Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಮದುವೆ ಮನೆ ರುಚಿಯ ಎಲೆ ಕೋಸಿನ ಪಲ್ಯ ಮಾಡಿ ನೋಡಿ..!
ಊಟ ತಿಂಡಿ ಮಾಡುವಾಗ ಬರೀ ಸಾಂಬಾರ್ ಅಥವಾ ಬರಿ ಚಟ್ನಿ ಇದ್ದರಷ್ಟೇ ಒಳ್ಳೆಯ ಊಟ ಮಾಡಿದಂತಾಗುವುದಿಲ್ಲ. ಹೀಗಾಗಿ ಊಟದ ಜೊತೆ ಒಂದು ಪಲ್ಯ ಇದ್ದರೆ ಉತ್ತಮ. ಅದ್ರಲ್ಲೂ ಪಲ್ಯ ಎಲ್ಲಾ ರೀತಿ ತಿಂಡಿ ಹಾಗೂ ಊಟಕ್ಕೆ ಹಿಡಿಸಿದರೆ ಆ ಹೊತ್ತಿನ ಊಟ ಮತ್ತಷ್ಟು ರುಚಿ ನೀಡಲಿದೆ.
ಆದ್ರೆ ಯಾವ ಪಲ್ಯ ಮಾಡಬೇಕು? ಎಂಬುದು ಎಲ್ಲರ ಮನೆಯ ಪ್ರಶ್ನೆಯಾಗಿರುತ್ತೆ. ಯಾಕಂದ್ರೆ ಯಾವ ತರಕಾರಿಯ ಪಲ್ಯ ಮಾಡಿದರೆ ತುಂಬಾ ರುಚಿಯಾಗುತ್ತದೆ, ಹಾಗೆ ಯಾವ ತರಕಾರಿಗೆ ಯಾವೆಲ್ಲಾ ವಸ್ತು ಹಾಕಿ ಪಲ್ಯ ಮಾಡಬೇಕು ಅನ್ನೋದು ಮೂಲಭೂತ ಪ್ರಶ್ನೆಯಾಗಿರುತ್ತದೆ.

ಹೀಗಾಗಿ ನಾವಿಂದು ಸುಲಭವಾಗಿ ಎಲೆ ಕೋಸಿನಿಂದ ರುಚಿಕರ ಪಲ್ಯ ಮಾಡುವ ಕುರಿತು ಇಂದು ತಿಳಿದುಕೊಳ್ಳೋಣ. ಎಲೆಕೋಸಿನಿಂದ ಮಾಡುವ ಘಮ ಘಮ ಎನ್ನುವ ಪಲ್ಯ ಒಮ್ಮೆ ರುಚಿ ನೋಡಿದರೆ ನೀವು ಯಾವಾಗಲು ತಿನ್ನಬೇಕು ಎನಿಸುತ್ತೆ. ಅದ್ರಲ್ಲೂ ಮದುವೆ ಮನೆಯಲ್ಲಿ, ಗೃಹ ಪ್ರವೇಶದಲ್ಲಿ ಮಾಡುವ ಈ ಎಲೆ ಕೋಸಿನ ಪಲ್ಯ ತಿನ್ನಲು ಬಹಳ ರುಚಿ ನೀಡಲಿದೆ.
ಹಾಗಾದ್ರೆ ನಾವಿಂದು ಎಲೆ ಕೋಸಿನ ಪಲ್ಯ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು ಎಂಬುದನ್ನು ತಿಳಿದುಕೊಳ್ಳೋಣ.
ಎಲೆ ಕೋಸಿನ ಪಲ್ಯ ಮಾಡಲು ಯಾವೆಲ್ಲಾ ವಸ್ತು ಬೇಕು?
