Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕ್ರಿಸ್ಪಿಯಾಗಿ ಬಾಳೆಕಾಯಿ ಚಿಪ್ಸ್ ಮಾಡುವ ಸರಿಯಾದ ವಿಧಾನವೇನು? ಇಲ್ಲಿದೆ ರೆಸಿಪಿ
ಸಂಜೆ ಸ್ನ್ಯಾಕ್ಸ್‌ಗೆ ಎಷ್ಟು ಜನರಿಗೆ ಚಿಪ್ಸ್ ಸವಿಯುವ ಅಭ್ಯಾಸವಿದೆ? ಬಹುತೇಕರಿಗೆ ಸಂಜೆ ಟೀ ಕಾಫಿ ಜೊತೆ ಚಿಪ್ಸ್ ಸವಿಯುವ ಅಭ್ಯಾಸವಿರುತ್ತೆ. ಜೊತೆಗೆ ಒಂದಿಷ್ಟು ಮಂದಿಗೆ ಊಟ ತಿಂಡಿ ನಡುವೆಯೂ ಚಿಪ್ಸ್ ಸವಿಯುತ್ತಾರೆ. ಅದ್ರಲ್ಲೂ ಮನೆಯಲ್ಲೇ ಮಾಡಿದ ಚಿಪ್ಸ್ ಆಗಿದ್ದರೆ ಅದರ ರುಚಿಯೇ ಬೇರೆ.
ಸಾಮಾನ್ಯವಾಗಿ ಮನೆಯಲ್ಲಿ ಬಾಳೆಕಾಯಿಯ ಚಿಪ್ಸ್ ಮಾಡಲಾಗುತ್ತೆ. ಕೇರಳದಲ್ಲಿ ಈ ಚಿಪ್ಸ್ ತುಂಬಾನೆ ಫೇಮಸ್, ಅಲ್ಲದೆ ಕೇರಳ ಬಾಳೆಕಾಯಿ ಚಿಪ್ಸ್ ಎಂದು ಮಾರುಕಟ್ಟೆಯಲ್ಲಿ ದೊಡ್ಡ ದೊಡ್ಡ ಚಿಪ್ಸಿನ ಪ್ಯಾಕೇಟ್‌ಗಳನ್ನು ಸಹ ನಾವು ನೋಡಿದ್ದೇವೆ. ಬಾಳೆಕಾಯಿಯ ಚಿಪ್ಸ್ ಬಹುತೇಕ ಎಲ್ಲರು ಇಷ್ಟಪಡುತ್ತಾರೆ.

ಆದ್ರೆ ಬೇಕರಿಯಲ್ಲಿ ಸಿಗುವ ಚಿಪ್ಸ್‌ಗಿಂತ ನಾವೇ ಮನೆಯಲ್ಲಿ ಮಾಡಿದರೆ ಅದರ ರುಚಿ ಹೆಚ್ಚಿದಂತೆ ಅನಿಸುತ್ತೆ. ಹಾಗಾದ್ರೆ ಬಾಳೆಕಾಯಿಯ ಚಿಪ್ಸ್ ಅನ್ನ ಮನೆಯಲ್ಲಿ ಮಾಡುವುದು ಹೇಗೆ? ಬಾಳೆಕಾಯಿ ಚಿಪ್ಸ್ ಮಾಡಲು ಬೇಕಾಗುವ ಪದಾರ್ಥಗಳೇನು? ಮಾಡುವ ಸರಿಯಾದ ವಿಧಾನವೇನು? ಈ ಚಿಪ್ಸ್ ಮಾಡಬೇಕಾದರೆ ಯಾವ ರೀತಿಯ ಕ್ರಮ ಅನುಸರಿಸಬೇಕು ಎಂಬಂತಹ ಮಾಹಿತಿಯನ್ನು ನಾವಿಂದು ತಿಳಿದುಕೊಳ್ಳೋಣ.
ಬಾಳೆಕಾಯಿ ಚಿಪ್ಸ್ ಮಾಡಲು ಬೇಕಾಗುವ ಪದಾರ್ಥಗಳು
- ಬಾಳೆಕಾಯಿ- 5
- ಅರಶಿಣ- 1 ಸ್ಪೂನ್
- ಉಪ್ಪು- ರುಚಿಗೆ ತಕ್ಕಷ್ಟು
- ಎಣ್ಣೆ
ಬಾಳೆಕಾಯಿ ಚಿಪ್ಸ್ ಮಾಡುವುದು ಹೇಗೆ?
ಮೊದಲು 5 ಬಾಳೆಕಾಯಿಯನ್ನು ಸಿಪ್ಪೆತೆಗೆದು ಅದನ್ನು ಬೌಲ್‌ಗೆ ಹಾಕಿ ನೀರು ಹಾಕಿ ನೆನೆಸಿಡಬೇಕು. ಅರ್ಧ ಅಥವಾ 1 ಗಂಟೆ ನೆನೆದರೆ ಸಕಾಗುತ್ತದೆ. ಬಳಿಕ ಒಲೆ ಮೇಲೆ ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಒಲೆ ಮೇಲೆ ಇಟ್ಟುಕೊಳ್ಳಿ. ಎಣ್ಣೆ ಕಾಯುವಾಗ ನೆನೆಸಿಟ್ಟುರುವ ಬಾಳೆಕಾಯಿಯನ್ನು ತೆಗೆದುಕೊಂಡು ಚೆನ್ನಾಗಿ ಸ್ಲೈಸ್ ಮಾಡಿ ನೇರವಾಗಿ ಎಣ್ಣೆಗೆ ಬಿಡಿ.
