Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಉಳಿದ ಅನ್ನದಲ್ಲಿ ಈ ಎರಡು ಕರಿದ ತಿಂಡಿ ಮಾಡಿ..! ಕೆಲವೇ ನಿಮಿಷಗಳು ಸಾಕು..!
ನೀವು ಮನೆಯಲ್ಲಿ ಅನ್ನ ಉಳಿದರೆ ಏನು ಮಾಡುತ್ತೀರಿ. ಸಾಮಾನ್ಯವಾಗಿ ಉಳಿದ ಅನ್ನವು ಮಾರನೆ ದಿನ ಬೆಳಗ್ಗೆ ಯಾವುದಾದರು ರೈಸ್ ಐಟಂ ಆಗಿ ಮತ್ತೆ ತಟ್ಟೆ ಮೇಲೆ ಬೀಳುತ್ತೆ. ಹಾಗೆ ಹೊಟ್ಟೆ ಕೂಡ ಸೇರುತ್ತೆ, ಬಹುತೇಕ ಎಲ್ಲರ ಮನೆಯಲ್ಲಿ ಉಳಿದ ಅನ್ನದಿಂದ ಚಿತ್ರಾನ್ನ ಮಾಡಿ ಸವಿಯುವುದು ಹೆಚ್ಚು. ರುಚಿ ರುಚಿಯಾಗಿ ಈ ಚಿತ್ರಾನ್ನ ಮಾಡಿ ಬೆಳಗ್ಗೆ ಸವಿಯುತ್ತಾರೆ.
ಆದ್ರೆ ಚಿತ್ರಾನ್ನ ಅಂದ್ರೆ ಹಲವರಿಗೆ ಇಷ್ಟವಾಗೋದಿಲ್ಲ. ಆದ್ರೆ ಉಳಿದ ಅನ್ನದಿಂದ ಎಷ್ಟೊಂದು ರುಚಿಕರ ಖಾದ್ಯಗಳ ಮಾಡಿ ಸವಿಯಬಹುದು ಎಂಬುದನ್ನು ನೀವು ತಿಳಿದರೆ ಮತ್ತೆಂದಿಗೂ ಬೇರೆ ಖಾದ್ಯಗಳ ಮಾಡುವ ಆಲೋಚನೆಯನ್ನೂ ಕೂಡ ಮಾಡುವುದಿಲ್ಲ. ಹಲವರು ಉಳಿದ ಅನ್ನದಿಂದ ಸಂಡಿಗೆ ಮಾಡಿ ಸವಿಯುವುದು ನೋಡಿರುತ್ತೇವೆ. ಅನ್ನದಿಂದ ಹಪ್ಪಳವನ್ನು ಕೂಡ ಮಾಡುತ್ತಾರೆ.

ಹಾಗೆ ಉಳಿದ ಅನ್ನವು ವಿವಿಧ ರೀತಿಯ ಖಾದ್ಯಗಳ ಸವಿಯುವಂತೆ ಮಾಡುತ್ತೆ. ಹೆಚ್ಚಾಗಿ ಅನ್ನವು ಉಳಿದರೆ ಅದರಿಂದ ವಡೆ, ಚಕ್ಕುಲಿ, ಸಂಡಿಗೆ ಹೀಗೆ ಒಂದಿಷ್ಟು ಗರಿ ಗರಿಯಾದ ತಿಂಡಿಗಳ ಮಾಡಿ ಸವಿಯಲು ಮುಂದಾಗುವುದು ನೋಡಬಹುದು. ಹಾಗಾದ್ರೆ ನಾವಿಂದು ಉಳಿದ ಅನ್ನದಿಂದ ಮಾಡುವ ಎರಡು ವಿಭಿನ್ನ ಹಾಗೂ ಎಲ್ಲರಿಗೂ ಇಷ್ಟವಾಗುವಂತಹ ಕರಿದ ತಿಂಡಿಗಳ ಕುರಿತಂತೆ ತಿಳಿದುಕೊಳ್ಳೋಣ.
ನಾವಿಂದು ಉಳಿದ ಅನ್ನದಿಂದ ರುಚಿ ರುಚಿಯ ವಡೆ ಹಾಗೂ ಚಕ್ಕುಲಿ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ಸುಲಭ ಮಾರ್ಗದಲ್ಲಿ ಈ ಎರಡು ವಸ್ತುಗಳನ್ನು ಮನೆಯಲ್ಲೇ ಮಾಡಿ ಸವಿಯುವುದು ಹೇಗೆ? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬೆಲ್ಲಾ ಕುರಿತಂತೆ ನಾವಿಂದು ತಿಳಿದುಕೊಳ್ಳೋಣ.
