Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸಖತ್ ರುಚಿಯ ಈ ಎಲೆಕೋಸಿನ ಮಸಾಲೆ ವಡೆ ಮಾಡಿ..! ಎಲ್ಲರ ಬಾಯಲ್ಲೂ ನೀರು ಬರುತ್ತೆ.!
ನೀವು ಸಿಹಿಗಿಂತ ಖಾರ ಹೆಚ್ಚು ಇಷ್ಟಪಡುವವರಾಗಿದ್ದರೆ ಕರಿದ ತಿಂಡಿಗಳನ್ನು ಹೆಚ್ಚು ಸವಿಯಲು ಮುಂದಾಗುತ್ತೀರಿ. ಅದರಲ್ಲೂ ಬೋಂಡಾ, ಬಜ್ಜಿ, ವಡೆ, ಗೋಬಿ ಈ ರೀತಿಯ ತಿಂಡಿಗಳ ಸವಿಯಲು ಇಷ್ಟಪಡುತ್ತಾರೆ. ಹಾಗೆ ಮಸಾಲೆ ವಡೆಯನ್ನು ಎಲ್ಲಾ ವಯಸ್ಸಿನವರು ಕೂಡ ಸವಿಯಲು ಮುಂದಾಗುತ್ತಾರೆ.
ಇನ್ನು ಈ ಮಸಾಲೆ ವಡೆಗಳಲ್ಲಿ ಎಷ್ಟೊಂದು ವಿಧಗಳಿವೆ ಅನ್ನೋದನ್ನು ನೋಡಿರುತ್ತೀರಿ. ಅವರೆಕಾಳು, ಹುರಿಗಡಲೆ, ನೆಲಗಡಲೆಯಿಂದ ಮಾಡುವ ಮಸಾಲೆ ವಡೆಯನ್ನು ನೀವು ಸವಿದಿರಬಹುದು. ರಸ್ತೆ ಬದಿಯ ಅಂಗಡಿಗಳಲ್ಲಿ ಅತ್ಯಂತ ರುಚಿಕರ ವಡೆ ಸವಿಯಲು ಸಿಗುತ್ತೆ. ಹಾಗೆ ಈ ವಡೆಯನ್ನು ವಿಶೇಷವಾಗಿಸಲು ಹಲವು ವಸ್ತು ಹಾಕಿ ಮಾಡಬಹುದು.

ಇಂತಹ ವಿಶೇಷ, ವಿಭಿನ್ನ ರುಚಿಯ ಮಸಾಲೆ ವಡೆಗಳನ್ನು ಮಾಡುವ ಕುರಿತು ನಾವು ಮೊದಲೇ ಹೇಳಿದ್ದೆವು, ಇಂದು ಕೂಡ ಹೊಸದೊಂದು ರೀತಿಯಲ್ಲಿ ಈ ಮಸಾಲೆ ವಡೆ ಮಾಡುವ ಕುರಿತು ತಿಳಿದುಕೊಳ್ಳೋಣ. ಅದರಲ್ಲೂ ಎಲೆಕೋಸು ಬಳಸಿ ಈ ವಡೆ ಮಾಡುವ ಕುರಿತು ತಿಳಿಯೋಣ. ಎಲೆಕೋಸನ್ನು ಸಣ್ಣದಾಗಿ ಹೆಚ್ಚಿಕೊಂಡು ಗರಂ ಗರಂ ಎನ್ನುವ ಮಸಾಲೆ ವಡೆ ಮಾಡಬಹುದು.
ಹಾಗಾದ್ರೆ ಎಲೆ ಕೋಸಿನ ಮಸಾಲೆ ವಡೆ ಮಾಡುವುದು ಹೇಗೆ? ಈ ವಡೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಎಲೆಕೋಸಿನ ಮಸಾಲೆ ವಡೆ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಎಲೆಕೋಸು- 1 ಕಪ್
- ಕಡಲೆ ಹಿಟ್ಟು
- ಈರುಳ್ಳಿ -3
- ಖಾರದ ಪುಡಿ
- ಶುಂಠಿ ಬೆಳ್ಳುಳ್ಳಿ ಪೇಸ್ಟ್
- ಕರಿಬೇವು
- ಜೀರಿಗೆ
- ಕೊತ್ತಂಬರಿ
- ಹಸಿ ಮೆಣಸು
- ಉಪ್ಪು
- ಎಣ್ಣೆ
ಎಲೆಕೋಸಿನ ಮಸಾಲೆ ವಡೆ ಮಾಡುವುದು ಹೇಗೆ?
