Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಆರೋಗ್ಯಕ್ಕೂ ಬೆಸ್ಟ್, ರುಚಿಯಲ್ಲೂ ಸಖತ್ ಟೇಸ್ಟ್: ಮನೆಯಲ್ಲಿ ಮಾಡಿ ಚಿಕನ್ ಲೆಗ್ ಸೂಪ್
ನಾನ್ ವೆಜ್ ಪ್ರಿಯರು ಹಲವು ಬಗೆಯ ಖಾದ್ಯಗಳ ಮಾಡಿ ಸವಿಯೋದು ನೋಡಿರುತ್ತೀರಿ. ಅದ್ರಲ್ಲೂ ಚಿಕನ್ ಬಳಸಿ ಮಾಡುವ ಹಲವು ರೆಸಿಪಿಗಳು ಎಲ್ಲಾ ಮಾಂಸಹಾರ ಪ್ರಿಯರಿಗೂ ಇಷ್ಟವಾಗುತ್ತವೆ. ಹಾಗೆ ಹತ್ತಾರು ಬಗೆಯ ಖಾದ್ಯಗಳು ಮನೆ ಮಂದಿ ಎಲ್ಲರು ಕುಳಿತು ಸೇವಿಸಲು ಬಯಸುತ್ತಾರೆ. ಹಾಗೆ ಚಿಕನ್ ಬಳಸಿ ಮಾಡುವ ಹಲವು ಖಾದ್ಯಗಳ ಪೈಕಿ ನಾವಿಂದು ರುಚಿ ರುಚಿಯ ಸೂಪ್ ಮಾಡುವ ಕುರಿತು ತಿಳಿದುಕೊಳ್ಳೋಣ.
ಇನ್ನು ಚಿಕನ್ ಕಾಲ್ ಸೂಪ್ ಸವಿಯೋದು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಕೆಲವರು ಬೆಳಗ್ಗೆ ಚಿಕನ್ ಸೂಪ್ ಕುಡಿದು ತಮ್ಮ ದಿನದ ಕೆಲಸಗಳ ಆರಂಭಿಸೋದು ನೋಡಬಹುದು. ಚಿಕನ್ ಸೂಪ್ ರುಚಿಯಲ್ಲಿ ಮಾತ್ರವಲ್ಲ ಆರೋಗ್ಯದ ದೃಷ್ಟಿಯಿಂದಲೂ ಸಹ ಉತ್ತಮ ಎಂಬುದು ನಿಮಗೆ ತಿಳಿದಿದ್ಯಾ? ಚಿಕನ್ ಸೂಪ್ ಸವಿದರೆ ದೇಹದ ಮೂಳೆಗಳ ಆರೋಗ್ಯಕ್ಕೆ ವೃದ್ಧಿಸುವ ಪೌಷ್ಟಿಕ ಸತ್ವಗಳು, ಕ್ಯಾಲ್ಸಿಯಂ, ಮೆಗ್ನಿಶಿಯಂ, ಪೊಟಾಶಿಯಂ, ಪೋಸ್ಪರಸ್ ಹಾಗು ಇತರ ಬಗೆಯ ಖನಿಜಾಂಶಗಳು ಇದರಿಂದ ನಿಮಗೆ ಸಿಗಲಿದೆ.

ಹಾಗೆ ಚಿಕನ್ ಸೂಪ್ ಅನ್ನು ಕಾಳು ಮೆಣಸು, ಜೀರಿಗೆ ಸೇರಿ ಹಲವು ಮಸಾಲೆಗಳ ಬಳಸಿಕೊಂಡು ಮಾಡುವ ಕಾರಣದಿಂದಾಗಿ ಶೀತ, ಕೆಮ್ಮು ಸೇರಿ ಹಲವು ರೀತಿಯ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು. ದುರ್ಬಲ ರೋಗ ನಿರೋಧಕ ಶಕ್ತಿ ಹೊಂದಿದ್ದರೆ ಚಿಕನ್ ಕಾಲ್ ಸೂಪ್ ನಿಮ್ಮ ದೇಹಕ್ಕೆ ಅತ್ಯುತ್ತಮ ಶಕ್ತಿದಾಯಕ. ಹಾಗಾದ್ರೆ ನಾವಿಂದು ಮನೆಯಲ್ಲೇ ಸುಲಭವಾಗಿ ಈ ಚಿಕನ್ ಕಾಲ್ ಸೂಪ್ ಮಾಡಿ ಸವಿಯೋದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ.
