Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬಾಯಿ ರುಚಿ ಹೆಚ್ಚಿಸುವ ಬೆಣ್ಣೆ ಚಕ್ಲಿ ಮಾಡಿ..! ಮಳೆಗಾಲಕ್ಕೆ ಅತ್ಯುತ್ತಮ ಸ್ನ್ಯಾಕ್ಸ್ ಇದು!
ಚಕ್ಲಿ ಅಂದರೆ ಎಲ್ಲರಿಗೂ ಬಹಳ ಇಷ್ಟವಾಗುವ ತಿಂಡಿ, ಮಕ್ಕಳಿಗಂತು ಚಕ್ಲಿ ಹೆಸರು ಕೇಳಿದರೆ ಸಾಕು ಬಾಯಲ್ಲಿ ನೀರು ಬರಲಿದೆ. ಅಂಗಡಿಯಲ್ಲಿ ಸಿಗುವ ವಿವಿಧ ಬಗೆಯ ಚಕ್ಲಿಯನ್ನು ಸವಿಯಲು ಎಲ್ಲರು ಸವಿಯಲು ಮುಂದಾಗುತ್ತಾರೆ. ಸಂಜೆ ಸಮಯದಲ್ಲಿ ಸ್ನ್ಯಾಕ್ಸ್ ಆಗಿ, ಟೀ ಕಾಫಿಯೊಂದಿಗೂ ಸವಿಯಲು ಇದು ಬಹಳ ಉತ್ತಮವಾಗಿರಲಿದೆ.
ಹಾಗೆ ಮನೆಯಲ್ಲಿ ವಿಶೇಷ ದಿನಗಳಿದ್ದರೆ ಇಲ್ಲವೆ ಅತಿಥಿಗಳ ಆಗಮನದ ನಿರೀಕ್ಷೆ ಇದ್ದಾಗ ನೀವು ಬೇಕರಿಗಳಿಂದ ಅಥವಾ ಅಂಗಡಿಗಳಿಂದ ಖರೀದಿಸಿ ಬಳಿಕ ಮನೆಯಲ್ಲಿ ಸವಿಯಲು ಮುಂದಾಗುವುದು ನೋಡಬಹುದು. ಹಾಗೆ ಚಕ್ಲಿಯ ಬಗೆಯಲ್ಲು ಹತ್ತಾರು ವಿಧಗಳಿವೆ. ಹಲವು ರೀತಿಯ ಬಗೆಯು ನಿಮಗೆ ಇಷ್ಟವಾಗಬಹುದು. ಮಳೆಗಾಲದ ಸಮಯದಲ್ಲಂತು ಚಕ್ಲಿ ಸವಿಯೋಕೆ ಬಹಳ ಇಷ್ಟವಾಗುತ್ತೆ.

ಅಂತಹ ಹತ್ತಾರು ವಿಧಗಳಲ್ಲಿ ನಾವಿಂದು ಬೆಣ್ಣೆ ಚಕ್ಲಿ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ಬೆಣ್ಣೆ ಚಕ್ಲಿ ಬಾಯಲ್ಲಿ ಇಟ್ಟರೆ ಕರಗುವಂತೆ ಮೃದುವಾಗಿರಲಿದೆ. ಹೀಗಾಗಿ ಎಲ್ಲರಿಗೂ ಇದನ್ನು ಸವಿಯುವುದು ಅಂದ್ರೆ ಬಹಳ ಇಷ್ಟವಾಗುತ್ತೆ. ಹಾಗೆ ಈ ಚಕ್ಲಿಯನ್ನು ನೀವು ಹಲವು ದಿನಗಳ ಕಾಲ ಶೇಖರಿಸಿ ಇಟ್ಟು ಕೂಡ ಸವಿಯಬಹುದು ಹೀಗಿರುವಾಗ ನಾವಿಂದು ಈ ಬೆಣ್ಣೆ ಚಕ್ಲಿ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ.
ಬೆಣ್ಣೆ ಚಕ್ಲಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
ಹುರಿಗಡಲೆ
ಅಕ್ಕಿ ಹಿಟ್ಟು
ಅರಶಿಣ
ಅಕ್ಕಿ ಹಿಟ್ಟು
ಉಪ್ಪು
ಇಂಗು
ಜೀರಿಗೆ
ಕಡಲೆ ಹಿಟ್ಟು
ಎಣ್ಣೆ
ಬೆಣ್ಣೆ ಚಕ್ಲಿ ಮಾಡುವ ವಿಧಾನವೇನು?
ಮೊದಲು ಒಂದು ಬೌಲ್ ಹುರಿಗಡಲೆಯನ್ನು ಮಿಕ್ಸಿ ಜಾರ್‌ಗೆ ಹಾಕಿಕೊಂಡು ಚೆನ್ನಾಗಿ ಪುಡಿ ಮಾಡಿಕೊಂಡು ಒಂದು ಬೌಲ್‌ಗೆ ಹಾಕಿಟ್ಟುಕೊಳ್ಳಿ. ನಂತರ ಒಂದು ಬೌಲ್‌ಗೆ ಹಾಕಿಟ್ಟುಕೊಳ್ಳಿ. ಈಗ ಮತ್ತೊಂದು ಬೌಲ್‌ನಲ್ಲಿ 1 ಕಪ್ ಅಕ್ಕಿ ಹಿಟ್ಟು ಕಾಲು ಕಪ್ ಕಡಲೆ ಹಿಟ್ಟು ಹಾಗೆ ಕಾಲು ಕಪ್ ಹುರಿಗಡಲೆ ಹಿಟ್ಟನ್ನು ಹಾಕಿ.
