Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ದೇಹದ ಎಲ್ಲಾ ಸಮಸ್ಯೆಗೂ ಇದು ರಾಮಬಾಣ: ಮನೆಯಲ್ಲೇ ಮಾಡಿ ಕ್ಯಾಲ್ಸಿಯಂ ಪುಡಿ
ಕ್ಯಾಲ್ಸಿಯಂ ನಮ್ಮ ದೇಹಕ್ಕೆ ಬಹಳ ಅಗತ್ಯವಾಗಿ ಬೇಕಾಗಿರುವ ಅಂಶವಾಗಿದೆ. ಒಂದು ವೇಳೆ ಕ್ಯಾಲ್ಸಿಯಂ ಅಂಶವು ಕಡಿಮೆಯಾದರೆ ದೇಹದ ಬೆಳವಣಿಗೆಯಲ್ಲಿ ಕುಂಠಿತ ಆಗುವುದು ಅಥವಾ ನ್ಯೂನತೆಗಳು ಎದುರಾಗುತ್ತದೆ. ಮುಖ್ಯವಾಗಿ ಹಲ್ಲು, ಮೂಳೆ, ಸ್ನಾಯು ಸೇರಿ ದೇಹದ ಮುಖ್ಯ ಅಂಗಗಳ ಕೆಲಸದಲ್ಲಿ ತೊಡಕುಗಳು ಉಂಟಾಗಬಹುದು. ಹಾಗೆ ಕ್ಯಾಲ್ಸಿಯಂ ಕೊರತೆಯು ಹಲವು ಅನಾರೋಗ್ಯಕ್ಕೆ ಕಾರಣವಾಗುತ್ತದೆ.
ಹೀಗಾಗಿ ನಮ್ಮ ದೇಹವು ಉತ್ತಮ ಸ್ಥಿತಿಯಲ್ಲಿರಲು, ಸದೃಢವಾಗಿರಲು ಕ್ಯಾಲ್ಸಿಯಂ ಮುಖ್ಯ ಅಂಶ. ಕೆಲವೊಮ್ಮೆ ನೀವು ಅನಾರೋಗ್ಯಕ್ಕೆ ತುತ್ತಾದಾಗ ವೈದ್ಯರು ಸಹ ಕ್ಯಾಲ್ಸಿಯಂ ಮಾತ್ರೆ ನೀಡುವುದು, ಕ್ಯಾಲ್ಸಿಯಂ ಹೆಚ್ಚಿರುವ ಆಹಾರ, ಹಣ್ಣು, ತರಕಾರಿ ಸೇವಿಸಲು ಹೇಳುವುದು ನೀವು ಸಹ ಕೇಳಿರಬಹುದು. ದೇಹಕ್ಕೆ ಅಗತ್ಯ ಕ್ಯಾಲ್ಸಿಯಂ ಒದಗಿಸುವುದು ನಮ್ಮ ಆಧ್ಯತೆ ಆಗಿರಬೇಕಾಗುತ್ತದೆ.
ಇನ್ನು ಅಂಗಡಿಯಲ್ಲಿ, ಮಡಿಕಲ್ನಲ್ಲಿ ನೀವು ಕ್ಯಾಪ್ಸಿಯಂ ಪುಡಿ ಖರೀದಿಸಿದರೆ ದುಬಾರಿಯಾಗಬಹುದು. ಹೀಗಾಗಿ ಮನೆಯಲ್ಲೇ ನಾವು ಕ್ಯಾಲ್ಸಿಯಂ ಪುಡಿಯನ್ನು ಮಾಡಿಕೊಳ್ಳಬಹುದು. ಸುಲಭವಾಗಿ ಮನೆಯಲ್ಲಿ ಕ್ಯಾಲ್ಸಿಯಂ ಪುಡಿಯನ್ನು ಮಾಡಿ ಸವಿಯಬಹುದು. ಹಾಗಾದ್ರೆ ಮನೆಯಲ್ಲಿ ಕ್ಯಾಲ್ಸಿಯಂ ಪುಡಿ ಮಾಡಿ, ಅದನ್ನು ಸೇವಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳೋಣ.
ಕ್ಯಾಲ್ಸಿಯಂ ಪುಡಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?, ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.
ಕ್ಯಾಲ್ಸಿಯಂ ಪುಡಿ ಮಾಡಲು ಬೇಕಾಗುವ ವಸ್ತುಗಳು
- ತಾವರೆ ಬೀಜ ಅಥವಾ ಮಕ್ಕಾನ್
- ಬಾದಾಮಿ
- ಗೋಡಂಬಿ
- ಬಿಳಿ ಎಳ್ಳು
- ಸಕ್ಕರೆ
ಕ್ಯಾಲ್ಸಿಯಂ ಪುಡಿ ಮಾಡಿಕೊಳ್ಳುವ ವಿಧಾನವೇನು?
