Latest Updates
-
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ
ಒಂದು ಕಪ್ ಕುಡಿದ್ರೆ ನೆಗಡಿ, ಕೆಮ್ಮು ಮಾಯ! ಚಿಕನ್ ಶೋರ್ಬಾ ಮಾಡುವ ಸುಲಭ ವಿಧಾನ ಇಲ್ಲಿದೆ
ಕೇವಲ ಒಂದೇ ಕಪ್ ಈ ಸೂಪ್ ಕುಡಿದರೆ ಸಾಕು! ನೆಗಡಿ, ಕೆಮ್ಮು ಮಾಯ. ಮನೆಯಲ್ಲೇ ತಯಾರಿಸಲು ಸುಲಭ ವಿಧಾನ ಇಲ್ಲಿದೆ. ನೆಗಡಿ ಮತ್ತು ಕೆಮ್ಮು ಬಂದಾಗ ನಾವು ತಿನ್ನುವ ಆಹಾರ ಬಹಳ ಮುಖ್ಯವಾಗುತ್ತದೆ. ಬಾಯಿ ಸಪ್ಪೆಯಾಗಿರುತ್ತದೆ. ಹೊಟ್ಟೆ ಭಾರವಾದಂತೆ ಅನಿಸುತ್ತದೆ. ಈ ಸಮಯದಲ್ಲಿ ಬಿಸಿಯಾಗಿರುವ, ಸುಲಭವಾಗಿ ಜೀರ್ಣವಾಗುವ ಮತ್ತು ಪೋಷಕಾಂಶಗಳಿಂದ ಸಮೃದ್ಧವಾಗಿರುವ ಆಹಾರ ಬೇಕು ಅಂತ ಅನಿಸುತ್ತೆ. ಈ ಸಮಯದಲ್ಲಿ ಚಿಕನ್ ಶೋರ್ಬಾ (Chicken Shorba) ಅತ್ಯಂತ ಸೂಕ್ತ ಆಯ್ಕೆಯಾಗಿದೆ. ಇದು ಕೇವಲ ಒಂದು ರುಚಿಕರವಾದ ಸೂಪ್ ಮಾತ್ರವಲ್ಲ, ಇದು ನಮ್ಮ ದೇಹ ಮತ್ತು ಮನಸ್ಸಿಗೆ ಆರಾಮ ನೀಡುತ್ತದೆ. ಗಂಟಲು ನೋವನ್ನು ಕಡಿಮೆ ಮಾಡಿ, ದೇಹವನ್ನು ಬೆಚ್ಚಗೆ ಇಡುತ್ತದೆ ಮತ್ತು ಇದರಲ್ಲಿರುವ ಪೋಷಕಾಂಶಗಳು ಬೇಗ ಗುಣಮುಖರಾಗಲು ಸಹಾಯ ಮಾಡುತ್ತವೆ.
ಚಿಕನ್ ಶೋರ್ಬಾ ಎಂದರೆ ಕೋಳಿ ಸೂಪ್. ಇದು ಸುಲಭವಾಗಿ ಜೀರ್ಣವಾಗುತ್ತದೆ ಮತ್ತು ಕಡಿಮೆ ಸಮಯದಲ್ಲಿ ತಯಾರಿಸಬಹುದು. ಇದರಲ್ಲಿ ಬಳಸುವಂತಹ ಶುಂಠಿ, ಬೆಳ್ಳುಳ್ಳಿ, ಮತ್ತು ಕಾಳುಮೆಣಸುಗಳು ಉರಿಯೂತ ನಿವಾರಕ ಮತ್ತು ಸೂಕ್ಷ್ಮಾಣುಜೀವಿಗಳ ನಿವಾರಕ ಗುಣಗಳನ್ನು ಹೊಂದಿವೆ. ಇವು ನೆಗಡಿ ಮತ್ತು ಕೆಮ್ಮಿಗೆ ಕಾರಣವಾಗುವ ಸೂಕ್ಷ್ಮಜೀವಿಗಳ ವಿರುದ್ಧ ಹೋರಾಡುತ್ತವೆ. ಇದರಲ್ಲಿರುವ ಮಸಾಲೆ ಪದಾರ್ಥಗಳು ಶರೀರದಲ್ಲಿ ತಾಪಮಾನವನ್ನು ಹೆಚ್ಚಿಸಿ, ನೆಗಡಿ ಮತ್ತು ಕೆಮ್ಮಿನ ಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಬನ್ನಿ, ಚಿಕನ್ ಶೋರ್ಬಾ ತಯಾರಿಸುವ ಸುಲಭ ವಿಧಾನವನ್ನು ತಿಳಿಯೋಣ.

