ಕುಂದಾಪುರ ಶೈಲಿಯಲ್ಲಿ ಚಿಕನ್‌ ಘೋ ರೋಸ್ಟ್ ಎಂದಾದರು ಟ್ರೈ ಮಾಡಿದ್ದೀರಾ?

Posted By:

ಒಂದೊಂದು ಊರಲ್ಲಿಒಂದೊಂದು ವಿಶೇಷ ಅಡುಗೆಗಳಿರುತ್ತದೆ, ದಕ್ಷಿಣ ಕನ್ನಡದಲ್ಲಿ ಕೋರಿರೊಟ್ಟಿ, ಅದೇ ಉತ್ತರ ಕರ್ನಾಟಕದಲ್ಲಿ ಖಡಕ್‌ ರೊಟ್ಟಿ, ಪಲ್ಯ ಹೀಗೆ ಒಂದೊಂದು ವೈಶಿಷ್ಠ್ಯತೆ ಇರುತ್ತದೆ. ನಾವಿಲ್ಲಿ ಕುಂದಾಪುರ ಶೈಲಿಯಲ್ಲಿ ಚಿಕನ್‌ ಘೀರೋಸ್ಟ್‌ ರೆಸಿಪಿ ನೀಡಿದ್ದೇವೆ. ಕುಂದಾಪುರದ ಕಡೆಯ ಹೋಟೆಲ್‌ಗಳಲ್ಲಿಯೂ ಈ ಬಗೆಯ ಚಿಕನ್‌ ಅಡುಗೆ ನೀವು ಸವಿಯಬಹುದು, ಆದರೆ ಇದನ್ನು ಮನೆಯಲ್ಲಿ ಮಾಡಿದರೆ ಟೇಸ್ಟ್‌ ಸೂಪರ್‌ , ಏಕೆಂದರೆ ಮನೆಯಲ್ಲಾದರೆ ಬರಿ ತುಪ್ಪ ಮಾತ್ರ ಬಳಸುತ್ತೇವೆ, ಹೋಟೆಲ್‌ನಲ್ಲಿ ತುಪ್ಪ ಜೊತೆ ಸ್ವಲ್ಪ ಎಣ್ಣೆ ಮಿಕ್ಸ್ ಮಾಡಿದರೂ ಮಾಡಬಹುದು.

ಈ ಚಿಕನ್‌ ಘೀ ರೋಸ್ಟ್‌ ಇದೆಯಲ್ಲಾ ತುಂಬಾನೇ ಸೂಪರ್ ಆಗಿರುತ್ತದೆ. ಒಮ್ಮೆ ರುಚಿ ನೋಡಿದವರು ಮತ್ತೆ-ಮತ್ತೆ ಸ್ವಲ್ಪ ಹಾಕಿ ಎಂದು ಕೇಳುವಷ್ಟರ ಮಟ್ಟಿಗೆ ರುಚಿಯಾಗಿರುತ್ತದೆ. ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

Chicken Ghee roas

ಬೇಕಾಗುವ ಸಾಮಗ್ರಿ
ಚಿಕನ್ 1 ಕೆಜಿ
ನಿಂಬೆರಸ 1 ಚಮಚ
ಉಪ್ಪು (ರುಚಿಗೆ ತಕ್ಕಷ್ಟು)
1/4 ಕಪ್‌ ಮೊಸರು
ಅರಿಶಿಣ ಪಡಿ 1/2 ಚಮಚ
ತುಪ್ಪ 3-4 ಚಮಚ

ಮಸಾಲೆಗೆ
ಬ್ಯಾಡಗಿ ಮೆಣಸು 8-10
ಕೊತ್ತಂಬರಿ ಬೀಜ 3-4 ಚಮಚ
1 ಚಮಚ ಜೀರಿಗೆ
1/4 ಚಮಚ ಮೆಂತೆ
ಬೆಳ್ಳುಳ್ಳಿ 8-10 ಎಸಳು
ಒಂದು ಚಮಚ ಹುಣಸೆ ರಸ(ಹುಣಸೆರಸ ತುಂಬಾ ಬೇಕಾಗಿಲ್ಲ, ಏಕೆಂದರೆ ಚಿಕನ್‌ಗೂ ನಿಂಬೆರಸ ಸೇರಿಸಿರುತ್ತೇವೆ ಅಲ್ವಾ)
ಸ್ವಲ್ಪ ಕರಿಬೇವು

