Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಇದು ಮಾಮೂಲಿ ಅಲ್ಲ ಕಾಯಿ ಹಾಲಿನ ಪಲಾವ್..! ಈ ರುಚಿ ನೀವು ಎಂದಿಗೂ ಸವಿದಿರಲ್ಲ.!
ಬೆಳಗ್ಗೆ ತಿಂಡಿಗೆ ನೀವು ಹಲವು ರೀತಿಯ ರೈಸ್ ಐಟಂ ಮಾಡಿ ಸವಿಯುವುದು ನೋಡಬಹುದು. ಅಂದರೆ ಹಲವು ಖಾದ್ಯಗಳ ಸವಿಯಲು ನೀವು ಇಷ್ಟಪಡುತ್ತೀರಿ. ಹಾಗೆ ಬೆಳಗ್ಗೆ ತಿಂಡಿಗೆ ರೈಸ್ ಐಟಂ ಮಾಡಿ ಸವಿಯುವುದನ್ನು ಇಷ್ಟಪಡುತ್ತಿದ್ದರೆ ಪಲಾವ್, ಚಿತ್ರಾನ್ನ, ರೈಸ್ ಬಾತ್, ಟೊಮೆಟೋ ಬಾತ್ ಹಾಗೆ ಹಲವು ರೀತಿಯ ಖಾದ್ಯ ಸವಿಯಲು ಇಷ್ಟಪಡಬಹುದು.
ಅದ್ರಲ್ಲೂ ಪಲಾವ್ ಮಾಡುವುದು ಅಂದ್ರೆ ಎಲ್ಲರಿಗೂ ಇಷ್ಟವಾಗೋ ಖಾದ್ಯ. ತರಕಾರಿಗಳ, ಮಸಾಲೆಗಳ ಹಾಕಿ ಅದ್ಭುತ ರುಚಿಯಲ್ಲಿ ಮಾಡಬಹುದು. ಹೋಟೆಲ್ ಹಾಗೂ ರೆಸ್ಟೋರೆಂಟ್‌ನಲ್ಲಿ ಬಿಸಿ ಬಿಸಿ ಪಲಾವ್ ಸವಿಯಲು ಇಷ್ಟಪಡುತ್ತಾರೆ. ಆರೋಗ್ಯಕರವಾದ ದಿನದ ಆರಂಭಕ್ಕೆ ಈ ಖಾದ್ಯ ಫಸ್ಟ್ ಕ್ಲಾಸ್. ಹಾಗೆ ಪಲಾವ್ ಮಾಡೋದು ಬಹಳ ಸುಲಭ.

ಆದ್ರೆ ಈ ಪಲಾವ್‌ನಲ್ಲಿ ಹಲವು ಬಗೆ ಇರುವುದು ಸಹ ನಾವು ನೋಡಬಹುದು. ಅದರಲ್ಲಿ ನಾವಿಂದು ಸುಲಭವಾಗಿ ತೆಂಗಿನಕಾಯಿ ಹಾಲು ಬಳಸಿ ಮಾಡುವಂತಹ ಪಲಾವ್ ರುಚಿ ನೋಡಿದ್ದೀರಾ? ಹೌದು ತೆಂಗಿನಹಾಲು ಬಳಸಿ ಮಾಡುವ ಈ ಪಲಾವ್ ಅತ್ಯಧಿಕ ರುಚಿ ನೀಡುತ್ತೆ. ಹಾಗೆ ಅದರ ಸ್ವಾದವು ಹಲವು ಸಮಯ ನಿಮ್ಮಲ್ಲಿ ಉಳಿಯುವಂತೆ ಮಾಡುತ್ತೆ.
ಹಾಗಾದ್ರೆ ನಾವಿಂದು ಸುಲಭವಾಗಿ ತೆಂಗಿನಕಾಯಿ ಪಲಾವ್ ಮಾಡುವ ಕುರಿತು ತಿಳಿದುಕೊಳ್ಳೋಣ. ಈ ಪಲಾವ್ ಮಾಡುವುದು ಹೇಗೆ? ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ? ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ತೆಂಗಿನ ಹಾಲಿನ ಪಲಾವ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಅಕ್ಕಿ
- ತೆಂಗಿನಕಾಯಿ ಹಾಲು 1 ಕಪ್
- ದಾಲ್ಚಿನ್ನಿ
- ಏಲಕ್ಕಿ
- ಲವಂಗ
- ಸೋಂಪು ಕಾಳು
- ಚಕ್ರ ಮೊಗ್ಗು
- ಕರಿಬೇವು
- ಹಸಿರು ಬೀನ್ಸ್
- ಕ್ಯಾರೆಟ್
- ಹಸಿರು ಬಟಾಣಿ
- ಹೂಕೋಸು
- ಶುಂಠಿ
- ಬೆಳ್ಳುಳ್ಳಿ
- ಹಸಿ ಮೆಣಸಿನಕಾಯಿ
- ಈರುಳ್ಳಿ
- ಕೊತ್ತಂಬರಿ ಸೊಪ್ಪು
- ಪುದೀನ ಸೊಪ್ಪು
- ರುಚಿಗೆ ತಕ್ಕಷ್ಟು ಉಪ್ಪು
- ಅಡುಗೆ ಎಣ್ಣೆ
ತೆಂಗಿನ ಹಾಲಿನ ಪಲಾವ್ ಮಾಡುವ ವಿಧಾನವೇನು?
