Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬಾಯಲ್ಲಿ ಇಟ್ಟರೆ ಕರಗುವ ತೆಂಗಿನಕಾಯಿ ಪೂರಿ..! ನೀವೆಂದೂ ಮಾಡಿರಲ್ಲ!
ನೀವು ಬೆಳಗ್ಗೆ ತಿಂಡಿಯ ಸಮಯಕ್ಕೆ ಯಾವುದಾದರು ವಿಶೇಷವಾದ ಹಾಗೆ ಅಪರೂಪಕ್ಕೆ ಮಾಡುವಂತಹ ಹಬ್ಬದ ವಾತಾವರಣ ಸೃಷ್ಟಿಸುವಂತಹ ತಿಂಡಿಯನ್ನು ಮಾಡಿ ಸವಿಯಲು ಇಷ್ಟ ಪಡುವ ಮಂದಿ ಆಗಿರಬಹುದು. ಆದ್ರೆ ನಿತ್ಯ ಒಂದೇ ರೀತಿ ತಿಂಡಿಗಳು, ಒಂದೇ ರುಚಿಯ ತಿಂಡಿಗಳು ಅಂದ್ರೆ ಕೂಡ ಯಾರಿಗೂ ಇಷ್ಟವಾಗೋದಿಲ್ಲ. ಆದ್ರೆ ನಾವಿಂದು ಸುಲಭವಾಗಿ ಹಾಗೆ ವಿಶೇಷ ರುಚಿಯ ತಿಂಡಿ ಮಾಡಿ ಸವಿಯುವ ಕುರಿತು ತಿಳಿದುಕೊಳ್ಳೋಣ.
ಅದ್ರಲ್ಲೂ ಪೂರಿ ಮಾಡಿ ಸವಿಯೋದು ಅಂದ್ರೆ ಎಲ್ಲರಿಗೂ ಇಷ್ಟವಾಗುಯತ್ತೆ. ಪೂರಿ ಮಾಡಿದ್ರೆ ಮನೆ ಮಂದಿಗೆಲ್ಲಾ ಇಷ್ಟವಾಗುತ್ತೆ. ತೆಳುವಾದ ಪೂರಿಯು ಬಾಯಲ್ಲಿ ಇಟ್ಟರೆ ಕರಗುವಂತಿರಬೇಕು. ಹಾಗೆ ಪೂರಿಯೊಂದಿಗೆ ಸಾಗು ಮಾಡಿ, ಚಟ್ನಿ ಮಾಡಿ ಸವಿಯೋದು ಕೂಡ ನೋಡಬಹುದು. ಹಾಗೆ ಪೂರಿಯನ್ನು ಮಾಡುವುದು ಕೂಡ ಬಹಳ ತಯಾರಿ ಬೇಕಾಗುತ್ತದೆ.

ಗೋಧಿ ಹಿಟ್ಟು ಹಾಗೆ ಮೈದಾ ಹಿಟ್ಟು ಬಳಸಿ ಮಾಡುವ ಪೂರಿಯನ್ನು ನೀವು ಸವಿದಿರುತ್ತೀರಿ, ಆದ್ರೆ ನಾವಿಂದು ತೆಂಗಿನಕಾಯಿ ಬಳಸಿ ಮೃದುವಾದ ಪೂರಿ ಮಾಡೋದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ. ಕಾಯಿ ಬಳಸಿ ಮಾಡುವ ಈ ಪೂರಿ ಬಹಳ ರುಚಿಕರವಾಗಿರಲಿದೆ. ಹಾಗೆ ಮೃದುವಾಗಿ ಚಟ್ನಿಯೊಂದಿಗೆ ಸವಿಯುತ್ತಿದ್ದರೆ ಬಾಯಲ್ಲಿ ನೀರು ಬರುವುದು ಖಚಿತ.
ಹಾಗಾದ್ರೆ ತೆಂಗಿನಕಾಯಿ ಪೂರಿ ಮಾಡುವುದು ಹೇಗೆ? ಈ ಪೂರಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಲ್ಲಿ ತಿಳಿಯೋಣ.
ತೆಂಗಿನಕಾಯಿ ಪೂರಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಅಕ್ಕಿ
- ತೆಂಗಿನಕಾಯಿ ತುರಿ
- ಉಪ್ಪ
- ಎಣ್ಣೆ
ತೆಂಗಿನಕಾಯಿ ಪೂರಿ ಮಾಡುವ ವಿಧಾನವೇನು?