ಈಗ ಒಂದು ಬೌಲ್‌ನಲ್ಲಿ ಉಪ್ಪು, ಅರಶಿನ, ನೀರು ಹಾಕಿಕೊಂಡು ಚೆನ್ನಾಗಿ ಕಲಸಿಕೊಳ್ಳಿ. ಉಪ್ಪು ಕರಗುವಂತೆ ಮಾಡಿಕೊಳ್ಳಿ. ಬಳಿಕ ಈ ಮಿಶ್ರಣವನ್ನ ಒಲೆ ಮೇಲೆ ಬೇಯುತ್ತಿರುವ ಚಿಪ್ಸ್‌ಗೆ ಎಂದೆರಡು ಸ್ಪೂನ್ ಹಾಕಿ. ಈ ಮಿಶ್ರಣ ಹಾಕುವುದರಿಂದ ಬಾಳೆಕಾಯಿ ಹಳದಿ ಬಣ್ಣಕ್ಕೆ ತಿರುಗುತ್ತದೆ.
ಹೀಗೆ ಪ್ರತಿಬಾರಿ ಎಣ್ಣಗೆ ಬಾಳೆಕಾಯಿ ಹಾಕಿದಾಗಲೂ ಮಾಡಿಕೊಳ್ಳಿ. ಸುಮಾರು 10 ನಿಮಿಷ ಬಿಟ್ಟು ಚಿಪ್ಸ್ ಅನ್ನು ಎಣ್ಣೆಯಿಂದ ಎತ್ತಿ ಪಾತ್ರೆಗೆ ಹಾಕಿಕೊಳ್ಳಿ. ನಿಮಗೆ ಖಾರ ಬೇಕಿದ್ದರೆ ಪುಡಿಯನ್ನು ಈ ಚಿಪ್ಸ್ ಮೇಲೆ ಹರಡಬಹುದು. ಇಷ್ಟಾದರೆ ನಿಮ್ಮ ಮುಂದೆ ಹಳದಿ ಬಾಳೆಕಾಯಿ ಚಿಪ್ಸ್ ರೆಡಿಯಾಗುತ್ತದೆ.
ನೀವು ಬಾಳೆಕಾಯಿ ನೆನೆಸಿಟ್ಟಾಗಲೂ ಈ ಹಳದಿ ಮಿಶ್ರಣವನ್ನು ಆ ನೀರಿಗೆ ಹಾಕಿಕೊಳ್ಳಬಹುದು. ಆದರೆ ಎಣ್ಣೆಯ ಜೊತೆ ಬೇಯುವಾಗ ಹಾಕಿದರೆ ಬೇಗ ಚಿಪ್ಸ್‌ಗೆ ಹಿಡಿಯುತ್ತದೆ. ಮೊದಲ ಬಾರಿ ಚಿಪ್ಸ್ ಅಷ್ಟೊಂದು ಹಳದಿಯಾಗಿ ಬಾರದಿರಬಹುದು. ಆದರೆ ನಂತರ ಹಳದಿಯಾಗುತ್ತದೆ.
ಅದೇ ರೀತಿ ಕೆಂಪು ಬಣ್ಣದ ಚಿಪ್ಸ್ ಅನ್ನು ಸಹ ಇದೇ ರೀತಿಯಲ್ಲೇ ಮಾಡಲಾಗುತ್ತದೆ. ಆದರೆ ಹಳದಿಯ ಬದಲು ಅಲ್ಲಿ ಖಾರದ ಪುಡಿಯನ್ನು ಮಾತ್ರ ಮಿಕ್ಸ್ ಮಾಡಲಾಗುತ್ತದೆ, ಇದರಿಂದ ಆ ಚಿಪ್ಸ್ ಬಣ್ಣ ಕೆಂಪಾಗಿರುತ್ತದೆ. ಇನ್ನು ಬಾಳೆಕಾಯಿ ಚಿಪ್ಸ್ ಮತ್ತಷ್ಟು ಕ್ರಿಸ್ಪಿಯಾಗಿ ಬರಬೇಕು ಅಂದರೆ ಬಾಳೆಕಾಯಿಯನ್ನು ಸ್ಲೈಸ್ ಮಾಡಿ ಬಣಗಿಸಿ ಬಳಿಕ ಎಣ್ಣಗೆ ಬಿಡಬೇಕು.
ಬಾಳೆಕಾಯಿ ಕತ್ತರಿಸಿಕೊಂಡ ಬಳಿಕ ಅದನ್ನು ಬಟ್ಟೆಯಿಂದ ಚೆನ್ನಾಗಿ ನೀರಿನ ಪಸೆ ಒಣಗುವಂತೆ ಒರೆಸಿಕೊಳ್ಳಬೇಕು. ಇಲ್ಲವೆ ಫ್ಯಾನ್ ಗಾಳಿಯಲ್ಲಿ ಒಣಗಿಸಿ ಎಣ್ಣೆಗೆ ಬಿಡಬೇಕು. ಆದರೆ ಹೀಗೆ ಮಾಡುವುದರಿಂದ ಎಣ್ಣೆಗೆ ಬಿಟ್ಟಾಗ ಚಿಪ್ಸ್ ಒಡೆಯುವ ಸಾಧ್ಯತೆ ಸಹ ಇರತ್ತದೆ.



Click it and Unblock the Notifications