Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಇಡ್ಲಿ ದೋಸೆಗೆ ಹೋಟೆಲ್ ರುಚಿಯ ಕೆಂಪು ಚಟ್ನಿ..! ಬಹಳ ಸುಲಭ ಮಾಡೋದು!
ಮನೆಯಲ್ಲಿ ದೋಸೆ ಅಥವಾ ಇಡ್ಲಿ ಮಾಡಿದಾಗ ಅದರ ಜೊತೆಗೊಂದು ಚಟ್ನಿ ಇದ್ದರೆ ಸವಿಯಲು ಬಹಳ ರುಚಿ ಇರುತ್ತೆ. ಹಾಗೆ ಇಡ್ಲಿ ಹಾಗೂ ದೋಸೆಗೆ ಎಷ್ಟು ವಿಧವಾದ ಚಟ್ನಿಯನ್ನು ಬೇಕಾದರು ನಾವು ಮಾಡಬಹುದು. ಇಡ್ಲಿ ಜೊತೆಗೆ ಸಾಂಬಾರ್ ಇದ್ದರೂ ಕೂಡ ಅಂದಿನ ಬ್ರೇಕ್ ಫಾಸ್ಟ್ ರುಚಿಕರವಾಗಿರುತ್ತೆ. ಆದ್ರೆ ದೋಸೆಗೆ ಮಾತ್ರ ಚಟ್ನಿ ಇದ್ದರೇನೆ ಅದರ ರುಚಿ ದುಪ್ಪಟ್ಟಾಗುತ್ತೆ.
ದೋಸೆ ಮತ್ತು ಇಡ್ಲಿ ನಿಮ್ಮ ಮನೆಯಲ್ಲಿ ಸಾಮಾನ್ಯವಾಗಿ ಮಾಡುವಂತಹ ತಿಂಡಿಗಳು ಆದ್ರೆ ಇದಕ್ಕೆ ಕಾಂಬಿನೇಷನ್ ಅಂದಾಗ ಸ್ವಲ್ಪ ಗೊಂದಲ ಆಗುತ್ತೆ. ಯಾವ ಖಾದ್ಯ ಮಾಡಿದ್ರೆ ರುಚಿ ಹೆಚ್ಚಾಗುತ್ತೆ ಅನ್ನೋದನ್ನ ನಾವು ಆಲೋಚಿಸಬೇಕಾಗುತ್ತೆ. ಆದ್ರೆ ನೀವು ಹೋಟೆಲ್‌ಗೆ ತೆರಳಿ ಇದೇ ಇಡ್ಲಿ ಅಥವಾ ದೋಸೆ ಆರ್ಡರ್ ಮಾಡಿದ್ರೆ ಅವರು ಇದನ್ನು ಸವಿಯಲು ಚಟ್ನಿ ನೀಡುತ್ತಾರೆ.
ಕೆಲವೊಂದು ಫೇಮಸ್ ಹೋಟೆಲ್‌ಗಳಲ್ಲಿ ನಮಗೆ ಈ ಖಾದ್ಯದ ಜೊತೆಗೆ ಕೆಂಪು ಬಣ್ಣದ ಚಟ್ನಿ ನೀಡುತ್ತಾರೆ. ಈ ಕೆಂಪು ಚಟ್ನಿ ಇಡ್ಲಿ ಹಾಗೂ ದೋಸೆಗೆ ಬೊಂಬಾಟ್ ರುಚಿ ತರಲಿದೆ. ಈ ರುಚಿಯಲ್ಲಿ ಚಟ್ನಿ ನಾವೆಂದು ಮನೆಯಲ್ಲಿ ಮಾಡಿರಲು ಸಾಧ್ಯವಿಲ್ಲ. ಏಕೆಂದರೆ ಈ ರೆಸಿಪಿಯನ್ನು ನಾವು ವಿಶೇಷವಾಗಿ ಕಲಿಬೇಕಾಗುತ್ತೆ. ಆದರೂ ಆ ರುಚಿಯಲ್ಲಿ ಚಟ್ನಿ ಮಾಡುವುದು ಕಷ್ಟ.
ಹೋಟೆಲ್ ನವರು ಈ ರುಚಿಯಲ್ಲಿ ಕೆಂಪು ಚಟ್ನಿ ಹೇಗೆ ಮಾಡುತ್ತಾರೆ ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ. ಹಾಗಾದ್ರೆ ಈ ಕೆಂಪು ಚಟ್ನಿ ಮಾಡುವುದು ಹೇಗೆ? ಕೆಂಪು ಚಟ್ನಿ ಮಾಡಲು ಬೇಕಾಗುವ ಪದಾರ್ಥಗಳು, ಕೆಂಪು ಚಟ್ನಿ ಮಾಡುವ ವಿಧಾನವನ್ನು ನಾವಿಂದು ತಿಳಿದುಕೊಳ್ಳೋಣ.
