Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಉಳಿದ ದೋಸೆ ಹಿಟ್ಟಿನಿಂದ ಈ ಎರಡು ತಿಂಡಿ ಮಾಡಿ..! ನೀವೆಂದು ಯೋಚಿಸದ ರೆಸಿಪಿಗಳಿವು!!
ನೀವು ಮನೆಯಲ್ಲಿ ಬ್ರೇಕ್ ಫಾಸ್ಟ್‌ಗೆ ರುಚಿ ರುಚಿಯಾಗಿ ಇಡ್ಲಿ, ದೋಸೆ ಮಾಡುವುದು ಕಾಮನ್. ಅದರಲ್ಲೂ ಮನೆಯಲ್ಲಿ ಅತಿಥಿಗಳಿದ್ದರೆ ಯಾಗೆ ಶುಭ ದಿನವಾಗಿದ್ದರೆ ಅಥವಾ ಭಾನುವಾರದ ರಜೆ ಸಮಯ ಆಗಿದ್ದರೆ ಹೆಚ್ಚಾಗಿ ದೋಸೆ ಮಾಡಿ ಸವಿಯಲು ಇಷ್ಟಪಡುತ್ತೀರಿ. ದೋಸೆ ರೆಸಿಪಿಯಲ್ಲೂ ಹತ್ತು ಹಲವು ಬಗೆಗಳಿವೆ. ಇದರಿಂದ ನಿಮ್ಮ ಬಾಯಿ ರುಚಿ ಮತ್ತಷ್ಟು ಹೆಚ್ಚಾಗುತ್ತದೆ.
ನೀವು ಕೂಡ ಈ ರುಚಿಯಲ್ಲಿ ಖಾದ್ಯಗಳ ಸವಿಯಲು ಇಷ್ಟಪಡುತ್ತೀರಿ. ಹಾಗೆ ಇಡ್ಲಿ ಕೂಡ ಎಲ್ಲರ ಮನೆಯ ಖಾದ್ಯ ಎನ್ನಬಹುದು. ಇಡ್ಲಿಗೆ ಕಡಿಮೆ ಎಣ್ಣೆ ಬಳಸಿ ಮಾಡುವುದರಿಂದ ಆರೋಗ್ಯಕ್ಕೂ ಕೂಡ ಅತ್ಯುತ್ತಮ ಖಾದ್ಯವಾಗುತ್ತೆ, ಹೀಗಾಗಿ ಇಡ್ಲಿ ಫೇವರಿಟ್ ತಿಂಡಿ. ದಕ್ಷಿಣ ಭಾರತದಲ್ಲಿ ಇಡ್ಲಿ ಹಾಗೂ ಚಟ್ನಿಯ ಕಾಂಬಿನೇಷನ್ ಬಹಳ ರುಚಿ ನೀಡುವ ಬ್ರೇಕ್‌ಫಾಸ್ಟ್.

ಹಾಗೆ ದೋಸೆಗಾಗಿ ಹಿಟ್ಟು ಮಾಡಿಟ್ಟುಕೊಳ್ಳುವುದು ಸಹ ದೋಸೆಯ ರುಚಿ ಹೆಚ್ಚಿಸುವ ಒಂದು ವಿಧಾನ. ನೀವು ಯಾವ ರೀತಿಯಲ್ಲಿ ಹಿಟ್ಟು ಮಾಡಿಟ್ಟುಕೊಳ್ಳುತ್ತೀರಿ ಎನ್ನುವುದರ ಮೇಲೆ ಖಾದ್ಯ ರುಚಿ ನಿರ್ಧಾರವಾಗುತ್ತದೆ. ಹಾಗೆ ಇಡ್ಲಿ ಹಿಟ್ಟಿನಲ್ಲೂ ಕೂಡ ಇದೇ ರೀತಿ. ಇಡ್ಲಿ ಮೃದುವಾಗಿ ಮಲ್ಲಿಗೆಯಂತೆ ಮೆತ್ತಗಿರಬೇಕಾದರೆ ಹಿಟ್ಟು ಮಾಡಿಕೊಳ್ಳುವಾಗ ಅನುಸರಿಸುವ ವಿಧಾನ ಬಹಳ ಮುಖ್ಯ.
