Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಅತ್ಯುತ್ತಮ ನಿದ್ರೆಗೆ ಅಲಸಂದೆ ಉಸ್ಲಿ ಸವಿದು ನೋಡಿ..! ಅದರ ರುಚಿ ಕಡಿಮೆ ಏನಿಲ್ಲ.!
ನೀವು ಅಲಸಂದೆ ಕಾಳಿನಿಂದ ಹಲವು ರೀತಿಯ ಖಾದ್ಯಗಳ ಸವಿಯಲು ಇಷ್ಟಪಡುತ್ತಿರಬಹುದು, ಅಲಸಂದೆ ಕಾಳಿನಿಂದ ಸಾಂಬಾರ್, ಪಲ್ಯ, ಕೋಸಂಬರಿ, ಉಸ್ಲಿ ಮಾಡಿ ಸವಿಯುತ್ತಾರೆ. ಈ ಅಲಸಂದೆ ಕಾಳಿನ ಆರೋಗ್ಯಕರ ಅಂಶ ನಿಮಗೆ ತಿಳಿದಿದ್ದರೆ ನಿತ್ಯವು ನಿಮ್ಮ ಆಹಾರದಲ್ಲಿ ಈ ಕಾಳನ್ನು ಬಳಸುತ್ತೀರಿ. ಏಕೆಂದರೆ ಅಲಸಂದೆ ಕಾಳಿನಲ್ಲಿ ಅತ್ಯಂತ ಹೆಚ್ಚಿನ ಲಾಭದಾಯಕ ಅಂಶಗಳಿವೆ.
ಅಲಸಂದೆ ಕಾಳಿನಲ್ಲಿ ಪ್ರೋಟಿನ್, ಫೈಬರ್ ಸೇರಿದಂತೆ ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾಗಿರುವ ಹಲವು ಆರೋಗ್ಯಕರ ಅಂಶಗಳಿವೆ. ಈ ಕಾಳುಗಳಲ್ಲಿ ಕಬ್ಬಿಣ, ಮೆಗ್ನೀಷಿಯಂ, ಕ್ಯಾಲ್ಸಿಯಂ ಹಾಗೂ ರಂಜಕ ಕೂಡ ಹೊಂದಿದೆ. ಅಲಸಂದೆ ಹೃದಯದ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಇದರಲ್ಲಿ ಥಿಯಾಮಿನ್ ಅಥವಾ ವಿಟಮಿನ್ ಬಿ ಅಂಶ ಹೇರಳವಾಗಿದೆ.

ಈ ಅಲಸಂದೆಯಲ್ಲಿರುವ ಅಂಶವು ದೇಹದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲಿದೆ ಇದು ಹೃದಯಕ್ಕೆ ಬಹಳ ಉತ್ತಮ ಹಾಗೆ ಫೈಬರ್ ಹೆಚ್ಚಾಗಿರುವ ಕಾರಣ ಕರುಳಿನ ಆರೋಗ್ಯಕ್ಕೆ ಬಹಳ ಉತ್ತಮ. ಜೀರ್ಣಕ್ರಿಯೆ ಕಾರಣದಿಂದಲೂ ಅಲಸಂದೆ ಕಾಳುಗಳು ಬಹಳ ಉತ್ತಮವಾಗಿವೆ. ಮಲಬದ್ಧತೆ ಇರುವವರು ಈ ಅಲಸಂದೆಯ ರೆಸಿಪಿಗಳನ್ನು ಹೆಚ್ಚಾಗಿ ಸೇವಿಸವೇಕಂತೆ.
ಇಷ್ಟೊಂದು ಆರೋಗ್ಯಕರ ಅಂಶಗಳ ಹೊಂದಿರುವ ಈ ಅಲಸಂದೆ ಉಸ್ಲಿಯ ಮಾಡುವ ಕುರಿತು ನಾವಿಂದು ತಿಳಿದುಕೊಳ್ಳೋಣ. ನೀವು ಮದುವೆ ಮನೆ ಹಾಗೆ ಇತರೆ ಶುಭ ಕಾರ್ಯಗಳ ಸಂದರ್ಭದಲ್ಲಿ ಪಲ್ಯದ ರೀತಿ ಅಲಸಂದೆ ಸವಿದಿರಬಹುದು. ಅದೇ ರೀತಿ ನಾವಿಂದು ಬೆಳಗ್ಗೆ ತಿಂಡಿಗೆ ಈ ರೀತಿ ಉಸ್ಲಿ ಮಾಡಿ ಸವಿಯುವ ಕುರಿತು ನಾವಿಂದು ತಿಳಿದುಕೊಳ್ಳೋಣ.
