ಸ್ಪೆಷಲ್ ಕಲರ್‌ಫುಲ್‌ ಪಲಾವ್ ಮಾಡಿ ನೋಡಿ..! ಬಹಳ ರುಚಿಯ ತಿಂಡಿ ಇದು!!

Posted By:

ಬೆಳಗ್ಗೆ ಬ್ರೇಕ್ ಫಾಸ್ಟ್‌ಗೆ ನಾವು ಏನೆಲ್ಲಾ ಖಾದ್ಯ ಮಾಡಿ ಸವಿಯುತ್ತೇವೆ. ಹಾಗೆ ನಾವು ಬಹಳ ಸುಲಭವಾಗಿ ಮಾಡುವಂತಹ ಪಲಾವ್ ಅನ್ನು ಯಾವಾಗಲು ಮಾಡಲು ಮುಂದಾಗುತ್ತೇವೆ. ಪಲಾವ್ ಎಂದರೆ ಎಲ್ಲರಿಗೂ ಬಹಳ ಇಷ್ಟವಾಗುವ ಖಾದ್ಯ. ಮನೆಯಲ್ಲಿ ಮಕ್ಕಳಿದ್ದರೂ ಕೂಡ ಅವರಿಗೆ ಬೆಳಗ್ಗೆ ತಿಂಡಿಗೆ ಹಾಗೆ ಮಧ್ಯಾಹ್ನದ ಬಾಕ್ಸ್‌ಗೆ ಈ ಪಲಾವ್ ತುಂಬಾನೆ ರುಚಿ ನೀಡಲಿದೆ.

ಹಾಗೆ ಕಡಿಮೆ ಸಮಯದಲ್ಲಿ ಮಾಡಬಹುದಾಗಿರೋದ್ರಿಂದ ಬೆಳಗ್ಗೆ ಗಡಿಬಿಡಿಯಲ್ಲಿ ಪಲಾವ್ ಮಾಡುತ್ತಾರೆ. ಆದ್ರೆ ಈ ಪಲಾವ್‌ನಲ್ಲಿ ಬಗೆ ಬಗೆಯ ರುಚಿ ರುಚಿಯ ರೆಸಿಪಿಗಳಿವೆ. ಎಲ್ಲಾ ಖಾದ್ಯಗಳು ಕೂಡ ಒಂದಕ್ಕಿಂತ ಒಂದು ರುಚಿ ಹೆಚ್ಚಿಸುತ್ತವೆ. ಈ ಎಲ್ಲಾ ಬಗೆಯನ್ನು ನೀವು ಮಾಡಿ ಸವಿದಿರುತ್ತೀರಿ. ಆದ್ರೆ ಕಲರ್‌ಫುಲ್ ಪಲಾವ್ ಎಂದಾದ್ರು ಮಾಡಿದ್ದೀರಾ?

How To Make Colorful Palav For Breakfast At Home In Kannada

ಹೌದು ಬಣ್ಣ ಬಣ್ಣದ ರೈಸ್‌ನಿಂದ ತುಂಬಿದ ಪಲಾವ್ ನೋಡಲು ಎಷ್ಟು ಸುಂದರವಾಗಿರತ್ತೋ ಸವಿಯಲು ಕೂಡ ಅಷ್ಟೇ ರುಚಿಕರ ಆಗಿರುತ್ತೆ. ಇದನ್ನು ಮಾಡೋದು ಕೂಡ ತುಂಬಾನೆ ಸುಲಭ. ಬಣ್ಣ ಬಣ್ಣವಾಗಿ ಮಾಡಿದರೆ ಮಕ್ಕಳಂತು ಇಷ್ಟಪಟ್ಟು ಸವಿಯುತ್ತಾರೆ. ಹಾಗಾದ್ರೆ ನಾವಿಂದು ಈ ಸ್ಪೆಷಲ್ ಕಲರ್‌ಫುಲ್ ಪಲಾವ್ ಮಾಡುವುದು ಹೇಗೆ ಎಂಬುದನ್ನು ನೋಡೋಣ.