ಹಾಗೆ ಒಂದು ವೇಳೆ ನೀವು ದೋಸೆ ಅಥವಾ ಇಡ್ಲಿ ಮಾಡಲು ಮಾಡಿಕೊಂಡಿರುವ ಹಿಟ್ಟು ಉಳಿದರೆ ಏನು ಮಾಡುತ್ತೀರಿ? ಬಹುತೇಕ ಮಂದಿ ಈ ಸಂದರ್ಭದಲ್ಲಿ ಸಂಜೆ ಅಥವಾ ಮಾರನೆ ದಿನವೂ ಅದೇ ಹಿಟ್ಟಿನಿಂದ ದೋಸೆ ಮಾಡುತ್ತಾರೆ. ಆದ್ರೆ ನಾವಿಂದು ಈ ಉಳಿದ ದೋಸೆ ಹಿಟ್ಟಿನಲ್ಲಿ ಅದ್ಭುತವಾಗಿ ಮಾಡಬಹುದಾದ ಎರಡು ವಿಶೇಷ ತಿಂಡಿಗಳ ಕುರಿತು ಹೇಳಲಿದ್ದೇವೆ.
ಅದರಲ್ಲೂ ಈ ಉಳಿದ ದೋಸೆ ಅಥವಾ ಇಡ್ಲಿ ಹಿಟ್ಟನ್ನು ಬಳಸಿ ರುಚಿ ರುಚಿಯ ಗರಿ ಗರಿ ಬೋಂಡಾ ಮಾಡಬಹುದು. ಹೌದು ಎಣ್ಣೆಯಲ್ಲಿ ಈ ಹಿಟ್ಟನ್ನು ಕರಿದು ಬೋಂಡಾ ಮಾಡಿ ಸವಿಯಬಹುದು. ತಿಂಡಿಯ ಜೊತೆಗೆ ಸಂಜೆ ಟೀ ಕಾಫಿಯ ಜೊತೆಗೂ ಈ ಬೋಂಡಾ ಅದ್ಭುತ ರುಚಿ ನೀಡಲಿದೆ. ಹಾಗೆ ಇದರಿಂದ ವಡೆ ಕೂಡ ಮಾಡಬಹುದು.
ಮೊದಲನೇದಾಗಿ ನಾವಿಂದು ಉಳಿದ ದೋಸೆ ಹಿಟ್ಟಿನಿಂದ ಬೋಂಡಾ ಮಾಡುವುದು ಹೇಗೆ? ಈ ಬೋಂಡಾ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ದೋಸೆ ಹಿಟ್ಟಿನಿಂದ ಬೋಂಡಾ ಮಾಡಲು ಬೇಕಾಗುವ ಪದಾರ್ಥಗಳು
- ದೋಸೆ/ಇಡ್ಲಿ ಹಿಟ್ಟು
- ಈರುಳ್ಳಿ
- ಜೀರಿಗೆ
- ಕ್ಯಾರೆಟ್
- ಶುಂಠಿ
- ಹಸಿರು ಮೆಣಸಿನಕಾಯಿ
- ಕರಿಬೇವು
- ಅಕ್ಕಿ ಹಿಟ್ಟು
- ದಾಲ್ಚಿನ್ನಿ ಪೌಡರ್
- ಕೊತ್ತಂಬರಿ ಸೊಪ್ಪು
- ಅಡುಗೆ ಸೋಡಾ
- ರುಚಿಗೆ ತಕ್ಕಷ್ಟು ಉಪ್ಪು
- ಅಡುಗೆ ಎಣ್ಣೆ
ದೋಸೆ ಹಿಟ್ಟಿನಿಂದ ಬೋಂಡಾ ಮಾಡುವುದು ಹೇಗೆ?
ಮೊದಲು ಒಂದು ಬೌಲ್‌ನಲ್ಲಿ ದೋಸೆ ಹಿಟ್ಟು ತೆಗೆದುಕೊಂಡು ಅದಕ್ಕೆ ಸೋಡಾ ಪುಡಿ ಹಾಕಿ ಮಿಕ್ಸ್ ಮಾಡಿಕೊಳ್ಳಿ, ಉಪ್ಪು, ಚಿಕ್ಕದಾಗಿ ಕತ್ತರಿಸಿರುವ ಈರುಳ್ಳಿ, ಜೀರಿಗೆ, ತರಿದ ಕ್ಯಾರೆಟ್, ಶುಂಠಿ, ಹಸಿ ಮೆಣಸು, ಕರಿಬೇವು ಈ ಎಲ್ಲಾ ವಸ್ತುವನ್ನು ಚಿಕ್ಕದಾಗಿ ಕತ್ತರಿಸಿಕೊಂಡು ಹಾಕಿಕೊಳ್ಳಿ. ನಂತರ ಇದಕ್ಕೆ ಸ್ವಲ್ಪವೇ ಸ್ವಲ್ಪ ಅಕ್ಕಿ ಹಿಟ್ಟು ಹಾಕಿಕೊಳ್ಳಿ.