ಚಿಕನ್ ಶೋರ್ಬಾ ತಯಾರಿಸಲು ಬೇಕಾಗುವ ಸಾಮಗ್ರಿಗಳು
• ಬೋನ್ ಚಿಕನ್ (ಮೂಳೆಯಿರುವ ಚಿಕನ್)
• ತುಪ್ಪ ಅಥವಾ ಎಣ್ಣ
• ಬಿರಿಯಾನಿ ಎಲೆ
• ಚಕ್ಕೆ
• ಲವಂಗ
• ಏಲಕ್ಕಿ
• ಈರುಳ್ಳಿ
• ಶುಂಠಿ
• ಬೆಳ್ಳುಳ್ಳಿ
• ಕಾಳುಮೆಣಸು
• ಅರಿಶಿನ ಪುಡಿ
• ಕೊತ್ತಂಬರಿ ಸೊಪ್ಪು
• ನಿಂಬೆ ರಸ
• ಉಪ್ಪು
• ಪುದೀನಾ
ಚಿಕನ್ ಶೋರ್ಬಾ ಮಾಡುವ ವಿಧಾನ
ಮೊದಲು ಕುಕ್ಕರ್ ಅನ್ನು ಒಲೆಯ ಮೇಲೆ ಇಟ್ಟು ಅದಕ್ಕೆ ಎರಡು ಚಮಚ ತುಪ್ಪ ಅಥವಾ ಎಣ್ಣೆ ಹಾಕಿ. ಅದು ಬಿಸಿಯಾದ ನಂತರ ಬಿರಿಯಾನಿ ಎಲೆ, ಚಕ್ಕೆ, ಲವಂಗ, ಮತ್ತು ಏಲಕ್ಕಿಯನ್ನು ಹಾಕಿ ಸ್ವಲ್ಪ ಹುರಿಯಿರಿ. ಅವುಗಳ ಪರಿಮಳ ಹೊರಬಂದ ನಂತರ, ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ. ಅದು ಮೃದುವಾಗುವವರೆಗೆ ಹುರಿಯಿರಿ. ಸ್ವಲ್ಪ ಪುದೀನಾ ಎಲೆಗಳನ್ನು ಬಳಸಬಹುದು.
ಈರುಳ್ಳಿ ಹುರಿದ ನಂತರ 200 ಗ್ರಾಂ ಚಿಕನ್ (ಬೋನ್ ಚಿಕನ್) ಸೇರಿಸಿ. ಕಡಿಮೆ ಉರಿಯಲ್ಲಿ 5 ನಿಮಿಷಗಳ ಕಾಲ ಬೇಯಿಸಿ. ಚಿಕನ್ ಹುರಿಯುವಾಗ, ಅರಿಶಿನ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಮಧ್ಯೆ ಮಧ್ಯೆ ಕಲಿಸುತ್ತಾ ಇರಿ. ಜೊತೆ ಜೊತೆಗೆ ಮಿಕ್ಸಿ ಜಾರ್‌ಗೆ 10 ಬೆಳ್ಳುಳ್ಳಿ ಎಸಳು, ಸ್ವಲ್ಪ ಕೊತ್ತಂಬರಿ ಸೊಪ್ಪು, 1 ಇಂಚು ಶುಂಠಿ, ಒಂದು ದೊಡ್ಡ ಈರುಳ್ಳಿ ತುಂಡು, 1 ಚಮಚ ಕಾಳುಮೆಣಸು ಮತ್ತು ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಈ ಪೇಸ್ಟ್ ಶೋರ್ಬಾದ ಮುಖ್ಯ ರುಚಿ ನೀಡುತ್ತದೆ.

ಚಿಕನ್ ಚೆನ್ನಾಗಿ ಬೆಂದ ನಂತರ, ರುಬ್ಬಿದ ಕೊತ್ತಂಬರಿ ಪೇಸ್ಟ್ ಅನ್ನು ಅದಕ್ಕೆ ಸೇರಿಸಿ. ಮಧ್ಯಮ ಉರಿಯಲ್ಲಿ ಐದು ನಿಮಿಷಗಳ ಕಾಲ ಬೇಯಿಸಿ. ಹೀಗೆ ಮಾಡುವುದರಿಂದ ಪೇಸ್ಟ್‌ನ ಹಸಿ ವಾಸನೆ ಸಂಪೂರ್ಣವಾಗಿ ಹೋಗುತ್ತದೆ. ಈಗ ಅದಕ್ಕೆ ಎರಡು ಗ್ಲಾಸ್ ನೀರು ಸೇರಿಸಿ. ಅರ್ಧ ನಿಂಬೆಹಣ್ಣಿನ ರಸವನ್ನು ಹಿಂಡಿ. ಉಪ್ಪು ಸರಿಯಾಗಿದೆಯೇ ಎಂದು ಟೇಸ್ಟ್ ಮಾಡಿ ನೋಡಿ.
ಈಗ ಕುಕ್ಕರ್ ಮುಚ್ಚಳವನ್ನು ಮುಚ್ಚಿ. ಮಧ್ಯಮ ಉರಿಯಲ್ಲಿ ನಾಲ್ಕು ವಿಸಲ್‌ಗಳನ್ನು ಬರುವಂತೆ ಬೇಯಿಸಿ. ಪ್ರೆಷರ್ ಸಂಪೂರ್ಣವಾಗಿ ಹೋದ ನಂತರ ಕುಕ್ಕರ್ ಮುಚ್ಚಳ ತೆಗೆಯಿರಿ. ಇಷ್ಟು ಮಾಡಿದರೆ, ರುಚಿಕರವಾದ ಚಿಕನ್ ಶೋರ್ಬಾ ಸಿದ್ಧ. ಇದನ್ನು ಬಿಸಿ ಇರುವಾಗಲೇ ಸವಿಯಬಹುದು.



Click it and Unblock the Notifications