Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ದೊಡ್ಲಿ ಚಿತ್ರಾನ್ನ ಮಾಡಿದ್ರೆ ಒಂದೂ ಚೂರು ಉಳಿಯಲ್ಲ..! ಅಷ್ಟು ರುಚಿ ಇದು..!
ಚಿತ್ರಾನ್ನ ಎಲ್ಲರಿಗೂ ಇಷ್ಟವಾಗುವಂತಹ ತಿಂಡಿ. ಬ್ರೇಕ್‌ಫಾಸ್ಟ್‌ಗೆ ಕಡಿಮೆ ಸಮಯದಲ್ಲಿ ಮಾಡಬಹುದಾದ ವಸ್ತು ಯಾವುದಾದರು ಇದ್ರೆ ಅದು ಚಿತ್ರಾನ್ನ. ನಿನ್ನೆ ಉಳಿದ ಅನ್ನವನ್ನ ಚಿತ್ರಾನ್ನ ಮಾಡುವುದು ಕಾಮನ್, ಹಾಗೆ ಚಿತ್ರಾನ್ನ ಅಂದ್ರೆ ಕೆಲವರಿಗೆ ಇಷ್ಟವಾಗೋದಿಲ್ಲ, ಮತ್ತೆ ಕಲವರಿಗೆ ಚಿತ್ರಾನ್ನ ಫೇವರಿಟ್ ಫುಡ್ ಕೂಡ ಆಗಿರುತ್ತೆ. ಇನ್ನು ಚಿತ್ರಾನ್ನದ ಹತ್ತು ಹಲವು ಬಗೆಯನ್ನು ನೀವು ಸವಿದಿರಬಹುದು.
ಚಿತ್ರಾನ್ನವನ್ನ ಹತ್ತಾರು ರೀತಿ ಮಾಡುತ್ತಾರೆ. ಕೆಲವೊಂದು ಚಿತ್ರವನ್ನವು ಅತ್ಯಂತ ರುಚಿಕರವಾಗಿ, ಘಮ ಘಮ ಎನ್ನನುವ ಸುವಾಸನೆ ಬರುವಂತೆಯೂ ಮಾಡಲಾಗುತ್ತೆ. ಅದ್ರಲ್ಲೂ ನಿಂಬೆ ಹುಳಿ, ಮಾವಿನಕಾಯಿ, ಮಸಾಲೆ ಚಿತ್ರಾನ್ನ, ಒಗ್ಗೆಣೆ ಚಿತ್ರಾನ್ನ ಹೀಗೆ ಹತ್ತಾರು ಬಗೆ ನಾವು ನೋಡಿದ್ದೇವೆ. ಹೋಟೆಲ್‌ನಲ್ಲಿ ಅದ್ಭುತ ರುಚಿಯ ಚಿತ್ರಾನ್ನವನ್ನು ಕೂಡ ನಾವು ಸವಿದಿರುತ್ತೇವೆ.

ಆದ್ರೆ ನೀವು ಎಂದಾದ್ರು ದೊಡ್ಲಿಕಾಯಿ ಅಥವಾ ಹೇರಳೆಕಾಯಿ ಬಳಸಿ ಮಾಡುವಂತಹ ರುಚಿ ರುಚಿಯ ಚಿತ್ರಾನ್ನ ಸವಿದಿದ್ದೀರಾ? ಹೌದು ಚಿತ್ರಾನ್ನದ ವಿಧಗಳಲ್ಲೇ ಇದು ಅತ್ಯಂತ ರುಚಿಯ ಚಿತ್ರಾನ್ನವಾಗಿದೆ. ದೊಡ್ಲಿ ಕಾಯಿಯನ್ನು ನೀವು ನೋಡಿರಬಹುದು. ಇದರ ಉಪ್ಪಿನಕಾಯಿ ನೆನೆದರೆ ಬಾಯಲ್ಲಿ ನೀರು ಬರುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ಈ ದೊಡ್ಲಿ ಕಾಯಿ ನೋಡಲು ದೊಡ್ಡ ನಿಂಬೆ ಹಣ್ಣಿನಂತೆ ಕಾಣಿಸುತ್ತದೆ.
