Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸುಲಭದ ಕೊತ್ತಂಬರಿ ಸೊಪ್ಪಿನ ವಡೆ; ಕ್ರಿಸ್ಪಿ ಸ್ನ್ಯಾಕ್ಸ್ ಅದ್ಭುತ ರುಚಿಯ ರೆಸಿಪಿ
ಮನೆಯಲ್ಲಿ ನೀವು ಸಂಜೆ ಸಮಯದಲ್ಲಿ ಸವಿಯಲು ಹಲವು ರೀತಿಯ ಸ್ನ್ಯಾಕ್ಸ್ ಮಾಡಿ ಸವಿಯಲು ಮುಂದಾಗಿರುತ್ತಿರಿ. ಅದ್ರಲ್ಲೂ ವಿಶೇಷ ರುಚಿಯ ಸ್ನ್ಯಾಕ್ಸ್‌ಗಳು ಅಂದರೆ ಎಲ್ಲರಿಗೂ ಇಷ್ಟವಾಗುತ್ತೆ. ಹಾಗೆ ರಸ್ತೆ ಬದಿಯ ಅಂಗಡಿಗಳಲ್ಲಿ ಸಿಗುವ ಹಲವು ರೀತಿಯ ಸ್ನ್ಯಾಕ್ಸ್ ಸವಿಯೋಕೆ ಎಲ್ಲರು ಇಷ್ಟಪಡುತ್ತಾರೆ. ಬೋಂಡಾ, ಬಜ್ಜಿ ವಡೆ ಹಾಗೆ ಗೋಬಿ ಮಂಚೂರಿಯನ್, ಪಾನಿಪೂರಿ ಸೇರಿ ಹಲವು ರೀತಿಯ ಖಾದ್ಯ ಇಷ್ಟವಾಗುತ್ತೆ.
ಇನ್ನು ಮನೆಯಲ್ಲೇ ಮಾಡಿ ಸವಿಯುವ ಹಲವು ರೀತಿಯ ಸ್ನ್ಯಾಕ್ಸ್‌ಗಳಲ್ಲಿ ವಡೆ ಸಹ ಎಲ್ಲರಿಗೂ ಇಷ್ಟವಾದ ಖಾದ್ಯ. ವಡೆಗಳನ್ನು ಹಲವು ಬಗೆಯಲ್ಲಿ ಮಾಡಿ ಸವಿಯಬಹುದು ಎಂಬುದು ನಿಮಗೂ ತಿಳಿದಿದೆ. ಸುಲಭವಾಗಿ ಕಡಲೆ ಬಳಸಿ, ಬೇಳೆ ಬಳಸಿಕೊಂಡು ಮಾಡುವ ವಡೆ ಎಲ್ಲರಿಗೂ ಅಚ್ಚುಮೆಚ್ಚು. ಊಟದ ಸಮಯದಲ್ಲಿ ಈ ವಡೆ ಬಹಳ ರುಚಿ ನೀಡಲಿದೆ.

ನೀವು ಸವಿದಿರುವ ಹಲವು ರೀತಿಯ ವಡೆಗಳಿಗಿಂತ ವಿಭಿನ್ನ ರುಚಿಯಲ್ಲಿ ಮಾಡುವ ಕೊತ್ತಂಬರಿ ಸೊಪ್ಪಿನ ವಡೆ ಮಾಡುವ ಕುರಿತಾಗಿ ಇಂದು ತಿಳಿದುಕೊಳ್ಳೋಣ. ಈ ರುಚಿಕರ ವಡೆಯನ್ನು ನೀವು ಒಮ್ಮೆ ಮಾಡಿ ಸವಿದರೆ ಯಾವಾಗಲು ಇದನ್ನು ಸವಿಯಲು ಮುಂದಾಗುತ್ತೀರಿ. ಊಟದೊಂದಿಗೆ ಹಾಗೆ ಸಂಜೆ ಸಮಯದ ಸ್ನ್ಯಾಕ್ಸ್ ಆಗಿಯೂ ಇದು ರುಚಿ ನೀಡಲಿದೆ.
ಹಾಗಾದ್ರೆ ಕೊತ್ತಂಬರಿ ಸೊಪ್ಪಿನ ವಡೆ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು ಎಷ್ಟು ಸಮಯ ಹಿಡಿಯಲಿದೆ ಎಂಬೆಲ್ಲಾ ಮಾಹಿತಿಯನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಕೊತ್ತಂಬರಿ ಸೊಪ್ಪಿನ ವಡೆ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಕಡಲೆ ಹಿಟ್ಟು
- ಕೊತ್ತಂಬರಿ ಸೊಪ್ಪು
- ಹಸಿ ಮೆಣಸು
- ಬೆಳ್ಳುಳ್ಳಿ
- ಉಪ್ಪು
- ಅರಶಿಣ
- ಖಾರದ ಪುಡಿ
- ಅಜ್ವೈನಾ
- ಧನಿಯಾ ಪುಡಿ
- ಹಸಿ ಮೆಣಸು
- ಎಳ್ಳು
- ಎಣ್ಣೆ
ಕೊತ್ತಂಬರಿ ಸೊಪ್ಪಿನ ವಡೆ ಮಾಡುವ ಸುಲಭದ ವಿಧಾನವೇನು?