- ಎಲೆಕೋಸು - ಅರ್ಧ
- ಸಾಸಿವೆ
- ಕರಿಬೇವು
- ಅರಶಿಣ - ಅರ್ಧ ಚಮಚ
- ಕೊತ್ತಂಬರಿ ಸೊಪ್ಪು
- ತೆಂಗಿನಕಾಯಿ ತುರಿ
- ಜೀರಿಗೆ
- ಕಡಲೆ ಬೇಳೆ
- ಉದ್ದಿನ ಬೇಳೆ
- ಎಣ್ಣೆ
- ಈರುಳ್ಳಿ-2
- ಹಸಿ ಮೆಣಸು - 4
- ನಿಂಬೆ ಹಣ್ಣು- ಅರ್ಧ
ಎಲೆ ಕೋಸಿನ ಪಲ್ಯ ಮಾಡುವ ವಿಧಾನ
ಮೊದಲು ಒಂದು ಕುಕ್ಕರ್ನಲ್ಲಿ ಸ್ವಲ್ಪ ನೀರು ಹಾಕಿಕೊಂಡು ಸಣ್ಣದಾಗಿ ಹೆಚ್ಚಿಕೊಂಡಿರುವ ಕೋಸನ್ನು ಬೇಯಿಸಿಕೊಳ್ಳಿ. ಒಂದು ಸೀಟಿ ಹೊಡೆದರೆ ಸಾಕಾಗುತ್ತದೆ. ಈ ರೀತಿ ಒಲೆ ಮೇಲೆ ಇಟ್ಟು ಮತ್ತೊಂದು ಕಡೆ ಒಗ್ಗರಣೆ ರೆಡಿ ಮಾಡಿಕೊಳ್ಳಿ. ಇದಕ್ಕೆ ಒಲೆ ಮೇಲೆ ಒಂದು ಪಾತ್ರೆ ಇಟ್ಟು ಎಣ್ಣೆ ಹಾಕಿ ಬಳಿಕ ಅದಕ್ಕೆ ಸಾಸಿವೆ, ಜೀರಿಗೆ ಹಾಕಿಕೊಳ್ಳಿ.
ಬಳಿಕ ಇದಕ್ಕೆ ಕಡಲೆ ಬೇಳೆ, ಉದ್ದಿನ ಬೇಳೆ, ಹಸಿ ಮೆಣಸು, ಕರಬೇವಿನ ಸೊಪ್ಪು, ಈರುಳ್ಳಿ, ಹಾಕಿಕೊಂಡು 2 ನಿಮಿಷ ಫ್ರೈ ಮಾಡಿಕೊಳ್ಳಿ. ಬಳಿಕ ಅದಕ್ಕೆ ಅರಶಿಣ ಪುಡಿ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ಇದಕ್ಕೆ ಒಂದು ಸೀಟಿ ಹೊಡೆಸಿಕೊಂಡಿರುವ ಎಲೆಕೋಸನ್ನು ಅದಕ್ಕೆ ಹಾಕಿಕೊಳ್ಳಿ.
ಬಳಿಕ ಇದನ್ನು ಚೆನ್ನಾಗಿ ಕಲಸಿಕೊಳ್ಳಿ. ಸ್ವಲ್ಪ ನೀರನ ಅಂಶ ಇದ್ದರೂ ಪರವಾಗಿಲ್ಲ. ಬಳಿಕ ಇದಕ್ಕೆ ಉಪ್ಪು ಹಾಕಿ ಮಿಕ್ಸ್ ಮಾಡಿಕೊಳ್ಳಿ. ಈ ವೇಳೆ ಉರಿ ಸಣ್ಣದಾಗಿ ಇರಲಿ. ಬಳಿಕ ಇದಕ್ಕೆ ಕೊನೆಯದಾಗಿ ಕೊತ್ತಂಬರಿ ಸೊಪ್ಪು ಹಾಕಿ, ನಂತರ ಅರ್ಧ ನಿಂಬೆ ರಸ, ತೆಂಗಿನ ಕಾಯಿ ತುರಿ ಹಾಕಿಕೊಂಡು ಚೆನ್ನಾಗಿ ಕಲಸಿಕೊಳ್ಳಿ. 5 ನಿಮಿಷ ಚೆನ್ನಾಗಿ ಮಿಕ್ಸ್ ಮಾಡುತ್ತಾ ಇರಿ. ನೀರನ ಅಂಶ ಆವಿಯಾಗಿ ಉದುರು ಉದುರಾಗಿ ಪಲ್ಯ ರೆಡಿಯಾಗುವವರೆಗೂ ಮಿಕ್ಸ್ ಮಾಡುತ್ತಾ ಇರಿ.
ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಎಲೆಕೋಸಿನ ಪಲ್ಯ ರೆಡಿಯಾಗಿರುತ್ತದೆ. ಇದು ಚಪಾತಿ, ದೋಸೆಗೆ ಹೇಳಿ ಮಾಡಿಸಿದ ಪಲ್ಯ ಆಗಿದೆ. ಎಲೆಕೋಸು ಆರೋಗ್ಯಕರ ಅಂಶಗಳಿಂದ ಕೂಡಿದೆ. ಎಲೆಕೋಸು ಜೀರ್ಣಕ್ರಿಯೆಗೆ ಉತ್ತಮ ತರಕರಿಯಾಗಿದೆ. ಇದರಲ್ಲಿ ವಿಟಮಿನ್ ಕೆ1 ಸಹ ಇರಲಿದೆ.



Click it and Unblock the Notifications