ಈಗ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳುತ್ತಾ ಕಲಸಿಕೊಳ್ಳಬೇಕು. ಈ ಹಿಟ್ಟು ಗಟ್ಟಿಯಾಗಿ ಅಂಟಾಗಬೇಕು. ಬೋಂಡಾ ಹದಕ್ಕೆ ಈ ಹಿಟ್ಟು ಬರಬೇಕು. ಈಗ ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ಬಳಿಕ ನಿಮಗೆ ಯಾವ ಗಾತ್ರಕ್ಕೆ ಬೇಕೋ ಆ ಗಾತ್ರಕ್ಕೆ ಹಿಟ್ಟು ತೆಗೆದುಕೊಂಡು ಎಣ್ಣೆಗೆ ಬಿಡಿ. ಸಣ್ಣ ಉರಿಯಲ್ಲಿ 5ರಿಂದ 6 ನಿಮಿಷ ಕರಿದುಕೊಳ್ಳಿ.
ನಂತರ ಎಣ್ಣೆಯಿಂದ ತೆಗೆದು ಜರಡಿಯಲ್ಲಿಡಿ. ಇದರ ಜೊತೆಗೆ ಒಂದು ಚಟ್ನಿ ಇದ್ದರೆ ಸವಿಯಲು ಬಹಳ ರುಚಿಯಾಗುತ್ತದೆ. ಈ ಹಿಟ್ಟು ತೆಳುವಾದರೆ ಕಡಲೆ ಹಿಟ್ಟನ್ನು ಸ್ವಲ್ಪ ಹಾಕಿ ಮಿಕ್ಸ್ ಮಾಡಿಕೊಳ್ಳಬಹುದು. ಇದರಿಂದ ಹಿಟ್ಟು ಮತ್ತಷ್ಟು ಚೆನ್ನಾಗಿ ಹದವಾಗುತ್ತದೆ. ನೀವು ಕೂಡ ಉಳಿದ ದೋಸೆ ಹಿಟ್ಟಿನಿಂದ ಈ ರೀತಿಯ ಬೋಂಡಾ ಟ್ರೈ ಮಾಡಿ ನೋಡಿ.
ಮತ್ತೊಂದು ಕಡೆ ಇದೇ ಉಳಿದ ದೋಸೆ ಹಿಟ್ಟಿನಿಂದ ಅತ್ತುತ್ತಮ ರುಚಿಯ ಹೋಟೆಲ್ ಮಾದರಿಯ ವಡೆ ಮಾಡಬಹುದು. ನಾವು ವಡೆಗೂ ಕೂಡ ಹಿಟ್ಟು ಮಾಡಿಕೊಳ್ಳುತ್ತೇವೆ. ಉದ್ದು ಹಾಕಿ ಮಾಡುವ ವಡೆ ಬಹಳ ರುಚಿಯಾಗಿರುತ್ತೆ. ಆದ್ರೆ ಇಲ್ಲಿ ಉಳಿದಿರುವ ದೋಸೆ ಹಿಟ್ಟಿನಿಂದ ಮೃದುವಾದ ವಡೆ ಮಾಡುವ ಕುರಿತಂತೆ ತಿಳಿದುಕೊಳ್ಳೋಣ.
ಈ ದೋಸೆ ಹಿಟ್ಟಿನ ವಡೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ದೋಸೆ ಹಿಟ್ಟು
- ಹಸಿ ಮೆಣಸಿನ ಕಾಯಿ
- ಜೀರಿಗೆ
- ತೆಂಗಿನ ಕಾಯಿ-ಚಿಕ್ಕದಾಗಿ ಕತ್ತರಿಸಿರುವುದು
- ಕೊತ್ತಂಬರಿ ಸೊಪ್ಪು
- ಉಪ್ಪು ರುಚಿಗೆ ತಕ್ಕಷ್ಟು
- ಅಡುಗೆ ಎಣ್ಣೆ
ಉಳಿದ ದೋಸೆ ಹಿಟ್ಟಿನಿಂದ ವಡೆ ಮಾಡುವುದು ಹೇಗೆ?
ಒಂದು ಬೌಲ್‌ನಲ್ಲಿ ದೋಸೆ ಹಿಟ್ಟು ತೆಗೆದುಕೊಂಡು ಅದಕ್ಕೆ ಉಪ್ಪು, ಸಣ್ಣದಾಗಿ ಹೆಚ್ಚಿಕೊಂಡಿರುವ ಹಸಿ ಮೆಣಸು, ಜೀರಿಗೆ, ಕಾಯಿ ಚೂರುಗಳು, ಕಾಳು ಮೆಣಸು ಕೂಡ ಸೇರಿಸಬಹುದು. ಇದನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ಈಗ ಒಂದು ಬಾಣಲೆಗೆ ಈ ಹಿಟ್ಟು ಹಾಕಿ ಒಲೆ ಮೇಲೆ ಇಟ್ಟು ಸಣ್ಣ ಉರಿಯಲ್ಲಿ ಬೇಯಿಸಬೇಕು. ಹಿಟ್ಟು ತೆಳಿವಾಗಿರುವುದರಿಂದ ವಡೆ ಮಾಡಲು ಆಗುವುದಿಲ್ಲ ಹೀಗಾಗಿ ಇದು ಗಟ್ಟಿಯಾಗಬೇಕು. ಗಟ್ಟಿಯಾಗಲು 5 ನಿಮಿಷ ಆದರೂ ಒಲೆ ಮೇಲೆ ಇಟ್ಟು ಬಿಸಿ ಮಾಡುತ್ತಾ ಕಲಸಿಕೊಳ್ಳಬೇಕು. ಈ ಹಿಟ್ಟು ಗಂಟು ಆಗದಂತೆ ಕರಗಿಸಿಕೊಳ್ಳಬೇಕು.
