Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬಾಯಿ ಚಪ್ಪರಿಸಿ ಸವಿಯುವ ಚಪಾತಿ ಎಗ್ ರೋಲ್ ಮಾಡಿ..! ಮಕ್ಕಳಂತು ಫಿದಾ ಆಗೋದು ಖಚಿತ
ಬೆಳಗ್ಗೆ ಯಾವುದಾದರು ತಿಂಡಿ ಮಾಡಿದ್ರೆ ಕೆಲವರು ಇಷ್ಟಪಟ್ಟು ಸವಿದರೆ ಮತ್ತೆ ಕೆಲವರಿಗೆ ಇಷ್ಟವಾಗದೆ ಇರಬಹುದು. ಅದರಲ್ಲೂ ಮನೆಯಲ್ಲಿ ಮಕ್ಕಳಿದ್ದರಂತು ಬೆಳಗ್ಗೆ ಅವರಿಗೆ ತಿಂಡಿ ತಿನಿಸುವುದು ದೊಡ್ಡ ಸವಾಲಿನ ಕೆಲಸವಾಗಲಿದೆ. ನೀವು ಯಾವುದೇ ತಿಂಡಿ ಮಾಡಿದರೂ ಕೂಡ ಅವರಿಗೆ ಅದು ಇಷ್ಟವಾಗೋದೇ ಇಲ್ಲ. ಆದ್ರೆ ಮಕ್ಕಳಿಗೂ ಕೂಡ ಇಷ್ಟವಾಗುವಂಯಹ ತಿಂಡಿಯನ್ನೇ ನಾವು ಮಾಡಲು ಮುಂದಾಗುತ್ತೇವೆ.
ಅಂತಹ ಕೆಲವೇ ತಿಂಡಿಗಳಲ್ಲಿ ಈ ಎಗ್ ರೋಲ್ ಕೂಡ ಒಂದು. ಬೆಳಗ್ಗೆ ತಿಂಡಿಗೂ ಮಾಡಿ ಮಧ್ಯಾಹ್ನ ಊಟಕ್ಕೆ ಲಂಚ್ ಬಾಕ್ಸ್‌ಗೂ ಹಾಕಿ ಕಳುಹಿಸಬಹುದು. ಈ ಎಗ್ ರೋಲ್ ಮಾಡುವುದು ಮಕ್ಕಳಿಗೆ ಬಹಳ ಇಷ್ಟವಾಗಲಿದೆ, ಕೈಯಲ್ಲಿ ಹಿಡಿದು ಆರಾಮವಾಗಿ ಅವರು ಸವಿಯುತ್ತಾರೆ. ಹಾಗೆ ಇದರ ರುಚಿ ಕೂಡ ಸಖತ್ ಆಗಿರುತ್ತೆ. ಹಾಗಾದ್ರೆ ಈ ಎಂಗ್ ರೋಲ್ ಮಾಡೋದು ಹೇಗೆ?

ಸಾಮಾನ್ಯವಾಗಿ ಚಪಾತಿ ಮಾಡಿ ಚಟ್ನಿ ಜೊತೆಗೆ ಸವಿಯುತ್ತೇವೆ. ಆದ್ರೆ ಅದಕ್ಕಿಂತ ಚಪಾತಿ ಬಳಿಕ ಎಗ್ ರೋಲ್ ಮಾಡಿದರೆ ಬ್ರೇಕ್ ಫಾಸ್ಟ್ ಬೊಂಬಾಟ್ ಆಗಿರುತ್ತೆ, ಹಾಗೆ ಸ್ಪೆಷಲ್ ರೆಸಿಪಿ ಎಲ್ಲರಿಗೂ ಇಷ್ಟವಾಗುತ್ತೆ.
ಹಾಗಾದ್ರೆ ಚಪಾತಿ ಎಗ್ ರೋಲ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ? ಮಾಡುವ ಸರಿಯಾದ ಕ್ರಮದ ಕುರಿತಂತೆ ಇಲ್ಲಿ ತಿಳಿದುಕೊಳ್ಳೋಣ.
ಎಗ್ ರೋಲ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಚಪಾತಿ
- ಮೊಟ್ಟೆ
- ಈರುಳ್ಳಿ
- ಟೊಮೆಟೋ
- ಕೊತ್ತಂಬರಿ
- ಎಣ್ಣೆ
- ಧನಿಯಾ
- ಖಾರದ ಪುಡಿ
- ಗರಂ ಮಸಾಲೆ
- ಉಪ್ಪು
- ಶುಂಠಿ
- ಬೆಳ್ಳುಳ್ಳಿ
- ಕ್ಯಾಪ್ಸಿಕಂ
- ಅರಶಿಣ
ಎಗ್ ರೋಲ್ ಮಾಡುವ ವಿಧಾನ?
