುವಂತಹ ರುಚಿ ರುಚಿಯ ಚಟ್ನಿ ಕುರಿತಾಗಿ ತಿಳಿಯೋಣ.
ಈ ಚಟ್ನಿಯನ್ನು ನೀವು ಊಟದೊಂದಿಗೆ ಇಲ್ಲವೆ ಯಾವುದೇ ತಿಂಡಿಯೊಂದಿಗೂ ಸವಿಯಬಹುದು. ಹಾಗೆ ಇದನ್ನು ಮಾಡುವುದು ಸಹ ಬಹಳ ಸುಲಭ. ಸೌತೆಕಾಯಿ ನಿಮ್ಮ ದೇಹಕ್ಕೆ ಬಹಳ ತಂಪು ನೀಡುವ ತರಕಾರಿ. ನಿಮ್ಮ ದೇಹ ಅಧಿಕ ಉಷ್ಣಾಂಶದಿಂದ ಕೂಡಿದ್ದರೆ ಈ ಸೌತೆಕಾಯಿಯ ಖಾದ್ಯಗಳ ಸವಿಯೋದು ನಿಮಗೆ ಇಷ್ಟವಾಗಬಹುದು.

ಸೌತೆಕಾಯಿಯಲ್ಲಿನ ಉತ್ತಮ ಅಂಶಗಳು ನಿಮ್ಮ ದೇಹವು ನಿರ್ಜಲೀಕರಣ ಆಗದಂತೆ ತಡೆಯಲಿದೆ. ಅದ್ರಲ್ಲೂ ವಿಟಮಿನ್ ಕೆ, ಪೊಟ್ಯಾಸಿಯಮ್ ಮತ್ತು ಉತ್ಕರ್ಷಣ ನಿರೋಧಕಗಳಿಂದ ತುಂಬಿರುವ ಕಾರಣ ಇದು ನಿಮ್ಮ ದೇಹಕ್ಕೆ ಅಗತ್ಯ ಪೋಷಕಾಂಶಗಳ ಒದಗಿಸಲಿದೆ. ಮೂಳೆಗಳ ಆರೋಗ್ಯಕ್ಕೂ ಕೂಡ ಇದು ಬಹಳ ಸಹಕಾರಿಯಾಗಲಿದೆ.
ಇಷ್ಟೆಲ್ಲಾ ಆರೋಗ್ಯಕರ ಅಂಶಗಳ ತನ್ನಲ್ಲಿಟ್ಟುಕೊಂಡಿರುವ ಈ ಸೌತೆಕಾಯಿ ಚಟ್ನಿ ಮಾಡಿದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಹಾಗಾದ್ರೆ ಈ ಚಟ್ನಿ ಮಾಡೋದು ಹೇಗೆ? ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು ಎಂಬ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಸೌತೆಕಾಯಿ ಚಟ್ನಿಗೆ ಬೇಕಾಗುವ ಪದಾರ್ಥಗಳು
- ಸೌತೆಕಾಯಿ
- ಒಣ ಮೆಣಸು
- ಕರಿಬೇವು
- ಸಾಸಿವೆ
- ಇಂಗು
- ಜೀರಿಗೆ
- ಕೊತ್ತಂಬರಿ ಸೊಪ್ಪು
- ಉದ್ದಿನ ಬೇಳೆ
- ಬೆಳ್ಳುಳ್ಳಿ
ಸೌತೆಕಾಯಿ ಚಟ್ನಿ ಮಾಡುವ ಸುಲಭದ ವಿಧಾನವೇನು?
ಮೊದಲಿಗೆ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಬಿಸಿಯಾಗಲು ಬಿಡಿ. ಅನಂತರ ಇದಕ್ಕೆ ಜೀರಿಗೆ, ಹಸಿ ಮೆಣಸು, ಕರಿಬೇವು ಹಾಕಿ ಹುರಿದುಕೊಳ್ಳಿ. ಅನಂತರ ಹುರಿಗಡಲೆ ಕೂಡ ಹಾಕಿ ಬಿಸಿ ಮಾಡಿಕೊಳ್ಳಿ.
ಇದಕ್ಕೆ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿ ಒಲೆ ಆಫ್ ಮಾಡಿ. ಒಲೆ ಆಫ್ ಮಾಡಿಕೊಂಡ ಬಳಿಕ ಇದಕ್ಕೆ ಸಣ್ಣದಾಗಿ ಹೆಚ್ಚಿಕೊಂಡಿರುವ ತೆಂಗಿನಕಾಯಿಯನ್ನು ಹಾಕಿ ಮಿಕ್ಸ್ ಮಾಡಿ. ಈಗ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಎಲ್ಲಾ ಪದಾರ್ಥಗಳ ಹಾಕಿ ಬಳಿಕ ಉಪ್ಪು, ಹುಣಸೆ ಹುಳಿ ರಸ ಸಹ ಹಾಕಿಕೊಳ್ಳಿ.
ನಂತರ ನೀರು ಹಾಕದೆಯೇ ರುಬ್ಬಿಕೊಳ್ಳಬೇಕು. 2 ಸುತ್ತು ರುಬ್ಬಿಕೊಂಡ ಬಳಿಕ ಈಗ ಹೆಚ್ಚಿಕೊಂಡಿರುವ ಸೌತೆಕಾಯಿಯನ್ನು ಸಹ ಹಾಕಿಕೊಂಡು ರುಬ್ಬಿಕೊಳ್ಳಬೇಕು. ಸಿಪ್ಪೆ ತೆಗೆಯದೆಯೇ ಸೌತೆಕಾಯಿ ಹೆಚ್ಚಿಕೊಂಡು ಬಳಸಿಕೊಳ್ಳಿ. ಇದನ್ನು ರುಬ್ಬಿಕೊಂಡು ತೆಗೆದು ಒಂದು ಬೌಲ್‌ಗೆ ಹಾಕಿಟ್ಟುಕೊಳ್ಳಿ.
ಈಗ ಒಲೆ ಮೇಲೆ ಮತ್ತೆ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಳಿಕ ಒಂದು ಒಗ್ಗರಣೆ ಮಾಡಿಕೊಳ್ಳಿ. ಅದಕ್ಕೆ ಸಾಸಿವೆ, ಉದ್ದಿನ ಬೇಳೆ, ಬೆಳ್ಳುಳ್ಳಿ, ಇಂಗು , ಒಣ ಮೆಣಸು, ಕರಿಬೇವು ಹಾಕಿ ಮಿಕ್ಸ್ ಮಾಡಿಕೊಂಡು ಕೊತ್ತಂಬರಿ ಸೊಪ್ಪು ಹಾಕಿ ಉಳಿಸಿಕೊಂಡು ಚಟ್ನಿಯೊಂದಿಗೆ ಬೆರೆಸಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯಾದ ಸೌತೆಕಾಯಿ ಚಟ್ನಿ ಸಿದ್ದವಾಗುತ್ತೆ. ನೀವು ಸಹ ಮಾಡಿ ನೋಡಿ.



Click it and Unblock the Notifications