Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬೆಳಗ್ಗೆ ತಿಂಡಿಗೆ ಈ ಕ್ಯಾರೆಟ್ ರೈಸ್ ಮಾಡಿ ನೋಡಿ.!! ಅದ್ಭುತ ರುಚಿ ಇನ್ನೆಲ್ಲೂ ಸಿಗಲ್ಲ!
ನೀವು ಬೆಳಗ್ಗೆ ತಿಂಡಿಯ ವಿಚಾರವಾಗಿ ಬಹಳ ಜಾಗರೂಕವಾಗಿದ್ದರೆ ಆರೋಗ್ಯಕರ ತಂಡಿ ಸವಿಯಲು ಮುಂದಾಗುವುದು ಕಾಮನ್. ಅದರಲ್ಲೂ ಮುಖ್ಯವಾಗಿ ಬೆಳಗ್ಗಿನ ತಿಂಡಿ ಡಷ್ಟು ಆರೋಗ್ಯಕರ ವಾಗಿರಲಿದ್ಯೋ ಆ ದಿನ ಕೂಡ ಅಷ್ಟೇ ಮಧುರವಾಗಿರಲಿದೆ. ಹೀಗಾಗಿ ಎಲ್ಲರೂ ಬೆಳಗ್ಗೆಯ ತಿಂಡಿಯ ಕಡೆಗೆ ಬಹಳ ಗಮನ ಇಡುತ್ತಾರೆ. ಹಾಗೆ ಆರೋಗ್ಯಕರ ತಿಂಡಿ ಸವಿಯುವ ಕಡೆಗೆ ಗಮನ ಹರಿಸುತ್ತಾರೆ.
ಇಂತಹ ಹತ್ತಾರು ಆರೋಗ್ಯಕರ ತಿಂಡಿಗಳ ಸಾಲಿನಲ್ಲಿ ನಾವಿಂದು ಸುಲಭವಾಗಿ ಮಾಡುವಂತಹ ಖಾದ್ಯದ ಕುರಿತು ತಿಳಿದುಕೊಳ್ಳೋಣ. ಅದರಲ್ಲೂ ಕ್ಯಾರೆಟ್ ರೈಸ್ ರುಚಿಯಲ್ಲೂ ಬೆಸ್ಟ್ ಹಾಗೆ ಆರೋಗ್ಯಕ್ಕೂ ಕೂಡ ಬಹಳ ಉತ್ತಮ. ಕ್ಯಾರೆಟ್ ತುರಿದು ಈ ರೈಸ್ ಮಾಡಿ ಸವಿಯುವುದು ನಿಮ್ಮ ಬಾಯಲ್ಲಿ ನೀರು ತರಿಸಲಿದೆ.

ಕ್ಯಾರೆಟ್ ಬಳಸಿ ಮಾಡುವಂತಹ ಈ ರೈಸ್ ಖಾದ್ಯ ಸವಿಯಲು ಬಹಳ ರುಚಿಯಾಗಿರಲಿದೆ. ಹಾಗೆ ಎಲ್ಲರಿಗೂ ಇಷ್ಟವಾಗುತ್ತೆ. ಇನ್ನು ಬೆಳಗ್ಗೆ ತಿಂಡಿಗೆ ಮಾತ್ರವಲ್ಲ ಮಧ್ಯಾಹ್ನದ ಬಾಕ್ಸ್‌ಗೂ ಕೂಡ ಹಾಕಿಕೊಂಡು ಇದನ್ನು ಸವಿಯಬಹುದು. ಹಾಗಾದ್ರೆ ಈ ಕ್ಯಾರೆಟ್ ರೈಸ್ ಮಾಡುವುದು ಹೇಗೆ ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ.
ಕ್ಯಾರೆಟ್ ರೈಸ್ ಮಾಡುವುದು ಹೇಗೆ?, ಕ್ಯಾರೆಟ್ ರೈಸ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಕ್ಯಾರೆಟ್ ರೈಸ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಕ್ಯಾರೆಟ್
- ಅನ್ನ
- ಏಲಕ್ಕಿ
- ದಾಲ್ಚಿನ್ನಿ
- ಲವಂಗ
- ಗೋಡಂಬಿ
- ಈರುಳ್ಳಿ
- ಹಸಿ ಮೆಣಸು
- ಕರಿಬೇವು
- ಕರಿಬೇವು
- ಸಾಂಬಾರ್ ಪುಡಿ
- ಕೊತ್ತಂಬರಿ ಪುಡಿ
- ಅರಿಶಿನ ಪುಡಿ
- ತೆಂಗಿನಕಾಯಿ
- ನಿಂಬೆ ರಸ
- ಕೊತ್ತಂಬರಿ ಸೊಪ್ಪು
- ಅಡುಗೆ ಎಣ್ಣೆ
- ರುಚಿಗೆ ತಕ್ಕಷ್ಟು ಉಪ್ಪು
ಕ್ಯಾರೆಟ್ ರೈಸ್ ಮಾಡುವ ವಿಧಾನವೇನು?
