Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅತ್ಯದ್ಭುತ ರುಚಿಯ ತೆಂಗಿನಕಾಯಿ ತುರಿ ಇಡ್ಲಿ ಮಾಡಿ ನೋಡಿ..!
ನೀವು ಬ್ರೇಕ್ ಫಾಸ್ಟ್‌ಗೆ ಎಷ್ಟೆಲ್ಲಾ ವಿಧದ ಇಡ್ಲಿ ಸವಿದಿರುತ್ತೀರಿ. ಇಡ್ಲಿ ಆರೋಗ್ಯಕ್ಕೆ ಅತ್ಯಂತ ಒಳ್ಳೆಯ ತಿಂಡಿಯೂ ಹೌದು. ಕಡಿಮೆ ಎಣ್ಣೆಯ ಪದಾರ್ಥದಲ್ಲಿ ಹೆಚ್ಚು ಫೈಬರ್ ತುಂಬಿರುತ್ತೆ. ಹೀಗಾಗಿ ಮಕ್ಕಳಿಂದ ಹಿಡಿದು ಹಿರಿಯರು, ಕಾಯಿಲೆ ಇದ್ದವರು ಕೂಡ ಇಡ್ಲಿ ಸವಿಯಲು ಮುಂದಾಗುತ್ತಾರೆ. ಈ ಇಡ್ಲಿಯಲ್ಲಿ ಹತ್ತಾರು ವಿಧಗಳಿವೆ. ಮಸಾಲೆ ಇಡ್ಲಿ, ರವೆ ಇಡ್ಲಿ, ಮಲ್ಲಿಗೆ ಇಡ್ಲಿ, ತರಕಾರಿ ಇಡ್ಲಿ ಹೀಗೆ ಹತ್ತಾರು ವಿಧದಲ್ಲಿ ಇಡ್ಲಿ ಮಾಡೋದು ನೋಡಿದ್ದೇವೆ. ಈಗಂತು ಹತ್ತಾರು ರೀತಿಯ ಹೊಸ ಬಗೆಯ ಇಡ್ಲಿಗಳು ಕೂಡ ಸಿಗುತ್ತವೆ.
ಇಂದು ನಾವು ಹೊಸ ಬಗೆಯ ಒಂದು ಇಡ್ಲಿ ಮಾಡುವ ಕುರಿತು ತಿಳಿದುಕೊಳ್ಳೋಣ ಈ ಇಡ್ಲಿ ಮಾಡಲು ಹಿಂದಿನ ದಿನ ಹಿಟ್ಟು ರುಬ್ಬುವುದು ಬೇಡ, ಅದೇ ದಿನ ಹಿಟ್ಟು ಸಹ ಮಾಡಿಕೊಂಡು ಈ ಮೃದುವಾದ ರುಚಿ ರುಚಿಯ ಇಡ್ಲಿ ಮಾಡಬಹುದು, ಹಾಗಾದ್ರೆ ಈ ತೆಂಗಿನಕಾಯಿ ಇಡ್ಲಿ ಮಾಡುವುದು ಹೇಗೆ ಎಂಬುದನ್ನು ತಿಳಿಯೋಣ. ತೆಂಗಿನಕಾಯಿ ತುರಿ ಬಳಸಿ ಈ ಇಡ್ಲಿ ಮಾಡಲಾಗುತ್ತದೆ.

ತೆಂಗಿನಕಾಯಿ ತುರಿ ಹಾಕುವುದರಿಂದ ಇಡ್ಲಿ ರುಚಿಕರವಾಗಿ ಹಾಗೆ ಮತ್ತಷ್ಟು ಮೃದುವಾಗಿ ಬರುತ್ತದೆ. ಒಮ್ಮೆ ನೀವು ಈ ರೀತಿಯ ಇಡ್ಲಿ ಮಾಡಿ ಸವಿದರೆ ಮುಂದೆ ಮತ್ತೆ ಮತ್ತೆ ಮಾಡಿ ಸವಿಯಲು ಮುಂದಾಗುತ್ತೀರಿ. ಹಾಗಾದ್ರೆ ಈ ತೆಂಗಿನ ಕಾಯಿ ತುರಿಯಲ್ಲಿ ಇಡ್ಲಿ ಮಾಡುವುದು ಹೇಗೆ? ತೆಂಗಿನಕಾಯಿ ತುರಿ ಇಡ್ಲಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ತೆಂಗಿನಕಾಯಿ ತುರಿಯ ಇಡ್ಲಿ ಮಾಡಲು ಬೇಕಾಗುವ ಪದಾರ್ಥಗಳು
- ದಪ್ಪ ಅವಲಕ್ಕಿ - ಅರ್ಧ ಕಪ್
- ಇಡ್ಲಿ ರವೆ - ಒಂದೂವರೆ ಕಪ್
- ಉಪ್ಪು
- ಸೋಡಾ
- ಎಣ್ಣೆ
ತೆಂಗಿನಕಾಯಿ ತುರಿಯ ಇಡ್ಲಿ ಮಾಡುವುದು ಹೇಗೆ?
