Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಊಟದ ರುಚಿ ಹೆಚ್ಚಿಸುತ್ತೆ ಚೌಳಿಕಾಯಿ ಪಲ್ಯ..! ಹೀಗೆ ಮಾಡಿ
ನೀವು ಮನೆಯಲ್ಲಿ ಊಟಕ್ಕೆ ಸೈಡ್ಸ್ ಆಗಿ ಏನೆಲ್ಲಾ ಖಾದ್ಯ ಬಳಸುತ್ತೀರಿ? ನೀವು ಯಾವುದಾದರು ತರಕಾರಿಯ ಪಲ್ಯ, ಗ್ರೇವಿ, ಹಪ್ಪಳ, ಉಪ್ಪಿನಕಾಯಿ ಹೀಗೆ ಒಂದಲ್ಲಾ ಒಂದು ರೀತಿಯ ಖಾದ್ಯ ಊಟದ ಜೊತೆ ಬಳಸಿರುತ್ತೀರಿ. ಯಾಕಂದ್ರೆ ಊಟದ ಜೊತೆ ಯಾವುದಾದರು ಖಾದ್ಯ ಇದ್ದರೇನೇ ಊಟ ಚೆನ್ನಾಗಿ ಸೇರುವುದು.
ಇನ್ನು ಊಟದ ಜೊತೆ ತರಕಾರಿ ಸಾಂಬಾರ್ ಇದ್ದರಂತು ಅದರ ಜೊತೆ ಯಾವುದಾದರು ತರಕಾರಿಯ ಪಲ್ಯ ಇರಲೇಬೇಕು. ಆದ್ರೆ ಎಲ್ಲಾ ಸಾಂಬಾರ್ ಜೊತೆ ಸವಿಯಲು ಉತ್ತಮ ಪಲ್ಯ ಎಂದರೆ ಅದು ಗೋರೆಕಾಯಿ ಪಲ್ಯ. ಆರೋಗ್ಯದ ದೃಷ್ಟಿಯಿಂದ ಗೋರೆಕಾಯಿ ಬಹಳ ಉತ್ತಮ ತರಕಾರಿ.

ಗೋರಿಕಾಯಿ ಪಲ್ಯ ತಯಾರಿಸುವ ಮುನ್ನ 'ಗೋರಿ' ಪದ ಹೇಗೆ ಬಂತೆಬುದು ನಿಮಗೆ ಗೊತ್ತಾ? ಉತ್ತರ ಕರ್ನಾಟಕದಲ್ಲಿ ಗೋರಿಕಾಯಿಗೆ ಚವಳಿಕಾಯಿ ಅಥವಾ ಚೌಳಿಕಾಯಿ ಪಲ್ಯ ಅಂತ ಹೆಚ್ಚಾಗಿ ಕರೆಯುತ್ತಾರೆ. ಆದರೆ, ಗೋರಿಕಾಯಿ ಪದದ ಮೂಲ ಬಹುಶಃ ಮಹಾರಾಷ್ಟ್ರದಲ್ಲಿ ಇರಬಹುದು. ಬೆಳಗಾವಿ ಜಿಲ್ಲೆಯಲ್ಲಿ ಈ ಹಸಿರು ತರಕಾರಿಗೆ 'ಗವಾರ್ ಕಾಯಿ' ಅಂತ ಕರೆಯುತ್ತಾರೆ. ಗವಾರ್ ಕಾಯಿ ಎಂಬುದು ಉತ್ತರ ಕರ್ನಾಟಕದಿಂದ ದಕ್ಷಿಣಕ್ಕೆ ಪಯಣ ಬೆಳೆಸುವಷ್ಟರಲ್ಲಿ ಗೋರಿಕಾಯಿ ಆಗಿರಲೂಬಹುದು.
ಚವಳಿ ಊರ್ಫ್ ಗವಾರ್ ಉರ್ಫ್ ಗೋರಿ ಹೆಸರು ಕೇಳಿಯೇ ಗರಬಡಿದವರಂತೆ ಆಡಬೇಡಿ. ಹೆಚ್ಚು ನಾರಿನಂಶ ಇರುವ ಹಸಿರು ತರಕಾರಿ ಆರೋಗ್ಯಕ್ಕೆ ಬಲು ಹಿತಕಾರಿ.
ಹಾಗಾದರೆ ನಾವಿಂದು ಈ ಗೋರಿಕಾಯಿ ಅಥವಾ ಚೌಳಿಕಾಯಿಯ ಪಲ್ಯವನ್ನು ಮಾಡುವುದು ಹೇಗೆ? ಅದಕ್ಕೆ ಬೇಕಾಗುವ ಪದಾರ್ಥಗಳೇನು? ಯಾವೆಲ್ಲಾ ವಸ್ತುಗಳ ಬಳಸಬೇಕು? ಎಷ್ಟು ಸಮಯ ಹಿಡಿಯುತ್ತದೆ ಎಂಬುದನ್ನು ನಾವಿಂದು ನೋಡೋಣ.
