Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬಾಯಿ ರುಚಿ ಹೆಚ್ಚಿಸುವ ಈ ಕಡಲೆ ಕಾಳಿನ ಗೊಜ್ಜು ಮಾಡಿ.! ರುಚಿಯ ಆರೋಗ್ಯಕ್ಕೂ ಉತ್ತಮ!
ನೀವು ಊಟದ ಜೊತೆಗೆ ಅಥವಾ ತಿಂಡಿಯನ್ನು ಸವಿಯಬೇಕಾದರೆ ಯಾವುದಾದರು ಚಟ್ನಿ, ಪಲ್ಯ, ಗೊಜ್ಜು ಇದ್ದರೆ ಸೂಕ್ತ ಎಂದು ಭಾವಿಸಿರುತ್ತೀರಿ. ಆದ್ರೆ ಯಾವ ಗೊಜ್ಜು ಮಾಡಬೇಕು ಎಂಬುದು ನಿಮಗೆ ತಿಳಿಯದೇ ಇರಬಹುದು. ಹೀಗಾಗಿ ನಾವಿಂದು ಸುಲಭವಾಗಿ ಅತ್ಯಂತ ರುಚಿಕರವಾದ, ಕಡಿಮೆ ವಸ್ತುಗಳ ಬಳಸಿಕೊಂಡು ಮಾಡುವಂತೆ ಕಡಲೆ ಕಾಳಿನ ಗೊಜ್ಜು ಮಾಡುವ ಕುರಿತಂತೆ ತಿಳಿದುಕೊಳ್ಳೋಣ.
ಈ ಕಡಲೆ ಕಾಳುಗಳನ್ನು ಮೊಳಕೆ ಬರಿಸಿಕೊಂಡು ಸವಿಯುವುದು ನೋಡಬಹುದು, ನಮ್ ಆರೋಗ್ಯಕ್ಕೆ ಅತ್ಯಂತ ಉತ್ತಮ ಕಾಳು ಇದಾಗಿದೆ. ಅತ್ಯಧಿಕ ಫೈಬರ್, ಫ್ರೋಟೀನ್ ಅಂಶ ಇರುವ ಕಾರಣದಿಂದಾಗಿ ನಿಮ್ಮ ಆರೋಗ್ಯಕ್ಕೆ ಇದು ಬಹಳ ಉತ್ತಮ. ತೂಕ ಇಳಿಸಲು ಮುಂದಾಗುವವರು, ತೂಕ ಹೆಚ್ಚಿಕೊಳ್ಳಲು ಮುಂದಾಗುವವರು, ಗರ್ಭಿಣಿಯರಿಗೆ ಈ ಕಾಳು ಬಹಳ ಉತ್ತಮ.

ಹಾಗೆ ಈ ಕಾಳುಗಳಿಂದ ರುಚಿ ರುಚಿಯ ಹಲವು ಬಗೆಯು ಖಾದ್ಯಗಳನ್ನು ಕೂಡ ಮಾಡಿ ಸವಿಯಬಹುದು, ನೀವು ಮದುವೆ ಮನೆ ಸೇರಿ ಹಲವು ಶುಭ ಕಾರ್ಯದ ಸಂದರ್ಭದಲ್ಲಿ ಈ ಕಡಲೆ ಕಾಳಿನಿಂದ ಮಾಡಲಾದ ಹಲವು ಬಗೆ ತಿನಿಸುಗಳ ನೋಡಿರುತ್ತೀರಿ. ಅದೇ ರೀತಿ ನಾವಿಂದು ಈ ಕಾಳಿನ ಗೊಜ್ಜು ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.
ಕಡಲೆ ಕಾಳಿನ ಗೊಜ್ಜು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಈ ಗೊಜ್ಜು ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬೆಲ್ಲಾ ಕುರಿತು ಇಲ್ಲಿ ತಿಳಿದಿಕೊಳ್ಳೋಣ.
ಕಡಲೆ ಕಾಳಿನ ಗೊಜ್ಜು ಮಾಡಲು ಅಗತ್ಯವಿರುವ ವಸ್ತುಗಳು
- ಕಡಲೆಕಾಳು
- ಆಲೂಗಡ್ಡೆ - 1
- ಈರುಳ್ಳಿ- 3
- ಟೊಮೆಟೋ- 2
- ತೆಂಗಿನ ಕಾಯಿ ತುರಿ
- ಧನಿಯಾ ಪುಡಿ
- ಪುದಿನ ಸೊಪ್ಪು
- ಕೊತ್ತಂಬರಿ ಸೊಪ್ಪು
- ಕರಿಬೇವಿನ ಸೊಪ್ಪು
- ಬೆಳ್ಳುಳ್ಳಿ
- ಶುಂಠಿ
- ಹುರಿಗಡಲೆ
- ಗಸಗಸೆ
- ಖಾರದ ಪುಡಿ
- ಅರಿಶಿಣ ಪುಡಿ
- ಕಾಳುಮೆಣಸು
- ಇಂಗು
- ಸಾಸಿವೆ
- ಲವಂಗ
- ಚಕ್ಕೆ
- ಉಪ್ಪು
- ಎಣ್ಣೆ
ಕಡಲೆ ಕಾಳಿನ ಗೊಜ್ಜು ಮಾಡುವುದು ಹೇಗೆ?
