ದೀಪಾವಳಿ ವಿಶೇಷ: 10 ನಿಮಿಷದಲ್ಲಿ ಕೊಬ್ಬರಿ ತುರಿ ಲಾಡು ಮಾಡಿ ರುಚಿ ನೋಡಿ.!

Posted By:

ದೀಪಾವಳಿ ಹಬ್ಬ ಆಗಮಿಸುತ್ತಿದೆ. ದೀಪಾವಳಿ ಅಂದ್ರೆ ಬೆಳಕಿನ ಹಬ್ಬ. ಇಡೀ ವಾರವೆಲ್ಲ ಮನೆಯಲ್ಲಿ ಬೆಳಕು ಹರಡಿರುವ ವಿಶೇಷ ಹಬ್ಬ ಇದಾಗಿದೆ. ಹಾಗೆ ಈ ಹಬ್ಬದಂದು ಎಲ್ಲರ ಮನೆಯಲ್ಲೂ ಸಂತಸ, ಸಂಭ್ರಮ ತುಂಬಿರಲಿದೆ. ಈ ಸಂತಸ ದುಪ್ಪಟ್ಟು ಮಾಡುವ ಇನ್ನೊಂದು ಅಂಶ ಏನೆಂದರೆ ಅದು ಸಿಹಿ ತಿಂಡಿ.

ದೀಪಾವಳಿಯೇ ಅತ್ಯಂತ ಸಡಗರದ ಹಬ್ಬವಾದಾಗ ಎಲ್ಲರ ಮನೆಯಲ್ಲೂ ಅತ್ಯಂತ ರುಚಿ ರುಚಿಯ ಸಿಹಿ ತಿಂಡಿಗಳ ಮಾಡುವುದು ಕಾಮನ್. ಅದ್ರಲ್ಲೂ ಕೆಲವರು ಎರಡು ಮೂರು ಬಗೆಯ ತಿಂಡಿ ಮಾಡುತ್ತಾರೆ. ಹಬ್ಬದಲ್ಲಿ ನಿತ್ಯ ಒಂದೊಂದು ಪೂಜೆ ಮಾಡುವುದರಿಂದ ಒಂದೊಂದು ಬಗೆಯ ತಿಂಡಿಗಳ ಮಾಡುವುದು ಸಾಮಾನ್ಯ.

How To Make Coconut Ladoo Sweet Recipe For Fest In Kannada

ಅದರಲ್ಲಿ ಹೆಚ್ಚಾಗಿ ಹೋಳಿಗೆ, ಕಜ್ಜಾಯ, ಕರ್ಜಿಕಾಯಿ, ಅತ್ರಸ, ಲಾಡು ಮಾಡುವುದನ್ನು ನೋಡಬಹುದು. ಹೀಗಾಗಿ ನಾವು ಕೂಡ ಇಂದು ದೀಪಾವಳಿ ಹಿನ್ನೆಲೆ ಹೊಸದಾಗಿ ಅದ್ಭುತ ರುಚಿಯ ತೆಂಗಿನ ತುರಿಯ ಲಾಡು ಮಾಡುವ ಕುರಿತು ತಿಳಿದುಕೊಳ್ಳೋಣ. ನೀವು ರವೆ ಲಾಡು, ಬೂಂದಿ ಲಡ್ಡು ಹೀಗೆ ಹತ್ತಾರು ಬಗೆ ಸವಿದಿರುತ್ತೀರಿ, ಆದ್ರೆ ನಾವಿಂದು ಹೊಸ ರುಚಿಯಲ್ಲಿ ಲಾಡು ಮಾಡುವುದನ್ನು ಹೇಳಲಿದ್ದೇವೆ.

ಹಾಗಾದ್ರೆ ಈ ಕೊಬ್ಬರಿ ತುರಿಯ ಲಾಡು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಈ ಲಾಡು ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ? ಮಾಡಲು ಯಾವೆಲ್ಲಾ ರೀತಿ ತಯಾರಿ ಮಾಡಿಕೊಳ್ಳಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಕೊಬ್ಬರಿ ತುರಿ ಲಾಡು ಮಾಡಲು ಬೇಕಾಗುವ ಪದಾರ್ಥಗಳು

  • ಕೊಬ್ಬರಿ ತುರಿ
  • ಬಾದಾಮಿ
  • ಹಾಲು
  • ಸಕ್ಕರೆ
  • ಏಲಕ್ಕಿ
  • ತುಪ್ಪ

ಕೊಬ್ಬರಿ ತುರಿ ಲಾಡು ಮಾಡುವ ವಿಧಾನ?

