Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಆರೋಗ್ಯಕ್ಕೂ ಬೆಸ್ಟ್ ಈ ಚಕ್ಕಡಿಕಾಯಿ ಫ್ರೈ: ಸುಲಭವಾಗಿ ಮಾಡಬಹುದು!
ಊಟದೊಂದಿಗೆ ಸವಿಯಲು ನೀವು ಯಾವುದಾದರು ಪಲ್ಯ ಮಾಡಿ ಸವಿಯಲು ಮುಂದಾಗುತ್ತಿರಿ. ಊಟದ ರುಚಿ ಹೆಚ್ಚಿಸಲು ಈ ಪಲ್ಯಗಳು ಬಹಳ ಮುಖ್ಯವಾಗುತ್ತೆ. ಅದ್ರಲ್ಲೂ ನಾವಿಂದು ರುಚಿ ರುಚಿಯಾದ ಚೌಳಿಕಾಯಿ ಅಥವಾ ಗೋರಿಕಾಯಿ ಪಲ್ಯ ಮಾಡಿರುತ್ತೀರಿ. ಅದೇ ರುಚಿ ನೀಡುವ ಚಕ್ಕಡಿಕಾಯಿ ಸಹ ರುಚಿ ಹೆಚ್ಚಿಸುವ ತರಕಾರಿ. ಈ ಚಕ್ಕಡಿ ಕಾಯಿ ಅಥವಾ ಚಪ್ಪರದ ಅವರೆಯಿಂದ ಮಾಡುವ ಹಲವು ಖಾದ್ಯಗಳನ್ನು ನೀವು ಸಹ ಮಾಡಿ ಸವಿದಿರುತ್ತೀರಿ. ಆದ್ರೆ ನಾವಿಂದು ಸ್ಪೆಷಲ್ ಚಕ್ಕಡಿಕಾಯಿ ರೆಸಿಪಿ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ.
ಚಕ್ಕಡಿಕಾಯಿಯಲ್ಲಿ ಪಲ್ಯ ಮಾಡಿದ್ರೆ ನಿಮ್ಮ ಆರೋಗ್ಯದ ದೃಷ್ಟಿಯಲ್ಲೂ ಸಹ ಇದು ಬಹಳ ಉತ್ತಮವಾಗಿರಲಿದೆ, ಎಲ್ಲಾ ರೀತಿಯ ಆರೋಗ್ಯಕರ ಅಂಶ ಹೊಂದಿರುವ ಈ ತರಕಾರಿಯಿಂದ ನೀವು ವಿಶಿಷ್ಟ ರುಚಿಯಲ್ಲಿ ಪಲ್ಯ, ಸಾಂಬಾರ್ ಸಹ ಮಾಡಿರುವಿರಿ. ಆದ್ರೆ ನಾವಿಂದು ಈ ಚಕ್ಕಡಿಕಾಯಿಯ ಫ್ರೈ ಮಾಡುವ ಕುರಿತು ತಿಳಿಯೋಣ.

ಮೆಣಸಿನ ಕಾಯಿಯಲ್ಲಿ ಮಾಡುವ ಬೋಂಡಾದಂತೆ ಅಥವಾ ಬೆಂಡೆಕಾಯಿ ಬಳಸಿ ಮಾಡುವ ಮಸಾಲ ಫ್ರೈ ಅಂತೆಯೇ ಈ ಚಕ್ಕಡಿಕಾಯಿಯ ಫ್ರೈ ಮಾಡಬಹುದು. ಹಾಗಾದ್ರೆ ಊಟದೊಂದಿಗೆ ಸವಿಯಲು ಚಕ್ಕಡಿಕಾಯಿ ಫ್ರೈ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಚಕ್ಕಡಿಕಾಯಿ ಫ್ರೈ ಮಾಡಲು ಬೇಕಾಗುವ ವಸ್ತುಗಳು
- ಚಕ್ಕಡಿ ಕಾಯಿ ಅಥವಾ ಚಪ್ಪರದ ಅವರೆ
- ಕಡಲೆ ಹಿಟ್ಟು
- ಇಂಗು
- ಅರಿಶಿನ ಪುಡಿ
- ಖಾರದ ಪುಡಿ
- ಅಕ್ಕಿ ಹಿಟ್ಟು
- ಜೀರಿಗೆ ಪುಡಿ
- ಕೊತ್ತಂಬರಿ ಸೊಪ್ಪು
- ಪುದೀನ ಎಲೆ
- ಅಡುಗೆ ಸೋಡಾ
- ಕ್ಯಾರೆಟ್
- ಈರುಳ್ಳಿ
- ಕೊತ್ತಂಬರಿ ಸೊಪ್ಪು
- ರುಚಿಗೆ ತಕ್ಕಷ್ಟು ಉಪ್ಪು
- ಅಡುಗೆ ಎಣ್ಣೆ
ಚಕ್ಕಡಿಕಾಯಿ ಫ್ರೈ ಮಾಡುವ ವಿಧಾನವೇನು?