ಕಡಲೆ ಕಾಳುಗಳನ್ನು ಹಿಂದಿನ ದಿನ ರಾತ್ರಿ ನೀರಿನಿಂದ ತೊಳೆದು ಕಾಳುಗಳು ಮುಳುಗುವಷ್ಟು ನೀರು ಹಾಕಿ ನೆನೆಸಿಡಬೇಕು. ರಾತ್ರಿ ಎಲ್ಲಾ ಈ ಕಾಳು ನೆನೆಯಬೇಕು. ಮಾರನೆ ದಿನ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಎಣ್ಣೆ ಬಿಸಿಯಾದಾಗ ಹೆಚ್ಚಿಕೊಂಡಿರುವ ಈರುಳ್ಳಿ ಹಾಕಿ ಫ್ರೈ ಮಾಡಿಕೊಳ್ಳಿ.
2 ನಿಮಿಷದ ಬಳಿಕ ಟೊಮೆಟೋ ಕೂಡ ಹಾಕಿ ಮತ್ತೆ 2 ನಿಮಿಷ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಬೆಳ್ಳುಳ್ಳಿ, ಶುಂಠಿ, ಗಸೆಗಸೆ, ಹುರಿಗಡಲೆ, ಚಕ್ಕೆ, ಲವಂಗ, ಕಾಳು ಮೆಣಸು 5 ಹಾಕಿಕೊಂಡು ಮತ್ತೆ 2 ನಿಮಿಷ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಅನಂತರ ಒಲೆ ಆಫ್ ಮಾಡಿಕೊಂಡು ಧನಿಯಾ ಪುಡಿ ಹಾಕಿ ಮಿಕ್ಸ್ ಮಾಡಿಕೊಳ್ಳಿ, ಹಾಗೆ ಖಾರದ ಪುಡಿ, ಅರಶಿಣ ಕೂಡ ಹಾಕಿ ಮಿಕ್ಸ್ ಮಾಡಿ ಪಾತ್ರೆ ಕೆಳಗೆ ಇಳಿಸಿಕೊಳ್ಳಿ.
ಈ ಎಲ್ಲಾ ಮಸಾಲೆ ತಣ್ಣಗಾಗಲು ಬಿಡಿ. ತಣ್ಣಗಾದ ಬಳಿಕ ಇದನ್ನು ಒಂದು ಮಿಕ್ಸಿ ಜಾರ್‌ಗೆ ಹಾಕಿಕೊಳ್ಳಿ, ಅನಂತರ ತೆಂಗಿನಕಾಯಿ ತುರಿ, ಪುದಿನ ಸೊಪ್ಪು, ಕೊತ್ತಂಬರಿ ಸೊಪ್ಪು, ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಬೇಕು. ನುಣ್ಣಗೆ ಖಾರದಂತೆ ರುಬ್ಬಿಕೊಳ್ಳಿ. ಈಗ ಕುಕ್ಕರ್ ಮೇಲೆ ಒಂದು ಕುಕ್ಕರ್ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಅದಕ್ಕೆ ಸಾಸಿವೆ, ಇಂಗು, ಕರಿಬೇವು, ಈರುಳ್ಳಿ ಹಾಕಿ 4 ನಿಮಿಷ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಹಾಗೆ ಒಂದು ಟೊಮೆಟೋ ಕೂಡ ಇದಕ್ಕೆ ಸೇರಿಸಿ ಫ್ರೈ ಮಾಡಿ (ಎಲ್ಲಾ ವಸ್ತುಗಳನ್ನು ಸಣ್ಣದಾಗಿ ಹೆಚ್ಚಿಕೊಂಡಿರಿ)
ಈಗ ನೆನೆಸಿಟ್ಟಿರುವ ಕಡಲೆ ಕಾಳು ಹಾಗೂ ಸಣ್ಣದಾಗಿ ಕತ್ತರಿಸಿಕೊಂಡು ಒಂದು ಆಲೂಗಡ್ಡೆಯನ್ನು ಸೇರಿಸಿ, ಉಪ್ಪು ಹಾಕಿ ಮಿಕ್ಸ್ ಮಾಡಿಕೊಂಡು ಮೊದಲು ರುಬ್ಬಿಕೊಂಡಿದ್ದ ಮಸಾಲೆಯನ್ನು ಸಹ ಇದಕ್ಕೆ ಸೇರಿಸಿಕೊಳ್ಳಿ. ಸ್ವಲ್ಪ ನೀರು ಸೇರಿಸಿ ಮಿಶ್ರಣ ಮಾಡಿ ಕುಕ್ಕರ್ ಮುಚ್ಚಳ ಮುಚ್ಚಿ 2 ಸೀಟಿ ಹೊಡೆಯಲು ಬಿಡಿ.
ಈಗ ಕುಕ್ಕರ್ ಸಂಪೂರ್ಣ ತಣ್ಣಗಾದ ಬಳಿಕ ಮುಚ್ಚಳ ತೆಗೆದು ಮತ್ತೊಮ್ಮೆ ಮಿಕ್ಸ್ ಮಾಡಿಕೊಂಡು ಕೊನೆಯದಾಗಿ ಕೊತ್ತಂಬರಿ ಸೊಪ್ಪು ಹಾಕಿಕೊಂಡು ಮಿಕ್ಸ್ ಮಾಡಿಕೊಂಡರೆ ನಿಮ್ಮ ಮುಂದೆ ಕಡಲೆ ಕಾಳಿನ ಗೊಜ್ಜು ಸಿದ್ದವಾಗುತ್ತೆ.



Click it and Unblock the Notifications