Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಸಖತ್ ರುಚಿಯ ಈ ಕ್ಯಾರೆಟ್ ಚಟ್ನಿ ಮಾಡಿದ್ದೀರಾ? ಮಾಡುವ ವಿಧಾನ ಇಲ್ಲಿದೆ!
ನೀವು ಹಲವು ಬಗೆಯ ತಿಂಡಿಗಳಿಗೆ ಹಲವು ರುಚಿಯ ವಿಭಿನ್ನ ಚಟ್ನಿ ಮಾಡಿ ಸವಿದಿರುತ್ತೀರಿ. ಅದರಲ್ಲೂ ವಿವಿಧ ಬಗೆಯ ತರಕಾರಿಗಳ ಚಟ್ನಿಯನ್ನು ನೀವು ಸವಿಯಲು ಇಷ್ಟಪಡಬಹುದು. ಬ್ರೇಕ್ ಫಾಸ್ಟ್‌ಗೆ ದೋಸೆ ಇಡ್ಲಿ ಮಾಡಿದ್ದರೆ ಅದಕ್ಕೆ ವಿಶೇಷವಾಗಿ ಒಂದು ಚಟ್ನಿ ಮಾಡಿದರೆ ರುಚಿ ಅದ್ಭುತವಾಗಿರುತ್ತೆ. ಅದರಲ್ಲೂ ಕ್ಯಾರೆಟ್‌ನಿಂದ ಮಾಡುವ ವಿಭಿನ್ನ ರುಚಿಯ ಚಟ್ನಿ ನೀವು ಎಂದಾದರು ಸವಿದಿದ್ದೀರಾ?
ಕ್ಯಾರೆಟ್ ನಮ್ಮ ದೇಹಕ್ಕೆ ಎಷ್ಟು ಮುಖ್ಯ ಅನ್ನೋದು ನಿಮಗೆಲ್ಲಾ ತಿಳಿದಿರಬಹುದು. ಕ್ಯಾರೆಟ್ ನಿಮ್ ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಹಾಗೆ ನಿಮ್ಮ ರಕ್ತ ಶುದ್ಧಿಗೆ ಇದು ಬಹಳ ಸಹಕಾರಿ, ಅದರಲ್ಲೂ ಈ ಕ್ಯಾರೆಟ್ ಅನ್ನು ಹಸಿಯಾಗಿ ಸವಿಯುವುದು ಬಹಳ ಉತ್ತಮವಂತೆ. ಕ್ಯಾರೆಟ್‌ನಲ್ಲಿ ಫೈಬರ್, ಪ್ರೋಟೀನ್, ಖನಿಜ, ಕಾರ್ಬೋಹೈಡ್ರೇಟ್ ಪ್ರಮಾಣ ಅಧಿಕವಾಗಿದೆ.

ಕ್ಯಾರೆಟ್ ಅನ್ನು ನೀವು ಸಾಂಬಾರ್ ಜೊತೆಗೂ ಹಾಕಿರುತ್ತೀರಿ. ಹಾಗೆ ಕ್ಯಾರೆಟ್‌ನಿಂದ ಮಾಡುವ ಹಲ್ವಾ ನೆನೆದರೆ ಬಾಯಲ್ಲಿ ನೀರು ಬರುತ್ತೆ. ಹಾಗೆ ಈ ಕ್ಯಾರೆಟ್‌ನಿಂದ ಮಾಡುವಂತಹ ಈ ಚಟ್ನಿ ಕೂಡ ಅತ್ಯದ್ಭುತ ರುಚಿ ನೀಡಲಿದೆ. ಹಾಗಾದ್ರೆ ಈ ಕ್ಯಾರೆಟ್ ಚಟ್ನಿ ಮಾಡುವುದು ಹೇಗೆ ಎನ್ನುವುದನ್ನು ನಾವಿಂದು ತಿಳಿದುಕೊಳ್ಳೋಣ.
