Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಕ್ಕಳ ಆರೋಗ್ಯದ ಚಿಂತೆ ಕಾಡಿದ್ಯಾ? ಶೀತ ಕೆಮ್ಮು ಇದ್ರೆ ಈ ಮೆಣಸಿನ ಸಾರು ಮಾಡಿ!
ಊಟದೊಂದಿಗೆ ಸವಿಯಲು ನೀವು ಹಲವು ರೀತಿಯ ಹುಳಿ, ಸಾರು, ರಸಂ, ಸಾಂಬಾರ್ ಮಾಡುತ್ತೀರಿ. ಹೆಚ್ಚು ಮಸಾಲೆಗಳ ಬಳಸದೆ ಸುಲಭ ಮಾರ್ಗದಲ್ಲಿ ಮಾಡುವಂತಗ ಖಾದ್ಯಗಳಿಗೆ ಹೆಚ್ಚಿನ ಒತ್ತು ನೀಡುವ ಮಂದಿ ನೀವಾಗಿದ್ದರೆ ರಸಂ ಯಾವಾಗಲು ಮಾಡಿ ಸವಿಯಲು ಇಷ್ಟಪಡುತ್ತೀರಿ. ಏಕೆಂದರೆ ರಸಂ ಮಾಡುವುದು ಸುಲಭ ಹಾಗೆ ಆರೋಗ್ಯಕ್ಕೂ ಉತ್ತಮ ಎನಿಸಲಿದೆ.
ಇನ್ನು ಮನೆಯಲ್ಲಿ ಮಕ್ಕಳಿದ್ದು, ಆಗಾಗ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದರೆ ಅಂತಹ ಸಮಯದಲ್ಲಿಯೂ ನೀವು ಕೆಲವೊಂದು ಮಸಾಲೆ ಭರಿತ ಸಾರು ಮಾಡುವ ಮೂಲಕ ಪರಿಹಾರಗಳ ಪಡೆಯಬಹುದು. ನಾವಿಂದು ಸುಲಭವಾಗಿ ನಿಮಿಷಗಳಲ್ಲಿ ಮಾಡಬಹುದಾದ ಆರೋಗ್ಯಕ್ಕೂ ಉತ್ತಮವಾದ ಮೆಣಸಿನ ಹುಳಿ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ.

ಮೆಣಸಿನ ಹುಳಿ ಮಾಡಲು ಕೆಲವೇ ವಸ್ತುಗಳಿದ್ದೆ ಸಾಕಾಗುತ್ತದೆ. ಇದರಿಂದ ನೀವು ಶೀತ, ಕೆಮ್ಮು, ಜ್ವರದಂತಹ ಸಣ್ಣಪುಟ್ಟ ಸಮಸ್ಯೆಗಳಿಗೆ ಮನೆಯಲ್ಲಿ ಪರಿಹಾರ ಪಡೆಯಬಹುದು. ಇದು ಊಟದ ರುಚಿ ಮತ್ತಷ್ಟು ಹೆಚ್ಚಿಸುವ ಜೊತೆಗೆ ನಿಮ್ಮಲ್ಲಿ ಆರೋಗ್ಯ ಸುಧಾರಿಸಲು ಕೂಡ ಇದು ನೆರವಾಗಲಿದೆ.
ಹಾಗಾದ್ರೆ ಈ ಮೆಣಸಿನ ಸಾರು ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ವಿಧಾನವೇನು? ಎಂಬುದರ ಕುರಿತು ಇಲ್ಲಿ ತಿಳಿದುಕೊಳ್ಳಿ.
ಅರಶಿಣ ಮೆಣಸಿನ ಸಾರು ಮಾಡಲು ಬೇಕಾಗುವ ವಸ್ತುಗಳು
ಹುಣಸೆ ಹಣ್ಣು
ಜೀರಿಗೆ
ಕರಿಬೇವು
ಟೊಮೆಟೋ
ಒಣ ಮೆಣಸು
ಬೆಳ್ಳುಳ್ಳಿ
ಕೊತ್ತಂಬರಿ ಸೊಪ್ಪು
ಎಣ್ಣೆ
ಇಂಗು
ಅರಶಿಣ ಮೆಣಸಿನ ಸಾರು ಮಾಡುವುದು ಹೇಗೆ?
