Latest Updates
-
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಹೊಸ ರೀತಿಯ ಟೊಮೆಟೊ ಚಕ್ಕುಲಿ ಸುಲಭವಾಗಿ ಮಾಡಿ: ಇಲ್ಲಿದೆ ಮಾಡುವ ವಿಧಾನ -
ಶನಿ ಸಂಚಾರ 2026: ಮಾರ್ಚ್ನಿಂದ ಈ 5 ರಾಶಿ ಜನರು ಎಚ್ಚರವಹಿಸಿ, ವೈಯಕ್ತಿಕ ಹಾನಿ ಸಂಭವ! -
ಮಸಾಲೆ ಲೆಸ್ ವೈಟ್ ಪಲಾವ್; ವಿಭಿನ್ನ ರುಚಿ ವಿಶೇಷ ಖಾದ್ಯ ಸಿದ್ದಮಾಡಿ ನೋಡಿ! -
ಅಂತಾರಾಷ್ಟ್ರೀಯ ಮಹಿಳಾ ದಿನ: ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗುತ್ತಿದೆ ರಕ್ತಹೀನತೆ, ಮಹಿಳೆಯರೇ ಬಲಿಪಶು ಏಕೆ? -
March 08 Horoscope: ಯಾರ ಬಳಿಯಾದರು ಸಾಲ ಪಡೆಯುವ ಆಲೋಚನೆ ಮುಂದೂಡಿ! -
ನೀನೇ ನನ್ನ ಶಕ್ತಿ.. ನಿಮ್ಮ ಪ್ರಿಯತಮೆಗೆ ಕಳಿಸಿ ಈ ರೊಮ್ಯಾಂಟಿಕ್ ಶುಭಾಶಯಗಳು! ಆಕೆಯ ಮುಖದಲ್ಲಿ ನಗು ತರಿಸಿ -
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ -
ಹುಷಾರ್.. ಗಂಡನಿಗೆ ಈ 4 ಮಾತು ಹೇಳ್ತೀರಾ? ಮನೇಲಿ ಬೆಂಕಿ ಉರಿಯುತ್ತೆ.. ಹೀಗೆ ಮಾಡಿದ್ರೆ ಸಂಸಾರದಲ್ಲಿ ಸುಖ ಇರುತ್ತೆ
ಆರೋಗ್ಯ ವೃದ್ಧಿಯ ಚೌಳಿಕಾಯಿ ಪಲ್ಯ ಈ ರೀತಿ ಮಾಡಿ..! ಶುಗರ್ ಇದ್ದವರು ಕೂಡ ಸವಿಯಬಹುದು!!
ನೀವು ಊಟದ ಜೊತೆಗೆ ಇಲ್ಲವೆ ತಿಂಡಿಗೆ ಯಾವುದಾದರೊಂದು ಪಲ್ಯ ಮಾಡಲು ಆಲೋಚಿಸಿದ್ದರೆ ಅದರಲ್ಲು ಆರೋಗ್ಯಕರ ತರಕಾರಿಯ ಪಲ್ಯ ಮಾಡಲು ಇಚ್ಛಿಸಿದ್ದರೆ ಈ ರೀತಿ ಗೋರೆಕಾಯಿ ಅಥವಾ ಚೌಳಿಕಾಯಿ ಎಂದು ಕರೆಯುವ ಆರೋಗ್ಯಯುತ ಪಲ್ಯ ಮಾಡಿ ನೋಡಿ. ಗೋರಿಕಾಯಿಯಲ್ಲಿ ಗ್ಲೈಸೆಮಿಕ್ ಸೂಚ್ಯಂಕ ಕಡಿಮೆ ಇದೆ. ಹೀಗಾಗಿ ಇದು ಸಕ್ಕರೆ ಕಾಯಿಲೆ ಇರುವವರಿಗೂ ಒಳ್ಳೆಯ ಧನಾತ್ಮಕ ಔಷಧವಾಗಿದೆ.
ಈ ಚೌಳಿಕಾಯಿಯಲ್ಲಿ ಪ್ರೋಟಿನ್, ಕ್ಯಾಲ್ಸಿಯಂ ಹಾಗೆ ಫಾಸ್ಪರಸ್ ಅಂಶ ಹೆಚ್ಚಾಗಿರುತ್ತದೆ. ಇದು ಮೂಳೆಯ ಆರೋಗ್ಯಕ್ಕೆ ಬಹಳ ಉತ್ತಮ ಹೀಗಾಗಿ ಮಕ್ಕಳು ಇದನ್ನು ಹೆಚ್ಚಾಗಿ ಸವಿದರೆ ಆರೋಗ್ಯಕ್ಕೆ ಬಹಳ ಒಳ್ಳೆಯದು. ಹಾಗೆ ನೀವು ಊಟದ ಜೊತೆಗೆ ತಿಂಡಿಯನ್ನು ಕೂಡ ಸವಿಯಲು ಈ ಗೋರೆಕಾಯಿ ರುಚಿಕರವಾಗಿರುತ್ತೆ.