ಕಲರ್‌ಫುಲ್‌ ಪಲಾವ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಈ ಪಲಾವ್ ಮಾಡುವ ವಿಧಾನವೇನು? ಕಲರ್ ಫುಲ್ ಪಲಾವ್ ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಕಲರ್‌ಫುಲ್ ಪಲಾವ್ ಮಾಡಲು ಬೇಕಾಗುವ ವಸ್ತುಗಳಿವು

  • ನೇರಳೆ ಎಲೆಕೋಸು - 1 ಕಪ್
  • ಈರುಳ್ಳಿ - 1
  • ಟೊಮೆಟೋ - 1
  • ಗೋಡಂಬಿ - 5
  • ಪುದೀನ
  • ಕ್ಯಾರೆಟ್
  • ಲವಂಗ
  • ಏಲಕ್ಕಿ
  • ಸೋಂಕಾಳು
  • ಶುಂಠಿ ಬೆಳ್ಳುಳ್ಳಿ ಪೇಸ್ಟ್
  • ಗರಂ ಮಸಾಲಾ ಪುಡಿ
  • ಕೊತ್ತಂಬರಿ ಸೊಪ್ಪು
  • ಉಪ್ಪು
  • ಎಣ್ಣೆ

ಕಲರ್‌ಫುಲ್ ಪಲಾವ್ ಮಾಡುವ ವಿಧಾನವೇನು?

ಮೊದಲು ಒಂದು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಎಣ್ಣೆ ಬಿಸಿಯಾದ ಬಳಿಕ ಇದಕ್ಕೆ ಸೋಂಕಾಳು, ಚಕ್ಕೆ, ಲವಂಗ, ಪಲಾವ್ ಎಲೆ, ಲವಂಗ, ಬೆಳ್ಳುಳ್ಳಿ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ಈಗ ಇದಕ್ಕೆ ಸಣ್ಣದಾಗಿ ಕತ್ತರಿಸಿಕೊಂಡಿರುವ ಈರುಳ್ಳಿ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. 1 ನಿಮಿಷದ ಬಳಿಕ ಇದಕ್ಕೆ ಸಣ್ಣದಾಗಿ ಹೆಚ್ಚಿರುವ ಪುದಿನ ಎಲೆಗನ್ನು ಕೂಡ ಹಾಕಿಕೊಳ್ಳಿ.

ಅನಂತರ ಇದಕ್ಕೆ ಸಣ್ಣದಾಗಿ ಕತ್ತರಿಸಿಕೊಂಡಿರುವ ಕ್ಯಾರೆಟ್, ಬಟಾಣಿ, ಹಾಗೆ ನೇರಳೆ ಬಣ್ಣದ ಎಲೆಕೋಸು ಸಣ್ಣದಾಗಿ ಕತ್ತರಿಸಿಕೊಂಡು ಇದಕ್ಕೆ ಹಾಕಿಕೊಂಡಿ ಮಿಕ್ಸ್ ಮಾಡುತ್ತಾ ಫ್ರೈ ಮಾಡಿಕೊಳ್ಳಿ. ಅನಂತರ ಇದಕ್ಕೆ ಟೊಮೆಟೋ ಹಾಕಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್, 2 ಹಸಿ ಮೆಣಸು ಹಾಕಿ 5 ನಿಮಿಷ ಫ್ರೈ ಮಾಡಿಕೊಳ್ಳಿ. ಈಗ ಮೊದಲೆ ಮಾಡಿಟ್ಟಿರುವ ಅನ್ನವನ್ನು ಹುಡಿ ಹುಡಿಯಾಗಿ ಮಾಡಿಕೊಂಡು ಇದಕ್ಕೆ ಹಾಕಿ.

ಮೊದಲೇ ಅನ್ನ ಮಾಡಿಟ್ಟು ಹಾಕುವುದರಿಂದ ಹೆಚ್ಚು ಸಮಯ ಬೇಯಿಸಬೇಡಿ, ಸಣ್ಣ ಉರಿ ಇಟ್ಟು ಗರಂ ಮಸಾಲೆ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಹಾಗೆ ಕೊನೆಯದಾಗಿ ಕೊತ್ತಂಬರಿ ಸೊಪ್ಪು ಬೇಕಾದರೆ ಹಾಕಿಕೊಂಡು 2 ನಿಮಿಷ ಮುಚ್ಚಳ ಮುಚ್ಚಿ ಬೇಯಲು ಬಿಡಿ. ಉರಿ ಸಣ್ಣದಾಗಿರಲಿದೆ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಕಲರ್‌ಫುಲ್ ಪಲಾವ್ ರೆಡಿಯಾಗಿರುತ್ತದೆ. ನೀವು ಕೂಡ ಮನೆಯಲ್ಲಿ ಸಾಮಾನ್ಯ ರೈಸ್ ಮಾಡುವುದಕ್ಕಿಂತ ಈ ರೀತಿ ಸ್ಪೆಷಲ್ ರೈಸ್ ಮಾಡಿ ನೋಡಿ. ಎಲ್ಲರಿಗೂ ಇಷ್ಟವಾಗೋದು ಖಚಿತ..

[ of 5 - Users]
Story first published: Monday, December 30, 2024, 15:34 [IST]
X
Desktop Bottom Promotion