Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಟೀ ಅಂಗಡಿ ಈರುಳ್ಳಿ ಬಜ್ಜಿ ಸವಿದು ನೋಡಿ..! ಇಲ್ಲಿದೆ ಸುಲಭದ ವಿಧಾನ
ಮಳೆಗಾಲದಲ್ಲಿ ಸಂಜೆ ಸಮಯಕ್ಕೆ ಸವಿಯಲು ವಿವಿಧ ಬಗೆಯ ತಿಂಡಿಗಳ ಮಾಡಿ ಸವಿಯುವುದು ನೋಡಬಹುದು. ಹಾಗೆ ಟೀ ಅಂಗಡಿಗಳಲ್ಲಿ ನೀಡಲಾಗುವಂತಹ ರುಚಿ ರುಚಿಯ ಈರುಳ್ಳಿ ಬೋಂಡಾ ಅಂದರೆ ನಿಮಗೆ ಬಹಳ ಇಷ್ಟವಾಗಬಹುದು. ಅದ್ರಲ್ಲೂ ಟೀ ಅಂಗಡಿಯಲ್ಲಿ ವಿವಿಧ ರೀತಿಯ ಬೋಂಡಾ, ಬಜ್ಜಿ ಮಾಡುತ್ತಾರೆ ಆದ್ರೆ ಈರುಳ್ಳಿ ಹಾಗೂ ಕಡಲೆ ಹಿಟ್ಟು ಬಳಸಿ ಮಾಡುವಂತಹ ರುಚಿ ರುಚಿಯಾದ ತಿಂಡಿ ಎಲ್ಲರಿಗೂ ಇಷ್ಟವಾಗುತ್ತೆ.
ಕಾಫಿ ಟೀ ಜೊತೆಗೆ ರುಚಿ ರುಚಿಯ ಈ ಈರುಳ್ಳಿ ಬೋಂಡಾ ಮಾಡಿದ್ರೆ ಮನೆ ಮಂದಿಯಲ್ಲ ಇಷ್ಟಪಡುತ್ತಾರೆ. ಹಾಗೆ ಹಬ್ಬದ ಸಮಯದಲ್ಲಿ ಇಲ್ಲವೆ ವಿಶೇಷ ದಿನಗಳಲ್ಲಿ ನೀವು ಈ ರುಚಿಯ ಬೋಂಡಾ ಮಾಡಿ ಸವಿಯಲು ಬಹಳ ಇಷ್ಟಪಡಬಹುದು. ಆದ್ರೆ ಎಲ್ಲರಿಗೂ ಈ ರೀತಿ ಬೋಂಡಾ ಬಜ್ಜಿ ಮಾಡಲು ಸಾಧ್ಯವಾಗದೆ ಇರಬಹುದು.

ಅದ್ರಲ್ಲೂ ಟೀ ಕಾಫಿ ಅಂಗಡಿಯಲ್ಲಿ ನೀಡುವಂತಹ ರುಚಿ ರುಚಿಯ ಬೋಂಡಾ ಬಜ್ಜಿಯನ್ನ ಮನೆಯಲ್ಲೇ ಮಾಡಿ ಸವಿಯುವ ಕುರಿತು ನಾವಿಂದು ತಿಳಿದುಕೊಳ್ಳೋಣ. ಅದ್ರಲ್ಲೂ ಮೃದುವಾಗಿ ಗರಿ ಗರಿಯಾದ ತಿಂಡಿ ಮಾಡುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ. ಈ ಬಜ್ಜಿ ರುಚಿ ಒಮ್ಮೆ ಸವಿದರೆ ನೀವು ಸಮಯ ಸಿಕ್ಕಾಗಲೆಲ್ಲ ಮಾಡಿ ಸವಿಯಲು ಮುಂದಾಗೋದು ಖಚಿತ.
ಹಾಗಾದ್ರೆ ಟೀ ಅಂಗಡಿಯಲ್ಲಿ ನೀಡುವ ರುಚಿ ರುಚಿಯ ಬೋಂಡಾ, ಬಜ್ಜಿ ಮಾಡುವುದು ಹೇಗೆ?, ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಟೀ ಅಂಗಡಿಯ ಈರುಳ್ಳಿ ಬಜ್ಜಿ ಮಾಡಲು ಯಾವೆಲ್ಲಾ ಪದಾರ್ಥಗಳು
ಬೇಕು?