ಕ್ಯಾರೆಟ್ ಚಟ್ನಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಕ್ಯಾರೆಟ್ ಚಟ್ನಿ ಮಾಡುವ ವಿಧಾನವೇನು?, ಕ್ಯಾರೆಟ್ ಚಟ್ನಿ ಮಾಡಲು ಎಷ್ಟು ಸಮಯ ಹಿಡಿಯಲಿದೆ? ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಕ್ಯಾರೆಟ್ ಚಟ್ನಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಕ್ಯಾರೆಟ್- 4
- ಈರುಳ್ಳಿ -1
- ಕಡಲೆ ಬೇಳೆ
- ಒಣ ಮೆಣಸು
- ಹುಣಸೆ ಹಣ್ಣು
- ಬೆಳ್ಳುಳ್ಳಿ
- ಸಾಸಿವೆ
- ಉದ್ದಿನ ಬೇಳೆ
- ಕರಿಬೇವಿನ ಸೊಪ್ಪು
- ಉಪ್ಪು
- ಅಡುಗೆ ಎಣ್ಣೆ
ಕ್ಯಾರೆಟ್ ಚಟ್ನಿ ಮಾಡುವ ವಿಧಾನ ಇಲ್ಲದೆ
ಮೊದಲು ಒಂದು ಬಾಣಲೆ ಒಲೆ ಮೇಲೆ ಇಟ್ಟು ಎಣ್ಣೆ ಹಾಕಿಕೊಂಡು ಬಿಸಿಯಾದ ಬಳಿಕ ಇದಕ್ಕೆ ಕಡಲೆ ಬೇಳೆ ಹಾಕಿ 3 ನಿಮಿಷ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಒಣ ಮೆಣಸು, ಬೆಳ್ಳುಳ್ಳಿ ಹಾಕಿ ಮತ್ತೆ 2 ನಿಮಿಷ ಫ್ರೈ ಮಾಡಿಕೊಳ್ಳಿ. ಈಗ ಕತ್ತರಿಸಿಕೊಂಡಿರುವ ಈರುಳ್ಳಿ ಹಾಕಿಕೊಂಡು 3 ನಿಮಿಷ ಮತ್ತೆ ಫ್ರೈ ಮಾಡಿಕೊಳ್ಳಿ.
ಈಗ ಕತ್ತರಿಸಿಕೊಂಡಿರುವ ಕ್ಯಾರೆಟ್ ಅನ್ನು ಕೂಡ ಇದಕ್ಕೆ ಹಾಕಿ ಮಿಕ್ಸ್ ಮಾಡಿಕೊಳ್ಳುತ್ತಾ ಇದಕ್ಕೆ ಹುಣಸೆ ಹಣ್ಣು ಹಾಕಿ 5 ನಿಮಿಷ ಸಣ್ಣ ಉರಿಯಲ್ಲಿ ಫ್ರೈ ಮಾಡಿಕೊಳ್ಳಬೇಕು. ಅನಂತರ ಒಲೆಯನ್ನು ಆಫ್ ಮಾಡಿಕೊಂಡು ಈ ಎಲ್ಲಾ ವಸ್ತುಗಳನ್ನು ಬೌಲ್‌ಗೆ ಹಾಕಿ ತಣ್ಣಗಾಗಲು ಬಿಡಿ. ಈಗ ತಣ್ಣಗಾದ ಈ ವಸ್ತುಗಳನ್ನು ಒಂದು ಮಿಕ್ಸಿ ಜಾರ್‌ಗೆ ಹಾಕಿ ರುಬ್ಬಬೇಕು.
ಮಿಕ್ಸಿ ಜಾರ್‌ಗೆ ಎಲ್ಲಾ ವಸ್ತುಗಳ ಹಾಕಿಕೊಂಡು ರುಚಿಗೆ ತಕ್ಕಷ್ಟು ಉಪ್ಪು ಕೂಡ ಹಾಕಿಕೊಂಡು ಸ್ವಲ್ಪ ನೀರು ಹಾಕಿಕೊಳ್ಳುತ್ತಾ ರುಬ್ಬಿಕೊಳ್ಳಬೇಕು. ನುಣ್ಣಗೆ ರುಬ್ಬಿಕೊಂಡ ಚಟ್ನಿಯನ್ನು ಮತ್ತೆ ಬೌಲ್‌ಗೆ ಹಾಕಿಟ್ಟುಕೊಳ್ಳಿ. ತುಂಬಾ ನುಣ್ಣಗೆ ರುಬ್ಬುವ ಅಗತ್ಯವಿಲ್ಲ.
ಈಗ ಈ ಚಟ್ನಿಗೆ ಒಂದು ಒಗ್ಗರಣೆ ರೆಡಿ ಮಾಡಿಕೊಳ್ಳಿ. ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಅದಕ್ಕೆ ಸಾಸಿವೆ, ಉದ್ದಿನ ಬೇಳೆ, ಕರಿಬೇವು ಹಾಕಿದರೆ ಚಟ್ನಿಗೆ ಬೇಕಾದ ಒಗ್ಗರಣೆ ಸಿದ್ದವಾಗುತ್ತೆ. ಇದನ್ನು ಚಟ್ನಿಯ ಮೇಲೆ ಹಾಕಿದರೆ ನಿಮ್ಮ ಮುಂದೆ ಈ ಕ್ಯಾರೆಟ್ ಚಟ್ನಿ ರೆಡಿಯಾಗುತ್ತದೆ. ನೀವು ಕೂಡ ಮನೆಯಲ್ಲಿ ಒಮ್ಮೆ ಟ್ರೈ ಮಾಡಿ ನೋಡಿ. ಇದರ ರುಚಿಗೆ ಮತ್ತೆ ಮತ್ತೆ ನೀವು ಮಾಡಿ ಸವಿಯಲು ಮುಂದಾಗುತ್ತೀರಿ.



Click it and Unblock the Notifications