Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಎರಡು ವಸ್ತು ಇದ್ದರೆ ಶೇಂಗಾ ಚಿಕ್ಕಿ ರೆಡಿ..! ಮಾಡೋದು ಸಿಕ್ಕಾಪಟ್ಟೆ ಸುಲಭ..!
ನಿಮಗೆಲ್ಲಾ ನೆನಪಿರಬಹುದು, ಚಿಕ್ಕಂದಿನಲ್ಲಿ, ಕೈಯಲ್ಲಿ ಏನೂ ಇಲ್ಲದ ಸಮಯದಲ್ಲಿ ಎಲ್ಲರ ಬಾಯಿ ಸಿಹಿ ಮಾಡುತ್ತಿದ್ದಿದ್ದು ಈ ಶೇಂಗಾ ಚಿಕ್ಕಿ. ಚೂರೇ ಕಾಸಿನಲ್ಲಿ ಕೈ ತುಂಬಾ ಸಿಹಿ ಬರುತ್ತಿದ್ದ ಕಾಲವದು. ನಮಗೆಲ್ಲಾ ಇದೇ ಹಬ್ಬದೂಟ. ಆದರೆ ಈಗಿನ ಕಾಲದಲ್ಲಿ ಇದಿಕ್ಕೂ ಬೆಲೆ ಜಾಸ್ತಿಯಾಗಿದೆ ಬಿಡಿ.
ನಾವು ಚಿಕ್ಕವರಾಗಿದ್ದಾಗಿನಿಂದ ಹಿಡಿದು ತೀರಾ ಇತ್ತೀಚಿನ ದಿನಗಳು ಸೇರಿ ಈಗಲೂ ಕಡಲೆ ಚಿಕ್ಕಿಯನ್ನು ತಿನ್ನಲು ಇಷ್ಟಪಡುತ್ತೇವೆ. ತಿನ್ನಲು ಸಿಕ್ಕಾಪಟ್ಟೆ ಸಿಹಿಯಾದ ಚಿಕ್ಕಿಯೂ ಮಕ್ಕಳಿಗಂತೂ ಪಂಚಪ್ರಾಣ.

ಬೆಲ್ಲ ಮತ್ತು ನೆಲಗಡಲೆ ಅಥವಾ ಶೇಂಗಾ ಬಳಸಿ ಮಾಡುವ ಚಿಕ್ಕಿ ಪ್ರೊಟೀನ್ ಅಂಶವನ್ನು ಒಳಗೊಂಡಿದೆ. ಹೀಗಾಗಿ ಇದನ್ನು ಗರ್ಭಿಣಿಯರು, ಮಕ್ಕಳಿಂದ ಹಿಡಿದು ವಯಸ್ಕರೂ ಕೂಡಾ ಶೇಂಗಾ ಚಿಕ್ಕಿಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಶೇಂಗಾ ಚಿಕ್ಕಿಯು ಮಾರುಕಟ್ಟೆಯಲ್ಲಿ ಬೇರೆ ದರ ಬೇರೆ ರುಚಿಯಲ್ಲೂ ಇಂದು ಲಭ್ಯವಿದೆ.
ದೊಡ್ಡ ದೊಡ್ಡ ಕಂಪನಿಗಳು ಸಹ ಚಿಕ್ಕಿಯ ಪ್ಯಾಕೆಟ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಆದರೆ ನಾವಿಂದು ಹೇಳ ಹೊರಟಿರುವುದು ಈ ಶೇಂಗಾ ಚಿಕ್ಕಿಯ ಬೆಲೆಯ ವಿಚಾರವಲ್ಲ. ಇದರ ಪ್ರಾಮುಖ್ಯತೆಯ ಬಗ್ಗೆ. ಎಲ್ಲ ಹಬ್ಬಗಳಲ್ಲೂ ಪ್ರತಿಯೊಬ್ಬರೂ ಇಷ್ಟ ಪಟ್ತು ತಿನ್ನುವ, ತಯಾರಿಸುವ ಸಿಹಿತಿನಿಸು ಈ ಶೇಂಗಾ ಚಿಕ್ಕಿ. ಸ್ಪೆಷಲ್ ಈ ಶೇಂಗಾ ಚಿಕ್ಕಿಯನ್ನು ಮನೆಯಲ್ಲಿ ಹೇಗೆ ಸುಲಭವಾಗಿ ತಯಾರಿಸಬಹುದು ಎಂಬುದನ್ನು ತಿಳಿದುಕೊಳ್ಳೋಣ.
ಈ ಶೇಂಗಾ ಚಿಕ್ಕಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಶೇಂಗಾ ಚಿಕ್ಕಿಯ ಮಾಡುವ ಪಾಕವಿಧಾನ ಏನು ಎಂಬುದನ್ನು ನೋಡಿ.
