Latest Updates
-
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ?
ಹಾಲು ಇಲ್ಲದೆ ತೆಂಗಿನ ಹಾಲಿನಲ್ಲಿ ಅದ್ಭುತ ಗಿಣ್ಣು ಮಾಡಿ..! 5 ನಿಮಿಷ ಸಾಕು..!
ಹಸುವಿನ ಹಾಲು ಎಷ್ಟು ಪ್ರಯೋಜನಕಾರಿ ಎಂಬುದನ್ನು ನಾವು ಅರಿತ್ತಿದ್ದೇವೆ. ಹಾಲಿನಿಂದ ಹಲವು ರೀತಿಯ ತಿಂಡಿ, ಖಾದ್ಯ ಮಾಡಬಹುದು ಎಂಬುದು ಕೂಡ ನಮಗೆ ತಿಳಿದಿದೆ. ಪಾಯಸದಂತಹ ಸಿಹಿ ಮಾಡುವಾಗ ಹಾಲು ಇರಲೇಬೇಕು. ಹಾಗೆ ಹಾಲಿನ ಸಂಪೂರ್ಣ ಸಿಹಿಯನ್ನು ಸವಿಯಬೇಕಾದರೆ ನಾವು ಗಿಣ್ಣು ಮಾಡಿ ಸವಿಯಬೇಕಾಗುತ್ತದೆ.
ಹಾಲಿನ ಗಿಣ್ಣು ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ. ಮನೆಯಲ್ಲಿ ಗಿಣ್ಣು ಮಾಡಿದ್ರೆ ಎಲ್ಲರ ಬಾಯಲ್ಲೂ ನೀರು ಬರುತ್ತೆ. ಮಕ್ಕಳಂತು ಗಿಣ್ಣು ಸಿಹಿಯನ್ನು ಬಹಳ ಇಷ್ಟಪಟ್ಟು ಸವಿಯುತ್ತಾರೆ. ಶುದ್ಧ ಹಾಲಿನಿಂದ ಗಿಣ್ಣು ಮಾಡಿದಾಗ ಅದರ ಸಿಹಿಗೆ ಮತ್ತೆ ಮತ್ತೆ ಮಾಡಿ ಸವಿಯುತ್ತಾರೆ. ಹಸು ಕರು ಹಾಕಿದ 11 ದಿನಗಳವರೆಗೆ ನೀಡುವ ಹಾಲಿನಿಂದ ತಯಾರಿಸುವುದಾಗಿದೆ. ಆದ್ರೆ ಹಾಲು ಇಲ್ಲದೆಯೇ ಗಿಣ್ಣು ಮಾಡುವುದು ಹೇಗೆ ಎಂಬುದು ನಿಮಗೆ ಗೊತ್ತಾ?

ಹಾಲು ಬಳಸದೆ ತೆಂಗಿನಕಾಯಿ ಹಾಲಿನಿಂದ ಗಿಣ್ಣು ಮಾಡಬಹುದು ಎಂಬುದು ನಿಮಗೆ ಗೊತ್ತಾ? ಹೌದು ತೆಂಗಿನ ಕಾಯಿಯ ಹಾಲನ್ನು ಹಲವು ರೀತಿಯ ತಿಂಡಿಗಳಲ್ಲಿ ಸಿಹಿ ಖಾದ್ಯಗಳಲ್ಲಿ ಬಳಸಲಾಗುತ್ತದೆ. ನಾವಿಂದು ಹಾಲಿನ ಬದಲು ತೆಂಗಿನಕಾಯಿ ಹಾಲಿನಿಂದ ಗಿಣ್ಣು ಮಾಡುವ ಕುರಿತು ತಿಳಿದುಕೊಳ್ಳೋಣ. ಈ ತೆಂಗಿನ ಕಾಯಿ ಹಾಲಿನಲ್ಲಿ ಮಾಡುವ ಗಿಣ್ಣು ಕೂಡ ಹಾಲಿನ ಗಿಣ್ಣು ಸವಿದಂತೆಯೇ ರುಚಿ ನೀಡಲಿದೆ.
ತೆಂಗಿನ ಕಾಯಿ ಹಾಲಿನ ಗಿಣ್ಣು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಬೇಕಾಗುತ್ತದೆ? ಮಾಡಲು ಯಾವ ವಿಧಾನ ಅನುಸರಿಸಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ತೆಂಗಿನಕಾಯಿ ಹಾಲಿನ ಗಿಣ್ಣು ಮಾಡಲು ಬೇಕಾಗುವ ವಸ್ತುಗಳು
- ತೆಂಗಿನಕಾಯಿ ತುರಿ- 2 ಕಪ್
- ನೀರು - 1 ಬೌಲ್
- ಕಾರ್ನ್ ಪ್ಲೋರ್ - ಕಾಲು ಕಪ್
- ಸಕ್ಕರೆ
ತೆಂಗಿನಕಾಯಿ ಹಾಲಿನ ಗಿಣ್ಣು ಮಾಡುವುದು ಹೇಗೆ?