ಹಾಗೆ ಇದರಲ್ಲಿ ನಾರಿನ ಅಂಶವಿರುವುದು ನಿಮ್ಮ ಜೀರ್ಣಕ್ರಿಯೆಗೆ ಬಹಳ ಉಪಕಾರಿ. ಹಾಗಾದ್ರೆ ಇಷ್ಟೆಲ್ಲಾ ಆರೋಗ್ಯಕರ ಅಂಶ ಹೊಂದಿರುವ ಈ ಗೋರಿಕಾಯಿ ಪಲ್ಯ ಮಾಡುವುದು ಹೇಗೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ. ಚೌಳಿಕಾಯಿಯ ಅದ್ಭುತ ರುಚಿಯ ಪಲ್ಯ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಗೋರಿಕಾಯಿ ಪಲ್ಯ ಮಾಡಲು ಈ ವಸ್ತುಗಳು ಬೇಕು
- ಗೋರಿಕಾಯಿ
- ಈರುಳ್ಳಿ - 3
- ಟೊಮೆಟೋ
- ತೆಂಗಿನಕಾಯಿ
- ಖಾರದ ಪುಡಿ
- ಧನಿಯ ಪುಡಿ
- ಗರಂ ಮಸಾಲ
- ಅರಿಶಿಣದ ಪುಡಿ
- ಸಾಸಿವೆ
- ಕಡಲೆಬೇಳೆ
- ಉದ್ದಿನಬೇಳೆ
- ಕೊತ್ತಂಬರಿ ಸೊಪ್ಪು
- ಕರಿಬೇವಿನ ಸೊಪ್ಪು
- ಉಪ್ಪು
- ಎಣ್ಣೆ
ಗೋರಿಕಾಯಿ ಪಲ್ಯ ಮಾಡಲು ವಿಧಾನವಿದು
ಮೊದಲು ಒಂದು ಕುಕ್ಕರ್‌ಗೆ ಚಿಕ್ಕದಾಗಿ ಹೆಚ್ಚಿಕೊಂಡಿರುವ ಗೋರಿಕಾಯಿಯನ್ನು ಹಾಕಿಕೊಂಡು ಅದಕ್ಕೆ ಉಪ್ಪು, ಅರಶಿಣ, ಕಾಯಿ ಮುಚ್ಚುವಷ್ಟು ನೀರು ಹಾಕಿಕೊಂಡು ಮಿಕ್ಸ್ ಮಾಡಿ ಕುಕ್ಕರ್ ಮುಚ್ಚಳ ಮುಚ್ಚಿ 1 ಸೀಟಿ ಹೊಡೆಯಲು ಬಿಡಿ. ಅನಂತರ ಕುಕ್ಕರ್ ತೆಗೆದು ಬದಿಗಿಟ್ಟುಕೊಳ್ಳಿ.
ಈಗ ಒಂದು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಬಳಿಕ ಇದಕ್ಕೆ ಸಾಸಿವೆ, ಕಡಲೆ ಬೇಳೆ, ಉದ್ದಿನ ಬೇಳೆ ಸೇರಿಸಿ ಅನಂತರ ಕರಿಬೇವು, ಈರುಳ್ಳಿ ಹಾಕಿ 3 ನಿಮಿಷ ಫ್ರೈ ಮಾಡಿ. ಅನಂತರ ಇದಕ್ಕೆ ಖಾರದ ಪುಡಿ, ಧನಿಯಾ ಪುಡಿ, ಗರಂ ಮಸಾಲೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
ಈಗ ಚಿಕ್ಕದಾಗಿ ಕತ್ತರಿಸಿಕೊಂಡಿರುವ ಟೊಮೆಟೋ, ಉಪ್ಪು ಸೇರಿಸಿ 3 ನಿಮಿಷ ಮತ್ತೆ ಫ್ರೈ ಮಾಡಿಕೊಳ್ಳಬೇಕು. ಇಗ ತೆಂಗಿನಕಾಯಿ ತುರಿಯನ್ನು ಸಹ ಸೇರಿಸಿಕೊಂಡು 1 ನಿಮಿಷ ಬಿಡಿ. ಈಗ ಕುಕ್ಕರ್‌ನಿಂದ ಗೋರೆಕಾಯಿಯನ್ನು ತೆಗೆದು ಬಾಣಲೆಗೆ ಹಾಕಿಕೊಳ್ಳಿ. ನೀರು ಇಲ್ಲದಂತೆ ಹಿಂಡಿಕೊಂಡು ಇದಕ್ಕೆ ಹಾಕಿಕೊಳ್ಳಬೇಕು. ಕೊನೆಯದಾಗಿ ಇದಕ್ಕೆ ಕೊತ್ತಂಬರಿ ಸೊಪ್ಪು ಹಾಕಿಕೊಂಡು ಮಿಕ್ಸ್ ಮಾಡಿಕೊಂಡರೆ ನಿಮ್ಮ ಮುಂದೆ ಪಲ್ಯ ರೆಡಿಯಾಗುತ್ತದೆ.
ನೀವು ಕೂಡ ಮನೆಯಲ್ಲಿ ತಿಂಡಿ, ಊಟಕ್ಕೆ ಈ ಆರೋಗ್ಯಕರ ಪಲ್ಯವಾಗಿರುವ ಚೌಳಿಕಾಯಿಯ ಪಲ್ಯ ಮಾಡಿಕೊಂಡು ಸವಿದು ನೋಡಿ. ಖಂಡಿತ ನಿಮಗೆ ಇಷ್ಟವಾಗುತ್ತೆ. ಮಾಡೋದು ಕೂಡ ತುಂಬಾನೆ ಸುಲಭ.



Click it and Unblock the Notifications