ಶೇಂಗಾ ಚಿಕ್ಕಿ ಮಾಡಲು ಬೇಕಾಗುವ ವಸ್ತುಗಳು
- ಹುರಿದು ಸಿಪ್ಪೆ ತೆಗೆದ ಶೇಂಗಾ ಬೀಜ- 1 ಕಪ್
- ಬೆಲ್ಲ- ಅರ್ಧ ಕಪ್
- ತುಪ್ಪ- 1 ಅಥವಾ 2 ದೊಡ್ಡ ಚಮಚ
ಶೇಂಗಾ ಚಿಕ್ಕಿ ಮಾಡುವ ವಿಧಾನ
ಒಂದು ಪಾತ್ರೆಯಲ್ಲಿ ಶೇಂಗಾ ಹಾಕಿಕೊಂಡು ಚೆನ್ನಾಗಿ ಹುರಿದುಕೊಳ್ಳಬೇಕು. ಮಧ್ಯಮ ಉರಿಯಲ್ಲಿ 5 ರಿಂದ 6 ನಿಮಿಷಗಳ ಹುರಿದುಕೊಳ್ಳಬೇಕು. ಶೇಂಗಾ ಕಪ್ಪು ಬಣ್ಣಕ್ಕೆ ತಿರುಗಬಾರದು. ಹೀಗೆ ಹುರಿದುಕೊಂಡ ಬಳಿಕ ಅದನ್ನು ಒಂದು ಪಾತ್ರೆಗೆ ಹಾಕಿಕೊಂಡು ಅದರ ಸಿಪ್ಪೆ ತೆಗಿಯಬೇಕು. ಕೈಯಲ್ಲಿ ಚೆನ್ನಾಗಿ ಉಜ್ಜಿ ಅದನ್ನು ಎರಡು ಭಾಗವಾಗಿ ಮಾಡಿಕೊಳ್ಳಬೇಕು.
ಈಗ ಒಂದು ಪಾತ್ರೆಗೆ ಬೆಲ್ಲ ಹಾಕಿ ಅದಕ್ಕೆ ಸ್ವಲ್ಪ ನೀರು ಹಾಕಿ ಬಿಸಿ ಮಾಡಿ ಕರಗಲು ಇಡಿ. ಗಟ್ಟಿಯಾದ ಪಾಕ ಬರುವಷ್ಟು ಹೊತ್ತು ಕಾಯಿಸಿ. ತೀರ ಗಟ್ಟಿಯಾದ ಪಾಕ ಬಂದಾಗ ಅದಕ್ಕೆ ಶೇಂಗಾ ಹಾಕಿಕೊಂಡು ಚೆನ್ನಾಗಿ ಮಿಶ್ರಣ ಮಾಡಬೇಕು. ಯಾವುದೇ ಕಾರಣಕ್ಕೂ ಈ ವೇಳೆ ತಡ ಮಾಡಬೇಡಿ, ತಡ ಮಾಡಿದರೆ ಪಾಕ ಗಟ್ಟಿಯಾಗುತ್ತದೆ. ಬೇಗ ಮಿಶ್ರಣ ಮಾಡಿ.
ಮಿಶ್ರಣ ಮಾಡುವ ಮುನ್ನ ಒಂದು ಬಟ್ಟಲಿಗೆ ತುಪ್ಪ ಇಲ್ಲವೆ ಎಣ್ಣೆ ಹಚ್ಚಿ ಇಟ್ಟುಕೊಂಡಿರಿ. ಈಗ ಚಿಕ್ಕಿ ಮಿಶ್ರಣವನ್ನು ಆ ಬಟ್ಟಲಿಗೆ ಹಾಕಿ ನಿಮಗೆ ಯಾವ ಆಕಾರ ಬೇಕೋ ಆ ಆಕಾರ ಮಾಡಿಕೊಳ್ಳಿ. ಬಳಿಕ ತಣ್ಣಗಾಗಲು ಬಿಡಿ. ಬಳಿಕ ನಿಮಗೆ ಎಷ್ಟು ದೊಡ್ಡ ಚಿಕ್ಕಿ ಬೇಕೋ ಅಷ್ಟಕ್ಕೆ ಕತ್ತರಿಸಿಕೊಳ್ಳಿ. ಇಷ್ಟು ಮಾಡಿದರೆ ನಿಮ್ಮ ಮುಂದೆ ಚಿಕ್ಕಿ ರೆಡಿಯಾಗುತ್ತದೆ. ಸುಮಾರು 5 ರಿಂದ 6 ಗಂಟೆ ಒಣಗಲು ಬಿಟ್ಟು ಬಳಿಕೆ ಸವಿಯಬಹುದು. ತಕ್ಷಣ ಸವಿದರೆ ನಿಮ್ಮ ಹಲ್ಲಿಗೆ ಅಂಟು ಹಿಡಿಯಬಹುದು.
ಒಂದು ಗಾಳಿಯಾಡದ ಜಾರಿನಲ್ಲಿ ಶೇಖರ ಮಾಡಿಕೊಂಡರೆ ರುಚಿಯಾದ ಈ ಕಡಲೆಕಾಯಿ ಚಿಕ್ಕಿ ಕೆಲವು ದಿನಗಳವರೆಗೆ ಕೆಡುವುದಿಲ್ಲ.



Click it and Unblock the Notifications