Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮರಗೆಣಸಿನ ಫಿಂಗರ್ ಚಿಪ್ಸ್ ಮಾಡೋದು ಹೇಗೆ? 10 ನಿಮಿಷ ಮಾತ್ರ ಸಾಕು!!
ನೀವು ಗೆಣಸಿನಿಂದ ಮಾಡಿದ ಖಾದ್ಯಗಳ ಸವಿಯಲು ಇಷ್ಟಪಡಬಹುದು. ಅದರಲ್ಲೂ ಸಿಹಿ ಗೆಣಸಿನಲ್ಲಿ ಹಲವು ರೀತಿ ಖಾದ್ಯಗಳ ಮಾಡಬಹುದು ಎಂಬುದು ನಿಮಗೆಲ್ಲಾ ತಿಳಿದಿದೆ. ಈ ಸಿಹಿ ಗೆಣಸನ್ನು ಬೇಯಿಸಿ ಸವಿಯಲು ಬಹಳ ರುಚಿಕರವಾಗಿರುತ್ತೆ. ಹಾಗೆ ಗೆಣಸಿನ ಇನ್ನಿತರ ವಿಧಗಳಾದ ಮರಗೆಣಸು, ಕೋಲು ಗೆಣಸಿನ ರುಚಿ ಕೂಡ ನೀವು ನೋಡಿರುತ್ತೀರಿ. ಇದರಿಂದ ಒಂದಿಷ್ಟು ತಿಂಡಿಗಳನ್ನು ಕೂಡ ಮಾಡಿ ಸವಿದಿರುತ್ತೀರಿ.
ನಿಮ್ಮ ಆರೋಗ್ಯದ ದೃಷ್ಟಿಯಲ್ಲೂ ಕೂಡ ಗೆಣಸು ಬಹಳಷ್ಟು ಅಂಶಗಳ ತನ್ನಲಿಟ್ಟುಕೊಂಡಿದೆ. ಸಿಹಿಗೆಣಸಿನಲ್ಲಿ ಬೀಟಾ ಕ್ಯಾರೋಟಿನ್ ಪ್ರಮಾಣ ಹೊಂದಿದೆ, ಇದು ನಿಮ್ಮ ಕಣ್ಣಿನ ಆರೋಗ್ಯಕ್ಕೆ ಬಹಳ ಉತ್ತಮ. ರಾತ್ರಿ ಕುರುಡುತನ ನಿವಾರಣೆಗೆ ಈ ಬೀಟಾ ಕ್ಯಾರೋಟಿನ್ ಅಂಶ ಬಹಳ ಮುಖ್ಯವಾಗುತ್ತದೆ. ಹಾಗೆ ಇದರಲ್ಲಿ ಫೈಬರ್ ಅಂಶವಿದ್ದು ನಿಮ್ಮ ಜೀರ್ಣಕ್ರಿಯೆಗೂ ಬಹಳ ಉತ್ತಮ.

ಕೆಂಪು ಬಣ್ಣದ ಸಿಹಿ ಗೆಣಸಿನಲ್ಲಿ ಆಂಟಿ ಆಕ್ಸಿಡೆಂಟ್ ಅಂಶಗಳನ್ನು ಹೇರಳವಾಗಿ ಹೊಂದಿದೆ. ಇವು ಹೃದಯದ ಆರೋಗ್ಯ ಕಾಪಾಡಲು ಕೂಡ ಸಹಕಾರಿಯಾಗಿದೆ ಇಷ್ಟೊಂದು ಆರೋಗ್ಯಕರ ಅಂಶಗಳ ಹೊಂದಿರುವ ಈ ಗೆಣಸುಗಳಿಂದ ಎಷ್ಟೊಂದು ಬಗೆಯ ತಿಂಡಿಗಳ ಮಾಡಬಹುದು ಎಂಬುದು ನಿಮಗೆ ಗೊತ್ತಾ? ಅದರಲ್ಲೂ ಮರಗೆಣಸು ಅತ್ಯಂತ ರುಚಿಕರ ಹಾಗೆ ಇದರಿಂದ ಮಾಡುವ ಕರಿದ ತಿಂಡಿಯು ನಿಮ್ಮ ಬಾಯಲ್ಲಿ ನೀರು ತರಿಸುತ್ತದೆ.
ನೀವು ಬೇಕರಿಗಳಲ್ಲಿ ಗೆಣಸಿನ ಚಿಪ್ಸ್, ಫ್ರೈಸ್ ನೋಡಿರಬಹುದು. ಆದ್ರೆ ಇದನ್ನು ಮನೆಯಲ್ಲೇ ನೀವು ಮಾಡಬಹುದು. ಈ ಮರಗೆಣಸು ಬಳಸಿ ಮಾಡುವಂತಹ ಫಿಂಗರ್ ಚಿಪ್ಸ್‌ಗಳು ಬಹಳ ರುಚಿ ಹೊಂದಿರಲಿದೆ. ಹಾಗಾಧ್ರೆ ಮರಗೆಣಸಿನ ಫಿಂಗರ್ ಚಿಪ್ಸ್ ಮಾಡುವುದು ಹೇಗೆ? ಮಾಡುವ ವಿಧಾನವೇನು? ಈ ಫಿಂಗರ್ ಚಿಪ್ಸ್ ಮಾಡಲು ಎಷ್ಟು ಸಮಯ ಹಿಡಿಯಲಿದೆ? ಮಾಡುವ ವಿಧಾನವೇನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮರಗೆಣಸಿನ ಫಿಂಗರ್ ಚಿಪ್ಸ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಮರಗೆಣಸು
- ಕರಿಬೇವು
- ಖಾರದ ಪುಡಿ
- ಅಡುಗೆ ಎಣ್ಣೆ
- ರುಚಿಗೆ ಉಪ್ಪು
ಮರಗೆಣಸಿನ ಫಿಂಗರ್ ಚಿಪ್ಸ್ ಮಾಡುವ ವಿಧಾನವೇನು?