ಮೊದಲು ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ತಾವರೆ ಬೀಜ ಹಾಕಿ ಸಣ್ಣ ಉರಿಯಲ್ಲಿ ಹುರಿಯಬೇಕು. 2 ರಿಂದ 3 ನಿಮಿಷ ಹುರಿದುಕೊಂಡು ತೆಗೆದಿಡಿ. ಈಗ ಇದೇ ಬಾಣಲೆಗೆ ಬಿಳಿ ಎಳ್ಳು ಸಹ ಹಾಕಿ ಹುರಿದುಕೊಂಡು ತೆಗೆದಿಡಿ. ಹಾಗೆ ಬಾದಾಮಿ ಹಾಗೂ ಗೋಡಂಬಿ ಕೂಡ ಹಾಕು ಹುರಿದು ತೆಗೆದಿಟ್ಟುಕೊಳ್ಳಿ.
ಈಗ ತಣ್ಣಗಾದ ಈ ಎಲ್ಲಾ ವಸ್ತುಗಳನ್ನು ಒಂದು ಮಿಕ್ಸಿ ಜಾರ್ನಲ್ಲಿ ಪುಡಿ ಮಾಡಿಕೊಳ್ಳಬೇಕು. ತಾವರೆ ಬೀಜವನ್ನು ಮೊದಲು ಪುಡಿ ಮಾಡಿಕೊಂಡು ಬಳಿಕ ಉಳಿದ ಮೂರು ಪದಾರ್ಥವನ್ನು ಒಟ್ಟಿಗೆ ಜಾರ್ಗೆ ಹಾಕಿಕೊಂಡು 2 ಸ್ಪೂನ್ ಸಕ್ಕರೆ ಸಹ ಹಾಕಿ ರುಬ್ಬಿಕೊಳ್ಳಬೇಕು. ನುಣ್ಣಗೆ ಪುಡಿ ಮಾಡಿಕೊಂಡಷ್ಟು ಉತ್ತಮ. ಎಲ್ಲಾ ಪದಾರ್ಥಗಳು ಸಹ ಪುಡಿ ಪುಡಿಯಾಗಿರಲಿ.
ಬೇಕಿದ್ದರೆ ಈ ಪುಡಿಗೆ ಏಲಕ್ಕಿ ಪುಡಿ ಸಹ ಸೇರಿಸಿಕೊಳ್ಳಿ. ಬಳಿಕ ಒಮ್ಮೆ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ತಣ್ಣಗಾಗಲು ಬಿಡಬೇಕು ಅನಂತರ ಯಾವುದಾದರು ಡಬ್ಬಿಯಲ್ಲಿ ಹಾಕಿ ಇಡಬಹುದು. ಹಲವು ತಿಂಗಳ ಕಾಲ ಇಟ್ಟು ಸವಿಯಬಹುದು. ಹಾಗೆ ಇದರಿಂದ ಯಾವುದೇ ಅಡ್ಡ ಪರಿಣಾಮಗಳು ಸಹ ಇರುವುದಿಲ್ಲ. ಎಲ್ಲಾ ವಯಸ್ಸಿನವರು ಹಾಗೆ ಯಾವುದೇ ಸಮಯದಲ್ಲಿ ಬೇಕಾದರು ಸವಿಯಬಹುದು.
ಅದ್ರಲ್ಲೂ ಮೂಳೆ ಸಮಸ್ಯೆ, ಹಲ್ಲಿನ ಸಮಸ್ಯೆ, ಸ್ನಾಯು ಸಮಸ್ಯೆಗಳಿರುವ ಮಂದಿ ಈ ಕ್ಯಾಲ್ಸಿಯಂ ಪುಡಿಯನ್ನು ಅವಶ್ಯವಾಗಿ ಸೇವಿಸಬೇಕಾಗುತ್ತದೆ. ನೀವು ಸಹ ಮನೆಯಲ್ಲಿಯೇ ಈ ಪುಡಿಯನ್ನು ಮಾಡಿಟ್ಟರೆ ಬೇಕಾದಾಗ ಸೇವಿಸಬಹುದು.
ಕ್ಯಾಲ್ಸಿಯಂ ಪುಡಿ ಸೇವಿಸುವುದು ಹೇಗೆ?
ಈ ಪುಡಿಯನ್ನು ನೀವು ಹಲವು ವಿಧವಾಗಿ ಸೇವಿಸಬಹುದು. ಹಾಲಿನ ಜೊತೆಗೆ ತೆಗೆದುಕೊಂಡರೆ ಬಹಳ ಉತ್ತಮ. ಬೆಚ್ಚಗಿನ ಹಾಲಿಗೆ ಒಂದು ಸ್ಪೂನ್ ಈ ಕ್ಯಾಲ್ಸಿಯಂ ಪುಡಿಯನ್ನು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ ಸೇವಿಸುವುದು ಆರೋಗ್ಯದ ದೃಷ್ಟಿಯಲ್ಲಿ ಬಹಳ ಉತ್ತಮ ಅಭ್ಯಾಸ ಆಗಿರಲಿದೆ.



Click it and Unblock the Notifications