ಹಾಗಾದ್ರೆ ಈ ಅಲಸಂದೆ ಉಸ್ಲಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಅಲಸಂದೆ ಉಸ್ಲಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಹಲಸಂದೆ ಕಾಳು - 1 ಕಪ್
- ತೆಂಗಿನ ಕಾಯಿ ತುರಿ - 1 ಕಪ್
- ಸಾಸಿವೆ
- ಜೀರಿಗೆ
- ಇಂಗು
- ಅರಿಶಿನದ ಪುಡಿ
- ಹಸಿ ಶುಂಠಿ
- ಹಸಿ ಮೆಣಸಿನಕಾಯಿ
- ಕೊತ್ತಂಬರಿ ಸೊಪ್ಪು
- ಕರಿಬೇವಿನ ಸೊಪ್ಪು
- ಕಡ್ಲೆಬೇಳೆ
- ಉದ್ದಿನ ಬೇಳೆ
- ಉಪ್ಪು
- ಎಣ್ಣೆ
ಅಲಸಂದೆ ಉಸ್ಲಿ ಮಾಡುವುದು ಹೇಗೆ?
ಮೊದಲು ಒಂದು ಕಪ್ ಅಳತೆಯ ಅಲಸಂದೆಯನ್ನು ಚೆನ್ನಾಗಿ ತೊಳೆದು 7ರಿಂದ 8 ಗಂಟೆಗಳ ಕಾಲ ನೀರಿನಲ್ಲೇ ನೆನೆಸಿಡಬೇಕು. ಅದು ಮೆತ್ತಗಾಗಬೇಕು, ರಾತ್ರಿ ನೆನೆಸಿಟ್ಟರೆ ಬೆಳಗ್ಗೆ ಖಾದ್ಯ ಮಾಡಬಹುದು. ಬಳಿಕ ಈ ಅಲಸಂದೆಯನ್ನು ತೊಳೆದು ಕುಕ್ಕರ್‌ಗೆ ಹಾಕಿಕೊಂಡು ಅದಕ್ಕೆ ನೀರು, ಉಪ್ಪು ಹಾಕಿ ಮುಚ್ಚಳ ಮುಚ್ಚಿ 1 ಸೀಟಿ ಹೊಡೆಯಲು ಬಿಡಬೇಕು. ನಂತರ ತಣ್ಣಗಾಗಲು ಬಿಟ್ಟು ಕುಕ್ಕರ್‌ನಿಂದ ಅಲಸಂದೆಯನ್ನು ಜರಡಿ ಹಿಡಿದು ಬೇರ್ಪಡಿಸಿಕೊಳ್ಳಿ.
ಮೊದಲು ಒಂದು ಬಾಣಲೆ ಒಲೆ ಮೇಲೆ ಇಟ್ಟು ಎಣ್ಣೆ ಹಾಕಿ ಬಳಿಕ ಸಾಸಿವೆ, ಜೀರಿಗೆ, ಇಂಗು, ಕಡಲೆ ಬೇಳೆ, ಉದ್ದಿನ ಬೇಳೆ ಹಾಕಿ ಬಿಸಿ ಮಾಡಿಕೊಳ್ಳಿ. ನಂತರ ಇದಕ್ಕೆ ಸ್ವಲ್ಪ ಅರಶಿಣ ಪುಡಿ, ಹಸಿ ಮೆಣಸು, ಕರಿಬೇವು, ಹಸಿ ಶುಂಠಿ, ಹಾಕಿಕೊಂಡು 1 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ. ಈಗ ಕುಕ್ಕರ್‌ನಲ್ಲಿ ಬೇಯಿಸಿಕೊಂಡ ಅಲಸಂದೆ ಕಾಳುಗಳನ್ನು ಇದಕ್ಕೆ ಹಾಕಿಕೊಳ್ಳಿ.
ಈಗ ತುರಿದುಕೊಂಡಿರುವ ತೆಂಗಿನಕಾಯಿ ತುರಿಯನ್ನು ಹಾಕಿಕೊಳ್ಳಿ. ಹಾಗೆ ಒಂದು ನಿಮಿಷ ಮಿಕ್ಸ್ ಮಾಡಿಕೊಂಡು ರುಚಿ ನೋಡಿ. ಉಪ್ಪು ಕಡಿಮೆ ಇದ್ದರೆ ಉಪ್ಪು ಹಾಕಿಕೊಳ್ಳಿ. ನಂತರ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿ ಒಲೆ ಆಫ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಅಲಸಂದೆ ಉಸ್ಲಿ ರೆಡಿಯಾಗುತ್ತದೆ. ಕಡಿಮೆ ಸಮಯದಲ್ಲಿ ಅದ್ಭುತವಾಗಿ ಮಾಡಬಹುದಾದ ಖಾದ್ಯ ಇದಾಗಿದೆ.



Click it and Unblock the Notifications