Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬಿಸಿ ಬಿಸಿ ಅನ್ನದೊಂದಿಗೆ ಕಲಸಿ ತಿನ್ನಲು ಕಾಯಿ ಗೊಜ್ಜು..! ಮಾಡಿ ನೋಡಿ..!
ಊಟದ ಜೊತೆಗೆ ಸವಿಯಲು ನೀವು ಹಲವು ರೀತಿಯಾದ ಖಾದ್ಯಗಳ ಮಾಡಿ ಸವಿದಿರುತ್ತೀರಿ. ಊಟದೊಂದಿಗೆ ಸಾಂಬಾರ್ ಯಾವಾಗಲು ಮಾಡಿ ಸವಿಯುವ ಖಾದ್ಯ. ಆದ್ರೆ ವಿಭಿನ್ನ ರೀತಿಯಲ್ಲಿ ಹಾಗೆ ವಿಶೇಷ ರುಚಿ ನೀಡುವಂತಹ ವಿವಿಧ ರೀತಿ ರೆಸಿಪಿಗಳ ಮಾಡಿ ನೀವು ಊಟದೊಂದಿಗೆ ಸವಿಯುತ್ತೀರಿ. ಅದ್ರಲ್ಲೂ ಹೆಚ್ಚಾಗಿ ಚಟ್ನಿ, ಹಲವು ರೀತಿ ಗೊಜ್ಜುಗಳ ಸವಿಯುವುದು ಸಹ ನೋಡಬಹುದು.
ಊಟ ಹಾಗೂ ತಿಂಡಿ ಎರಡಕ್ಕೂ ರುಚಿ ತರುವಂತಹ ಗೊಜ್ಜುಗಳನ್ನು ನೀವು ಮಾಡಿ ಸವಿಯಲು ಇಷ್ಟಪಡುವವರಾಗಿದ್ದರೆ ಇಂದು ನಾವು ನಿಮಗಾಗಿ ಈ ಕಾಯಿ ಗೊಜ್ಜು ಮಾಡುವ ಕುರಿತು ಹೇಳಲಿದ್ದೇವೆ. ತೆಂಗಿನಕಾಯಿಯಲ್ಲಿ ಮಾಡುವಂತಹ ಕಾಯಿ ಗೊಜ್ಜು ನೀವು ಊಟದೊಂದಿಗೆ ಕಲಸಿಕೊಂಡು ಸವಿಯಲು ಅದ್ಭುತ ರುಚಿ ನೀಡಲಿದೆ.

ತೆಂಗಿನಕಾಯಿ ಚಟ್ನಿಗಿಂತಲೂ ವಿಭಿನ್ನ ರುಚಿ ನೀಡುವಂತಹ ಕಾಯಿ ಗೊಜ್ಜು ಮಾಡಿ ಸವಿದು ನೋಡಿ. ನಿತ್ಯದ ಊಟಕ್ಕೆ ಇದನ್ನೇ ಬಯಸುತ್ತೀರಿ. ಬಿಸಿ ಬಿಸಿ ಅನ್ನದ ಜೊತೆಗೆ ಕಲಸಿಕೊಂಡು ಸವಿಯಲು ಇದು ಅದ್ಭುತವಾಗಿರಲಿದೆ. ಹಾಗೆ ಮಾಡೋದು ಕೂಡ ಬಹಳ ಸುಲಭ. ಇನ್ನು ದೋಸೆ, ಇಡ್ಲಿ, ಕಡಬು, ಹೀಗೆ ಯಾವುದೇ ತಿಂಡಿಯೊಂದಿಗೂ ಕೂಡ ಇದನ್ನು ನೀವು ಸವಿಯಲು ಬಳಸಬಹುದು.
ಹಾಗಾದ್ರೆ ಈ ತೆಂಗಿನಕಾಯಿ ಗೊಜ್ಜು ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ತೆಂಗಿನಕಾಯಿ ಗೊಜ್ಜು ಮಾಡಲು ಯಾವೆಲ್ಲಾ ವಸ್ತುಗಳು
ಬೇಕು?
- ತೆಂಗಿನಕಾಯಿ
- ಒಣ ಮೆಣಸು
- ಕಡಲೆ ಬೇಳೆ
- ಕೊತ್ತಂಬರಿ ಕಾಳು
- ಸಾಸಿವೆ
- ಕರಿಬೇವು
- ಹುಣಸೆ ಹುಳಿ
- ಬೆಲ್ಲ
- ಸಾರಿನ ಪುಡಿ
- ಇಂಗು
- ಉದ್ದಿನ ಬೇಳೆ
- ಎಣ್ಣೆ
- ಉಪ್ಪು
ತೆಂಗಿನಕಾಯಿ ಗೊಜ್ಜು ಮಾಡುವುದು ಹೇಗೆ?