ಮೊದಲು 1 ಕಪ್ ಅಕ್ಕಿಯ್ನು ನೆನೆಯಲು ಬಿಡಿ. ಸುಮಾರು 3 ಗಂಟೆ ನೆನೆಯಲು ಬಿಡಿ. ಈಗ ಒಂದು ಕಪ್ ತೆಂಗಿನಕಾಯಿ ತುರಿ ರೆಡಿ ಮಾಡಿಕೊಳ್ಳಿ. ಈಗ ಒಂದು ಮಿಕ್ಸಿ ಜಾರ್ಗೆ ಮೊದಲು ನೆನೆಸಿಟ್ಟ ಅಕ್ಕಿ ಹಾಕಿಕೊಂಡು ಬಳಿಕ ತುರಿದುಕೊಂಡಿರುವ ತೆಂಗಿನಕಾಯಿ ಸಹ ಹಾಕಿಕೊಳ್ಳಿ. ನಂತರ 1 ಕಪ್ ನೀರು ಹಾಕಿಕೊಂಡು ರುಬ್ಬಿಕೊಳ್ಳಿ.
ಆಗಾಗ ನೀರು ಹಾಕಿಕೊಂಡು ನುಣ್ಣಗೆ ರುಬ್ಬಿಕೊಳ್ಳಬೇಕು. ಈಗ ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ 2 ಕಪ್ ನೀರು ಹಾಕಿ ಉಪ್ಪು ಹಾಕಿ ಕುದಿಬರಲು ಬಿಡಿ. ಈಗ ರುಬ್ಬಿಕೊಂಡಿದ್ದ ಹಿಟ್ಟನ್ನು ಈ ಬಾಣಲೆಗೆ ಹಾಕಿ ಮಿಕ್ಸ್ ಮಾಡುತ್ತಾ ಇರಿ. 2 ನಿಮಿಷದಲ್ಲಿ ಗಟ್ಟಿಯಾಗಲು ಆರಂಭಿಸಲಿದೆ. ಹಿಟ್ಟು ಹದವಾಗಲು ಆರಂವಾಗುತ್ತದೆ.
ಈ ಹಿಟ್ಟು ಬೆಣ್ಣೆಯಂತೆ ಮೃದುವಾಗಿ ಬರಲಿದೆ. ನಂತರ ಬಾಣಲೆ ಮುಚ್ಚಳ ಮುಚ್ಚಿ 1 ನಿಮಿಷ ಬಿಡಿ. ನಂತರ ಮತ್ತೆ ಮಿಕ್ಸ್ ಮಾಡಿ ಒಲೆ ಆಫ್ ಮಾಡಿಕೊಳ್ಳಿ. ಈಗ ಈ ಹಿಟ್ಟನ್ನು ಉಂಡೆ ಮಾಡಬೇಕು. ಕೈಗೆ ಎಣ್ಣೆ ಹಚ್ಚಿಕೊಂಡು ನಿಂಬೆ ಗಾತ್ರದಲ್ಲಿ ಉಂಡೆ ಕಟ್ಟಿಕೊಳ್ಳಿ. ಈಗ ಪ್ಲಾಸ್ಟಿಕ್ ಇಟ್ಟು ಅದಕ್ಕೆ ಎಣ್ಣೆ ಹಾಕಿ ನಂತರ ಉಂಡೆ ಇಟ್ಟು ಮೇಲೆ ಪ್ಲಾಸ್ಟಿಕ್ ಇಟ್ಟು ಒತ್ತಿಕೊಳ್ಳಿ. ಪೂರಿ ಒತ್ತಿಕೊಂಡ ಬಳಿಕ ಬಾಣಲೆಯಲ್ಲಿ ಎಣ್ಣೆ ಕಾಯಿಸಿಕೊಂಡು ಅದಕ್ಕೆ ಇಳಿ ಬಿಟ್ಟುಕೊಳ್ಳಿ.
ದೊಡ್ಡ ಉರಿಯಲ್ಲಿ ಪೂರಿಯನ್ನು ಕರಿದುಕೊಂಡರೆ ನಿಮ್ಮ ಮುಂದೆ ರುಚಿ ರುಚಿಯ ತೆಂಗಿನಕಾಯಿ ಪೂರಿ ರೆಡಿಯಾಗುತ್ತದೆ. ನೀವು ಕೂಡ ಬೆಳಗ್ಗೆ ತಿಂಡಿಗೆ ಇದನ್ನು ಮಾಡಿ ನೋಡಿ. ಬಹಳ ಸುಲಭವಾಗಿ ಮಾಡಬಹುದು. ಇದರ ಜೊತೆ ಸವಿಯಲು ತೆಂಗಿನಕಾಯಿ ಚಟ್ನಿ ಇದ್ದರೆ ರುಚಿ ದುಪ್ಪಟ್ಟಾಗುತ್ತೆ. ಮಕ್ಕಳು ಕೂಡ ಇದನ್ನು ಬಹಳ ಇಷ್ಟಪಟ್ಟು ಸವಿಯೋದು ಖಚಿತ.



Click it and Unblock the Notifications