ಮರಗೆಣಸನ್ನು ಚೆನ್ನಾಗಿ ತೊಳೆದುಕೊಳ್ಳಬೇಕು. ಅನಂತರ ಮೇಲಿನ ಸಿಪ್ಪೆಯನ್ನು ಚೆನ್ನಾಗಿ ತೆಗೆದುಕೊಳ್ಳಬೇಕು, ಅನಂತರ ಕತ್ತರಿಸಿಕೊಳ್ಳಬೇಕು. ದೊಡ್ಡದಾಗಿ ಉದ್ದವಾಗಿ ಎರಡು ಭಾಗ ಮಾಡಿಕೊಳ್ಳಿ. ಮೊದಲು ಆಲೂಗಡ್ಡೆ ಬೊಂಡಾ ಮಾಡಲು ನೀವು ಆಲೂಗಡ್ಡೆ ಕತ್ತರಿಸಿಕೊಳ್ಳುವಂತೆ ಸ್ಲೈಸ್ ಮಾಡಿಕೊಳ್ಳಿ. ತೆಳುವಾಗಿಯೂ ಅಲ್ಲ ತೀರ ದಪ್ಪವಾಗಿಯೂ ಅಲ್ಲ ಆ ರೀತಿ ಸ್ಲೈಸ್ ಮಾಡಿಕೊಳ್ಳಿ. ಅನಂತರ ಎಲ್ಲವನ್ನು ಒಂದೇ ರೀತಿಯಲ್ಲಿ ಇಟ್ಟು ಉದ್ದವಾಗಿ ಕಡ್ಡಿಯಾಕಾರಕ್ಕೆ ಕತ್ತರಿಸಿಕೊಳ್ಳಿ. ನಿಮಗೆ ಯಾವ ಗಾತ್ರಕ್ಕೆ ಬೇಕೋ ಆ ರೀತಿ ಕತ್ತರಿಸಿಕೊಳ್ಳಿ. ಚಿಪ್ಸ್ ಆಕಾರಕ್ಕೂ ಕೂಡ ಕತ್ತರಿಸಿಕೊಳ್ಳಬಹುದು. ಇಲ್ಲದಿದ್ದರೆ ಕಡ್ಡಿ ಆಕಾರಕ್ಕೂ ಮಾಡಬಹುದು. ಅಲ್ಲದೆ ಕ್ಯಾರೆಟ್ ತುರಿಯುವ ಮಣೆಯಲ್ಲೂ ತುರಿದುಕೊಳ್ಳಬಹುದು.
ಮೊದಲು ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಳ್ಳಿ. ಎಣ್ಣೆ ಚೆನ್ನಾಗಿ ಕಾದ ಬಳಿಕ ಅದಕ್ಕೆ ಈ ಮರಗೆಣಸನ್ನು ಹಾಕಿಕೊಳ್ಳಿ. ಇದು ಎಣ್ಣೆಗೆ ಹಾಕಿದಾಗ ಅಂಟಿಕೊಳ್ಳುತ್ತದೆ. ಆದ್ರೆ ಕರಿದ ಬಳಿಕ ಬಿಡಿ ಬಿಡಿಯಾಗುತ್ತದೆ. ಎಲ್ಲಾ ಹೆಚ್ಚಿಕೊಂಡ ಮರಗೆಣಸನ್ನು ಕೂಡ ಎಣ್ಣೆಯಲ್ಲಿ ಹಾಕಿ ಕರಿದುಕೊಳ್ಳಬೇಕು ಇದು ಸ್ವಲ್ಪ ಕರಿ ಕರಿಯಾಗಬೇಕು.
ಅನಂತರ ಅದೇ ಎಣ್ಣೆಯಲ್ಲಿ ಕರಿಬೇವಿನ ಎಲೆಗಳನ್ನು ಕೂಡ ಹಾಕಿಕೊಂಡು ಕರಿದುಕೊಳ್ಳಿ. ನಂತರ ಈ ಗೆಣಸಿನ ಚಿಪ್ಸ್ ಅನ್ನು ಬೌಲ್‌ಗೆ ಹಾಕಿಕೊಂಡು ಇದಕ್ಕೆ ಖಾರದ ಪುಡಿ ಹಾಕಿ ಹಾಗೆ ಸುಮ್ಮನೆ ಅಲುಗಾಡಿಸಿ ಹಾಗೆ ಉಪ್ಪು ಕೂಡ ಹಾಕಿ ಚೆನ್ನಾಗಿ ಅಲುಗಾಡಿಸುತ್ತಾ ಮಿಕ್ಸ್ ಆಗುವಂತೆ ಮಾಡಿ. ಕೊನೆಯಲ್ಲಿ ಕರಿದ ಕರಿಬೇವು ಕೂಡ ಹಾಕಿಕೊಂಡು ಕಲಸಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಸ್ನ್ಯಾಕ್ಸ್ ಆಗಿ ಸವಿಯಲು ಮರಗೆಣಸಿನ ಫಿಂಗರ್ ಚಿಪ್ಸ್ ರೆಡಿಯಾಗುತ್ತದೆ.



Click it and Unblock the Notifications