ಎಲೆಕೋಸನ್ನು ಸಣ್ಣದಾಗಿ ಹೆಚ್ಚಿಕೊಳ್ಳಬೇಕು, ಇಂದು ಬೌಲ್ ಎಲೆಕೋಸು ಸಾಕು. ಹಾಗೆ ಈರುಳ್ಳಿ ಕೂಡ ಅಷ್ಟೇ ಪ್ರಮಾಣದಲ್ಲಿ ಸಣ್ಣದಾಗಿ ಹೆಚ್ಚಿಕೊಂಡು ಇಟ್ಟುಕೊಳ್ಳಿ. ಈಗ ಜರಡಿ ಹಿಡಿದಿರುವ ಕಡಲೆ ಹಿಟ್ಟನ್ನು ಒಂದು ಬೌಲ್‌ಗೆ ಹಾಕಿಕೊಂಡು ಅದಕ್ಕೆ ಖಾರದ ಪುಡಿ, ಸಣ್ಣದಾಗಿ ಹೆಚ್ಚಿರುವ ಹಸಿ ಮೆಣಸು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಜೀರಿಗೆ, ಸಣ್ಣದಾಗಿ ಹೆಚ್ಚಿರುವ ಕರಿವೇವು ಹಾಗೂ ಕೊತ್ತಂಬರಿ ಹಾಕಿ ಡ್ರೈ ಮಿಕ್ಸ್ ಮಾಡಿ.
ಹಾಗೆ ಹೆಚ್ಚಿಕೊಂಡಿರುವ ಎಲೆಕೋಸನ್ನು ಕೂಡ ಈ ಹಿಟ್ಟಿಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಈರುಳ್ಳಿ, ಉಪ್ಪು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಹಾಗೆ ಸ್ವಲ್ಪ ಸ್ವಲ್ಪವೇ ನೀರು ಹಾಕಿಕೊಳ್ಳುತ್ತಾ ಮಿಶ್ರಣ ಮಾಡಿಕೊಳ್ಳಿ. ಈ ಹಿಟ್ಟು ಹದ ಬರುವಂತೆ ಮಾಡಿಕೊಳ್ಳಬೇಕು. ಹಿಟ್ಟನ್ನು ಉಂಡೆ ಕಟ್ಟಲು ಬರುವಂತೆ ಹದ ಮಾಡಿಕೊಳ್ಳಬೇಕು.
ನಂತರ ಹಿಟ್ಟನ್ನು 10 ನಿಮಿಷ ಹಾಗೆ ಬಿಡಿ. ಈ 10 ನಿಮಿಷದಲ್ಲಿ ಒಲೆ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿಕೊಂಡು ಬಿಸಿಯಾಗಲು ಬಿಡಿ. ಎಣ್ಣೆ ಬಿಸಿಯಾದ ಬಳಿಕ ಕೈಯಲ್ಲಿ ವಡೆಯನ್ನು ಒಂದೊಂದಾಗಿ ತಟ್ಟಿಕೊಂಡು ಎಣ್ಣೆಯಲ್ಲಿ ಬಿಡಿ. ಎರಡೂ ಬದಿ ವಡೆ ಚೆನ್ನಾಗಿ ಕರಿಯುವಂತೆ ಮಾಡಿ. ಇಷ್ಟಾದರೆ ನಿಮ್ಮ ಮುಂದೆ ಎಲೆಕೋಸಿನ ವಡೆ ರೆಡಿಯಾಗುತ್ತದೆ.
ನೀವು ಕೂಡ ಮನೆಯಲ್ಲಿ ಈ ರೀತಿ ಎಲೆಕೋಸಿನ ಮಸಾಲೆ ವಡೆ ಮಾಡಿ ನೋಡಿ. ಮನೆ ಮಂದಿ ಎಲ್ಲರು ಬಹಳ ಇಷ್ಟ ಪಟ್ಟು ಸವಿಯುತ್ತಾರೆ.



Click it and Unblock the Notifications