ಮೊದಲಿಗೆ ನಾವು ಉಳಿದ ಅನ್ನದಿಂದ ಈ ಚಕ್ಕುಲಿ ಮಾಡುವುದು ಹೇಗೆ ತಿಳಿಯೋಣ. ಈ ಚಕ್ಕುಲಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು ನೋಡಿ.
- ಅನ್ನ- 2ಕಪ್
- ಜೀರಿಗೆ
- ಮೈದಾ- 1 ಕಪ್
- ಕಡಲೆ ಹಿಟ್ಟು - 1 ಕಪ್
- ಎಣ್ಣೆ
- ಬಿಳಿ ಎಳ್ಳು
- ಉಪ್ಪು
- ಖಾರದ ಪುಡಿ
ಉಳಿದ ಅನ್ನದಿಂದ ಈ ಚಕ್ಕುಲಿ ಮಾಡುವುದು ಹೇಗೆ?
ಮೊದಲು ಉಳಿದಿರುವ ಅನ್ನವನ್ನು ಹುಡಿ ಮಾಡಿ ಅದನ್ನು ಒಂದು ಮಿಕ್ಸಿ ಜಾರ್‌ಗೆ ಹಾಕಿಕೊಳ್ಳಿ. ಇದಕ್ಕೆ ನೀರು ಹಾಕದೆಯೇ ರುಬ್ಬಿಕೊಳ್ಳಬೇಕು. ಅದು ಮೆತ್ತಗಾಗುವಂತೆ ರುಬ್ಬಿಕೊಳ್ಳಿ. ಸ್ವಲ್ಪ ಸ್ವಲ್ಪವೇ ಮಿಕ್ಸಿಗೆ ಹಾಕಿ ರುಬ್ಬಿದರೆ ನುಣ್ಣಗೆ ಪುಡಿಯಾಗುತ್ತದೆ. ನಂತರ ಇದನ್ನು ಒಂದು ಬೌಲ್‌ಗೆ ಹಾಕಿಟ್ಟುಕೊಂಡು ಬಳಿಕ ಹದ ಮಾಡಿಕೊಳ್ಳಬೇಕು. ಇದು ಹಿಟ್ಟಿನಂತಹ ಹದಕ್ಕೆ ಬರಬೇಕು, ನಂತರ ಇದಕ್ಕೆ ಅರ್ಧ ಕಪ್ ಮೈದಾ ಹಿಟ್ಟು, ಅರ್ಧ ಕಪ್ ಕಡಲೆ ಹಿಟ್ಟು, ಹಾಗೆ ಖಾರದ ಪುಡಿ, ಜೀರಿಗೆ, ಉಪ್ಪು, ಬಿಳಿ ಎಳ್ಳು ಸಹ ಇದ್ದರೆ ಹಾಕಿಕೊಂಡು ಸ್ವಲ್ಪ ಎಣ್ಣೆ ಅಥವಾ ತುಪ್ಪ ಸಹ ಹಾಕಿಕೊಂಡು ಮಿಕ್ಸ್ ಮಾಡಬೇಕು.
ಕೈಯಿಂದ ಈ ಹಿಟ್ಟನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳುತ್ತಾ ಹದ ಮಾಡಿಕೊಳ್ಳಬೇಕು. ಇದು ಚಪಾತಿ ಹಿಟ್ಟಿನಂತಹ ಹದಕ್ಕೆ ಬರಬೇಕಾಗುತ್ತದೆ. ಈಗ ಚಕ್ಕಲಿ ಹಾಕಲು ಇರುವ ಅಚ್ಚು ತೆಗೆದುಕೊಳ್ಳಿ. ಈ ಅಚ್ಚು ಇಲ್ಲ ಎಂದಾದರೆ ಹಾಲಿನ ಕವರ್ ಅನ್ನು ತುದಿಯಲ್ಲಿ ನಕ್ಷತ್ರದ ಆಕಾರಕ್ಕೆ ಕತ್ತರಿಸಿಕೊಂಡು ಅದರೊಳಗೆ ಹಿಟ್ಟನ್ನು ತುಂಬಿ ಚಕ್ಕುಲಿ ರೀತಿಯಲ್ಲಿ ಮಾಡಬಹುದು.