ಚಿಕನ್ ಲೆಗ್ ಸೂಪ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಚಿಕನ್ ಲೆಗ್ ಸೂಪ್ ಮಾಡಲು ಬೇಕಾಗುವ ವಸ್ತುಗಳು
- ಚಿಕನ್ ಕಾಲುಗಳು
- ಅರಶಿಣ
- ಶುಂಠಿ ಬೆಳ್ಳುಳ್ಳಿ ಪೇಸ್ಟ್
- ಕಾಳು ಮೆಣಸಿನ ಪುಡಿ
- ಹಸಿ ಮೆಣಸು
- ಟೊಮೆಟೊ
- ಉಪ್ಪು
- ಗರಂ ಮಸಾಲ
- ಜೀರಿಗೆ ಪುಡಿ
- ಕೊತ್ತಂಬರಿ ಸೊಪ್ಪು
- ಪುದಿನ ಸೊಪ್ಪು
ಚಿಕನ್ ಲೆಗ್ ಸೂಪ್ ಮಾಡುವ ವಿಧಾನವೇನು?
ಮೊದಲು ಚಿಕನ್ ಲೆಗ್ ಹಾಗೆ ಮಾಂಸವನ್ನು ತೊಳೆದು ಇಟ್ಟುಕೊಳ್ಳಿ. ಸ್ಕಿನ್ ಲೆಸ್ ಲೆಗ್ ಬಳಸಬೇಕು. ಈಗ ಈ ಮಾಂಸವನ್ನು ಕುಕ್ಕರ್‌ಗೆ ಹಾಕಿ, ಇದರ ಜೊತೆಗೆ ಮೆಣಸಿನ ಪುಡಿ, ಜೀರಿಗೆ ಪುಡಿ, ಗರಂ ಮಸಾಲ, ಉಪ್ಪು, ಒಂದು ಟೊಮೆಟೋ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಅರಶಿಣ, ಹಸಿ ಮೆಣಸು, ನೀರು ಹಾಕಿಕೊಂಡು ಮುಚ್ಚಳ ಮುಚ್ಚಿ ಮಧ್ಯಮ ಉರಿಯಲ್ಲಿ ಬಿಡಿ.
ಹೀಗೆ ಮಾಡಿ ಸುಮಾರು 4 ಸೀಟಿ ಹೊಡೆಯಲು ಬಿಡಿ. ಅನಂತರ ಮುಚ್ಚಳ ತೆಗೆದು ಮತ್ತೆ 3ರಿಂದ 4 ನಿಮಿಷ ಕುದಿಸಿಕೊಳ್ಳಿ. ಈ ಸಮಯದಲ್ಲಿ ಬೇಕಿದ್ದರೆ ಕೊತ್ತಂಬರಿ ಸೊಪ್ಪು ಹಾಗೆ ಪುದಿನ ಸೊಪ್ಪನ್ನು ಹಾಕಿಕೊಳ್ಳಬಹುದು. ಈಗ ಈ ಸೂಪ್ ಅನ್ನು ಒಂದು ಬೌಲ್‌ಗೆ ಹಾಕಿ ಸವಿಯಲು ನೀಡಬಹುದು. ಇಷ್ಟಾದರೆ ರುಚಿ ರುಚಿಯ ಚಿಕನ್ ಲೆಗ್ ಸೂಪ್ ಸಿದ್ದವಾಗುತ್ತೆ. ನೀವು ಸಹ ಮನೆಯಲ್ಲಿ ಈ ರೀತಿ ವಿಧಾನ ಬಳಸಿಕೊಂಡು ಚಿಕನ್ ಸೂಪ್ ಮಾಡಿ ಸವಿದು ನೋಡಿ.
ಈ ಚಿಕನ್ ಸೂಪ್ ನಿಮ್ಮ ಆರೋಗ್ಯದ ದೃಷ್ಟಿಯಿಂದ ಬಹಳ ಉತ್ತಮ ಖಾದ್ಯ ಆಗಿರಲಿದೆ. ಎದೆ ಕಟ್ಟುವಿಕೆ ಹಾಗೂ ಗಂಟಲಿನ ಕಿರಿಕಿರಿ ಸಮಸ್ಯೆಯೂ ಕೂಡ ಬಹಳ ಬೇಗನೇ ದೂರವಾಗುತ್ತದೆ. ಚಿಕನ್ ಮಾಂಸದಲ್ಲಿ ವಿಟಮಿನ್ ಬಿ6 ಅಂಶಗಳು ಅಧಿಕ ಪ್ರಮಾಣದಲ್ಲಿ ಕಂಡು ಬರುತ್ತದೆ. ಇದು ನಿಮ್ಮ ಹೃದಯಕ್ಕೆ ಸಂಬಂಧ ಪಟ್ಟ ಸಮಸ್ಯೆಗಳನ್ನು ದೂರ ಮಾಡುವಲ್ಲಿ ನೆರವಿಗೆ ಬರುತ್ತದೆ. ಹಾಗೆ ನಿಮ್ಮ ಜೀರ್ಣಕ್ರಿಯೆ ಸುಧಾರಣೆಗೂ ಕೂಡ ಸಹಕಾರಿಯಾಗುವಂತಹ ಅಂಶಗಳನ್ನು ತನ್ನಲ್ಲಿಟ್ಟುಕೊಂಡಿದೆ.



Click it and Unblock the Notifications