ಮೊದಲು ಒಂದು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಉದ್ದಿನ ಬೇಳೆ, ಕಡಲೆ ಬೇಳೆ, ಒಣ ಮೆಣಸು, 2 ಸ್ಪೂನ್ ಎಣ್ಣೆ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ಹದವಾಗಿ ಕಂದು ಬಣ್ಣ ಬರುವವರೆಗೂ ಹುರಿದುಕೊಳ್ಳಬೇಕು. ಇದಕ್ಕೆ ಸಾಸಿವೆ, ಇಂಗು, ಕೊತ್ತಂಬರಿ ಕಾಳು ಹಾಕಿ 30 ಸೆಕೆಂಡ್ ಹುರಿದು ಈಗ ಒಂದು ಕಪ್ ತೆಂಗಿನ ತುರಿ ಹಾಕಿಕೊಂಡು 1 ನಿಮಿಷ ಹುರಿದುಕೊಳ್ಳಿ.
1 ನಿಮಿಷದ ಬಳಿಕ ಒಲೆ ಆಫ್ ಮಾಡಿಕೊಂಡು ಈ ಪದಾರ್ಥಗಳನ್ನು ಒಂದು ಮಿಕ್ಸಿ ಜಾರ್‌ಗೆ ಹಾಕಿ ಅಗತ್ಯ ಇರುವಷ್ಟು ನೀರು ಸಹ ಹಾಕಿಕೊಂಡು ರುಬ್ಬಿಕೊಳ್ಳಬೇಕು. ನುಣ್ಣಗೆ ರುಬ್ಬಿಕೊಂಡು ಅದನ್ನು ತೆಗೆದಿಟ್ಟುಕೊಳ್ಳಿ. ಈಗ ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ಎಣ್ಣೆ, ಉದ್ದಿನ ಬೇಳೆ, ಒಣ ಮೆಣಸು, ಸಾಸಿವೆ, ಇಂಗು, ಕರಿಬೇವು, ರುಚಿಗೆ ತಕ್ಕಷ್ಟು ಉಪ್ಪು, ಸಾರಿನ ಪುಡಿ, ಹುಣಸೆ ಹುಳಿ, ಬೆಲ್ಲ ಸಹ ಹಾಕಿಕೊಳ್ಳಬೇಕು.
ಈಗ ಮಿಕ್ಸಿಯಲ್ಲಿ ರುಬ್ಬಿದ್ದ ಮಸಾಲೆಯನ್ನು ಇದಕ್ಕೆ ಹಾಕಿ ಗೊಜ್ಜಿನ ಹದ ಬರುವಷ್ಟು ನೀರು ಹಾಕಿ 2 ನಿಮಿಷ ಕುದಿಬರಲು ಬಿಡಬೇಕು. ಕೈ ಬಿಡದೆ ಮಿಕ್ಸ್ ಮಾಡುತ್ತಾ ಇರಿ. ಇಲ್ಲದಿದ್ದರೆ ತಳ ಹಿಡಿಯಬಹುದು. 2 ನಿಮಿಷದ ಬಳಿಕ ಇಳಿಸಿಕೊಂಡರೆ ನಿಮ್ಮ ಮುಂದೆ ರುಚ ರುಚಿಯ ಕಾಯಿ ಗೊಜ್ಜು ರೆಡಿಯಾಗುತ್ತದೆ.
ಇದನ್ನು ನೀವು ಬಿಸಿ ಬಿಸಿ ಅನ್ನದೊಂದಿಗೆ ಇದನ್ನು ಕಲಸಿಕೊಂಡು ಸವಿಯಬಹುದು, ಹಾಗೆ ತಿಂಡಿಯೊಂದಿಗೆ ಚಟ್ನಿಯಂತಹ ರುಚಿ ನೀಡಲಿದೆ. ನೀವು ಕೂಡ ಈ ರೀತಿಯ ಖಾದ್ಯವನ್ನು ಮನೆಯಲ್ಲಿ ಮಾಡಿ ನೋಡಿ. ಅದ್ರಲ್ಲೂ ಊಟದೊಂದಿಗೆ ಸವಿಯಲು ಮಾಡಿದ್ರೆ ನಿತ್ಯವು ಇದನ್ನೇ ಕೇಳುತ್ತಾರೆ.



Click it and Unblock the Notifications