- ಈರುಳ್ಳಿ - 2
- ಕರಿಬೇವು - 1 ಕಟ್ಟು
- ಪುದೀನ - 1/2 ಹಿಡಿ (ನುಣ್ಣಗೆ ಕತ್ತರಿಸಿದ)
- ಕೊತ್ತಂಬರಿ ಸೊಪ್ಪು - 1/2 ಹಿಡಿ (ನುಣ್ಣಗೆ ಕತ್ತರಿಸಿದ)
- ಸೋಂಪು - 2 ಟೀ ಚಮಚ
- ಶುಂಠಿ ಬೆಳ್ಳುಳ್ಳಿ ಪೇಸ್ಟ್ - 1 ಚಮಚ
- ಅಕ್ಕಿ ಹಿಟ್ಟು - 150 ಗ್ರಾಂ
- ಖಾರದ ಪುಡಿ- 1 ಟೀ ಸ್ಪೂನ್
- ಉಪ್ಪು
- ಕಲರ್ ಪುಡಿ
- ಅಡಿಗೆ ಸೋಡಾ
- ಮೈದಾ
- ಕಡಲೆ ಹಿಟ್ಟು
- ಗರಂ ಮಸಾಲ
- ನೀರು
- ಎಣ್ಣೆ
ಟೀ ಅಂಗಡಿಯ ಈರುಳ್ಳಿ ಬಜ್ಜಿ ಮಾಡುವುದು ಹೇಗೆ?
ಮೊದಲಿಗೆ ಈರುಳ್ಳಿಯನ್ನು ಸ್ಲೈಸ್ ಆಗಿ ಕತ್ತರಿಸಿಕೊಳ್ಳಿ. ಹಾಗೆ ಒಂದು ದೊಡ್ಡ ಬೌಲ್ ತೆಗೆದುಕೊಂಡು ಅದರಲ್ಲಿ ಈರುಳ್ಳಿ, ಚಿಕ್ಕದಾಗಿ ಕತ್ತರಿಸಿದ ಕೊತ್ತಂಬರಿ ಸೊಪ್ಪು, ಪುದಿನ ಸೊಪ್ಪು, ಸೋಂಪು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕಡಲೆ ಹಿಟ್ಟು, ಖಾರದ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಂಡು ಚೆನ್ನಾಗಿ ಕಲಸಿಕೊಳ್ಳಿ.
ಹಾಗೆ ಅಡುಗೆ ಸೋಡಾ, ಕಲರ್ ಪುಡಿ ಚಿಟಿಕೆಯಷ್ಟು, ಮೈದಾ ಹಿಟ್ಟು, ಕಡಲೆ ಹಿಟ್ಟು, ಗರಂ ಮಸಾಲ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಸ್ವಲ್ಪ ಸ್ವಲ್ಪವೇ ನೀರು ಹಾಕಿಕೊಳ್ಳುತ್ತಾ ಮಿಕ್ಸ್ ಮಾಡಿ. ಹಿಟ್ಟು ಚೆನ್ನಾಗಿ ಹದಕ್ಕೆ ಬರಬೇಕು. ಈಗ ಒಲೆ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ ಬಿಸಿಯಾಗಲು ಬಿಡಿ. ಸ್ವಲ್ ಹಿಟ್ಟನ್ನು ತೆಗೆದುಕೊಂಡು, ಎಣ್ಣೆಯಲ್ಲಿ ಹಾಕಿ, ಗೋಲ್ಡನ್ ಬ್ರೌನ್ ಕಲರ್ ಬರುವವರೆಗೂ ಕರಿದುಕೊಳ್ಳಿ. ಆಗ ನಿಮ್ಮ ರುಚಿಕರವಾದ ಈರುಳ್ಳಿ ಬಜ್ಜಿ ರೆಡಿಯಾಗುತ್ತದೆ.
ಈ ರೀತಿಯ ತಿಂಡಿ ಮಾಡೋದು ಬಹಳ ಸುಲಭ ಹಾಗೆ ಕಡಿಮೆ ವಸ್ತುಗಳ ಬಳಸಿ ರುಚಿ ರುಚಿಯಾಗಿ ಮಾಡಬಹುದು, ಎಲ್ಲರೂ ಈ ತಿಂಡಿ ಸವಿಯಲು ಇಷ್ಟಪಡುತ್ತಾರೆ.



Click it and Unblock the Notifications