Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕ್ಯಾಬೇಜ್ ರೋಲ್ ಮಾಡಿದ್ರೆ ಈ ರುಚಿ ಯಾರು ಕೂಡ ಮರೆಯೊಲ್ಲ..! ಮಾಡೋದು ಹೇಗೆ?
ಸಂಜೆ ಸಮಯದಲ್ಲಿ ನೀವು ಹಲವು ಬಗೆಯ ಸ್ನ್ಯಾಕ್ಸ್ ಸವಿಯಲು ಮುಂದಾಗಬಹುದು. ಅದ್ರಲ್ಲೂ ವಿಶೇಷ ಎನಿಸುವಂತಹ ಕೆಲವೊಂದು ಸ್ನ್ಯಾಕ್ಸ್ ನಿಮ್ಮ ಮುಂದಿದ್ದೆರೆ ತಟ್ಟೆಯನ್ನ ನಿಮಿಷದಲ್ಲಿ ಖಾಲಿ ಮಾಡುತ್ತೀರಿ. ಅದ್ರಲ್ಲೂ ಸಂಜೆ ಸಮಯದಲ್ಲಿ ಸವಿಯಲು ಸಿಗುವ ಹಲವು ರೀತಿ ರಸ್ತೆ ಬದಿಯ ಸ್ನ್ಯಾಕ್ಸ್ ಅಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತೆ.
ಗೋಬಿ ಮಂಚೂರಿಯನ್, ಪಾನಿಪೂರಿ, ಮಸಾಲ ಪೂರಿ, ದೋಸೆ, ವೆಜ್, ನಾನ್ ವೆಜ್ ರೋಲ್‌ಗಳು ಹೀಗೆ ಹಲವು ರೀತಿಯ ಸ್ನ್ಯಾಕ್ಸ್ ಅನ್ನು ಸವಿಯಲು ನೀವು ಮುಂದಾಗೋದು ನೋಡಬಹುದು. ಇನ್ನು ಹಲವು ಸ್ನ್ಯಾಕ್ಸ್ ಅನ್ನು ನೀವು ಮನೆಯಲ್ಲೇ ಮಾಡಿ ಸವಿಯೋದು ಸಹ ಇದೆ. ಅದ್ರಲ್ಲೂ ವಿಶೇಷ ಸ್ನ್ಯಾಕ್ಸ್ ಆಗಿ ಕೆಲವೊಂದು ರೋಲ್‌ಗಳ ಮನೆಯಲ್ಲಿ ಮಾಡಿರಬಹುದು.

ಮಕ್ಕಳಿಗೆ ಇಷ್ಟವಾಗುವಂತಹ ಚಪಾತಿ ರೋಲ್, ವೆಜ್ ರೋಲ್, ತರಕಾರಿ ಬಳಸಿ ಮಾಡುವ ರೋಲ್‌ಗಳ ಮಾಡಿರುತ್ತೀರಿ. ಆದ್ರೆ ನಾವಿಂದು ಮನೆ ಮಂದಿಯಲ್ಲ ಸವಿಯುವಂತಹ ಕ್ಯಾಬೇಜ್ ರೋಲ್ ಕುರಿತಾಗಿ ತಿಳಿದುಕೊಳ್ಳೋಣ. ಈ ಎಲೆಕೋಸಿನಿಂದ ಮಾಡುವ ರೋಲ್ ಒಮ್ಮೆ ಸವಿದು ನೋಡಿದ್ರೆ ಮನೆ ಮಂದಿ ಮತ್ತೆ ಮತ್ತೆ ಸವಿಯಲು ಕೇಳುತ್ತಾರೆ.
ಈ ಕ್ಯಾಬೇಜ್ ರೋಲ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಕ್ಯಾಬೇಜ್ ರೋಲ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
ಎಲೆಕೋಸು
ಉಪ್ಪು
ಅರಶಿಣ
ಧನಿಯ ಪುಡಿ
ಹಸಿ ಮೆಣಸು
ಈರುಳ್ಳಿ
ಗರಂ ಮಸಾಲ
ಆಲೂಗಡ್ಡೆ
ಖಾರದ ಪುಡಿ
ಜೀರಿಗೆ ಪುಡಿ
ಕಡಲೆ ಹಿಟ್ಟು
ಎಣ್ಣೆ
ಕ್ಯಾಬೇಜ್ ರೋಲ್ ಮಾಡುವುದು ಹೇಗೆ?
ಮೊದಲು ಒಂದು ಬಾಣಲೆಯಲ್ಲಿ 2 ಕಪ್ ನೀರು ಹಾಕಿ ಕುದಿಯಬರಲು ಬಿಡಿ. ನಂತರ ಇದಕ್ಕೆ ಎಲೆಕೋಸಿನ ಎಲೆಗಳನ್ನು ಬಿಡಿಸಿಕೊಂಡು ಈ ನೀರಿಗೆ ಹಾಕಿಕೊಳ್ಳಿ. 5ರಿಂದ 6 ಎಲೆಗಳನ್ನು ಬಿಡಿಸಿ ನೀರಿಗೆ ಹಾಕಿ. ಇಡಿಯಾದ ಎಲೆಯನ್ನು ಬಳಸಿ. ಈ ಎಲೆಗಳು 2 ನಿಮಿಷ ನೀರಿನಲ್ಲಿ ಬೆಂದ ತಕ್ಷಣ ನಿಧಾನವಾಗಿ ತೆಗೆದಿಟ್ಟುಕೊಳ್ಳಿ.