ಮೊದಲು ತೆಂಗಿನಕಾಯಿಯ ಬಿಳಿ ಭಾಗವನ್ನು ಮಾತ್ರ ತುರಿದು ಇಟ್ಟುಕೊಳ್ಳಬೇಕು. ಒಂದು ದೊಡ್ಡ ತೆಂಗಿನಕಾಯಿ ತೆಗೆದುಕೊಂಡರೆ ಸಾಕು. ತುರಿದುಕೊಳ್ಳುವಾಗ ಬಿಳಿ ಭಾಗದ ಕಾಯಿ ಮಾತ್ರ ಬಳಸಿ. ಅಳತೆಗೆ ಒಂದು ಕಪ್ ತೆಗೆದುಕೊಳ್ಳಿ ಈ ಕಪ್‌ನಲ್ಲಿ 2 ಕಪ್ ತುರಿ ತೆಗೆದುಕೊಂಡು ಒಂದು ಮಿಕ್ಸಿ ಜರ್‌ಗೆ ಹಾಕಿ ರುಬ್ಬಿಕೊಳ್ಳಬೇಕು. ಇದು ಪುಡಿ ಪುಡಿಯಾಗಬೇಕು. ಬಳಿಕ ಇದಕ್ಕೆ ಒಂದು ಕಪ್ ನೀರು ಹಾಕಿಕೊಳ್ಳಿ.
ನೀರು ಹಾಕಿದ ಬಳಿಕ ಎಷ್ಟು ನುಣ್ಣಗೆ ಮಾಡಲು ಸಾಧ್ಯವೋ ಅಷ್ಟು ನುಣ್ಣಗೆ ರುಬ್ಬಿಕೊಳ್ಳಬೇಕು. ನಂತರ ಒಂದು ಕಾಟನ್ ಬಟ್ಟೆ ಇಟ್ಟುಕೊಂಡು ಇದನ್ನು ಜರಡಿ ಹಿಡಿಯಬೇಕು. ಕೇವಲ ತೆಂಗಿನ ಹಾಲು ಮಾತ್ರವೇ ತೆಗೆಯಬೇಕು. ನಂತರ ಈ ಹಾಲಿಗೆ ಒಂದು ಕಪ್ ನೀರು ಹಾಕಿ. ತೆಳು ಬಟ್ಟೆಯ ಬಳಸಿ ಈ ಹಾಲು ಜರಡಿ ಹಿಡಿದುಕೊಳ್ಳಿ. ಇದೇ ರೀತಿಯಲ್ಲಿ ಅಷ್ಟೂ ತೆಂಗಿನ ತುರಿಯಲ್ಲಿ ಹಾಲು ತೆಗೆದುಕೊಳ್ಳಿ.
ಈಗ ಅದೇ ಕಪ್‌ನಲ್ಲಿ ಕಾಲು ಕಪ್ ಕಾರ್ನ್ ಪ್ಲೋರ್ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಬೇಕು, ಗಂಟು ಆಗದಂತೆ ಮಿಕ್ಸ್ ಮಾಡಬೇಕು. ಈಗ ಒಂದು ಅಚ್ಚು ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ಎಲ್ಲಾ ತೆಂಗಿನ ಹಾಲು ಹಾಕಿ ನಿಮಗೆ ಎಷ್ಟು ರುಚಿ ಬೇಕೋ ಅಷ್ಟು ಸಕ್ಕರೆ ಹಾಕಿಕೊಳ್ಳಿ. ನಿಮ್ಮ ಕಣ್ಣಳತೆಯಲ್ಲಿ ಸಕ್ಕರೆ ಬಳಸಿ. ಸಕ್ಕರೆ ಕರಗಲು ಸ್ವಲ್ಪ ತಿರುಗಿಸಿ ನಂತರ ಒಲೆ ಮೇಲೆ ಇಟ್ಟು ಉರಿ ಮಧ್ಯಮದಲ್ಲಿ ಇಟ್ಟು ತಳ ಹಿಡಿಯದಂತೆ ಚೆನ್ನಾಗಿ ಮಿಕ್ಸ್ ಮಾಡುತ್ತಾ ಇರಿ.
ನಿಧಾನವಾಗಿ ಈ ಹಾಲು ಗಟ್ಟಿಯಾಗಲು ಆರಂಭಿಸುತ್ತದೆ. 5 ನಿಮಿಷದಲ್ಲಿ ನಿಧಾನವಾಗಿ ಗಟ್ಟಿಯಾಗುತ್ತದೆ. ದೋಸೆ ಹಿಟ್ಟಿನಂತೆ ಆದಾಗ ಒಲೆ ಆಫ್ ಮಾಡಿಕೊಳ್ಳಿ. ಹಾಗೆ ತಿರುಗಿಸುವುದನ್ನು ಬಿಡಬೇಡಿ. 2 ನಿಮಿಷ ಬಿಟ್ಟು ಒಂದು ಅಚ್ಚು ಪಾತ್ರೆಗೆ ಹಾಕಿಕೊಳ್ಳಿ. ಗಾಜಿನ ಪಾತ್ರೆ ಅಥವಾ ಊಟದ ಬಾಕ್ಸ್‌ಗೆ ಇದನ್ನು ಹಾಕಬಹುದು. ನಂತರ ಅರ್ಧ ಗಂಟೆ ಬಿಟ್ಟು ಫ್ರೀಡ್ಜ್‌ನಲ್ಲಿ ಇಡಬೇಕು. ಫ್ರಿಡ್ಜ್ ಇಲ್ಲದಿದ್ದರೆ ತಣ್ಣೀರಿನಲ್ಲಿ ಈ ಪಾತ್ರೆ ಅದ್ದಿ ಇಡಬೇಕು. ಕೆಲ ಹೊತ್ತಿನಲ್ಲಿ ಗಟ್ಟಿಯಾಗಿ ಸವಿಯಲು ರುಚಿ ರುಚಿಯಾದ ಗಿಣ್ಣು ರೆಡಿಯಾಗಿರುತ್ತದೆ.



Click it and Unblock the Notifications