Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬಾಯಲ್ಲಿ ನೀರು ತರಿಸುವ ಗರಿ ಗರಿ ಚಕ್ಕುಲಿ..! ಬೆಣ್ಣೆ ತುಪ್ಪ ಯಾವುದೂ ಬೇಡ!
ಹಬ್ಬದ ಸಮಯದಲ್ಲಿ ನೀವು ಕರಿದ ತಿಂಡಿಗಳ ಮಾಡಿ ಸವಿಯುವುದು ಸಾಮಾನ್ಯ. ತಿಂಡಿಗಳಿದ್ದರೆ ಹಬ್ಬದ ರುಚಿ ದುಪ್ಪಟ್ಟಾಗೋದು ಖಚಿತ. ಹಬ್ಬದಲ್ಲಿ ಚಕ್ಲಿ ಅಂತಹ ತಿಂಡಿಯನ್ನಂತು ಮಾಡಿಯೇ ಮಾಡುತ್ತೇವೆ. ಒಂದಿಷ್ಟು ದಿನ ಚಕ್ಲಿಯನ್ನು ಇಟ್ಟು ಕೂಡ ಸವಿಯಬಹುದು. ಇನ್ನು ಈ ರೀತಿಯ ತಿಂಡಿಯನ್ನು ನೀವು ಬೇಕರಿಗಳಲ್ಲಿ, ಅಂಗಡಿಗಳಿಂದಲೂ ತಂದು ಸವಿದಿರಬಹುದು.
ಇನ್ನು ಮನೆಯಲ್ಲಿ ನಾವು ಹಲವು ಬಗೆಯಲ್ಲಿ ಈ ಚಕ್ಲಿ ಮಾಡಿ ಸವಿಯುವುದು ನೋಡಬಹುದು. ಮಸಾಲೆ ಭರಿತ ಗರಿ ಗರಿಯಾದ ಈ ಚಕ್ಲಿ ಎಲ್ಲರಿಗೂ ಇಷ್ಟವಾಗುತ್ತೆ. ಹಾಗೆ ಹಬ್ಬವಿದ್ದರೆ, ಮನೆಯಲ್ಲಿ ಶುಭ ದಿನಗಳಿದ್ದರೆ, ಅತಿಥಿಗಳು ಬರುವ ದಿನವಾಗಿದ್ದರೆ ಇಂತಹ ಚಕ್ಲಿಯನ್ನು ಮಾಡಿ ಸವಿಯಲು ನೀಡಬಹುದು.

ಹಾಗೆ ಈ ಚಕ್ಲಿ ಮಾಡುವುದು ಕೂಡ ಬಹಳ ಸುಲಭ. ನಾವಿಂದು ಮಕ್ಕಳ ಇಷ್ಟದ ಮೃದುವಾದ ಚಕ್ಲಿಯನ್ನು ಮಾಡುವ ಕುರಿತು ತಿಳಿದುಕೊಳ್ಳೋಣ. ಹಾಗಾದ್ರೆ ಮನೆಯಲ್ಲಿ ಈ ಚಕ್ಲಿ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಮಾಡಲು ಯಾವೆಲ್ಲಾ ವಸ್ತು ಬೇಕು? ಎಷ್ಟು ಸಮಯದಲ್ಲಿ ಈ ತಿಂಡಿ ಮಾಡಿ ಮುಗಿಸಬಹುದು ಎಂಬುದನ್ನು ನಾವಿಂದು ತಿಳಿಯೋಣ.
ಗರಿ ಗರಿ ಚಕ್ಲಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಅಕ್ಕಿ ಹಿಟ್ಟು
- ಹುರಿಗಡಲೆ
- ಎಣ್ಣೆ
- ಬಿಳಿ ಎಳ್ಳು
- ಅಜ್ವೈನಾ
- ಖಾರದ ಪುಡಿ
- ಇಂಗು
- ಉಪ್ಪು
ಗರಿ ಗರಿ ಚಕ್ಲಿ ಮಾಡುವ ಸರಿಯಾದ ವಿಧಾನವೇನು?
