Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬೆಣ್ಣೆಯಂತೆ ಕರಗುವ ಈ ಕೇಸರಿಬಾತ್ ಮಾಡೋದು ಹೇಗೆ? ಸುಲಭದ ವಿಧಾನ ಇಲ್ಲದೆ!
ಮನೆಯಲ್ಲಿ ಯವುದಾದರು ಪೂಜೆ, ಶುಭ ಕಾರ್ಯವಿದ್ದರೆ ಅಥವಾ ಯಾರಾದರು ಅತಿಥಿಗಳು ಬಬರುತ್ತಾರೆ ಎಂಬ ಸೂಚನೆ ಇದ್ದರೆ ಅವರಿಗೆಂದು ತಿಂಡಿಗಳ ಮಾಡುವುದು ಕಾಮನ್. ಅಂಗಡಿ, ಬೇಕರಿಯ ತಿಂಡಿಗಿಂತಲೂ ಮನೆಯಲ್ಲೇ ಮಾಡಿ ನೀಡುವ ಸಿಹಿಯು ಬಹಳ ತೃಪ್ತಿ ನೀಡಲಿದೆ. ಹೀಗೆ ಮನೆ ಮಂದಿಗೆಲ್ಲಾ ಇಷ್ಟವಾಗುವಂತಹ ಒಂದು ಸಿಹಿ ತಿಂಡಿ ಅಂದ್ರೆ ಅದು ಕೇಸರಿ ಬಾತ್.
ರವೆಯನ್ನು ಬಳಸಿ ಮಾಡುವಂತಹ ಕೇಸರಿ ಬಾತ್ ಬಹಳ ರುಚಿಕರವಾಗಿರುತ್ತೆ. ಅದರಲ್ಲೂ ಕೇಸರಿಬಾತ್ ಅನ್ನು ಹಲವು ವಿಧಾನದ ಮೂಲಕ ಮಾಡಲಾಗುತ್ತದೆ ಎಂಬುದು ನಿಮಗೆಲ್ಲಾ ತಿಳಿದಿರಬಹುದು. ಆದ್ರೆ ಈ ರವೆ ಕೇಸರಿಬಾತ್ ಬಹಳ ರುಚಿ ನೀಡುವ ಬಗೆಯಾಗಿದೆ. ಆದ್ರೆ ಇದನ್ನು ಮಾಡುವ ವಿಧಾನದಲ್ಲಿ ಬದಲಾವಣೆ ಇದೆ. ಒಬ್ಬೊಬ್ಬರು ಒಂದೊಂದು ವಿಧದಲ್ಲಿ ಮಾಡುತ್ತಾರೆ.

ನಾವಿಂದು ಬೆಣ್ಣೆಯಷ್ಟು ಮೃದುವಾಗಿ ಕೇಸರಿ ಬಾತ್ ಮಾಡುವ ಕುರಿತಂತೆ ತಿಳಿದುಕೊಳ್ಳೋಣ. ಈ ರೀತಿ ವಿಧಾನದಲ್ಲಿ ನೀವು ಕೇಸರಿ ಬಾತ್ ಮಾಡಿದ್ರೆ ಮನೆ ಮಂದಿ ಮತ್ತೆ ಮತ್ತೆ ಸವಿಯಲು ಇಷ್ಟಪಡುತ್ತಾರೆ. ಅತಿಥಿಗಳಿಗೆ ನೀಡಿದ್ರೆ ಅವರಂತು ನಿಮ್ಮ ಕೈ ರುಚಿಗೆ ಫಿದಾ ಆಗೋದು ಪಕ್ಕ, ಹಾಗಾದ್ರೆ ಬೆಣ್ಣೆಯಂತಹ ಕೇಸರಿ ಬಾತ್ ಮಾಡುವ ವಿಧಾನವೇನು?
ಬೆಣ್ಣೆಯಂತೆ ಕೇಸರಿ ಬಾತ್ ಮಾಡಲು ಯಾವೆಲ್ಲಾ ಪದಾರ್ಥಗಳ ಬಳಸಬೇಕು? ಮಾಡುವ ವಿಧಾನವೇನು? ಈ ಕೇಸರಿ ಬಾತ್ ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬ ಕುರಿತು ನಾವಿಂದು ತಿಳಿದುಕೊಳ್ಳೋಣ.
ಬೆಣ್ಣೆಯಂತಹ ಕೇಸರಿ ಬಾತ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಬಾಂಬೆ ರವೆ ಅಥವಾ ಉಪ್ಪಿಟ್ಟು ರವೆ
- ಕಲರ್ ಪುಡಿ
- ತುಪ್ಪ
- ಎಸೆನ್ಸ್
- ಸಕ್ಕರೆ
- ಏಲಕ್ಕಿ ಪುಡಿ
- ಗೋಡಂಬಿ
- ದ್ರಾಕ್ಷಿ
ಬೆಣ್ಣೆಯಂತಹ ಕೇಸರಿ ಬಾತ್ ಮಾಡುವ ವಿಧಾನವೇನು?