ಮೊದಲು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಎರಡು ಸ್ಪೂನ್ ತುಪ್ಪ ಹಾಕಿಕೊಳ್ಳಿ. ತುಪ್ಪ ಬಿಸಿಯಾದ ಬಳಿಕ ಅದಕ್ಕೆ ತೆಂಗಿನ ತುರಿಯನ್ನು ಹಾಕಿಕೊಳ್ಳಿ. ನೀವು ಅಂಗಡಿಯಲ್ಲಿ ಸಿಗುವ ಕೊಬ್ಬರಿ ತುರಿ ಅಥವಾ ಮನೆಯಲ್ಲೇ ತುರಿದುಕೊಂಡ ಒಣ ಕೊಬ್ಬರಿಯನ್ನು ತುರಿದು ಹಾಕಿಕೊಳ್ಳಿ.

ಕೊಬ್ಬರಿ ತುರಿಯನ್ನು ತುಪ್ಪದಲ್ಲಿ ಹಾಕಿ 3 ನಿಮಿಷಗಳ ಕಾಲ ಹುರಿದುಕೊಂಡರೆ ಅದು ಸ್ವಲ್ಪ ಕೆಂಪಗಾಗುತ್ತದೆ. ಈ ವೇಳೆ ಸಣ್ಣ ಉರಿ ಇಟ್ಟು ಮಿಕ್ಸ್ ಮಾಡುತ್ತಾ ಇರಿ. ಕೊಬ್ಬರಿ ಸ್ವಲ್ಪ ಕೆಂಪಗಾದ ಬಳಿಕ ಇದಕ್ಕೆ 1 ಕಪ್ ಹಾಲು, ಒಂದು ಕಪ್ ಸಕ್ಕರೆ ಹಾಕಿಕೊಂಡು ತಿರುಗಿಸುತ್ತಾ ಇರಿ, ಈ ಎಲ್ಲಾ ವಸ್ತುಗಳು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳುತ್ತಿರಬೇಕು.

ಹಾಲಿನಲ್ಲಿ ಸಕ್ಕರೆ ಕರಗಿ ತೇವಾಂಶ ಹೋಗಬೇಕು. ತಳ ಹಿಡಿಯದಂತೆ ಆಗಾಗ ಕೈ ಆಡಿಸುತ್ತಾ ಇರಿ. 4 ರಿಂದ 5 ನಿಮಿಷದಲ್ಲಿ ಸಕ್ಕರೆ ಕರಗುತ್ತದೆ. ಈಗ ಇದಕ್ಕೆ ಕತ್ತರಿಸಿಕೊಂಡಿರುವ ಬಾದಾಮಿ, ಏಲಕ್ಕಿ ಪುಡಿ ಹಾಖಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈಗ ಒಲೆ ಆಫ್ ಮಾಡಿಕೊಂಡು ತಣ್ಣಗಾಗಲು ಬಿಡಿ. ಈ ಮಿಶ್ರಣ ತಣಗಾದ ಬಳಿಕ ಕೈಯಲ್ಲಿ ತೆಗೆದುಕೊಂಡು ನಿಮಗೆ ಯಾವ ಗಾತ್ರಕ್ಕೆ ಬೇಕೋ ಆ ಗಾತ್ರಕ್ಕೆ ಉಂಡೆ ಮಾಡಿಕೊಳ್ಳಿ.

ಎಲ್ಲಾ ಮಿಶ್ರಣವನ್ನು ಕೂಡ ಉಂಡೆ ಮಾಡಿಕೊಂಡು ಕೊಬ್ಬರಿ ತುರಿಯಲ್ಲಿ ಒಮ್ಮೆ ಉರುಳಿಸಿದರೆ ನಿಮ್ಮ ಮುಂದೆ ಕೊಬ್ಬರಿ ಲಡ್ಡು ರೆಡಿಯಾಗುತ್ತದೆ. ಇದು ಬಹಳ ಮೃದುವಾಗಿರುವ ಕಾರಣ ಎಲ್ಲರಿಗೂ ಇಷ್ಟವಾಗುತ್ತದೆ. ನೀವು ಕೂಡ ಒಮ್ಮೆ ಇದನ್ನು ಟ್ರೈ ಮಾಡಿ ನೋಡಿ.

[ of 5 - Users]
Story first published: Thursday, October 24, 2024, 20:34 [IST]
X
Desktop Bottom Promotion