ಮೊದಲು ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಚಕ್ಕೆ ಲವಂಗ, ಗೋಡಂಬಿ, ಪಲಾವ್ ಎಲೆ, ಏಲಕ್ಕಿ ಹಾಕಿಕೊಂಡು ಬಿಸಿ ಮಾಡಿ. ಈಗ ಒಂದು ಈರುಳ್ಳಿ ಕತ್ತರಿಸಿ ಇದಕ್ಕೆ ಹಾಕಿ ಬಳಿಕ ಹಸಿ ಮೆಣಸು, ಕರಿಬೇವು ಹಾಕಿಕೊಳ್ಳಿ. ಈಗ ತುರಿದುಕೊಂಡಿರುವ ಕ್ಯಾರೆಟ್ ಅನ್ನು ಸಹ ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿಕೊಳ್ಳಿ.
ಇದಕ್ಕೆ ಉಪ್ಪು ಹಾಕಿಕೊಂಡು 2 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ. ಹಾಗೆ ಸಣ್ಣ ಉರಿಯಲ್ಲಿ ಒಲೆ ಹಾಗೆ ಇಟ್ಟು ಇದಕ್ಕೆ ಸಾಂಬಾರ್ ಪುಡಿ, ಅರಶಿಣ ಪುಡಿ, ಧನಿಯಾ ಪುಡಿ ಸಹ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. 1 ನಿಮಿಷ ಬಿಟ್ಟು ಅದಕ್ಕೆ ಮೊದಲೇ ಮಾಡಿಟ್ಟಿರುವ ಅನ್ನವನ್ನು ಹಾಕಿಕೊಳ್ಳಿ. ಹುಡಿ ಹುಡಿಯಾಗಿ ಅನ್ನ ಮಾಡಿಕೊಂಡಿದ್ದರೆ ಈ ಖಾದ್ಯ ಬಹಳ ರುಚಿಯಾಗುತ್ತೆ.
ಅನ್ನ ಹಾಕಿದ ಬಳಿಕ 3 ನಿಮಿಷಗಳ ಕಾಲ ಫ್ರೈ ಮಾಡಿ, ಹಾಗೆ ಈ ನಡುವೆ ತೆಂಗಿನಕಾಯಿ ತುರಿ, ಹಾಗೆ ನಿಂಬೆ ರಸ ಹಾಕಿ ಮಿಕ್ಸ್ ಮಾಡಿ. ಕೊನೆಯದಾಗಿ ಇದಕ್ಕೆ ಕೊತ್ತಂಬರಿ ಸೊಪ್ಪು ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿ ಒಲೆ ಆಫ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಬೆಳಗ್ಗೆ ತಿಂಡಿಗೆ ಆರೋಗ್ಯಕರ ಕ್ಯಾರೆಟ್ ರೈಸ್ ರೆಡಿಯಾಗುತ್ತದೆ. ಮಧ್ಯಾಹ್ನದ ಲಂಚ್ ಬಾಕ್ಸ್‌ಗೂ ಕೂಡ ಇದು ಅದ್ಭುತವಾಗಿರುತ್ತೆ. ನೀವು ಸಹ ಮಾಡಿ ನೋಡಿ. ಇದನ್ನು ಮಾಡುವುದು ಬಹಳ ಸುಲಭ ಹಾಗೆ ಕಡಿಮೆ ಸಮಯ ಹಿಡಯಲಿದೆ. ರುಚಿಯಲ್ಲೂ ಫಸ್ಟ್ ಕ್ಲಾಸ್ ಮನೆಯಲ್ಲಿ ಮಕ್ಕಳಿದ್ದರೆ ಈ ಕ್ಯಾರೆಟ್ ರೈಸ್ ಅವರಿಗೆ ಬಹಳ ರುಚಿ ನೀಡಲಿದೆ.



Click it and Unblock the Notifications