Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕ್ರಿಸ್‌ಮಸ್‌ಗೆ ಎಗ್ ಬಳಸದೆ ಬಿಸ್ಕೇಟ್ ಬಳಸಿ ಮಾಡಿ ಈ ಕೇಕ್; 5 ನಿಮಿಷ ಸಾಕು
ಕ್ರಿಸ್‌ಮಸ್ ಸಮಯದಲ್ಲಿ ಬಹುತಕರು ಸಂಭ್ರಮ ಹೆಚ್ಚಿಸಲು ಸಿಹಿ ತಿಂಡಿಗಳ ಸವಿಯುವುದು ಕಾಮನ್. ಅದ್ರಲ್ಲೂ ರುಚಿ ರುಚಿಯಾದ ಕೇಕ್ ರೆಸಿಪಿಗಳು ಎಲ್ಲರಿಗೂ ಇಷ್ಟವಾಗುತ್ತೆ. ಕ್ರಿಸ್‌ಮಸ್ ಅಂದ್ರೆ ಅದು ಸಿಹಿ ತಿಂಡಿಗಳ ಸವಿಯುವ ಸಮಯ ಆಗಿರಲಿದೆ. ಕ್ರೈಸ್ತ ಧರ್ಮದವರು ಮಾತ್ರವಲ್ಲ ಎಲ್ಲರ ಮನೆಯಲ್ಲೂ ಕ್ರಿಸ್‌ಮಸ್ ಕೇಕ್ ಅಥವಾ ಸಿಹಿ ತಿಂಡಿ ಮಾಡಿ ಸವಿಯೋದು ನೋಡಬಹುದು.
ಹಾಗೆ ಬೇಕರಿಯಲ್ಲಿ ಸಿಗುವಂತಹ ಕೇಕ್‌ಗಳು, ಎಗ್‌ಲೆಸ್ ಕೇಕ್‌ಗಳನ್ನು ಈ ದಿನ ಮನೆಯಲ್ಲೇ ಮಾಡಿ ಸವಿಯೋದಕ್ಕೆ ಎಲ್ಲರು ಮುಂದಾಗುತ್ತಾರೆ. ಹಾಗಾದ್ರೆ ನಾವಿಂದು ಮನೆಯಲ್ಲಿಯೇ ಈ ಕೇಕ್ ಮಾಡಿ ಸವಿಯುವ ಕುರಿತು ತಿಳಿದುಕೊಳ್ಳೋಣ. ಸುಲಭವಾಗಿ ಕಡಿಮೆ ಸಮಯದಲ್ಲಿ, ಕಡಿಮೆ ವಸ್ತುಗಳ ಬಳಸಿಕೊಂಡು ಈ ಕೇಕ್ ಮಾಡಿ ಸವಿಯಬಹುದು. ಹಾಗಾದ್ರೆ ಮಕ್ಕಳು ಕೂಡ ಇಷ್ಟಪಡುವಂತಹ ರುಚಿಯ ಕೇಕ್ ಮನೆಯಲ್ಲೇ ಮಾಡುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ.

ಈ ಕೇಕ್ ಅನ್ನು ಸುಲಭವಾಗಿ ಮನೆಯಲ್ಲಿ ಮಾಡುವುದು ಹೇಗೆ? ನೀವು ಮೊಟ್ಟೆ ಮೈದಾ ಬಳಸಿಕೊಂಡು ಕೇಕ್ ಮಾಡಿರಬಹುದು. ಆದ್ರೆ ನಾವಿಂದು ಮಾರಿ ಬಿಸ್ಕೇಟ್ ಬಳಸಿಕೊಂಡು ಕೇಕ್ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ಈ ಕ್ರಿಸ್‌ಮಸ್ ವಿಶೇಷ ಕೇಕ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಈ ಕೇಕ್ ಮಾಡಲು ಹೇಗೆ ತಯಾರಿ ಮಾಡಿಕೊಳ್ಳಬೇಕು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಕ್ರಿಸ್‌ಮಸ್ ಕೇಕ್ ಮಾಡಲು ಬೇಕಾಗುವ ವಸ್ತುಗಳು
- ಮಾರಿ ಬಿಸ್ಕೇಟ್
- ಹಾಲು
- ಡ್ರೈ ಫ್ರೂಟ್ಸ್‌ಗಳು
- ಬೇಕಿಂಗ್ ಸೋಡಾ
- ಕೋಕಾ ಪುಡಿ
- ಎಣ್ಣೆ
- ಸಕ್ಕರೆ
ಕ್ರಿಸ್‌ಮಸ್ ಕೇಕ್ ಮಾಡುವ ವಿಧಾನವೇನು?