ಮೊದಲಿಗೆ ಒಂದು ಬೌಲ್ ತೆಗೆದುಕೊಂಡು ಅದಕ್ಕೆ ಅರ್ಧ ಬೌಲ್ ದಪ್ಪ ಅವಲಕ್ಕಿ ಹಾಕಿಕೊಂಡು ನೀರು ಹಾಕಿ ತೊಳೆದುಕೊಳ್ಳಬೇಕು. ಮೂರು ಬಾರಿ ತೊಳೆದು ನೀರು ಹಿಂಡಿಕೊಳ್ಳಿ. ನಂತರ ನೀರು ಹಾಕಿ ನೆನೆಯಲು ಬಿಡಿ. 1 ಗಂಟೆ ನೆನೆಯಲು ಇಟ್ಟರೆ ಸಾಕು. ಈಗ ಅಳತೆ ಕಪ್‌ನಲ್ಲಿ ಒಂದೂವರೆ ಕಪ್ ಇಡ್ಲಿ ರವೆ ತೆಗೆದುಕೊಂಡು ಚೆನ್ನಾಗಿ ತೊಳೆದುಕೊಳ್ಳಬೇಕು. ನಂತರ ರವೆಯನ್ನೂ 1 ಗಂಟೆ ನೆನೆಯಲು ಬಿಡಬೇಕು.
ಈಗ 1 ಗಂಟೆಯ ಬಳಿಕ ಮಿಕ್ಸಿ ಜಾರ್ ತೆಗೆದುಕೊಂಡಿರುವ ನೆಂದಿರುವ ಅವಲಕ್ಕಿಯನ್ನು ಹಿಂಡಿಕೊಂಡು ಹಾಕಿಕೊಳ್ಳಿ. ಈಗ ಅಳತೆಯ ಬೌಲ್‌ನಲ್ಲಿ ತೆಂಗಿನ ಕಾಯಿ ತುರಿಯನ್ನು ಹಾಕಿಕೊಳ್ಳಿ. ಹಾಗೆ ಒಂದು ಕಪ್ ಮೊಸರು ಸಹ ಹಾಕಿಕೊಂಡು ರುಬ್ಬಿಕೊಳ್ಳಬೇಕು. ನೀರು ಹಾಕದೆಯೇ ರುಬ್ಬಿಕೊಳ್ಳಬೇಕು. ಇದನ್ನು ಇನ್ನೊಂದು ಪಾತ್ರೆಗೆ ಹಾಕಿಕೊಳ್ಳಿ.
ಈಗ ನೆಂದಿರುವ ರವೆಯನ್ನೂ ಕೂಡ ಮಿಕ್ಸಿಗೆ ಹಾಕಿಕೊಂಡು ರುಬ್ಬಿಕೊಳ್ಳಬೇಕು. ನಂತರ ಅದನ್ನು ಹಿಟ್ಟಿನ ಜೊತೆಗೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಈಗ ರುಬ್ಬಿದ ಹಿಟ್ಟು ಹದ ಬರಲು 2 ಗಂಟೆ ಮುಚ್ಚಿಡಿ. ಈಗ ಉಪ್ಪು, ಸೋಡಾ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈಗ ಇಡ್ಲಿ ಅಚ್ಚಿಗೆ ಎಣ್ಣೆ ಹಚ್ಚಿಕೊಂಡು ಅದಕ್ಕೆ ಈ ಹಿಟ್ಟನ್ನು ಹಾಕಿಕೊಂಡು ಬೇಯಲು ಬಿಡಿ. ಇಷ್ಟಾದರೆ ನಿಮ್ಮ ಮುಂದೆ ತೆಂಗಿನಕಾಯಿ ತುರಿ ಇಡ್ಲಿ ರೆಡಿಯಾಗುತ್ತದೆ, ಇದು ಅತ್ಯಂತ ಮೃದುವಾದ ಇಡ್ಲಿ ಹಾಗೆ ರುಚಿಕರವೂ ಹೌದು.
ನೀವು ಕೂಡ ಈ ಇಡ್ಲಿಯನ್ನು ಒಮ್ಮೆ ಮನೆಯಲ್ಲಿ ಟ್ರೈ ಮಾಡಿ ನೋಡಿ.



Click it and Unblock the Notifications