Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಗರಿಗರಿ ಮೈಸೂರು ಬೋಂಡಾ: ಟೀ ಜೊತೆ ಸವಿಯಲು ಬೆಸ್ಟ್ ಸ್ನ್ಯಾಕ್ಸ್
ಸಂಜೆ ಪಟ್ ಅಂತ ಏನಾದರು ಸ್ನ್ಯಾಕ್ಸ್ ಮಾಡಬೇಕೆಂದಿದ್ದರೆ ಈ ಮೈಸೂರು ಬೋಂಡಾ ಟ್ರೈ ಮಾಡಿ, ಪಟ್ ಅಂತ ಮಾಡಬಹುದು ಟೀ ಅಥವಾ ಕಾಫಿ ಜೊತೆಗೆ ಸವಿಯಲು ತುಂಬಾನೇ ಚೆನ್ನಾಗಿರುತ್ತದೆ. ಈ ಮೈಸೂರು ಬೋಂಡಾ ತಿಂದ್ರೆ ಹೊಟ್ಟೆ ಕೂಡ ತುಂಬುವುದು, ಆದ್ದರಿಂದ ಸಂಜೆ ಸ್ನ್ಯಾಕ್ಸ್‌ಗೆ ಇದು ಬೆಸ್ಟ್ ಆಗಿದೆ, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
1 ಕಪ್ ಮೈದಾ ಹಿಟ್ಟು ಅಥವಾ ಗೋಧಿ ಹಿಟ್ಟು
1/2 ಚಮಚ ಅಡುಗೆ ಸೋಡಾ
1/2 ಚಮಚ ಜೀರಿಗೆ
ಹಸಿ ಮೆಣಸು 2-3
ತುರಿದ ಶುಂಠಿ 1 ಚಮಚ
2 ಚಮಚ ತೆಂಗಿನ ತುರಿ, ತೆಂಗಿನ ಹೋಳು
2 ಚಮಚ ಮೊಸರು
ಕಲೆಸಲು ತಕ್ಕ ನೀರು
ರುಚಿಗೆ ತಕ್ಕ ಉಪ್ಪು
ಮಾಡುವ ವಿಧಾನ:
- ಒಂದು ಬೌಲ್ ತಗೆದು ಅದರಲ್ಲಿ 1 ಕಪ್ ಮೈದಾ ಪುಡಿ ಹಾಕಿ, ನೀವು ಮೈದಾ ಬೇಡ ಎಂದರೆ ಗೋಧಿ ಹಿಟ್ಟು ಬೇಕಾದರೆ ಸೇರಿಸಬಹುದು
- ಈಗ 1/4 ಕಪ್ ಅಕ್ಕಿಹಿಟ್ಟು ಸೇರಿಸಿ
- 1/2 ಚಮಚ ಬೇಕಿಂಗ್ ಸೋಡಾ (ಅಡುಗೆ ಸೋಡಾ ಸೇರಿಸಿ)
- ಈಗ ರುಚಿಗೆ ತಕ್ಕ ಉಪ್ಪು ಸೇರಿಸಿ
- ಈಗ ನೀವು 1/2 ಚಮಚ ಜೀರಿಗೆ, ಹಸಿ ಮೆಣಸು(ಚಿಕ್ಕದಾಗಿ ಕತ್ತರಿಸಿದ್ದು), ತುರಿದ ಶುಂಠಿ 1 ಚಮಚ ಸೇರಿಸಿ
- ಈರುಳ್ಳಿಯನ್ನು ಚಿಕ್ಕದಾಗಿ ಹೆಚ್ಚಿ ಸೇರಿಸಿ
- ಕೊತ್ತಂಬರಿ ಸೊಪ್ಪು ಕೂಡ ಚಿಕ್ಕದಾಗಿ ಕತ್ತರಿಸಿ ಸೇರಿಸಿ
- 2 ಚಮಚ ತೆಂಗಿನ ತುರಿ ಅಥವಾ ಚಿಕ್ಕದಾಗಿ ಕತ್ತರಿಸಿದ ತೆಂಗಿನ ಹೋಳು ಸೇರಿಸಿ
- 2 ಚಮಚ ಮೊಸರು ಹಾಕಿ
- ನಂತರ ನೀರು ಸೇರಿಸಿ ಮಿಕ್ ಮಾಡಿ
- ಈಗ ಕಡಾಯಿಗೆ ಒಂದು ಕಪ್ ಎಣ್ಣೆ ಹಾಕಿ ಕಾಯಿಸಿ
- ಎಣ್ಣೆ ಕಾದಾಗ ಒಂದು ಚಮಚದಲ್ಲಿ ಕಲೆಸಿದ ಹಿಟ್ಟು ತೆಗೆದು ಎಣ್ಣೆಗೆ ಹಾಕಿ ನೋಡಿ, ಆ ಹಿಟ್ಟು ಎಣ್ಣೆಗೆ ಹಾಕಿದ ತಕ್ಷಣ ಮೇಲಕ್ಕೆ ಎದ್ದರೆ ಎಣ್ಣೆ ಚೆನ್ನಾಗಿ ಬಿಸಿಯಾಗಿದೆ ಎಂದರ್ಥ. ಈಗ 4-5 ಬೋಂಡಾವನ್ನು ಹಾಕಬಹುದು.
- ಬೋಂಡಾ ಸ್ವಲ್ಪ ಕಂದು ಬಣ್ಣಕ್ಕೆ ಬರುವಾಗ ಎಣ್ಣೆಯಿಂದ ಹೊರ ತೆಗೆಯಿರಿ.
- ನಂತರ ಇದನ್ನು ಚಟ್ನಿ ಜೊತೆ ಸರ್ವ್ ಮಾಡಿ.
ಇತರ ಸಲಹೆ
ಹಿಟ್ಟು
ನೀವು ಈ ಬೋಂಡಾ ಮಾಡಲು ಮೈದಾ ಹಿಟ್ಟು ಅಥವಾ ಗೋಧಿ ಹಿಟ್ಟು ಇವುಗಳನ್ನು ಬಳಸಬಹುದು,
ಇದರ ಜೊತೆಗೆ ಅಕ್ಕಿ ಹಿಟ್ಟು ಸೇರಿಸಿದರೆ ಗರಿಗರಿಯಾಗವುದು.
ಮೊಸರು:
ಮೊಸರು ಸೇರಿದಾಗ ಬೋಂಡಾ ಚೆನ್ನಾಗಿ ಊದಿಕೊಂಡು ಬರುತ್ತದೆ.
ಬೇಕಿಂಗ್ ಸೋಡಾ: ಇದರಲ್ಲಿ ಬೇಕಿಂಗ್ ಸೋಡಾ ಸೇರಿಸುವುದರಿಂದ
ಬೋಂಡಾ ಮೃದುವಾಗಿ ಬರುತ್ತದೆ
ಈರುಳ್ಳಿ, ಶುಂಠಿ, ಕೊತ್ತಂಬರಿ ಸೊಪ್ಪು ಇವುಗಳನ್ನೆಲ್ಲಾ ತುಂಬಾ ಹಾಕಬೇಡಿ,
ಮಿತಿಯಲ್ಲಿ ಸೇರಿಸಿ. ತುಂಬಾ ಹಾಕಿದರೆ ಚೆನ್ನಾಗಿರಲ್ಲ.



Click it and Unblock the Notifications