ಮಾಡುವ ವಿಧಾನ

  • ಚಿಕನ್‌ಗೆ ಒಂದು ಚಮಚ ನಿಂಬೆರಸ, ಅರ್ಧ ಚಮಚ ಅರಿಶಿಣ ಪುಡಿ, ರುಚಿಗೆ ತಕ್ಕ ಉಪ್ಪಿ. 1/4 ಕಪ್ ಮೊಸರು ಈ ಎಲ್ಲಾ ಸಾಮಗ್ರಿ ಹಾಕಿ ಮಿಕ್ಸ್ ಮಾಡಿಡಿ.
  • ಮಿಕ್ಸ್ ಮಾಡಿ ಒಂದು ಗಂಟೆ ಇಡಿ, ಕನಿಷ್ಠ ಪಕ್ಷ ಅರ್ಧ ಗಂಟೆ ಇಡಿ.
  • ಈ ಕಡಾಯಿ ಅಥವಾ ದಪ್ಪ ತಳವಿರುವ ಪಾತ್ರೆ ಬಿಸಿ ಮಾಡಿ ಅದರಲ್ಲಿ 3-4 ಚಮಚ ತುಪ್ಪ ಹಾಕಿ
  • ಈಗ ಅದರಲಲ್ಲಿ ಮಿಕ್ಸ್ ಮಾಡಿಟ್ಟ ಚಿಕನ್‌ ಅನ್ನು ಒಂದೊಂದೇ ತೆಗೆದು ಮೆಲ್ಲನೆ ಹಾಕಿ, ನಂತರ ಬೇಯಿಸಿ, ಚಿಕನ್‌ ನೀರು ಬಿಟ್ಟು, ಚಿಕನ್‌ಸ್ವಲ್ಪ ಡ್ರೈಯಾಗುವವರೆಗೆ ಬೇಯಿಸಿ

ಇದೇ ಸಮಯದಲ್ಲಿ ನೀವು ಮಸಾಲೆ ರೆಡಿ ಮಾಡಿ.

  • 8-10 ಬ್ಯಾಡಗಿ ಮೆಣಸು, ಕೊತ್ತಂಬರಿ ಬಜ 3-4 ಚಮಚ, 1/4 ಚಮಚ ಮೆಂತೆ, ಅರ್ಧ ಚಮಚ ಜೀರಿಗೆ, 1/2 ಚಮಚ ಕಾಳು ಮೆಣಸು ಎಲ್ಲಾ ಹಾಕಿ ರೋಸ್ಟ್‌ ಮಾಡಿ.
  • ಈಗ ಈ ಮಿಶ್ರಣ ತಣ್ಣಗಾದ ಮೇಲೆ ನುಣ್ಣನೆ ರುಬ್ಬಿ, ಹೀಗೆ ರುಬ್ಬುವಾಗ ಈ ಮಸಾಲೆ ಜೊತೆಗೆ ಬೆಳ್ಳುಳ್ಳಿ, ಸ್ವಲ್ಪ ಹುಣಸೆ ಹಣ್ಣು(ಚಿಕ್ಕ ನಿಂಬೆಹಣ್ಣು ಗಾತ್ರದಷ್ಟು ಹಾಕಿ ಪೇಸ್ಟ್ ಮಾಡಿ. ನೀರು ಮೊದಲು ಸ್ವಲ್ಪ ನೀರು ಹಾಕಿ ಪೇಸ್ಟ್ ಮಾಡಿ.
  • ನಂತರ ಇನ್ನು ಸ್ವಲ್ಪ ನೀರು ಹಾಕಿ ಪೇಸ್ಟ್ ಮಾಡಿ,

ಸ್ಟೆಪ್3
ಅಷ್ಟರಲ್ಲಿ ಚಿಕನ್‌ ತುಪ್ಪದಲ್ಲಿಯೇ ಚೆನ್ನಾಗಿ ಬೆಂದಿರುತ್ತದೆ, ಅದನ್ನು ತೆಗೆದು ಒಂದು ಬೌಲ್‌ನಲ್ಲಿ ಹಾಕಿಡಿ.

ಸ್ಟೆಪ್ 4
ಈಗ ಅದೇ ತಪ್ಪದಲ್ಲಿ ಪೇಸ್ಟ್‌ ಹಾಕಿ ಕುದಿಸಿ, ನಿಮಗೆ ಚಿಕನ್‌ ಕರಿ ಕೆಂಪು ಬಣ್ಣದಲ್ಲಿ ಬೇಕೆಂದರೆ ನೀವು ಸ್ವಲ್ಪ ಕಾಶ್ಮೀರಿ ಮೆಣಸಿನ ಪುಡಿ ಸೇರಿಸಬಹುದು.

ಮಿಶ್ರಣ ಕುದಿ ಬರಲಾರಂಭಿಸಿದಾಗ ಅದರಲ್ಲಿ ಚಿಕನ್‌ ಹಾಕಿ ಮಿಕ್ಸ್ ಮಾಡಿ, ಉಪ್ಪು ಸಿಯಾಗಿದೆಯೇ ನೋಡಿ ಬೇಕಿದ್ದರೆ ಇನ್ನೂ ಸ್ವಲ್ಪ ಉಪ್ಪು ಸೇರಿಸಬಹುದು. ಅದರ ಮೇಲೆ ಕೈಯಿಂದಲೇ ಕರಿಬೇವು ಮುರಿದು ಹಾಕಿ ಮಿಕ್ಸ್ ಮಾಡಿ 5 ನಿಮಿಷ ಬೇಯಿಸಿ.
ಇಷ್ಟು ಮಾಡಿದರೆ ಕುಂದಾಪು ಶೈಲಿಯ ಚಿಕನ್‌ ಘೀ ರೋಸ್ಟ್ ರೆಡಿ.

[ of 5 - Users]
Story first published: Tuesday, November 19, 2024, 13:06 [IST]
X
Desktop Bottom Promotion