ಕೆಂಪು ಚಟ್ನಿ ಮಾಡಲು ಬೇಕಾಗುವ ಪದಾರ್ಥಗಳು
- ಒಣ ಮೆಣಸು- 10
- ಬೆಳ್ಳುಳ್ಳಿ - 5
- ಈರುಳ್ಳಿ - 3
- ಟೊಮೇಟೊ - 2
- ಹುಣಸೆಹಣ್ಣು
- ಉಪ್ಪು
- ಎಣ್ಣೆ
ಒಗ್ಗರಣೆ ಮಾಡಲು
- ಸಾಸಿವೆ
- ಉದ್ದಿನ ಬೇಳೆ
- ಜೀರಿಗೆ
- ಕಡಲೆ
- ಕರಿಬೇವಿನ ಎಲೆಗಳು
- ಇಂಗು ಪುಡಿ
ಕೆಂಪು ಚಟ್ನಿ ಮಾಡುವ ವಿಧಾನ
ಮೊದಲು ಒಂದು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ 2 ಸ್ಪೂನ್ ಎಣ್ಣೆ ಹಾಕಿಕೊಳ್ಳಿ. ಎಣ್ಣೆ ಬಿಸಿಯಾದ ಬಳಿಕ ಅದಕ್ಕೆ ಸಾಸಿವೆ, ಒಣ ಮೆಣಸು, ಬೆಳ್ಳುಳ್ಳಿ ಹಾಕಿ ಫ್ರೈ ಮಾಡಿಕೊಳ್ಳಿ. ನಂತರ ಈರುಳ್ಳಿ ಹಾಕಿ 2ರಿಂದ 3 ನಿಮಿಷ ಫ್ರೈ ಮಾಡಿಕೊಳ್ಳಿ. ನಂತರ ಟೊಮೆಟೋ, ಹುಣಸೆ ಹುಳಿ, ಉಪ್ಪು ಸಹ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡುತ್ತಾ ಫ್ರೈ ಮಾಡಿಕೊಳ್ಳಿ.
ನಂತರ ಒಲೆಯನ್ನು ಆಫ್ ಮಾಡಿಕೊಂಡು ಇದನ್ನು ತಣ್ಣಗಾಗಲು ಬಿಡಿ. ತಣ್ಣಗಾದ ಬಳಿಕ ಮಿಕ್ಸರ್ ಜಾರ್‌ನಲ್ಲಿ ಹುರಿದ ಪದಾರ್ಥಗಳನ್ನು ಹಾಕಿ ಸ್ವಲ್ಪ ಉಪ್ಪು ಸಿಂಪಡಿಸಿ ಮತ್ತು ರುಬ್ಬಿಕೊಳ್ಳಿ. ನಂತರ ಇದನ್ನು ಒಂದು ಬೌಲ್‌ಗೆ ಹಾಕಿಡಿ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಸಾಸಿವೆ, ಜೀರಿಗೆ, ಕರಿಬೇವಿನ ಎಲೆ, ಇಂಗು ಹಾಕಿ ಒಗ್ಗರಣೆ ಮಾಡಿ.
ಈ ಒಗ್ಗೆರಣೆಯನ್ನು ರುಬ್ಬಿಕೊಂಡಿರುವ ಚಟ್ನಿಗೆ ಹಾಕಿಕೊಂಡು ಕಲಸಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಅದ್ಭುತ ರುಚಿಯ ಕೆಂಪು ಚಟ್ನಿ ರೆಡಿಯಾಗುತ್ತದೆ. ನೀವು ಇಡ್ಲಿ ದೋಸೆಗೆ ಈ ಚಟ್ನಿ ಮಾಡಿ ನೋಡಿ, ಬಹಳ ಸಿಂಪಲ್ ಆಗಿ ಮಾಡಬಹುದು. ರುಚಿ ಕೂಡ ಅದ್ಭುತ. ಹೋಟೆಲ್‌ನಲ್ಲಿ ಇಡ್ಲಿ ಹಾಗೂ ದೋಸೆಗೆ ನೀಡುವ ಚಟ್ನಿ ಇದೇ ಆಗಿದೆಲ. ನೀವು ಕೂಡ ಮನೆಯಲ್ಲಿ ಈ ವಿಧದಲ್ಲಿ ಚಟ್ನಿ ಮಾಡಿ ನೋಡಿ.



Click it and Unblock the Notifications