ಮೊದಲು ಮಾರಿ ಬಿಸ್ಕೇಟ್‌ಗಳನ್ನು ಒಂದು ಬೌಲ್‌ಗೆ ಹಾಕಿ ಪುಡಿ ಮಾಡಿಕೊಳ್ಳಿ. 1 ಬಿಸ್ಕೇಟ್ 2 ಭಾಗ ಮಾಡಿದ್ರೂ ಸಾಕು. ಈಗ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಈ ಬಿಸ್ಕೇಟ್‌ಗಳನ್ನು ಹಾಕಿಕೊಳ್ಳಿ, ಹಾಗೆ 1 ಕಪ್ ಸಕ್ಕರೆ ಕೋಕಾ ಪುಡಿ ಹಾಕಿಕೊಂಡು ಪುಡಿ ಮಾಡಿಕೊಳ್ಳಬೇಕು. ಇದು ನುಣ್ಣಗೆ ಪುಡಿಯಾದ ಬಳಿಕ ಇದಕ್ಕೆ 2 ಸ್ಪೂನ್ ಎಣ್ಣೆ, 1 ಕಪ್ ಹಾಲು, ಬೇಕಿಂಗ್ ಸೋಡಾ ಹಾಕಿಕೊಂಡು ಮತ್ತೆ ರುಬ್ಬಿಕೊಳ್ಳಬೇಕು.
ನುಣ್ಣಗೆ ರುಬ್ಬಿದ ಈ ಹಿಟ್ಟನ್ನು ಈಗ ಎಣ್ಣೆ ಹಚ್ಚಿಕೊಂಡಿರುವ ಕೇಕ್ ಹಾಕಲು ಇರುವ ಅಚ್ಚು ಪಾತ್ರೆಗೆ ಹಾಕಿಕೊಳ್ಳಬೇಕು. ಈಗ ಇದರ ಮೇಲೆ ಡ್ರೈ ಫ್ರೂಟ್ಸ್‌ಗಳನ್ನು ಹಾಕಿಕೊಳ್ಳಿ. ಗೋಡಂಬಿ, ಒಣ ದ್ರಾಕ್ಷಿ, ಬಾದಾಮಿ, ಹೀಗೆ ಯಾವುದಾದರು ಡ್ರೈ ಫ್ರೂಟ್ಸ್‌ಗಳಿದ್ದರೆ ಮೇಲೆ ಹಾಕಿಕೊಳ್ಳಿ.
ಈಗ ಒಂದು ಕುಕ್ಕರ್ ತೆಗೆದುಕೊಂಡು ಅದರ ತಳದಲ್ಲಿ ಸ್ವಲ್ಪ ಉಪ್ಪು ಹಾಕಿ ಬಳಿಕ ಒಂದು ಸ್ನ್ಯಾಂಡ ಇಟ್ಟು ಆ ಸ್ನ್ಯಾಂಡ್ ಮೇಲೆ ಈ ಕೇಕ್ ಹಿಟ್ಟು ಹಾಕಿರುವ ಅಚ್ಚು ಪಾತ್ರೆಯನ್ನು ಇಡಬೇಕು. ಅನಂತರ ಸೀಟಿ ಹಾಕದೆಯೇ ಮುಚ್ಚಳ ಮುಚ್ಚಿ 20 ನಿಮಿಷ ಬಿಡಿಯಾಗಲು ಬಿಡಿ. ಅನಂತರ ಮುಚ್ಚಳ ತೆಗದು ಕೇಕ್ ಇರುವ ಅಚ್ಚು ಪಾತ್ರೆಯನ್ನು ತಣ್ಣೀರಿನ ಪಾತ್ರೆಯಲ್ಲಿ ಇಡಬೇಕು.
ಇದು ಸಂಪೂರ್ಣ ತಣ್ಣಗಾದ ಬಳಿಕ ಕೇಕ್ ಅನ್ನು ಸ್ವಲ್ಪ ಸುತ್ತಲೂ ಕತ್ತರಿಸಿ ಬಳಿಕ ಒಂದು ಪಾತ್ರೆಗೆ ಹಾಕಿಕೊಳ್ಳಿ. ಅನಂತರ ನಿಮಗೆ ಯಾವ ಗಾತ್ರಕ್ಕೆ ಬೇಕೋ ಆ ಗಾತ್ರಕ್ಕೆ ಕತ್ತರಿಸಿಕೊಳ್ಳಬೇಕು. ಇಷ್ಟಾದರೆ ನಿಮ್ಮ ಮುಂದೆ ಎಗ್‌ಲೆಸ್ ಕ್ರಿಸ್‌ಮಸ್ ಕೇಕ್ ಸಿದ್ದವಾಗುತ್ತೆ, ಮಕ್ಕಳಿಗಂತು ಈ ಕೇಕ್ ಬಹಳ ರುಚಿ ನೀಡಲಿದೆ. ಒಮ್ಮೆ ಮಾಡಿ ಸವಿರೆ, ಯಾವುದಾದರು ವಿಶೇಷ ದಿನಗಳಲ್ಲಿ ಈ ಕೇಕ್ ಮಾಡಿ ಸವಿಯಲು ನೀವು ಮುಂದಾಗುವುದು ಖಚಿತ.



Click it and Unblock the Notifications