ಈಗ ಅಚ್ಚಿಗೆ ಮೊದಲು ಎಣ್ಣೆ ಹಚ್ಚಿಕೊಂಡು ಇದರ ಒಳಗೆ ಹಿಟ್ಟನ್ನು ತುಂಬಿಕೊಳ್ಳಿ. ನಂತರ ನಿಮಗೆ ಯಾವ ಗಾತ್ರಕ್ಕೆ ಬೇಕೋ ಆ ಗಾತ್ರಕ್ಕೆ ಚಕ್ಕುಲಿಯನ್ನು ಒಂದು ಪ್ಲಾಸ್ಟಿಕ್ ಅಥವಾ ತಟ್ಟೆಯ ಮೇಲೆ ಬಿಟ್ಟುಕೊಳ್ಳಿ. ಅನಂತರ ಒಲೆ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ಬಳಿಕ 3ರಿಂದ 4 ಚಕ್ಕುಲಿಯನ್ನು ಇದರಲ್ಲಿ ಹಾಕಿ ಕರಿಯಲು ಬಿಡಿ. ಎಣ್ಣೆಗೆ ಹಾಕಿದ ತಕ್ಷಣ ತಿರುಗಿಸಲು ಹೋಗಬೇಡಿ. ಸಣ್ಣ ಉರಿಯಲ್ಲಿ ಕರಿದುಕೊಳ್ಳಿ. ಎರಡು ಭಾಗವನ್ನು ಕರಿದ ಬಳಿಕ ತೆಗೆದು ಜರಡಿಗೆ ಹಾಕಿ ಬಳಿಕ ಸವಿಯಲು ನೀಡಿ. ಇಷ್ಟಾದರೆ ಅನ್ನದ ಚಕ್ಕುಲಿ ರೆಡಿಯಾಗುತ್ತದೆ. ನೀವು ಕೂಡ ಇದನ್ನು ಮಾಡಿ ನೋಡಿ.
ಈಗ ನಾವು ಉಳಿದ ಅನ್ನದಿಂದ ಮಸಾಲೆ ವಡೆ ಮಾಡುವ ಕುರಿತಂತೆ ತಿಳಿದುಕೊಳ್ಳೋಣ.
ಮೇಲೆ ತಿಳಿಸಿರುವಂತೆ ಉಳಿದ ಅನ್ನದಿಂದ ಹೇಗೆ ಚಕ್ಕುಲಿ ಮಾಡಬಹುದೋ ಹಾಗೆ ಅತ್ಯುತ್ತಮ ರುಚಿಯಲ್ಲಿ ವಡೆ ಕೂಡ ಮಾಡಬಹುದು. ಇದು ತೂತು ವಡೆಯಲ್ಲ ಬದಲಿಗೆ ಮಸಾಲೆ ವಡೆ ರೀತಿಯಲ್ಲಿ ಮಾಡುವಂತಹ ವಡೆಯಾಗಿದೆ. ಹೀಗೆ ಮಾಡಿದರೆ ಎಲ್ಲರು ಒಮ್ಮೆ ಇದನ್ನು ಸವಿಯಲು ಮುಂದಾಗುತ್ತಾರೆ. ನೀವು ಕೂಡ ಉಳಿದ ಅನ್ನದಿಂದ ಈ ವಡೆಯನ್ನು ಮಾಡಿಯೇ ಮಾಡುತ್ತೀರಿ.
ಹಾಗಾದ್ರೆ ಉಳಿದ ಅನ್ನದಿಂದ ವಡೆ ಮಾಡುವುದು ಹೇಗೆ? ಮಾಡುವ ವಿಧಾನವೇನು?, ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬ ಕುರಿತಂತೆ ನಾವಿಂದು ತಿಳಿದುಕೊಳ್ಳೋಣ.
ಉಳಿದ ಅನ್ನದಿಂದ ವಡೆ ಮಾಡಲು ಬೇಕಾಗುವ ವಸ್ತುಗಳೇನು?
- ಅನ್ನ
- ಕಡಲೆ ಹಿಟ್ಟು
- ಅಕ್ಕಿ ಹಿಟ್ಟು
- ಈರುಳ್ಳಿ
- ಕೊತ್ತಂಬರಿ
- ಜೀರಿಗೆ ಪುಡಿ
- ಖಾರದ ಪುಡಿ
- ಎಣ್ಣೆ
- ಉಪ್ಪು
- ಶುಂಠಿ ಬೆಳ್ಳುಳ್ಳಿ ಪೇಸ್ಟ್
- ಹಸಿ ಮೆಣಸು
ಉಳಿದ ಅನ್ನದಿಂದ ವಡೆ ಮಾಡುವುದು ಹೇಗೆ?