ಮೊದಲು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ 2 ಸ್ಪೂನ್ ತುಪ್ಪ ಹಾಕಿಕೊಳ್ಳಿ. ತುಪ್ಪ ಹೆಚ್ಚು ಬಳಸಿದರೆ ಚೆನ್ನಾಗಿರಲಿದೆ. ತುಪ್ಪ ಬೇಡವೆಂದರೆ ನೀವು ಅಡುಗೆ ಎಣ್ಣೆಯನ್ನೂ ಕೂಡ ಬಳಸಿಕೊಳ್ಳಬಹುದು. ಈಗ ಈ ತುಪ್ಪಕ್ಕೆ ಗೋಡಂಬಿ ಹಾಕಿ ಫ್ರೈ ಮಾಡಿದ ನಂತರ ಇದಕ್ಕೆ ಒಣ ದ್ರಾಕ್ಷಿ ಹಾಕಿಕೊಂಡು ಫ್ರೈ ಮಾಡಿಕೊಂಡು ಎತ್ತಿಟ್ಟುಕೊಳ್ಳಿ.
ಈಗ ಇದೇ ಬಾಣಲೆಗೆ ಲವಂಗ ಹಾಕಿಕೊಂಡು ಅನಂತರ ಉಪ್ಪಿಟ್ಟು ಮಾಡುವಂತಹ ಬಾಂಬೆ ರವೆ ಎಂದು ಕರೆಯುವ ರವೆಯನ್ನು ಹಾಕಿಕೊಂಡು ಹುರಿದುಕೊಳ್ಳಿ. ಅಳತೆಯ ಕಪ್ ಸರಿಯಾಗಿ ಇಟ್ಟುಕೊಳ್ಳಿ. 5 ನಿಮಿಷ ಚೆನ್ನಾಗಿ ಈ ರವೆ ಹುರಿದುಕೊಳ್ಳಿ. ರವೆ ಅರಳಿದ ಬಳಿಕ ನೀವು ಯಾವ ಕಪ್‌ನಲ್ಲಿ ರವೆ ತೆಗೆದುಕೊಂಡಿದ್ದೀರೋ ಅದೇ ಕಪ್‌ನಲ್ಲಿ 3 ಕಪ್ ನೀರು ಹಾಕಿಕೊಳ್ಳಿ.
ನಂತರ ಚೆನ್ನಾಗಿ ಮಿಕ್ಸ್ ಮಾಡಿ ಕುದಿಯಲು ಬಿಡಿ. ಈ ವೇಳೆ ನಿಮಗೆ ಯಾವ ಬಣ್ಣ ಬೇಕೋ ಆ ಬಣ್ಣ ಬರುವ ಕಲರ್ ಪುಡಿ ಹಾಕಿಕೊಳ್ಳಿ. ಆರೆಂಜ್ ಅತವಾ ಹಳದಿ ಹಾಕಿ ಇದನ್ನು ಮಾಡಲಾಗುತ್ತದೆ. 2ರಿಂದ 3 ನಿಮಿಷ ಕಲಸುತ್ತಾ ಇದ್ದರೆ ಗಟ್ಟಿಯಾಗಲು ಆರಂಭಿಸುತ್ತದೆ. ನಂತರ ಇದಕ್ಕೆ ಕಾಲು ಕಪ್ ತುಪ್ಪ ಹಾಕಿಕೊಳ್ಳಿ, ಏಲಕ್ಕಿ ಪುಡಿ, ಹಾಗೆ ರವೆ ಅಷ್ಟೇ ಅಳತೆಯ ಸಕ್ಕರೆ ಇದಕ್ಕೆ ಹಾಕಿ ಮಿಕ್ಸ್ ಮಾಡಿ.
ಸಕ್ಕರೆ ಕರಗುವಷ್ಟು ಹೊತ್ತು ಕಲಸುತ್ತಾ ಇರಿ. ಈಗ ಪೈನಾಪಲ್ ಎಸೆನ್ಸ್ ಹಾಕಿಕೊಳ್ಳಿ. 2 ಹನಿ ಎಸೆನ್ಸ್ ಹಾಕಿದರೆ ಸಾಕಾಗುತ್ತದೆ. ಇದೇ ಸಮಯದಲ್ಲಿ ಮೊದಲು ಹುರಿದುಕೊಂಡಿರುವ ಗೋಡಂಬಿ, ದ್ರಾಕ್ಷಿ ಹಾಕಿಕೊಂಡು ಮಿಕ್ಸ್ ಮಾಡಿ ಮುಚ್ಚಳ ಮುಚ್ಚಿ 1 ನಿಮಿಷ ಬಿಡಿ. ನಂತರ ಒಲೆ ಆಫ್ ಮಾಡಿ ಕಲಸಿಕೊಳ್ಳಿ. ಇಷ್ಟಾದರೆ ಬೆಣ್ಣೆಯಂತೆ ಕರಗುವ ಕೇಸರಿಬಾತ್ ರೆಡಿಯಾಗುತ್ತದೆ. ನೀವು ಕೂಡ ಮಾಡಿ ನೋಡಿ.



Click it and Unblock the Notifications