ಒಂದು ಮಿಕ್ಸಿ ಜಾರ್‌ಗೆ 1 ಕಪ್ ಹುರಿಗಡಲೆ ಹಾಕಿ ನುಣ್ಣಗೆ ಪುಡಿ ಮಾಡಿಕೊಂಡು ಜರಡಿ ಹಿಡಿದು ನುಣ್ಣಗಿರುವ ಹಿಟ್ಟನ್ನು ತೆಗೆದು ಬೌಲ್‌ಗೆ ಹಾಕಿಟ್ಟುಕೊಳ್ಳಿ. ಈಗ 2 ಕಪ್ ಅಕ್ಕಿ ಹಿಟ್ಟನ್ನು ಇದೇ ಹಿಟ್ಟಿಗೆ ಸೇರಿಸಿ. ಹಾಗೆ ಬಿಳಿ ಎಳ್ಳು, ಅಜ್ವೈನಾ, ಖಾರದ ಪುಡಿ, ಇಂಗು, ಉಪ್ಪು ಸಹ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ.
ಈಗ ಹಿಟ್ಟಿಗೆ 2 ಚಮಚ ಬಿಸಿ ಎಣ್ಣೆಯನ್ನು ಕುಡ ಹಾಕಿ ಮಿಕ್ಸ್ ಮಾಡಿ. ಅನಂತರ ಸ್ವಲ್ಪ ಸ್ವಲ್ಪವೇ ಬಿಸಿ ನೀರು ಹಾಕಿಕೊಳ್ಳುತ್ತಾ ಕೈಯಿಂದ ಹಿಟ್ಟನ್ನು ಮಿಕ್ಸ್ ಮಾಡಿಕೊಳ್ಳಬೇಕು. ಈ ಸಮಯದಲ್ಲಿ ಬೆಣ್ಣೆ, ತುಪ್ಪ ಬಳಸಬೇಡಿ. ಹಿಟ್ಟು ಹದವಾಗಿ ಬರುವವರೆಗೂ ಸ್ವಲ್ಪ ಸ್ವಲ್ಪ ನೀರು ಹಾಕಿ ಮಿಕ್ಸ್ ಮಾಡಿ. ಈ ಹಿಟ್ಟು ಚಪಾತಿ ಹಿಟ್ಟಿನ ಹದಕ್ಕೆ ಬರಬೇಕು.
ಮೃದುವಾಗಿ ಬರುವವರೆಗೂ ಹಿಟ್ಟನ್ನು ನಾದುಕೊಳ್ಳಬೇಕು. ಹಿಟ್ಟು ಕಲಸಿಕೊಂಡ ಬಳಿಕ ಚಕ್ಲಿ ಅಚ್ಚಿಗೆ ಎಣ್ಣೆ ಸವರಿಕೊಂಡು ಒಂದು ಉಂಡೆ ಹಿಟ್ಟನ್ನು ಅದರೊಳಗೆ ಹಾಕಿಕೊಂಡು ನಿಧಾನವಾಗಿ ನೇರವಾಗಿ ಬೇಕಾದರೆ ಬಾಣಲೆಯಲ್ಲಿನ ಎಣ್ಣೆಗೆ ಒತ್ತಿಕೊಳ್ಳಬಹುದು. ಇಲ್ಲದಿದರೆ ಎಣ್ಣೆ ಹಚ್ಚಿರುವ ಪ್ಲಾಸ್ಟಿಕ್ ಮೇಲೆ ಇಲ್ಲವೆ ತಟ್ಟೆಯ ಮೇಲೆಯೂ ಅಚ್ಚು ಒತ್ತಬಹುದು.
ನೀವು ಮೂರರಿಂದ ನಾಲ್ಕು ಸುತ್ತಿನ ಚಕ್ಲಿ ಸುತ್ತಿಕೊಳ್ಳಬಹುದು. ನಂತರ ಎಣ್ಣೆಯಲ್ಲಿ ಚಕ್ಲಿಯನ್ನು ಬಿಟ್ಟು ಕರಿದುಕೊಳ್ಳಿ. ಒಂದು ವೇಳೆ ಚಕ್ಲಿ ಬಿಡುವಾಗ ತುಂಡಾಗುತ್ತಿದ್ದರೆ ಹಿಟ್ಟು ಗಟ್ಟಿಯಾಗಿದೆ ಎಂದರ್ಥ. ಬಳಿಕ ನೀರು ಹಾಕಿ ಮತ್ತೆ ಹಿಟ್ಟು ಹದ ಮಾಡಿ ಪುನಃ ಪ್ರಯತ್ನಿಸಿ. ಇಷ್ಟಾದರೆ ನಿಮ್ಮ ಮುಂದೆ ಗರಿ ಗರಿಯ ಚಕ್ಲಿ ರೆಡಿಯಾಗುತ್ತೆ. ನೀವು ಕೂಡ ಈ ಚಕ್ಲಿ ಸವಿದು ನೋಡಿ.



Click it and Unblock the Notifications