ಈ ದೊಡ್ಲಿಕಾಯಿಯ ಉಪ್ಪಿನಕಾಯಿ ಅದ್ಭುತ ರುಚಿ ನೀಡುತ್ತದೆ. ಇದರಿಂದ ನಾವು ಚಿತ್ರಾನ್ನಕ್ಕೆ ಬಳಸಿ ಮಾಡಬಹುದು. ಹಾಗಾದ್ರೆ ನಾವಿಂದು ಈ ದೊಡ್ಲಿಕಾಯಿ ಬಳಸಿ ಮಾಡುವಂತ ರುಚಿ ರುಚಿಯ ಚಿತ್ರಾನ್ನ ಮಾಡುವ ಕುರಿತು ತಿಳಿದುಕೊಳ್ಳೋಣ. ಈ ದೊಡ್ಲಿ ಚಿತ್ರಾನ್ನ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ದೊಡ್ಲಿ ಚಿತ್ರಾನ್ನ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಅನ್ನ
- ದೊಡ್ಲಿ ಕಾಯಿ - 1
- ಹಸಿ ಮೆಣಸು
- ಅರಶಿಣ
- ಕಡಲೆ ಬೀಜ
- ಕಡಲೆ ಬೇಳೆ
- ಉದ್ದಿನ ಬೇಳೆ
- ಕರಿಬೇವು
- ಸಾಸಿವೆ
- ಜೀರಿಗೆ
- ಎಣ್ಣೆ
- ಉಪ್ಪು
ದೊಡ್ಲಿ ಚಿತ್ರಾನ್ನ ಮಾಡುವ ವಿಧಾನವೇನು?
ಮೊದಲು ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಅದಕ್ಕೆ ಕಡಲೆ ಬೀಜ ಹಾಕಿ ಫ್ರೈ ಮಾಡಿಕೊಳ್ಳಬೇಕು. ಫ್ರೈ ಆದ ಕಡಲೆ ಬೀಜವನ್ನು ತೆಗೆದಿಟ್ಟುಕೊಳ್ಳಿ. ನಂತರ ಇದೇ ಎಣ್ಣೆಗೆ ಸಾಸಿವೆ, ಜೀರಿಗೆ, ಕಡಲೆ ಬೇಳೆ, ಉದ್ದಿನ ಬೇಳೆ ಹಾಕಿ ಮತ್ತೆ ಫ್ರೈ ಮಾಡಿಕೊಳ್ಳಿ. 1 ನಿಮಿಷದ ಬಳಿಕ ಹಸಿ ಮೆಣಸು, ಕರಿಬೇವು ಹಾಕಿಕೊಂಡು ಫ್ರೈ ಮಾಡಿಕೊಳ್ಳಿ.
ಅನಂತರ ಸಣ್ಣದಾಗಿ ಹೆಚ್ಚಿಕೊಂಡಿರುವ ಈರುಳ್ಳಿಯನ್ನು ಕೂಡ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ಹಾಗೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಂಡು ಗೊಜ್ಜು ಮಾಡಿಕೊಳ್ಳಲು ಫ್ರೈ ಮಾಡಿಕೊಳ್ಳಿ. 3 ನಿಮಿಷದ ಬಳಿಕ ಇದಕ್ಕೆ ಅರಶಿಣ ಹಾಕಿ ಕಲಸಿ ಒಲೆ ಆಫ್ ಮಾಡಿಕೊಳ್ಳಿ.
ಈಗ ಒಂದು ಬೌಲ್‌ನಲ್ಲಿ ಅನ್ನ ತೆಗೆದುಕೊಂಡು ಚೆನ್ನಾಗಿ ಹುಡಿ ಹುಡಿಯಾಗಿ ಬರುವಂತೆ ಮಾಡಿಕೊಳ್ಳಿ. ಅನಂತರ 2 ದೊಡ್ಲಿಕಾಯಿಯನ್ನು ಕತ್ತರಿಸಿಕೊಂಡು ಅದರ ರಸವನ್ನು ಹಿಂಡಿಕೊಳ್ಳಬೇಕು. ಒಂದು ಪೀಸ್ ಇಡಿಯಾಗಿ ಹಿಂಡಿಕೊಳ್ಳಬೇಕು. ಅನಂತರ ಈ ಪಾತ್ರೆಗೆ ಕಡಲೆ ಬೀಜ ಹಾಗೂ ಮಸಾಲೆಯನ್ನು ಇದಕ್ಕೆ ಹಾಕಿಕೊಂಡು ಚೆನ್ನಾಗಿ ಕಲಸಿಕೊಳ್ಳಬೇಕು. ಮಸಾಲೆ ಅನ್ನಕ್ಕೆ ಚೆನ್ನಾಗಿ ಹಿಡಿಯುವಂತೆ ಕಲಸಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ದೊಡ್ಲಿ ಚಿತ್ರಾನ್ನ ರೆಡಿಯಾಗುತ್ತದೆ. ನೀವು ಕೂಡ ಒಮ್ಮೆ ಮನೆಯಲ್ಲಿ ಈ ಬಗೆಯ ಚಿತ್ರಾನ್ನ ಮಾಡಿ ನೋಡಿ.



Click it and Unblock the Notifications