Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಗರಂ ಗರಂ ಬೆಣ್ಣೆ ಪಕೋಡ ಮಾಡಿ ನೋಡಿ..! ವಿಶಿಷ್ಟ ರುಚಿ ಸವಿದಿದ್ದೀರಾ?
ನೀವು ಮನೆಯಲ್ಲಿ ಖಾರ ತಿಂಡಿ ಅಥವಾ ಕರಿದ ತಿಂಡಿ ಸವಿಯಲು ಇಷ್ಟಪಡುವವರಾಗಿದ್ದರೆ. ಪಕೋಡ ಮಾಡಿ ಸವಿದಿರುತ್ತೀರಿ. ಮಕ್ಕಳಿಂದ ಹಿಡಿದು ಹಿರಿಯರವರೆಗೂ ಪಕೋಡ ಸವಿಯಲು ಇಷ್ಟಪಡುತ್ತಾರೆ. ಅದರಲ್ಲೂ ರಸ್ತೆ ಬದಿ ಪಕೋಡ ಸ್ಟಾಲ್ ಕಂಡರೆ ಎಲ್ಲರ ಬಾಯಲ್ಲು ನೀರು ಬರುತ್ತೆ. ಊಟದ ಜೊತೆಗೆ, ಸಂಜೆ ಟೀ ಕಾಫಿಯ ಸಮಯದಲ್ಲಿ ಪಕೋಡ ಇದ್ದರೆ ರುಚಿ ಮತ್ತಷ್ಟು ಹೆಚ್ಚಾಗುತ್ತದೆ.
ಹಾಗೆ ಪಕೋಡ ಮಾಡೋದ್ರಲ್ಲೂ ಹತ್ತಾರು ಬಗೆ, ವಿಧಾನವಿದೆ. ಒಂದೊಂದು ವಿಧಾನವೂ ಒಂದೊಂದು ರುಚಿ ನೀಡುತ್ತೆ. ಕೆಲವೊಂದು ಪಕೋಡ ಸುಲಭವಾಗಿ, ಕಡಿಮೆ ವಸ್ತುಗಳ ಬಳಸಿಕೊಂಡು ಮಾಡಬಹುದಾಗಿದೆ. ಆದ್ರೆ ರುಚಿ ಮಾತ್ರ ಹೆಚ್ಚಾಗಿಯೇ ಇರುತ್ತೆ. ನಿಮಗೆ ಒಂದಿಷ್ಟು ಬಗೆಯ ಪಕೋಡ ಮಾಡುವ ಕುರಿತು ತಿಳಿದಿರುತ್ತೆ. ಹಾಗೆ ಹೊಸ ಹೊಸ ವಿಧಾನದಲ್ಲಿ ಮಾಡಲು ಕೂಡ ಪ್ರಯತ್ನಿಸಿರುತ್ತೀರಿ.

ಇಂತಹ ಹೊಸ ವಿಧಾನದ ಪಕೋಡವನ್ನು ನಾವಿಂದು ಮಾಡುವುದು ಹೇಗೆ ಎನ್ನುವುದನ್ನು ತಿಳಿದುಕೊಳ್ಳೋಣ. ಹೊಸ ಬಗೆಯ, ವಿಶಿಷ್ಟ ರುಚಿಯ ಬೆಣ್ಣೆ ಪಕೋಡ ಮಾಡುವ ಕುರಿತಂತೆ ಇಂದು ತಿಳಿದುಕೊಳ್ಳೋಣ. ಈ ಬೆಣ್ಣೆ ಪಕೋಡ ಬಾಯಲ್ಲಿ ಇಟ್ಟರೆ ಕರಗುವಂತೆ ಇರುತ್ತೆ. ಹಾಗಾದ್ರೆ ಈ ಬೆಣ್ಣೆ ಪಕೋಡ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಬೆಣ್ಣೆ ಪಕೋಡ ಮಾಡುವುದು ಹೇಗೆ?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಬೆಣ್ಣೆ ಪಕೋಡ ಮಾಡಲು ಬೇಕಾಗುವ ವಸ್ತುಗಳು ಯಾವುದು?