ಮೊದಲಿಗೆ ಒಂದು ತೆಂಗಿನಕಾಯಿ ತುರಿದು ಅದನ್ನು ಮಿಕ್ಸಿ ಜಾರ್‌ಗೆ ಹಾಕಿ ರುಬ್ಬಿಕೊಂಡು ನಂತರ ಅದರಿಂದ ಹಾಲನ್ನು ಹಿಂಡಿಕೊಂಡು ಒಂದು ಬೌಲ್‌ಗೆ ಹಾಕಿಟ್ಟುಕೊಳ್ಳಿ. ಈಗ ಒಂದು ಕುಕ್ಕರ್ ಇಟ್ಟು ಅದಕ್ಕೆ ಎಣ್ಣೆ ಹಾಕಿ, ಬಳಿಕ ಚಕ್ಕೆ, ಲವಂಗ, ಸೋಂಕಾಳು, ಪಲಾವ್ ಎಲೆ, ಮೊಗ್ಗು, ಏಲಕ್ಕಿ ಹಾಕಿ ನಂತರ ಇದಕ್ಕೆ ಈರುಳ್ಳಿ ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿಕೊಳ್ಳಿ. 2 ನಿಮಿಷದ ಬಳಿಕ ಇದಕ್ಕೆ ಬೀನ್ಸ್, ಕ್ಯಾರೆಟ್, ಹೂಕೋಸು, ಬಟಾಣಿ, ನವಿಲು ಕೋಸು ಕೂಡ ಹಾಕಬಹುದು. ಹಾಗೆ ಉಪ್ಪು ಹಾಕಿ 3 ನಿಮಿಷ ಫ್ರೈ ಮಾಡಿಕೊಳ್ಳಿ.
ಈಗ ಅದೇ ಮಿಕ್ಸಿ ಜಾರ್‌ಗೆ ಶುಂಠಿ, ಬೆಳ್ಳುಳ್ಳಿ, ಹಸಿ ಮೆಣಸು, ಈರುಳ್ಳಿ ಸ್ವಲ್ಪ , ಕೊತ್ತಂಬರಿ, ಪುದಿನ ಹಾಕಿಕೊಂಡು ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ರುಬ್ಬಿದ ಈ ಮಸಾಲೆಯನ್ನು ಕುಕ್ಕರ್‌ಗೆ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ ಫ್ರೈ ಮಾಡಬೇಕು. ನಂತರ ಅಕ್ಕಿ ತೆಗೆದುಕೊಂಡಿರುವ ಅಳತೆಯಲ್ಲಿ ಕಾಯಿ ಹಾಲು ಹಾಕಿಕೊಳ್ಳಿ. ತೆಂಗಿನ ಹಾಲು ಹಾಗೂ ನೀರು ಸೇರಿ ಅಕ್ಕಿಯ ಅಳತೆಗೆ ಡಬಲ್ ಆಗಬೇಕು.
2 ಕಪ್ ಅಕ್ಕಿಗೆ 2 ಕಪ್ ಕಾಯಿ ಹಾಲು ಹಾಕಬಹುದು. ಹಾಗೆ ಸ್ವಲ್ಪ ನೀರು ಹಾಕಿ ಕುದಿಯಲು ಬಿಡಿ. ಈಗ ಮೊದಲೇ ನೆನೆಸಿಟ್ಟಿರುವ ಅಕ್ಕಿಯನ್ನು ಅಳತೆಯ ಪ್ರಕಾರವಾಗಿ ಕುಕ್ಕರ್‌ಗೆ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಹಾಗೆ ಕುದಿಯಲು ಬಿಟ್ಟು ನಂತರ ಮುಚ್ಚಳ ಮುಚ್ಚಿಕೊಳ್ಳಿ. 2 ಸೀಟಿ ಹೊಡೆಯಲು ಬಿಡಿ. ಅನಂತರ ಮುಚ್ಚಳ ತೆಗೆದು ಒಮ್ಮೆ ಮಿಕ್ಸ್ ಮಾಡಿಕೊಂಡರೆ ನಿಮ್ಮ ಮುಂದೆ ಈ ಪಲಾವ್ ರೆಡಿಯಾಗುತ್ತೆ, ಈ ರುಚಿಯಲ್ಲಿ ನೀವೆಂದು ಸವಿಯದೆ ಇರದ ಪಲಾವ್ ಇದಾಗಿದೆ.



Click it and Unblock the Notifications