ಮೊದಲಿಗೆ ಕುಟ್ಟಾಣಿ ಅಥವಾ ಮಿಕ್ಸಿ ಜಾರ್ ಇಲ್ಲವೆ ಕಲ್ಲಿನ ಸಹಾಯದಿಂದ ಕೆಲವು ವಸ್ತುಗಳ ಪುಡಿ ಮಾಡಬೇಕು. ಅದಕ್ಕೆ ಕಾಳು ಮೆಣಸು, ಬೆಳ್ಳುಳ್ಳಿ, ಅರಶಿಣ, ಕರಿಬೇವು ಹಾಕಿಕೊಂಡು ರುಬ್ಬಿ ಇಲ್ಲವೆ ಕುಟ್ಟಿ ಪುಡಿ ಮಾಡಬೇಕು. ತರಿ ತರಿಯಾಗಿ ಕುಟ್ಟಿ ಪುಡಿ ಮಾಡಿಕೊಳ್ಳಿ.
ಈಗ ಒಂದು ಬೌಲ್‌ಗೆ ಟೊಮೆಟೋ ಹಾಕಿಕೊಂಡು ಚೆನ್ನಾಗಿ ಪುಡಿ ಮಾಡಬೇಕು. 1 ಟೊಮೆಟೋವನ್ನು ಕಿವುಚಿಕೊಂಡು ಅದಕ್ಕೆ ಹುಣಸೆ ಹುಳಿ ರಸವನ್ನು ಇದಕ್ಕೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಈಗ ಹುಣಸೆ ಹಾಗೂ ಟೊಮೆಟೋ ರಸ ರೆಡಿಯಾಗಿರುತ್ತೆ, ಅದನ್ನು ಬದಿಗಿಟ್ಟುಕೊಳ್ಳಿ.
ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಎಣ್ಣೆ ಹಾಕಿಕೊಂಡು ಬಳಿಕ ಸಾಸಿವೆ, ಕರಿಬೇವು, ಒಣ ಮೆಣಸು ಹಾಕಿಕೊಂಡು ಬಿಸಿ ಮಾಡಿ ಬಳಿಕ ರುಬ್ಬಿಕೊಂಡಿದ್ದ ಮಸಾಲೆ ಹಾಕಿ ಬಳಿಕ ಇಂಗು ಸಹ ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ನಂತರ ಕಿವುಚಿಕೊಂಡಿದ್ದ ಟೊಮೆಟೋ ಹುಣಸೆ ಹುಳಿಯನ್ನು ಸಹ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ.
ನಂತರ ಇದಕ್ಕೆ ನಿಮಗೆ ಬೇಕಾದಷ್ಟು ನೀರು ಹಾಕಿಕೊಂಡು ಉಪ್ಪು ಹಾಕಿ ಮಿಕ್ಸ್ ಮಾಡುತ್ತಾ ಉರಿ ದೊಡ್ಡದು ಮಾಡಿ. ಇದು ಚೆನ್ನಾಗಿ ಕುದಿಬರಲು ಬಿಡಿ. 5 ನಿಮಿಷ ಗಳ ಕಾಲ ಕುದಿಬರಲು ಬಿಟ್ಟು ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿಕೊಂಡು ಒಲೆ ಆಫ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ರಸಂ ಅಥವಾ ಮೆಣಸಿನ ಸಾರು ರೆಡಿಯಾಗುತ್ತದೆ. ನೀವು ಕೂಡ ಮನೆಯಲ್ಲಿ ಇದನ್ನು ಟ್ರೈ ಮಾಡಿ ನೋಡಿ. ಇದು ಮಕ್ಕಳಿಗೆ ನೀಡಬಹುದಾದ ರುಚಿ ರುಚಿಯ ಖಾದ್ಯ. ಹಾಗೆ ಆರೋಗ್ಯಕ್ಕೂ ಇದು ಬಹಳ ಉತ್ತಮವಾಗುತ್ತದೆ.



Click it and Unblock the Notifications