ಮೊದಲು ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಎಣ್ಣೆ ಕಾದ ಬಳಿಕ ಶುಂಠಿ, ಬೆಳ್ಳುಳ್ಳಿ ಹಾಕಿ 30 ಸೆಕೆಂಡ್ ಬಿಟ್ಟು ಇದಕ್ಕೆ ಸಣ್ಣ ಕ್ಯಾಪ್ಸಿಕಂ ಹಾಗೂ ಈರುಳ್ಳಿ ಹಾಕಿ 1 ನಿಮಿಷ ಫ್ರೈ ಮಾಡಿಕೊಳ್ಳಿ. ಅನಂತರ ಒಂದು ಟೊಮೆಟೋ ಅನ್ನು ಚಿಕ್ಕದಾಗಿ ಕತ್ತರಿಸಿಕೊಂಡು ಹಾಕಿಕೊಳ್ಳಿ. 3 ನಿಮಿಷ ಫ್ರೈ ಮಾಡಿಕೊಂಡ ಬಳಿಕ ಇದಕ್ಕೆ ಖಾರದ ಪುಡಿ, ಧನಿಯಾ ಪುಡಿ, ಗರಂ ಮಸಾಲೆ, ಅರಶಿಣ, ಉಪ್ಪು ಹಾಕಿಕೊಂಡು ಫ್ರೈ ಮಾಡಿ.
ಎಲ್ಲಾ ಮಸಾಲೆಗಳು ಚೆನ್ನಾಗಿ ಫ್ರೈ ಆಗಬೇಕು. ಈಗ ಸ್ವಲ್ಪ ನೀರು ಹಾಕಿ ಕುದಿಬರಲು ಬಿಡಿ. ಇದು ಗೊಜ್ಜಿನಂತೆ ಬರಬೇಕು. ಈಗ ಮೊದಲು 4 ಮೊಟ್ಟೆಯನ್ನು ಬೇಯಿಸಿ ಸಿಪ್ಪೆ ತೆಗೆದು ಸಣ್ಣ ಸಣ್ಣದಾಗಿ ಹೆಚ್ಚಿಕೊಂಡಿರಬೇಕು. ಇದನ್ನು ಕೂಡ ಈ ಮಸಾಲೆಗೆ ಹಾಕಿಕೊಳ್ಳಿ. ಹಾಗೆ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಕೊನೆಯದಾಗಿ ಇದಕ್ಕೆ ಕೊತ್ತಂಬರಿ ಸೊಪ್ಪು ಹಾಕಿಕೊಂಡು ಮಿಕ್ಸ್ ಮಾಡಿ ಒಲೆ ಆಫ್ ಮಾಡಿಕೊಳ್ಳಿ. ಇದು ಗಟ್ಟಿ ಗಟ್ಟಿಯಾಗಿರಬೇಕು. ನೀರು ನೀರಾಗಿ ಮಾಡಬೇಡಿ.
ಈಗ ಒಲೆ ಮೇಲೆ ಒಂದು ತವ ಇಟ್ಟು ಚಪಾತಿಯನ್ನು ಹಾಕಿಕೊಳ್ಳಿ. ( ಮೊದಲೇ ಈ ಎಗ್ ರೋಲ್ ಮಾಡಲು ಚಪಾತಿ ಮಾಡಿಟ್ಟುಕೊಳ್ಳಿ) ಈಗ ತವಾದ ಮೇಲೆ ಈ ಚಪಾತಿ ಹಾಕಿ ಬಿಸಿ ಮಾಡಿಕೊಳ್ಳಿ. ಎಣ್ಣೆ ಹಾಕಿ ಚಪಾತಿ ಬಿಸಿ ಮಾಡಿ. ಅನಂತರ ಚಪಾತಿಯನ್ನು ತೆಗೆದು ಮಧ್ಯದಲ್ಲಿ ಮೊಟ್ಟೆ ಪಲ್ಯವನ್ನು ಹಾಕಿಕೊಂಡು ಸುತ್ತಿಕೊಳ್ಳಿ. ಇದಕ್ಕೆ ಸಾಸ್ ಕೂಡ ಬಳಸಬಹುದು.
ಚಪಾತಿಯನ್ನು ಸುತ್ತಿಕೊಂಡು ಬೇಕಾದರೆ ನೀವು ತವ ಮೇಲೆ ಮತ್ತೆ ಬಿಸಿ ಮಾಡಬಹುದು. ಏಕೆಂದರೆ ಹೀಗೆ ರೋಸ್ಟ್ ಮಾಡಿದರೆ ರುಚಿ ಹೆಚ್ಚಾಗುತ್ತದೆ. ಇಲ್ಲವಾದಲ್ಲಿ ರೋಲ್ ಮಾಡಿ ಹಾಗೆಯೇ ಸವಿಯಬಹುದು. ಇನ್ನು ರೋಲ್ ಮಾಡುವ ಮುನ್ನ ಇದಕ್ಕೆ ಈರುಳ್ಳಿ ಕತ್ತರಿಸಿಕೊಡು ಮಧ್ಯದಲ್ಲಿ ಹಾಕಿಕೊಳ್ಳಬಹುದು. ಇಷ್ಟಾದರೆ ನಿಮ್ಮ ಮುಂದೆ ಈ ಎಗ್ ರೋಲ್ ರೆಡಿಯಾಗುತ್ತದೆ. ನೀವು ಕೂಡ ಮನೆಯಲ್ಲಿ ಮಕ್ಕಳಿಗೆ ಇದನ್ನು ಮಾಡಿ ಸವಿಯಲು ನೀಡಿ.



Click it and Unblock the Notifications