Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ತೆಂಗಿನಕಾಯಿ ಬಳಸದೆ ಮಾಡಿ ಈ ಚಟ್ನಿ..! ಎಲ್ಲಾ ತಿಂಡಿಗೂ ರುಚಿ ನೀಡುತ್ತೆ..!
ಬೆಳಗ್ಗೆ ತಿಂಡಿಗೆ ನೀವು ಹಲವು ಬಗೆಯ ಖಾದ್ಯ ಮಾಡುತ್ತೀರಿ. ಕೆಲವೊಮ್ಮೆ ಗಡಿಬಿಡಿ ಇದ್ದರೂ ರುಚಿ ರುಚಿಯಾಗಿ ಮಾಡಲು ಮುಂದಾಗುತ್ತೀರಿ, ಬರೀ ತಿಂಡಿ ರೆಡಿಯಾದರೆ ಸಾಕಾಗುವುದಿಲ್ಲ ಅದರನ್ನು ಸವಿಯಲು ಕೂಡ ಏನಾದರು ಇರಬೇಕಾಗುತ್ತದೆ. ಅದರಲ್ಲೂ ಸಾಂಬಾರ್, ಚಟ್ನಿ, ಗೊಜ್ಜು, ಪಲ್ಯ ಹೀಗೆ ಯಾವುದಾದರು ಒಂದು ವಸ್ತು ಇರಬೇಕು. ಹೀಗೆ ಯಾವುದಾದರು ವಸ್ತು ಇದ್ದರೆ ಆ ತಿಂಡಿಯ ರುಚಿ ಹೆಚ್ಚಾಗುವುದು ಖಚಿತ.
ಬಹುತೇಕ ಎಲ್ಲರ ಮನೆಯಲ್ಲೂ ಬೆಳಗ್ಗೆ ತಿಂಡಿ ತೆಂಗಿನ ಕಾಯಿ ಚಟ್ನಿ ಮಾಡುವುದು ನೋಡಬಹುದು, ಯಾವುದೇ ತಿಂಡಿ ಆಗಿರಲಿ ಅದಕ್ಕೆ ತೆಂಗಿನ ಕಾಯಿ ಚಟ್ನಿ ಸವಿಯುವುದು ಅಂದ್ರೆ ಬಹಳ ಇಷ್ಟವಾಗುತ್ತೆ. ಹಾಗೆ ದೋಸೆ, ಇಡ್ಲಿ, ಚಪಾತಿ, ರೊಟ್ಟಿ, ರೈಸ್ ನಿಂದ ಮಾಡುವ ಯಾವುದೇ ಖಾದ್ಯ ಇದ್ದರೂ ಕೂಡ ಈ ತೆಂಗಿನಕಾಯಿ ಚಟ್ನಿ ಮಾಡಿದ್ರೆ ಅದ್ಭುತ ರುಚಿ ನೀಡಲಿದೆ.

ಆದ್ರೆ ತೆಂಗಿನಕಾಯಿಯೇ ಬಳಸದೆ ಒಂದೊಳ್ಳೆ ರುಚಿಯ ಚಟ್ನಿ ಮಾಡುವುದು ಹೇಗೆ ಅನ್ನೋದು ನಿಮಗೆ ಗೊತ್ತಾ? ಹೌದು ತೆಂಗಿನಕಾಯಿ ಬಳಸದೆ ರುಚಿ ರುಚಿಯ ಚಟ್ನಿ ಮಾಡಿ ಸವಿಯಬಹುದು. ಹಾಗಾದ್ರೆ ಈ ರೀತಿಯ ಚಟ್ನಿ ಮಾಡುವುದು ಹೇಗೆ? ತೆಂಗಿನಕಾಯಿ ಬಳಸದೆ ಚಟ್ನಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ತೆಂಗಿನಕಾಯಿ ಬಳಸದೆ ಚಟ್ನಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಹುರಿಗಡಲೆ
- ರುಚಿಗೆ ತಕ್ಕಷ್ಟು ಉಪ್ಪು
- ಕೊತ್ತಂಬರಿ ಸೊಪ್ಪು
- ಒಣ ಮೆಣಸು
- ಸಾಸಿವೆ
- ಎಣ್ಣೆ
- ಬೆಳ್ಳುಳ್ಳಿ
- ಈರುಳ್ಳಿ
- ಹಸಿ ಮೆಣಸು
- ಜೀರಿಗೆ
ತೆಂಗಿನಕಾಯಿ ಬಳಸದೆ ಚಟ್ನಿ ಮಾಡುವುದು ಹೇಗೆ?