- ಕಡಲೆ ಹಿಟ್ಟು - 1 ಕಪ್
- ಅಕ್ಕಿ ಹಿಟ್ಟು- ಅರ್ಧ ಕಪ್
- ಬೆಣ್ಣೆ
- ಸೋಡಾ
- ಜೀರಿಗೆ
- ಉಪ್ಪು
- ಈರುಳ್ಳಿ
- ಕರಿಬೇವು
- ಶುಂಠಿ
- ಹಸಿ ಮೆಣಸು
- ಖಾರದ ಪುಡಿ
- ಕಡಲೆ ಬೀಜ
- ಎಣ್ಣೆ
ಬೆಣ್ಣೆ ಪಕೋಡ ಮಾಡುವ ವಿಧಾನವೇನು?
ಮೊದಲು ಒಂದು ಬೌಲ್‌ಗೆ 100 ಗ್ರಾಮ್ ಬೆಣ್ಣೆ ಹಾಕಿ ಅದಕ್ಕೆ ಸೋಡಾ ಪುಡಿ ಹಾಕಿ ಮಿಕ್ಸ್ ಮಾಡಿಕೊಳ್ಳಿ 1 ನಿಮಿಷ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಅನಂತರ ಇದಕ್ಕೆ ಕಡಲೆ ಹಿಟ್ಟು, ಅಕ್ಕಿ ಹಿಟ್ಟು , ಕರಿಬೇವು, ಖಾರದಪುಡಿ, ಹಸಿ ಮೆಣಸು, ಶುಂಠಿ ಹಾಕಿ ಮಿಕ್ಸ್ ಮಾಡಿ. ಮೊದಲು ಡ್ರೈ ಮಿಕ್ಸ್ ಮಾಡಿಕೊಳ್ಳಿ. ಕೈಯಲ್ಲಿ ಉಂಡೆ ಕಟ್ಟುವಂತೆ ಬರಬೇಕು.
ನಂತರ ಇದಕ್ಕೆ ಫ್ರೈ ಮಾಡಿಕೊಂಡು ಎರಡು ಭಾಗ ಮಾಡಿರುವ ಕಡಲೆ ಬೀಜ ಹಾಕಿಕೊಳ್ಳಿ. ಅನಂತರ ಸಣ್ಣದಾಗಿ ಹೆಚ್ಚಿಕೊಂಡಿರುವ ಈರುಳ್ಳಿಯನ್ನು ಕೂಡ ಇದಕ್ಕೆ ಹಾಕಿ ಮಿಶ್ರಣ ಮಾಡಿಕೊಳ್ಳಿ. ಹಾಗೆ ಇದಕ್ಕೆ ಸ್ವಲ್ಪ ಸ್ವಲ್ಪವೇ ನೀರು ಹಾಕಿಕೊಂಡು ಮಿಕ್ಸ್ ಮಾಡುತ್ತಾ ಹಿಟ್ಟು ಹದ ಮಾಡಿಕೊಳ್ಳಿ. ಇದು ನುಣ್ಣಗೆ ಹದವಾದ ಹಿಟ್ಟಿನಂತೆ ಮಾಡಿಕೊಳ್ಳಿ.
ನಂತರ ಮಧ್ಯಮ ನಿಂಬೆ ಹಣ್ಣಿನ ಗಾತ್ರದ ಉಂಡೆ ಮಾಡಿಟ್ಟುಕೊಳ್ಳಿ, ಅನಂತರ ಬಾಣಲೆಯಲ್ಲಿ ಎಣ್ಣೆ ಹಾಕಿ ಒಲೆ ಮೇಲೆ ಇಟ್ಟುಕೊಳ್ಳಿ. ನಂತರ 5ರಿಂದ 6 ಪಕೋಡ ಒಟ್ಟಿಗೆ ಎಣ್ಣೆಯಲ್ಲಿ ಬಿಟ್ಟು 2 ನಿಮಿಷ ತಿರುಗಿಸದೆ ಹಾಗೆಯೇ ಬಿಡಿ. ನಂತರ ಪಕೋಡ ಚೆನ್ನಾಗಿ ಕರಿದುಕೊಳ್ಳಿ, ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಬೆಣ್ಣೆ ಪಕೋಡ ರೆಡಿಯಾಗುತ್ತದೆ. ನೀವು ಕೂಡ ಮನೆಯಲ್ಲಿ ಒಮ್ಮೆ ಈ ರೀತಿ ಪಕೋಡ ಮಾಡಿ ನೋಡಿ. ಇದು ಸವಿಯಲು ಬಹಳ ಮೃದುವಾಗಿರುತ್ತೆ.



Click it and Unblock the Notifications