ಚಕ್ಕಡಿಕಾಯಿಯನ್ನು ಚೆನ್ನಾಗಿ ತೊಳೆದು ಇಟ್ಟುಕೊಳ್ಳಿ. ಹಾಗೆ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಖಾರದ ಪುಡಿ ಹಾಕಿ ಕಲಸಿಕೊಳ್ಳಿ. ಹಾಗೆ ಈಗ ಮತ್ತೊಂದು ಬೌಲ್‌ಗೆ ಕಡಲೆ ಹಿಟ್ಟು ಅಕ್ಕಿ ಹಿಟ್ಟು, ಜೀರಿಗೆ ಪುಡಿ, ಖಾರದ ಪುಡಿ, ಸೋಡಾ ಪುಡಿ, ಉಪ್ಪು, ಹಾಕಿ ಡ್ರೈ ಮಿಕ್ಸ್ ಮಾಡಿಕೊಳ್ಳಿ.
ನಂತರ ಸ್ವಲ್ಪ ಸ್ವಲ್ಪ ನೀರು ಹಾಕಿಕೊಂಡು ಬೋಂಡಾ ಹಿಟ್ಟಿನ ಹದಕ್ಕೆ ಚೆನ್ನಾಗಿ ಮಿಕ್ಸ್ ಮಾಡುತ್ತಾ ಕಲಸಿಕೊಳ್ಳಬೇಕು. ಹಿಟ್ಟು ತೆಳುವಾದರೆ ಮತ್ತೆ ಹಿಟ್ಟು ಹಾಕಿ ಕಲಸಿಕೊಳ್ಳಿ. ಒಟ್ಟಿನಲ್ಲಿ ಚಕ್ಕಡಿಕಾಯಿಗೆ ಚೆನ್ನಾಗಿ ಅಂಟಿಕೊಳ್ಳುವಂತೆ ಈ ಹಿಟ್ಟನ್ನು ಹದ ಮಾಡಿಕೊಳ್ಳಬೇಕು.
ಕೊನೆಯಲ್ಲಿ ಇದಕ್ಕೆ ಸಣ್ಣದಾಗಿ ಹೆಚ್ಚಿದ್ದ ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು ಹಾಕಿಕೊಂಡು ಮಿಕ್ಸ್ ಮಾಡಿ. ಈಗ ಎಲ್ಲಾ ಚಕ್ಕಡಿಕಾಯಿಗಳನ್ನು ಈ ಹಿಟ್ಟಿನಲ್ಲಿ ಅದ್ದಿಕೊಳ್ಳಿ.
ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಿಸಿಯಾಗಲು ಬಿಡಬೇಕು. ಅನಂತರ ಚಕ್ಕಡಿಕಾಯಿಗಳನ್ನು ಒಂದೊಂದಾಗಿ ಹಿಟ್ಟಿನಿಂದ ತೆಗೆದು ಎಣ್ಣೆಗೆ ಬಿಟ್ಟುಕೊಳ್ಳಿ. ಬೋಂಡಾ ಕರಿದುಕೊಂಡಂತೆ ಇದನ್ನು ಸಹ ಕರಿದುಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿರುಚಿಯಾದ ಚಕ್ಕಡಿಕಾಯಿ ಮಸಾಲ ಫ್ರೈ ಸಿದ್ದವಾಗುತ್ತೆ, ಊಟದೊಂದಿಗೆ ಮಾತ್ರವಲ್ಲದೆ ಸಂಜೆ ಸಮಯದಲ್ಲಿ ಸ್ನ್ಯಾಕ್ಸ್ ಆಗಿ ಕೂಡ ಇದನ್ನು ಸವಿಯಬಹುದು.



Click it and Unblock the Notifications