ಹಾಗೆ ಅರ್ಧ ಚಮಚ ಅರಶಿಣ, ಚಿಟಿಕೆ ಉಪ್ಪು, ಇಂಗು, ಜೀರಿಗೆ ಸಹ ಹಾಕಿಕೊಂಡು ಮೊದಲು ಡ್ರೈ ಮಿಕ್ಸ್ ಮಾಡಿ. ನಂತರ ಒಂದು ಸ್ಪೂನ್ ಬೆಣ್ಣೆ ಇದಕ್ಕೆ ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಬೆಣ್ಣೆ ಈ ಹಿಟ್ಟಿನೊಂದಿಗೆ ಬೆರೆಯಬೇಕು. ನಂತರ ಸ್ವಲ್ಪ ಸ್ವಲ್ಪವೇ ನೀರು ಹಾಕಿಕೊಳ್ಳುತ್ತಾ ಹಿಟ್ಟು ಕಲಸಿಕೊಳ್ಳಿ.
ಗಟ್ಟಿಯಾದ ಹದದಲ್ಲಿ ಹಿಟ್ಟು ರೆಡಿ ಮಾಡಿಕೊಳ್ಳಿ. ಚಪಾತಿ ಹಿಟ್ಟಿಗಿಂತ ಗಟ್ಟಿಯಾಗಿ ಹಿಟ್ಟು ಮಾಡಿಕೊಳ್ಳಬೇಕು. ಈಗ ಚಕ್ಲಿ ಅಚ್ಚನ್ನು ತೆಗೆದುಕೊಳ್ಳಬೇಕು. ದೊಡ್ಡ ತೂತು ಇರುವ ಅಚ್ಚು ಇದ್ದರೆ ಉತ್ತಮ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಚೆನ್ನಾಗಿ ಕಾಯಲು ಬಿಡಿ.
ನಂತರ ನೇರವಾಗಿ ಆ ಎಣ್ಣೆಗೆ ಈ ಚಕ್ಲಿಯನ್ನು ಒತ್ತಿಕೊಳ್ಳಬೇಕು. ವೃತ್ತಾಕಾರವಾಗಿ ಇಲ್ಲವೆ ಉದ್ದುದ್ದವಾಗಿ ಚಕ್ಲಿಯನ್ನು ಎಣ್ಣೆ ಬಿಟ್ಟುಕೊಂಡು ಕರಿಯಲು ಬಿಡಿ. ಚಕ್ಲಿ ಬಣ್ಣ ಬದಲಾದಾಗ ಒಲೆ ಆಫ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಬೆಣ್ಣೆ ಚಕ್ಲಿ ರೆಡಿಯಾಗುತ್ತದೆ. ಜರಡಿಯಲ್ಲಿ ಎಣ್ಣೆ ಇಳಿಯಲು ಬಿಟ್ಟು ಸವಿಯಲು ನೀಡಬಹುದು. ಅದರ ರುಚಿಗೆ ಮನೆ ಮಂದಿ ಎಲ್ಲಾ ಸವಿಯಲು ಇಷ್ಟಪಡುತ್ತಾರೆ.
ಇದೇ ಮಾದರಿಯಲ್ಲಿ ಬೇಕರಿಯಲ್ಲೂ ಮಾಡಲಾಗುತ್ತದೆ. ಮತ್ತಷ್ಟು ಮೃದುವಾಗಿ ಬರಬೇಕಾದರೆ ಹುರಿಗಡಲೆ ಹಾಗೂ ಬೆಣ್ಣೆಯನ್ನು ತುಸು ಹೆಚ್ಚು ಬಳಸಿ. ಹಾಗೆ ಕೆಲವರು ಈ ಹಿಟ್ಟು ರೆಡಿ ಮಾಡಿಕೊಳ್ಳುವಾಗ ಕಾಯಿಸಿದ ತುಪ್ಪವನ್ನು ಬಳಸುತ್ತಾರೆ. ಒಂದು ಸ್ಪೂನ್ ತುಪ್ಪ ಹಾಕಿದರೆ ಅದರ ರುಚಿ ದುಪ್ಪಟ್ಟಾಗುತ್ತೆ. ಈ ಚಕ್ಲಿಯನ್ನು ಸ್ಟೀಲ್ ಡಬ್ಬಿಯೊಳಗೆ ಗಾಳಿ ಹೋಗದಂತೆ ಇಟ್ಟರೆ ತಿಂಗಳ ಕಾಲ ಬೇಕಾದರು ಶೇಖರಿಸಬಹುದು.



Click it and Unblock the Notifications