ಒಂದು ಬೌಲ್‌ಗೆ ಅನ್ನವನ್ನು ಹಾಕಿಕೊಂಡು ಅದಕ್ಕೆ ಈರುಳ್ಳಿ, ಸಣ್ಣದಾಗಿ ಹೆಚ್ಚಿರುವ ಕೊತ್ತಂಬರಿ, ಹಸಿ ಮೆಣಸು, ಜೀರಿಗೆ ಪುಡಿ, ಖಾರದ ಪುಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಹಾಕಿಕೊಂಡು ಕೈಯಿಂದ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ಕಡಲೆ ಹಿಟ್ಟು, ಅಕ್ಕಿ ಹಿಟ್ಟು ಕೂಡ ಹಾಕಿಕೊಂಡು ಕಲಸಿಕೊಳ್ಳಿ. ಕಲಸುವಾಗ ಸ್ವಲ್ಪ ಸ್ವಲ್ಪವೇ ನೀರು ಹಾಕಿಕೊಳ್ಳಿ. ಉಂಡೆ ಕಟ್ಟುವಂತೆ ಬರುವಷ್ಟು ನೀರು ಹಾಕಿ ಹದ ಮಾಡಿ, ಬಹಳ ತೆಳುವಾಗಿ ಮಾಡಬೇಡಿ. ವಡೆಗೆ ಯಾವ ಹದ ಬೇಕೋ ಹಾಗೆ ಮಾಡಿ.
ನಂತರ ಒಂದೊಂದು ಉಂಡೆ ತೆಗೆದುಕೊಂಡು ಅದನ್ನು ಒಂದು ಪ್ಲಾಸ್ಟಿಕ್‌ಗೆ ಎಣ್ಣೆ ಹಚ್ಚಿ ಇದನ್ನು ತಟ್ಟಿಕೊಳ್ಳಿ. ವಡೆ ಆಕಾರವಾಗಿ ತಟ್ಟಿಕೊಳ್ಳಬೇಕು. ಹಾಗೆ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಕಾಯಲು ಬಿಡಿ. ಎಣ್ಣೆ ಕಾದ ಬಳಿಕವಷ್ಟೇ ಈ ವಡೆಯನ್ನು ಅದರೊಳಗೆ ಬಿಡಿ. ಎರಡೂ ಕಡೆಗಳನಲ್ಲಿ ಚೆನ್ನಾಗಿ ಕರಿದುಕೊಳ್ಳಬೇಕು. ಮೇಲೆ ಸಣ್ಣ ಉರಿಯಲ್ಲಿ ಕರಿದುಕೊಳ್ಳಬೇಕು ಇಲ್ಲದಿದ್ದರೆ ಅದು ಒಳಗೆ ಬೇಯುವುದಿಲ್ಲ.
ಹೀಗಾಗಿ ಸಣ್ಣ ಉರಿಯಲ್ಲಿ ಚೆನ್ನಾಗಿ ಕರಿದುಕೊಳ್ಳಿ. ಇದನ್ನು ಕೆಲ ದಿನಗಳ ಕಾಲ ಇಟ್ಟು ಸವಿಯಬಹುದು. ಊಟದ ಸಮಯದಲ್ಲಿ ಹಾಗೆ ಟೀ ಕಾಫಿಯ ಜೊತೆಗೆ ಸವಿಯಲು ಬಹಳ ರುಚಿಯಾಗಿರುತ್ತೆ.
ಈ ರೀತಿ ಉಳಿದ ಅನ್ನದಿಂದ ಎರಡು ಅದ್ಭುತ ಕರಿದ ಖಾದ್ಯ ಮಾಡಬಹುದು. ಎರಡೂ ಕೂಡ ಸಂಜೆಯ ಸ್ನ್ಯಾಕ್ಸ್ ಆಗಿ ಎಲ್ಲರ ಬಾಯಲ್ಲೂ ನೀರು ತರಿಸಲಿದೆ. ಹೀಗಾಗಿ ನೀವು ಕೂಡ ಮನೆಯಲ್ಲಿ ಅನ್ನ ಉಳಿದರೆ ಈ ರೀತಿ ತಿಂಡಿ ಮಾಡಿ ಸವಿದು ನೋಡಿ. ಮಾಡೋದು ಕೂಡ ಬಹಳ ಸುಲಭ. ಹಾಗೆ ಕಡಿಮೆ ವಸ್ತುಗಳ ಬಳಸಿಕೊಂಡು ಮಾಡಬಹುದು. ಮನೆ ಮಂದಿಗೆಲ್ಲಾ ಇಷ್ಟವಾಗುವ ಎರಡು ತಿಂಡಿಗಳಿವು.



Click it and Unblock the Notifications