ಈಗ ಬಾಣಲೆಯ ನೀರನ್ನು ತೆಗೆದು ಅದನ್ನು ಮತ್ತೆ ಒಲೆ ಮೇಲೆ ಇಟ್ಟು ಎಣ್ಣೆ ಹಾಕಿಕೊಳ್ಳಿ. ನಂತರ ಇದಕ್ಕೆ ಸಣ್ಣದಾಗಿ ಹೆಚ್ಚಿರುವ ಈರುಳ್ಳಿ, ಹಸಿ ಮೆಣಸು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಸಣ್ಣದಾಗಿ ಕತ್ತರಿಸಿಕೊಂಡಿರುವ ಟೊಮೆಟೋ, ಉಪ್ಪು, ಅರಶಿಣ, ಧನಿಯ ಪುಡಿ, ಗರಂ ಮಸಾಲ ಹಾಕಿ ಮಿಕ್ಸ್ ಮಾಡಿಕೊಳ್ಳಿ.
ಹಾಗೆ ಇದಕ್ಕೆ ಕೊತ್ತಂಬರಿ ಸೊಪ್ಪು ಚಿಕ್ಕದಾಗಿ ಕತ್ತರಿಸಿ ಹಾಕಿ. ಹಾಗೆ ಒಂದು ಆಲೂಗಡ್ಡೆ ಬೇಯಿಸಿಕೊಂಡು ಪುಡಿ ಮಾಡಿ ಇದಕ್ಕೆ ಹಾಕಿಕೊಳ್ಳಿ. ಮೊದಲು ಎಲೆಯನ್ನು ಬೇಯಿಸುವಾಗ ಆಲೂಗಡ್ಡೆ ಬೇಯಿಸಬಹುದು, ಇಲ್ಲವೆ ಮೊದಲೇ ಕುಕ್ಕರ್‌ನಲ್ಲಿ ಬೇಯಿಸಿಕೊಳ್ಳಿ. ಇದನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. 2 ನಿಮಿಷ ಬಿಟ್ಟು ಒಲೆ ಆಫ್ ಮಾಡಿ ಬದಿಗಿಟ್ಟುಕೊಳ್ಳಿ.
ಈಗ ಒಂದು ಬೌಲ್‌ಗೆ 1 ಕಪ್ ಕಡಲೆ ಹಿಟ್ಟು ತೆಗೆದುಕೊಳ್ಳಿ. ಇದಕ್ಕೆ ಕಾಲು ಸ್ಪೂನ್ ಜೀರಿಗೆ ಪುಡಿ, ಉಪ್ಪು, ಅರ್ಧ ಸ್ಪೂನ್ ಖಾರದ ಪುಡಿ ಹಾಕಿ ಮಿಕ್ಸ್ ಮಾಡಿ. ನಂತರ ಇದಕ್ಕೆ ಸ್ವಲ್ಪ ಸ್ವಲ್ಪ ನೀರು ಹಾಕಿಕೊಳ್ಳುತ್ತಾ ಮಿಕ್ಸ್ ಮಾಡಬೇಕು. ಇದು ಬಜ್ಜಿಗೆ ಮಾಡುವ ಹಿಟ್ಟಿನ ಹದಕ್ಕೆ ಬರಬೇಕು. ಈಗ ಬೇಯಿಸಿಕೊಂಡ ಎಲೆ ತೆಗೆದುಕೊಂಡು ಅದರ ಮಧ್ಯದಲ್ಲಿ ಪಲ್ಯವನ್ನು ಇಟ್ಟು ಅದನ್ನು ಮುಚ್ಚಬೇಕು.
ರೋಲ್ ಮಾಡಿಕೊಂಡ ಈ ಎಲೆಯನ್ನು ಕಲಸಿಕೊಂಡ ಹಿಟ್ಟಿನಲ್ಲಿ ಹಾಕಿ ಮಿಶ್ರಣ ಮಾಡಿ, ನಂತರ ಒಲೆ ಮೇಲೆ ಇಟ್ಟು ಎಣ್ಣಗೆ ಕರಿದುಕೊಳ್ಳಬೇಕು. ಬಾಣಲೆಯಲ್ಲಿ ರೋಸ್ಟ್ ಮಾಡಬೇಕು. ಇದೇ ರೀತಿ ಎಲ್ಲಾ ಎಲೆಗಳನ್ನು ಮಾಡಿ ನೋಡಿ.



Click it and Unblock the Notifications