ಮೊದಲು ಕೊತ್ತಂಬರಿ ಸೊಪ್ಪನ್ನು ಕತ್ತರಿಸಿಕೊಂಡು ಇಟ್ಟುಕೊಳ್ಳಿ. ಇದು 3 ಕಪ್ ಅಳತೆಯಲ್ಲಿ ಇರಲಿ. ಕೊತ್ತಂಬರಿ ಸೊಪ್ಪಿನಲ್ಲಿ ನೀರು ಇರಬಾರದು ಚೆನ್ನಾಗಿ ಒಣಗಿರಲಿ. ಈಗ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಹಸಿ ಮೆಣಸು, ಬೆಳ್ಳುಳ್ಳಿ, ಅಜ್ವೈನಾ ಹಾಕಿಕೊಂಡು ತರಿತರಿಯಾಗಿ ರುಬ್ಬಿಕೊಂಡು ಇಟ್ಟುಕೊಳ್ಳಿ.
ಈಗ ಒಂದು ಬೌಲ್‌ಗೆ ಒಂದೂವರೆ ಕಪ್ ಕಡಲೆ ಹಿಟ್ಟು ಹಾಕಿಕೊಂಡು ಅದಕ್ಕೆ ಉಪ್ಪು, ಅರಶಿಣ ಪುಡಿ, ಅಜ್ವೈನಾ ಹಾಕಿಕೊಂಡು ಮಿಕ್ಸ್ ಮಾಡಿ. ಈಗ ಇದಕ್ಕೆ ಸ್ವಲ್ಪ ಸ್ವಲ್ಪ ನೀರು ಹಾಕಿಕೊಂಡು ಮಿಕ್ಸ್ ಮಾಡಿ. ಸುಮಾರು 1 ಕಪ್ ನೀರು ಸಾಕಾಗುತ್ತದೆ. ಗಂಟುಗಳು ಇಲ್ಲದಂತೆ ಮಿಕ್ಸ್ ಮಾಡಿ ಇಟ್ಟುಕೊಳ್ಳಿ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಿಸಿಯಾಗಲು ಬಿಡಿ.
ಎಣ್ಣೆ ಬಿಸಿಯಾದ ಬಳಿಕ ಇದಕ್ಕೆ ರುಬ್ಬಿದ್ದ ಹಸಿ ಮೆಣಸಿನ ಪೇಸ್ಟ್ ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಈಗ ಬಿಳಿ ಎಳ್ಳು 2 ಚಮಚ, ಧನಿಯಾ ಪುಡಿ 1 ಚಮಚ, ಖಾರದ ಪುಡಿ ಹಾಕಿ ಮಿಕ್ಸ್ ಮಾಡಿ. ಈಗ ಹೆಚ್ಚಿಕೊಂಡಿರುವ ಕೊತ್ತಂಬರಿ ಸೊಪ್ಪನ್ನು ಇದಕ್ಕೆ ಸೇರಿಸಿ ಫ್ರೈ ಮಾಡಿ. 5 ನಿಮಿಷ ಆದರೂ ಹುರಿಯಬೇಕು.
ಅನಂತರ ಮಿಕ್ಸ್ ಮಾಡಿಕೊಂಡಿದ್ದ ಕಡಲೆ ಹಿಟ್ಟಿನ ಪೇಸ್ಟ್ ಅನ್ನು ಇದಕ್ಕೆ ಹಾಕಿ 5 ನಿಮಿಷ ಹುರಿದುಕೊಳ್ಳಬೇಕು. ಇದು ಗಟ್ಟಿಯಾಗುತ್ತಾ ಬರುತ್ತದೆ. ಗಟ್ಟಿಯಾದ ಬಳಿಕ ಉಂಡೆ ಕಟ್ಟುವಂತಹ ಹದಕ್ಕೆ ಬರಬೇಕು. ಅನಂತರ 3 ನಿಮಿಷ ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ ಬಿಡಿ.
ಈಗ ಈ ಹಿಟ್ಟನ್ನು ಒಂದು ಸ್ಟೀಲ್ ಪ್ಲೇಟ್‌ಗೆ ಹಾಕಿ ಒತ್ತಿಕೊಳ್ಳಬೇಕು. ಅಗಲವಾಗಿ ಹರಡಿಕೊಂಡು ಅನಂತರ ಯಾವ ಗಾತ್ರಕ್ಕೆ ಬೇಕೋ ಆ ಗಾತ್ರಕ್ಕೆ ಕತ್ತರಿಸಬೇಕು. ಇದು ತಣ್ಣಗಾದ ಬಳಿಕ ಕತ್ತರಿಸಿಕೊಳ್ಳಿ. ಅನಂತರ ಒಲೆ ಮೇಲೆ ಒಂದು ಕಾವಲಿ ಇಟ್ಟು ಎಣ್ಣೆ ಹಚ್ಚಿ ಬಿಸಿಯಾಗಲು ಬಿಡಿ. ನಂತರ ಈ ಕತ್ತರಿಸಕೊಂಡ ವಡೆಯನ್ನು ಕಾವಲಿಯಲ್ಲಿ ಹಾಕಿ ಚೆನ್ನಾಗಿ ಕರಿದುಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಕೊತ್ತಂಬರಿ ವಡೆ ಸಿದ್ದವಾಗುತ್ತೆ.



Click it and Unblock the Notifications