ಚೌಳಿಕಾಯಿ ಪಲ್ಯ ಮಾಡಲು ಬೇಕಾಗುವ ಪದಾರ್ಥಗಳು
- ಎಳೆಯ ಗೋರಿಕಾಯಿ - 250 ಗ್ರಾಂ
- ದೊಡ್ಡ ಗಾತ್ರದ ಒಂದು ಈರುಳ್ಳಿ
- ಎಣ್ಣೆ ಮೂರು ಚಮಚ
- ಸಾಸಿವೆ - 2 tsp
- ಅರಿಶಿಣ- 1 tsp
- ಕರಿಬೇವು
- ಕೊತ್ತಂಬರಿ
- ತುರಿದ ತೆಂಗಿನ ಕಾಯಿ- ಅರ್ಧ ಕಪ್
- ಸಾರಿನ ಪುಡಿ - ಎರಡು ಚಮಚ
- ಬೆಲ್ಲ
- ರುಚಿಗೆ ಉಪ್ಪು
ನೀರಲ್ಲಿ ಚೆನ್ನಾಗಿ ತೊಳೆದು ಬದಿಗಿರುವ ನಾರು ತೆಗೆದು ಹಸನು ಮಾಡಿಟ್ಟುಕೊಳ್ಳಿ.
ನಂತರ ಚಾಕು ಪ್ರಯೋಗ ಮಾಡಿ ಸಣ್ಣದಾಗಿ ಹೆಚ್ಚಿಟ್ಟುಕೊಳ್ಳಿ. ಇಷ್ಟಾದ ನಂತರ ಒಂದು
ಬಾಣಲೆಗೆ ಎಣ್ಣೆ ಹಾಕಿ ಸಾಸಿವೆಯನ್ನು ಚಟಪಡಿಸಿ, ಅರಿಶಿಣ ಹಾಕಿ ಸಣ್ಣಗೆ
ಹೆಚ್ಚಿಟ್ಟುಕೊಂಡ ಈರುಳ್ಳಿಯನ್ನು ಹಾಕಿ ಕಂದುಬಣ್ಣ ಬರುವವರೆಗೆ ಚೆನ್ನಾಗಿ
ಕಾಯಿಸಿರಿ.
ಒಗ್ಗರಣೆಗೆ ಗೋರಿಕಾಯಿ ಹಾಕಿಕೊಳ್ಳಿ. ಒಗ್ಗರಣೆ ಹೊತ್ತುವ ಮೊದಲೇ ಒಂದಿಷ್ಟು ನೀರು ಹಾಕಿ. ತುಸು ಕುದಿಬಂದನಂತರ ಕರಣೆ ಬೆಲ್ಲ, ಸಾರಿನಪುಡಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕೈಯಾಡಿಸಿ. ಚೆನ್ನಾಗಿ ಕುದ್ದ ನಂತರ ಬಾಣಲೆಯನ್ನು ಕೆಳಗಿಳಿಸಿ ಕಾಯಿತುರಿ, ಕೊತ್ತಂಬರಿ ಹಾಕಿ ಮತ್ತೆ ಕೈಯಾಡಿಸಿ. ಕಾಯಿತುರಿಯಲ್ಲಿ ಕೊಬ್ಬರಿ ಹಳಕುಗಳಿದ್ದರೆ ಪಲ್ಯ ತಿನ್ನಲು ಸಖತ್ತಾಗಿರುತ್ತದೆ. ಈ ರುಚಿಕಟ್ಟಾದ ಪಲ್ಯವನ್ನು ಚಪಾತಿ, ರೊಟ್ಟಿಯೊಡನೆ ತಿನ್ನಲು ಚೆನ್ನಾಗಿರುತ್ತದೆ.
ಈ ಪಲ್ಯಕ್ಕೆ ನೀವು ಕಡಲೇ ಬೀಜದ ಪುಡಿಯನ್ನೂ ಸಹ ಹಾಕಿಕೊಂಡು ಮಾಡಬಹುದು. ಜೊತೆಗೆ ಕಾಯಿಯನ್ನು ಹೆಚ್ಚಾಗಿ ಬಳಸಿದರೆ ಪಲ್ಯವೂ ಹೆಚ್ಚಾಗಿರುತ್ತದೆ ರುಚಿಯು ಹೆಚ್ಚಾಗಿರುತ್ತದೆ. ಈ ಪಲ್ಯ ಮಾಡೋದು ತುಂಬಾನೆ ಸುಲಭವಾಗಿದೆ. ಜೊತೆಗೆ ರುಚಿಯು ಸಿಕ್ಕಾಪಟ್ಟೆ ಚೆನ್ನಾಗಿರುತ್ತದೆ.
ಚೌಳಿಕಾಯಿಯಲ್ಲಿ ನಾರಿನ ಅಂಶ ಅಧಿಕವಾಗಿರುವುದರಿಂದ ನಿಮ್ಮ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅಂಶ ಕಡಿಮೆ ಮಾಡುವಲ್ಲಿ ಇದು ಸಹಾಯ ಮಾಡಲಿದೆ. ಜೊತೆಗೆ ಕಬ್ಬಿಣಾಂಶ ಭರಿತವಾದ ಚೌಳಿಕಾಯಿಯು ದೇಹದಲ್ಲಿ ರಕ್ತ ಸಂಚಾರ ಸುಗಮಗೊಳಿಸುವಲ್ಲಿಯೂ ಸಹಾಯಕವಾಗಿದೆ.



Click it and Unblock the Notifications