ಈ ಹಿಟ್ಟು ನೀರು ಒಣಗಿ ಗಟ್ಟಿಯಾಗಿ ರಾಗಿ ಮುದ್ದೆ ಕಟ್ಟಲು ಬಳಸುವ ಹಿಟ್ಟಿನಂತೆ ಆಗಬೇಕು. ನಂತರ ಒಲೆ ಆಫ್ ಮಾಡಿಕೊಂಡು ತಣ್ಣಗಾಗಲು ಬಿಡಿ. ಸ್ವಲ್ಪ ತಣ್ಣಗಾದ ಬಳಿಕ ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಕಲಸಿಕೊಳ್ಳಬೇಕು. ಗಂಟು ಇಲ್ಲದಂತೆ ಹದವಾಗಿ ನಯವಾಗಿ ಬರುವಂತೆ ಕಲಸಿಕೊಳ್ಳಿ. ಅನಂತರ ಒಂದು ನಿಂಬೆ ಗಾತ್ರದ ಹಿಟ್ಟು ತೆಗೆದುಕೊಂಡು ಉಂಡೆ ಮಾಡಿ ಮಧ್ಯದಲ್ಲಿ ತೂತು ಮಾಡಿ ಸ್ವಲ್ಪ ಪ್ರೆಸ್ ಮಾಡಿ ಇದು ವಡೆ ಆಕಾರಕ್ಕೆ ಬರಬೇಕು.
ಈ ರೀತಿ ವಡೆಯನ್ನು ಮಾಡಿ ಒಲೆ ಮೇಲೆ ಇಟ್ಟುರುವ ಬಾಣಲೆಯಲ್ಲಿ ಬಿಸಿಯಾಗಿರುವ ಎಣ್ಣೆಗೆ ಹಾಕಿಕೊಳ್ಳಿ, ಮಧ್ಯಮ ಉರಿಯಲ್ಲಿ ಎರಡೂ ಕಡೆ ಚೆನ್ನಾಗಿ ಕರಿದುಕೊಳ್ಳಿ. ಇದು ಬಣ್ಣ ಬದಲಾದಾಗ ಅಂದರೆ ಮೂರರಿಂದ 4 ನಿಮಿಷ ಆದ ಬಳಿಕ ತೆಗೆದು ಜರಡಿಗೆ ಹಾಕಿಟ್ಟುಕೊಳ್ಳಿ. ಹೀಗೆ ಎಲ್ಲಾ ವಡೆಗಳನ್ನು ಮಾಡಿಕೊಳ್ಳಿ.
ಇಷ್ಟಾದರೆ ನಿಮ್ಮ ದೋಸೆ ಹಿಟ್ಟಿನ ವಡೆ ರೆಡಿಯಾಗುತ್ತದೆ, ನೀವು ಯಾವಾಗ ಬೇಕಾದರು ಉಳಿದ ಹಿಟ್ಟಿನಿಂದ ಈ ರೀತಿ ವಡೆ ಮಾಡಬಹುದು. ಮಾಡೋದು ಕೂಡ ತುಂಬಾನೆ ಸುಲಭ. ನೀವು ಕೂಡ ಹಿಟ್ಟು ಉಳಿದಿದ್ದರೆ ಮತ್ತೆ ದೋಸೆ ಮಾಡುವ ಬದಲಾಗಿ ಈ ರೀತಿ ವಡೆ ಮಾಡಿ ಸವಿದು ನೋಡಿ. ಈ ರೀತಿಯಾಗಿ ದೋಸೆ ಹಿಟ್ಟು ಉಳಿದರೆ ಎರಡು ಬಗೆಯ ಕರಿದ ತಿಂಡಿ ಮಾಡಬಹುದು. ಇದರ ಜೊತೆಗೆ ಯಾವುದಾದರೊಂದು ಚಟ್ನಿ ಇದ್ದರೆ ಅದರ ಜೊತೆಗೆ ಸವಿದು ನೋಡಿ.



Click it and Unblock the Notifications