ಮೊದಲು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಬಳಿಕ ಈರುಳ್ಳಿ, ಹಸಿ ಮೆಣಸು ಹಾಕಿ ಫ್ರೈ ಮಾಡಿಕೊಳ್ಳಿ. ನಂತರ ಈ ಎರಡು ವಸ್ತುಗಳು ತಣ್ಣಗಾಗಬೇಕು. ಹೀಗಾಗಿ ಒಂದು ಬೌಲ್‌ಗೆ ಹಾಕಿಟ್ಟುಕೊಳ್ಳಿ. ಈಗ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಈಗ ಅದಕ್ಕೆ ಸ್ವಲ್ಪ ಹುರಿಗಡಲೆ, ಹಾಗೆ ಫ್ರೈ ಮಾಡಿಕೊಂಡ ಈರುಳ್ಳಿ, ಮೆಣಸು ಸೇರಿಸಿಕೊಳ್ಳಿ. ಹಾಗೆ ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು, ಜೀರಿಗೆ, ಉಪ್ಪು ಹಾಕಿಕೊಂಡು ಸ್ವಲ್ಪ ನೀರು ಹಾಕಿಕೊಂಡು ರುಬ್ಬಿ.
ನುಣ್ಣಗೆ ಆಗುವಂತೆ ರುಬ್ಬಿಕೊಳ್ಳಬೇಕು. ನಂತರ ಇದನ್ನು ಒಂದು ಬೌಲ್‌ಗೆ ಹಾಕಿಟ್ಟುಕೊಳ್ಳಿ. ಈಗ ಬಾಣಲೆಗೆ ಮತ್ತೆ ಒಂದು ಸ್ಪೂನ್ ಎಣ್ಣೆ ಹಾಕಿಕೊಂಡು ಅದಕ್ಕೆ ಸಾಸಿವೆ, ಒಣ ಮೆಣಸು, ಉದ್ದಿನ ಬೇಳೆ, ಕರಿಬೇವು, ಹಾಕಿ ಫ್ರೈ ಮಾಡಿಕೊಳ್ಳಿ. ನಂತರ ಈ ಒಗ್ಗಣೆಯನ್ನು ಬೌಲ್‌ನಲ್ಲಿರುವ ಚಟ್ನಿಗೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಇಷ್ಟಾದರೆ ಚಟ್ನಿ ರೆಡಿಯಾಗುತ್ತದೆ. ನಿಮಗೆ ನೀರಾಗಿ ಈ ಚಟ್ನಿ ಬೇಕಿದ್ದರೆ ಸ್ವಲ್ಪ ನೀರು ಹಾಕಿಕೊಂಡು ಮತ್ತೆ ಸ್ವಲ್ಪ ಉಪ್ಪು ಸೇರಿಸಿ ಮಿಕ್ಸ್ ಮಾಡಿಕೊಳ್ಳಿ.
ಇದಕ್ಕೆ ಕಾಯಿ ಬಳಸದೇ ಮಾಡುವುದರಿಂದ ರುಚಿಯು ಅದ್ಭುತವಾಗಿರುತ್ತೆ. ಹಾಗೆ ಕೆಲ ಸಮಯ ಇಟ್ಟು ಕೂಡ ಸವಿಯಬಹುದು. ಹೆಚ್ಚು ದಪ್ಪಗಾಗಿ ಇದ್ದಷ್ಟು ರುಚಿ ಹೆಚ್ಚಾಗಿರುತ್ತೆ, ನೀವು ಕೂಡ ಮನೆಯಲ್ಲಿ ಇದನ್ನು ಮಾಡಿ ನೋಡಿ. ಯಾವುದೇ ತಿಂಡಿಯ ಜೊತೆಗೆ ಇದನ್ನು ಮಾಡಬಹುದು. ಈ ಚಟ್ನಿ ಮಾಡೋದು ಕೂಡ ಬಹಳ ಸುಲಭ ಹಾಗೆ ಯಾವುದೇ ತಿಂಡಿ ಮಾಡಿರಿ ಅದರ ಜೊತೆಗೆ ಅದ್ಭುತವಾದ ರುಚಿಗೆ ಕಾರಣವಾಗಲಿದೆ, ನಿಮಗೆ ಬೆಳಗ್ಗೆ ಹೆಚ್ಚು ಸಮಯ ಇಲ್ಲ ಎಂದಾಗ ಈ ಚಟ್ನಿಯನ್ನು ಸುಲಭವಾಗಿ ಮಾಡಿ ಮುಗಿಸಬಹುದು.



Click it and Unblock the Notifications